
ಬೀದರ್(ನ.18): ಕಾಂಗ್ರೆಸ್‌ನವ್ರು ಆಪರೇಷನ್ ಮಾಡಿದಾಗಲೆಲ್ಲಾ ಪೆಟ್ಟು ತಿಂದು ಮನೆಯಲ್ಲಿ ಕುಳಿತಿದ್ದಾರೆ. ಮುಂದೇನೂ ಕುಳಿತುಕೊಳ್ಳುತ್ತಾರೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಭವಿಷ್ಯ ನುಡಿದರು. ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತ, ಕೆಲ ಶಾಸಕರು ಜೆಡಿಎಸ್ ತೊರೆಯುವ ಮಾತುಗಳೆಲ್ಲ ಸುಳ್ಳು. ಎಚ್‌ಡಿ ದೇವೇಗೌಡರು ಲೀಡರ್‌ಗಳನ್ನು ತಯಾರು ಮಾಡುವ ಫ್ಯಾಕ್ಟರಿ ಇದ್ದಂತೆ. ಎಷ್ಟೇ ಜನ ಹೋದರೂ ರಾತ್ರಿ ಹಗಲು ಡಬಲ್ ಶಿಫ್ಟ್ ಮಾಡಿ ಮತ್ತೇ ಲೀಡರ್‌ಗಳನ್ನು ತಯಾರು ಮಾಡುತ್ತಾರೆ ಎಂದು ಖಾಶೆಂಪೂರ್ ಭರವಸೆ ವ್ಯಕ್ತಪಡಿಸಿದರು.
ವಿದ್ಯುತ್ ಕಳುವು ಪ್ರಕರಣ, ಜಾಗೃತಿ ಮೂಡಿಸುವ ಅಗತ್ಯವಿದೆ:
ಇನ್ನು ಎಚ್‌ಡಿಕೆ ಮನೆಯಲ್ಲಿ ವಿದ್ಯುತ್ ಕಳುವು ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಬ್ಬ ಹರಿದಿನಗಳು, ಶುಭ ಕಾರ್ಯಗಳ ಸಂದರ್ಭ ಗೊತ್ತಿಲ್ಲದೆಯೇ ಇಂಥವು ಅನೇಕ ಕಡೆಗಳಲ್ಲಿ ನಡೆಯುತ್ತವೆ. ಈ ಕುರಿತಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಪ್ರತಿಕ್ರಿಯಿಸಿದರು.
ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸಮರ್ಥ ವ್ಯಕ್ತಿಯ ಆಯ್ಕೆ: ಶಾಸಕ ಪ್ರಭು ಚವ್ಹಾಣ್
ಜಮೀರ್ ಅಹಮದ್ ಹೇಳಿಕೆ ಅವರಿಗೆ ಶೋಭೆ ತರೋದಿಲ್ಲ:
ಸ್ಪೀಕರ್ ಹುದ್ದೆಯ ಬಗ್ಗೆ ಸಚಿವ ಜಮೀರ್ ಅಹಮದ್ ಹೇಳಿರುವುದು ಸರಿಯಲ್ಲ. ಸರ್ಕಾರ ನಿದ್ರೆಯಲ್ಲಿದ್ದಾಗ ಎದ್ದೇಳಿಸುವ ಕೆಲಸ ನಾವು ಮಾಡುತ್ತೇವೆ. ಬಿಜೆಪಿ ಜೊತೆಗಿನ ಮೈತ್ರಿ ವಿಷಯದಲ್ಲಿ ಏನೂ ಸಮಸ್ಯೆಗಳಿಲ್ಲ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.