ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ?: ಶ್ರೀರಾಮುಲು ಹೇಳಿದ್ದಿಷ್ಟು

By Kannadaprabha News  |  First Published Dec 18, 2024, 10:49 AM IST

ಯಾರೊಬ್ಬರನ್ನು ಉಚ್ಚಾಟನೆ ಮಾಡುವುದರಿಂದ ಪ್ರಯೋಜನವೂ ಯಾವ ಆಗೋದಿಲ್ಲ. ಯತ್ನಾಳ್ ಅವರು ಸಹ ಕೇಂದ್ರದ ಮಂತ್ರಿ ಯಾಗಿದ್ದವರು. ಅಪಾರವಾದ ಅನುಭವವಿದೆ. ನಮ್ಮಲ್ಲಿ ಕಚ್ಚಾಟ ಮಾಡಿಕೊಂಡರೆ, ದಿನದಿನಕ್ಕೆ ವರ್ಚಸ್ಸು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌ಗೆ ಅನುಕೂಲವಾಗುತ್ತದೆ ಎಂದ ಮಾಜಿ ಸಚಿವ ಬಿ. ಶ್ರೀರಾಮುಲು


ಬಳ್ಳಾರಿ(ಡಿ.18):  ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ. ಒಮ್ಮೆ ಪಕ್ಷ ತೀರ್ಮಾನಗೊಂಡ ಬಳಿಕ ಅವಧಿ ಪೂರ್ಣಗೊಳಿಸ ಬೇಕಾಗುತ್ತದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು. 

ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಜಯೇಂದ್ರ ಟೀಂ, ಯತ್ನಾಳ್ ಟೀಂ ಎಂದು ಹೊರಟಿವೆ. ಆದರೆ, ಇಬ್ಬರ ಉದ್ದೇಶ ಪಕ್ಷ ಕಟ್ಟುವುದೇ ಆಗಿದೆ. ಈ ಬೆಳವಣಿಗೆಯನ್ನು ದೆಹಲಿ ನಾಯಕರು ಸರಿಪಡಿಸುತ್ತಾರೆ. ಯಾರೊಬ್ಬರನ್ನು ಉಚ್ಚಾಟನೆ ಮಾಡುವುದರಿಂದ ಪ್ರಯೋಜನವೂ ಯಾವ ಆಗೋದಿಲ್ಲ. ಯತ್ನಾಳ್ ಅವರು ಸಹ ಕೇಂದ್ರದ ಮಂತ್ರಿ ಯಾಗಿದ್ದವರು. ಅಪಾರವಾದ ಅನುಭವವಿದೆ. ನಮ್ಮಲ್ಲಿ ಕಚ್ಚಾಟ ಮಾಡಿಕೊಂಡರೆ, ದಿನದಿನಕ್ಕೆ ವರ್ಚಸ್ಸು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌ಗೆ ಅನುಕೂಲವಾಗುತ್ತದೆ ಎಂದರು. 

Tap to resize

Latest Videos

undefined

ಕಲಬುರಗಿ ಸಚಿವ ಸಂಪುಟ ನಿರ್ಧಾರ ಅನುಷ್ಠಾನಗೊಳಿಸಿ: ವಿಜಯೇಂದ್ರ ಆಗ್ರಹ

ದಾವಣಗೆರೆಯಲ್ಲಿ ಜರುಗುವ ಬಿ.ಎಸ್. ಯಡಿಯೂರಪ್ಪನವರ ಹುಟ್ಟುಹಬ್ಬ ಆಚರಣೆ ಬಗ್ಗೆ ನನಗೆ ಮಾಹಿತಿಯಿಲ್ಲ. ನಮಗ್ಯಾರಿಗೂ ಆಹ್ವಾನ ಕೊಡಬೇಕಾಗಿಲ್ಲ. ನಾವೆಲ್ಲರೂ ಹೋಗುತ್ತೇವೆ. ಯಡಿಯೂರಪ್ಪ ಅವರು ನಮ್ಮ ಪ್ರಶ್ನಾತೀತ ನಾಯಕರು. ಬಿಎಸ್‌ವೈ ಬಗ್ಗೆ ನಮಗ್ಯಾರಿಗೂ ಭಿನ್ನಾಭಿಪ್ರಾಯವಿಲ್ಲ ಎಂದರು. 

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು. ಸಮುದಾಯದಲ್ಲಿ ಬಹಳಷ್ಟು ಬಡವರಿದ್ದಾರೆ. ಮೀಸಲಾತಿ ಕೊಡುವುದರಿಂದ ತಪ್ಪೇನಿದೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ಗೆ ಸೇರ್ಪಡೆ ಆಗುವ ಕುರಿತು ನಡೆದಿರುವ ಚರ್ಚೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ''ಶ್ರೀರಾಮುಲು ಅಧಿಕಾರ ಕಳೆದುಕೊಂಡಿರಬಹುದು. ಆದರೆ, ಸತ್ತಿಲ್ಲ. ಸೋತರೆ ಸತ್ತಂತಲ್ಲ. ನಾನು ಎಂದೆಂದಿಗೂ ಬಿಜೆಪಿಯಲ್ಲಿಯೇ ಇರುತ್ತೇನೆ. ಅವಕಾಶಕ್ಕಾಗಿ ಪಕ್ಷ ಬಿಟ್ಟು ಹೋಗಲ್ಲ. ನಾನು ಅವಕಾಶವಾದಿ ರಾಜಕಾರಣಿ ಅಲ್ಲ' ಎಂದು ಪ್ರತಿಕ್ರಿಯಿಸಿದರು.

