ಚಿಕ್ಕಮಗಳೂರು: ಶಾಸಕರೊಂದಿಗೆ ಕುಮಾರಸ್ವಾಮಿ ವಾಸ್ತವ್ಯ, ಕುತೂಹಲ ಕೆರಳಿಸಿದ ರೆಸಾರ್ಟ್ ರಾಜಕೀಯ..!

By Girish Goudar  |  First Published Nov 18, 2023, 11:01 PM IST

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರ ಮಗಳ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮವು ನಾಳೆ ಸಿಲ್ವರ್ ಗೇಟ್ ರೆಸಾರ್ಟ್‌ನಲ್ಲಿ ನಡೆಯಲಿರುವ ಕಾರಣಕ್ಕೆ ಕುಮಾರಸ್ವಾಮಿ ಅವರು ಆಗಮಿಸಿದ್ದಾರೆ. ಆದರೆ, ಇದೇ ನೆಪದಲ್ಲಿ ತಮ್ಮ ಪಕ್ಷದ ಎಲ್ಲಾ ಶಾಸಕರ ಕರೆಸಿಕೊಂಡಿರುವುದು, ರಾಜಕೀಯ ಸಭೆ-ಸಮಾಲೋಚನೆಗಳು ನಡೆಯುತ್ತಿರುವುದು ಹಲವು ರೀತಿಯ ಚರ್ಚೆಗಳಿಗೆ ದಾರಿಮಾಟಿಕೊಟ್ಟಿದೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ನ.18):  ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ  ತಮ್ಮ ಹಲವು ಶಾಸಕರುಗಳೊಂದಿಗೆ ವಾಸ್ತವ್ಯ ಹೂಡಿರುವ ಕಾರಣಕ್ಕೆ ಚಿಕ್ಕಮಗಳೂರುಬತಾಲ್ಲೂಕಿನ ಹೊಸಪೇಟೆ ಸಮೀಪ ಹನಿಡ್ಯೂ ರೆಸಾರ್ಟ್ ಈಗ ರಾಜಕೀಯವಾಗಿ ಕುತೂಹಲದ ಕೇಂದ್ರವಾಗಿದೆ.

Latest Videos

undefined

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರ ಮಗಳ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮವು ನಾಳೆ ( ಭಾನುವಾರ )  ಸಿಲ್ವರ್ ಗೇಟ್ ರೆಸಾರ್ಟ್‌ನಲ್ಲಿ ನಡೆಯಲಿರುವ ಕಾರಣಕ್ಕೆ ಕುಮಾರಸ್ವಾಮಿ ಅವರು ಆಗಮಿಸಿದ್ದಾರೆ ಆದರೆ, ಇದೇ ನೆಪದಲ್ಲಿ ತಮ್ಮ ಪಕ್ಷದ ಎಲ್ಲಾ ಶಾಸಕರ ಕರೆಸಿಕೊಂಡಿರುವುದು, ರಾಜಕೀಯ ಸಭೆ-ಸಮಾಲೋಚನೆಗಳು ನಡೆಯುತ್ತಿರುವುದು ಹಲವು ರೀತಿಯ ಚರ್ಚೆಗಳಿಗೆ ದಾರಿಮಾಟಿಕೊಟ್ಟಿದೆ.

ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಫುಲ್ ಆಕ್ಟಿವ್; ಸರ್ಕಾರದ ವಿರುದ್ಧ ಪೋಸ್ಟರ್ ಅಭಿಯಾನ!

ಶಾಸಕರುಗಳನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ? 

ರಾಜ್ಯ ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ಹೆಜ್ಜೆ ಹೆಜ್ಜೆಗೂ ಮೊನಚು ಮಾತುಗಳಿಂದ ಟೀಕಿಸುತ್ತಿರುವ ಕುಮಾರಸ್ವಾಮಿ ಅವರ ವಿರುದ್ಧ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಾದಿಯಾಗಿ ಇಡೀ ಸರ್ಕಾರವೇ ರೊಚ್ಚಿಗೆದ್ದಿದೆ. ಇದೇ ಕಾರಣಕ್ಕೆ ಜೆಡಿಎಸ್ ಶಾಸಕರುಗಳನ್ನು ಸೆಳೆದು ಶಾಸ್ತಿ ಮಾಡಬೇಕು ಎಂದು ಶಪಥಗೈದಂತಿರುವ ಸಿಎಂ, ಡಿಸಿಎಂ ಹಲವು ಶಾಸಕರಿಗೆ ಗಾಳ ಹಾಕಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದ್ದಂತೆ ಕುಮಾರಸ್ವಾಮಿ ಅವರು ಶಾಸಕರುಗಳನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಸಿದ್ದಾರೆ, ಇದೇ ಕಾರಣಕ್ಕೆ ರೆಸಾರ್ಟ್ ರಾಜಕೀಯಕ್ಕೆ ಮುಂದಾಗಿದ್ದಾರೆ ಎನ್ನುವ ಅಭಿಪ್ರಾಯಗಳು ಕೇಳಿಬಂದಿವೆ. ಇದಕ್ಕೆ ಕೆಲವರು ಡಿ.ಕೆ.ಶಿವಕುಮಾರ್-ಜಿ.ಟಿ.ದೇವೇಗೌಡ ಅವರ ಭೇಟಿ ವಿಚಾರವನ್ನು ಸಮರ್ಥನೆಯಾಗಿ ನೀಡುತ್ತಿದ್ದಾರೆ.

