ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಆಗ್ತಿಲ್ಲ, ಅಸಮಾದಾನಿತರ ಪಟ್ಟಿ ಬೆಳೆಯುತ್ತಿದೆ. ಮುಂದೊಂದು ದಿನ ಅಸಮಾಧಾನ ಬ್ಲಾಸ್ಟ್ ಆಗುತ್ತೆ. ಆ ಮೇಲೆ ಇತಿಹಾಸ ಸೃಷ್ಟಿ ಆಗುತ್ತೆ ಎಂದು ಪರೋಕ್ಷವಾಗಿ ಸರ್ಕಾರ ಪತನದ ಭವಿಷ್ಯ ನುಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್
ಬೀದರ್(ಅ.12): ಯಾರೋ ಒಬ್ಬರನ್ನ ಮೆಚ್ಚಿಸಲಿಕ್ಕೆ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ತೆಗದುಕೊಳ್ಳಲು ಸರ್ಕಾರ ಈ ನಿರ್ಧಾರ ಮಾಡಿದೆ. ಪೊಲೀಸರ ಮೇಲಿನ ಹಲ್ಲೆ, ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕಿದ ಕೇಸ್ ವಾಪಸ್ ಪಡೆದದ್ದು ಸರಿಯಲ್ಲ. ರೈತರ ಪ್ರತಿಭಟನೆಯಂತಹ ಕೇಸ್ ವಾಪಸ್ ಪಡೆಯಲಿ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ರಾಜು ಕಾಗೆ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಂಡೆಪ್ಪ ಖಾಶೆಂಪೂರ್ ಅವರು, ರಾಜು ಕಾಗೆಗಷ್ಟೇ ಅಲ್ಲ ಎಲ್ಲರಿಗೂ ಅಸಮಾಧಾನವಿದೆ. ಸರ್ಕಾರದ ಬಗ್ಗೆ ಅಸಮಾಧಾನಿತರ ಒಂದು ಪಟ್ಟಿಯೇ ಇದೆ. ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗ್ತಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ 5 ಸಾವಿರ ಕೋಟಿ ಕೊಟ್ಟಿದ್ದೇವೆ ಅಂತಾರೆ. ಅದರಲ್ಲಿ ಒಂದಾದ್ರೂ ಶಂಕು ಸ್ಥಾಪನೆಯಾಗಿ, ಕಾಮಗಾರಿ ಆರಂಭವಾಗಿದೆಯಾ?. ಯಾವುದೇ ಅಭಿವೃದ್ಧಿ ಆಗ್ತಿಲ್ಲ, ಅಸಮಾದಾನಿತರ ಪಟ್ಟಿ ಬೆಳೆಯುತ್ತಿದೆ. ಮುಂದೊಂದು ದಿನ ಅಸಮಾಧಾನ ಬ್ಲಾಸ್ಟ್ ಆಗುತ್ತೆ. ಆ ಮೇಲೆ ಇತಿಹಾಸ ಸೃಷ್ಟಿ ಆಗುತ್ತೆ ಎಂದು ಪರೋಕ್ಷವಾಗಿ ಸರ್ಕಾರ ಪತನದ ಭವಿಷ್ಯ ನುಡಿದಿದ್ದಾರೆ.
undefined
ಕರ್ನಾಟಕದಲ್ಲಿ ದೇಶದ್ರೋಹಿಗಳ ಸರ್ಕಾರ ಆಡಳಿತ ನಡೆಸುತ್ತಿದೆ: ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ರೇಣುಕಾಚಾರ್ಯ
ಜಾತಿ ಜನಗಣತಿ ವರದಿ ಜಾರಿ ವಿಚಾರದ ಬಗ್ಗೆ ಮಾತನಾಡಿದ ಬಂಡೆಪ್ಪ ಖಾಶೆಂಪೂರ್ ಅವರು, ನಾವೂ ಮೊದಲೇ ಹೇಳಿದ್ದೀವಿ, ಮೊದಲು ಜಾರಿಗೊಳಿಸಿ ಅಂತ. ದೇಶದ ಜಾತಿ ಜನಗಣತಿ ವರದಿ ಬಿಡುಗಡೆ ಮಾಡುತ್ತೇವೆ ಅಂತ ರಾಹುಲ್ ಗಾಂಧಿ ಹೇಳಿದ್ರು. ಕರ್ನಾಟಕದಲ್ಲಿ ಈಗಾಗಲೇ ಜಾತಿ ಗಣತಿ ವರದಿ ಸಿದ್ಧವಿದೆ. ಒಂದು ಫೋನ್ ಕಾಲ್ ಮಾಡಿ ಹೇಳಿದ್ರೆ ಜಾರಿ ಆಗುತ್ತೆ ಆದ್ರೆ, ಯಾಕೆ ಮಾಡ್ತಿಲ್ಲ. ಈಗ ಜಾತಿ ಗಣತಿ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿಗೆ ತಮ್ಮ ಮಾತಿನ ಮೇಲೆ ಬದ್ಧತೆ ಇದ್ರೆ 24 ಗಂಟೆಯಲ್ಲೇ ವರದಿ ಜಾರಿ ಮಾಡಲಿ. ಸಿದ್ದವಾಗಿರೋದನ್ನ ಮೊದಲು ಬಿಡುಗಡೆ ಮಾಡ್ಸಿ ಎಂದು ರಾಹುಲ್ ಗಾಂಧಿಗೆ ಬಂಡೆಪ್ಪ ಖಾಶೆಂಪೂರ್ ಒತ್ತಾಯಿಸಿದ್ದಾರೆ.