ವಿಜಯೇಂದ್ರ ಸೂಕ್ತ ವ್ಯಕ್ತಿ ಅಂತ ರಾಜ್ಯಾಧ್ಯಕ್ಷ ಹುದ್ದೆ ನೀಡಿದ್ದೇವೆ: ರಾಧಾ ಮೋಹನ್ ದಾಸ್

ಬೆಂಗಳೂರು:  ಪಕ್ಷದ ಪರಿಷ್ಠರಿಗೆ ಬಿ.ವೈ.ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದು ಈಗಿನ ಔಚಿತ್ಯ ಎನಿಸಿದೆ. ಹೀಗ ಅವರನ್ನೇ ರಾಜ್ಯಾಧ್ಯಕ್ಷರಾಗಿ ನೇಮಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಹೇಳಿದ್ದರು.  

ಈ ಮೂಲಕ ವಿಜಯೇಂದ್ರ ನೇಮಕವನ್ನು ಪ್ರಶ್ನಿಸುತ್ತಿರುವ ಶಾಸಕ ಯತ್ನಾಳ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಶನಿವಾರ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾವ ಸಮಯಕ್ಕೆ ಯಾವ ನಾಯಕರು ಉತ್ತಮವೋ ಅವರು ಇರುತ್ತಾರೆ. ಪ್ರಸ್ತುತ ವಿಜಯೇಂದ್ರ ಸೂಕ್ತ ಎನಿಸಿದೆ. ವರಿಷ್ಠರಿಗೆ ಈ ಸಂದರ್ಭದಲ್ಲಿ ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದು ಔಚಿತ್ಯ ಎನಿಸಿದೆ. ಹೀಗಾಗಿ ಅವರನ್ನೇ ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ. ಕಾಲಕ್ಕೆ ತಕ್ಕಂತೆ ಎಲ್ಲವೂ ತೀರ್ಮಾನ ಆಗಲಿದೆ ಎಂದು ಹೇಳಿದ್ದರು. 

ವಿಜಯೇಂದ್ರ 150 ಕೋಟಿ ಆಮಿಷ: ಬಿಜೆಪಿ ವಿರುದ್ಧವೇ ಅಸ್ತ್ರ ಹೆಣೆದ ಕಾಂಗ್ರೆಸ್‌ ನಾಯಕರು!

ಬಿಜೆಪಿಯಲ್ಲಿ ತಂಡ ಇಲ್ಲ: ರಾಜ್ಯದಲ್ಲಿ ಬಿ.ವೈ. ವಿಜಯೇಂದ್ರ ಮತ್ತು ಬಸನಗೌಡ ಯತ್ನಾಳ್ ಎಂಬ ತಂಡಗಳು ಇಲ್ಲ. ಆದರೆ, ಪಕ್ಷದೊಳಗಿನ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈಗಾಗಲೇ ಯತ್ನಾಳ್‌ಗೆ ಶೋಕಾಸ್‌ ನೋಟಿಸ್ ನೀಡಲಾಗಿದೆ. ಅವರಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸುವುದಾಗಿ ಹೇಳಿದರು. ನಮ್ಮದು ಶಿಸ್ತಿನ ಪಕ್ಷ. ಕರ್ನಾಟಕದಲ್ಲಿ 71 ಲಕ್ಷ ಕಾರ್ಯಕರ್ತರು ಇದ್ದಾರೆ. ಎಲ್ಲರ ವ್ಯಕ್ತಿತ್ವ ಬೇರೆ ಇರುತ್ತದೆ. ಯಾರ ವ್ಯಕ್ತಿತ್ವ ಸರಿ ಎಂಬುದಕ್ಕೆ ಕಾಲವೇ ಸರಿಯಾದ ಉತ್ತರ ನೀಡಲಿದೆ ಎಂದು ಯತ್ನಾಳ್ ಬಹಿರಂಗ ಹೇಳಿಕೆಗಳ ಕುರಿತ ಪ್ರಶ್ನೆಗೆ ರಾಧಾ ಮೋಹನ್ ದಾಸ್ ಉತ್ತರಿಸಿದ್ದರು. 

ಯತ್ನಾಳ್ ಉತ್ತರ ನೋಡಿ ಕ್ರಮ ರಾಜ್ಯದಲ್ಲಿ ವಿಜಯೇಂದ್ರ ಮತ್ತು ಬಸನಗೌಡ ಯತ್ನಾಳ್ ಎಂಬ ತಂಡಗಳು ಇಲ್ಲ. ಪಕ್ಷದೊಳಗಿನ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈಗಾಗಲೇ ಯತ್ನಾಳ್ ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅವರಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಾಗುವುದು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ತಿಳಿಸಿದ್ದರು. 

click me!