ಆದರೆ ಸಧ್ಯಕ್ಕೆ ರಾಜ್ಯ ರಾಜಕಾರಣದಲ್ಲಿ ಅಂತಹ ಪರಿಸ್ಥಿತಿ ತಲೆದೋರಿಲ್ಲ. ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಅನಿವಾರ್ಯ ಎನ್ನುವ ಸನ್ನಿವೇಶವೂ ಸೃಷ್ಠಿಯಾಗಿಲ್ಲ. ಇನ್ನು ಕೆಲವು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಚಿಂತನೆ ನಡೆಸಿದ್ದರೂ ಅವರನ್ನು ರೆಸಾರ್ಟ್‌ನಲ್ಲಿ ಎಷ್ಟು ದಿನ ಹಿಡಿದಿಟ್ಟುಕೊಳ್ಳಲು ಸಾಧ್ಯ? ಎಂದು ಪ್ರಶ್ನಿಸುವ ಜೆಡಿಎಸ್ ಮುಖಂಡರು, ವಿಶೇಷ ಸಂದರ್ಭಕ್ಕೆ ಒಂದೆಡೆ ಸೇರಿದ ಅವಕಾಶವನ್ನು ಬಳಸಿಕೊಂಡು ಸಧ್ಯದ ರಾಜಕೀಯ ವಿಧ್ಯಮಾನಗಳ ಬಗ್ಗೆ ತಮ್ಮ ಶಾಸಕಾಂಗ ಪಕ್ಷದ ನಾಯಕರ ಜೊತೆ ಚರ್ಚಿಸುವುದರಲ್ಲಿ ವಿಶೇಷತೆ ಏನಿಲ್ಲ ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ರಿಲಾಕ್ಸ್ ಮೂಡ್ : 

ಇಡೀ ದಿನ ರೆಸಾರ್ಟ್‌ನಲ್ಲಿ ರಿಲಾಕ್ಸ್ ಮೂಡ್‌ನಲ್ಲಿದ್ದ ಕುಮಾರಸ್ವಾಮಿ ರಾಜಕೀಯ ವಿಚಾರಗಳ ಬಗ್ಗೆ ಮಾಧ್ಯಮಗಳಿಗೆ ಇಂದು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದ್ದಲ್ಲದೆ, ನಾಳೆ ತಾವೇ ಸುದ್ದಿಗೋಷ್ಠಿ ಮಾಡುತ್ತೇವೆ ಎಂದು ಹೇಳಿದರು
ರೆಸಾರ್ಟ್ ಲಾಂಜ್‌ನಲ್ಲಿ ಓಡಾಡುತ್ತಾ, ಟಿ.ವಿ.ನೋಡುತ್ತಾ ಕಾಲ ಕಳೆದ ಅವರು, ಸಿದ್ದರಾಮಯ್ಯ, ಯತೀಂದ್ರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇತರರ ಹೇಳಿಕೆಗಳನ್ನು ಗಮನಿಸಿದರು.

ರಾತ್ರಿ ಶಾಸಕರ ಜೊತೆ ಸಭೆ

ಇಂದು ರಾತ್ರಿ ಡಿನ್ನರ್‌ನಲ್ಲಿ ಕುಮಾರಸ್ವಾಮಿ ಅವರು ಶಾಸಕರ ಜೊತೆ ಮಾತನಾಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ತಿಳಿಸಿದರು.
ತಮ್ಮ ಮಗಳ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಅವರೆಲ್ಲರನ್ನೂ ಆಹ್ವಾನಿಸಿದ್ದೇವೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಮದುವೆಗೆ ಪಕ್ಷಾತೀತವಾಗಿ ಎಲ್ಲರನ್ನೂ ಕರೆಯುತ್ತೇನೆ ಎಂದರು.

ಹಳೆಯದ್ದನ್ನು ನೆನಪಿಸಿಕೊಳ್ಳಲಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಯತೀಂದ್ರ ನಡೆಸಿದ ಫೋನ್ ಸಂಭಾಷಣೆ ವಿಚಾರದಲ್ಲಿ ಕುಮಾರಸ್ವಾಮಿ ನೀಡಿರುವ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಚಿಂತಾಮಣಿ ಮಾಜಿ ಶಾಸಕ ಕೃಷ್ಣಾರೆಡ್ಡಿ ಪ್ರಶ್ನಿಸಿದರು.
ಹನಿಡ್ಯೂ ರೆಸಾರ್ಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತೀಂದ್ರ ನಾನು ಕೊಟ್ಟಿರುವುದನ್ನು ಮಾಡು ಎಂದರೆ ಏನರ್ಥ, ಇದ್ದಂದು ಇದ್ದಹಾಗೆ ಹೇಳಿದರೆ ಅದು ದ್ವೇಷ ಭಾಷಣವಾ ಎಂದು ಪ್ರಶ್ನಿಸಿದರು.

ಪ್ರಿಯಾಂಕ್ ಖರ್ಗೆ ಮೊದಲು ಅವರ ಮನೆಯಲ್ಲಿ ಏನಾಗುತ್ತಿದೆ ಎನ್ನುವುದನ್ನು ನೋಡಿಕೊಳ್ಳಲಿ, 2018ರಲ್ಲಿ ಯಾರ್‍ಯಾರು ಬಂದು ಕುಮಾರಸ್ವಾಮಿ, ದೇವೇಗೌಡ ಅವರ ಕಾಲು ಹಿಡಿದರು ಎನ್ನುವುದನ್ನು ಪ್ರಿಯಾಂಕ್ ಒಮ್ಮೆ ನೆನಪಿಸಿಕೊಳ್ಳಲಿ, ಅವರು ಸೋತಾಗ ಹತಾಶೆಯಿಂದ ಮಾತನಾಡಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ಪ್ರಿಯಾಂಕ್‌ ಖರ್ಗೆ ಕಲಿಯುವುದು ಬಹಳ ಇದೆ ಹಗುರ ಮಾತು ಬೇಡ: ಎಚ್‌ಡಿಕೆ ವಿರುದ್ಧ ಹೇಳಿಕೆಗೆ ಶಾಸಕ ಪುಟ್ಟರಾಜು ತಿರುಗೇಟು

ಜಿ.ಟಿ.ದೇವೇಗೌಡ-ಡಿಕೆಶಿ ಭೇಟಿಗೆ ಅಪಾರ್ಥ ಕಲ್ಪಿಸುವುದು ಬೇಡ, ಡಿಸಿಎಂ ಮನೆಗೆ ಹೋದ ಕೂಡಲೇ ಪಕ್ಷ ಬಿಡುತ್ತಾರಾ? ಆನ ಮತ ಕೊಟ್ಟಿರುತ್ತಾರೆ. ಅವರನ್ನು ತಿರಸ್ಕರಿಸಿ ಯಾರೂ ಹೋಗುವುದಿಲ್ಲ. ನಮ್ಮನ್ನು ಯಾರೂ ಟಚ್ ಮಾಡುವುದಿಲ್ಲ ಎಂದರು.

ರೆಸಾರ್ಟ್ ನಲ್ಲಿ ಗಣ್ಯರು

ರೆಸಾರ್ಟ್ ಗೆ ಮಾಜಿ ಶಾಸಕರು ವಿಧಾನ ಪರಿಷತ್ ಸದಸ್ಯರು,  ಹಾಲಿ ಶಾಸಕರು ಒಬ್ಬೊಬ್ಬರೇ ಆಗಮಿಸಿದ್ದರು.  ವಿಧಾನಪರಿಷತ್ ಸದಸ್ಯರಾದ ಶರವಣ, ಮಾಜಿ ಶಾಸಕರಾದ ಬಂಡಪ್ಪ ಕಾಶೆಂಪುರ್, ಅಶ್ವಿನ್ ಕುಮಾರ್, ಅನಿತಾ ಕುಮಾರಸ್ವಾಮಿ ,ಕೃಷ್ಣರೆಡ್ಡಿ, ಪುಟ್ಟರಾಜು, ಮಾಗಡಿ ಮಂಜು, ಸುರೇಶ್ ಗೌಡ , ಹಾಸನ ಶಾಸಕ ಸ್ವರೂಪ್ ,ಕಡೂರು ಹಾಸನ ಸಂಸದ ಪ್ರಜ್ವಲ್ ರೇವಣ್ಣ ರೆಸಾರ್ಟ್ ಗೆ ಆಗಮಿಸಿದರು.

click me!