ಅಧಿಕೃತವಾಗಿ ಜೆಡಿಎಸ್ ಸೇರಿದ ಮಾಜಿ ಸಚಿವ ಎ.ಮಂಜು: ದೇವೇಗೌಡರಿಂದ ಶಾಲು ಸ್ವೀಕಾರ

By Sathish Kumar KH  |  First Published Mar 11, 2023, 8:14 PM IST

ರಾಜ್ಯ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಮಾಜಿ ಸಚಿವ ಎ. ಮಂಜು ಬಿಜೆಪಿಯನ್ನು ತೊರೆದು ರಾಮನಗರದಲ್ಲಿ ಇಂದು ಅಧಿಕೃತವಾಗಿ ಜೆಡಿಎಸ್‌ ಸೇರ್ಪಡೆ ಆಗಿದ್ದಾರೆ.


ರಾಮನಗರ (ಮಾ.11): ರಾಜ್ಯ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಮಾಜಿ ಸಚಿವ ಎ. ಮಂಜು ಬಿಜೆಪಿಯನ್ನು ತೊರೆದು ರಾಮನಗರದಲ್ಲಿ ಇಂದು ಅಧಿಕೃತವಾಗಿ ಜೆಡಿಎಸ್‌ ಸೇರ್ಪಡೆ ಆಗಿದ್ದಾರೆ. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರಿಂದ ಶಾಲು ಹೊದಿಸಿಕೊಂಡು ಜೆಡಿಎಸ್‌ ಸೇರ್ಪಡೆಗೊಂಡರು.

ಈಗಾಗಲೇ ಅರಕಲಗೂಡಿನಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಸಭೆ ನಡೆಸಿದ್ದ ಎ. ಮಂಜು ಅವರು ಅಭಿವೃದ್ಧಿ ಕಾರ್ಯಗಳು ಹಾಗೂ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸುವ ಉದ್ದೇಶದಿಂದ ಜೆಡಿಎಸ್‌ ಸೇರ್ಪಡೆ ಆಗುವ ಬಗ್ಗೆ ನಿರ್ಧಾರ ಕೈಗೊಂಡಿದ್ದರು. ಇದಕ್ಕೆ ಕಾರ್ಯಕರ್ತರು ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಎಲ್ಲರೂ ಜೆಡಿಎಸ್‌ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಪ್ರಮಾಣ ಮಾಡಿದ್ದರು. ಇಂದು ರಾಮನಗರದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಸಮ್ಮುಖದಲ್ಲಿ ಕಮಲವನ್ನು ಇಳಿಸಿ ತೆನೆ ಹೊರುವ ಮೂಲಕ ಅಧಿಕೃತವಾಗಿ ಜೆಡಿಎಸ್‌ ಸೇರ್ಪಡೆಯಾದರು.

Latest Videos

undefined

ಜೆಡಿಎಸ್‌ ಸೇರುವುದಾಗಿ ಅಧಿಕೃತ ಘೋಷಣೆ ಮಾಡಿಕೊಂಡ ಎ.ಮಂಜು: ಮಾ.16ರಂದು ಪಕ್ಷ ಸೇರ್ಪಡೆ

 

ಪೂರ್ಣಾಹುತಿ ಪೂಜೆಯಲ್ಲಿ ಭಾಗಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ರಾಮನಗರದ ತೋಟದ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹಾಗೂ ಮಾಜಿ‌ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ಮಾಜಿ ಸಚಿವ ಎ.ಮಂಜು ಜೆಡಿಎಸ್ ಸೇರ್ಪಡೆಯಾದರು. ಪಕ್ಷ ಸೇರ್ಪಡೆ ಬಳಿಕ ಎ.ಮಂಜು ಪೂರ್ಣಾಹುತಿ ಪೂಜೆಯಲ್ಲಿ ಭಾಗಿಯಾದರು. ಬಿಡದಿಯ ತೋಟದ ಮನೆಯಲ್ಲಿ ಪೂರ್ಣಾಹುತಿ ಪೂಜೆಯನ್ನು ಆಯೋಜನೆ ಮಾಡಲಾಗಿತ್ತು. 

ಶಾಸಕ ರಾಮಸ್ವಾಮಿಗೆ ಸೆಡ್ಡು ಹೊಡೆಯಲು ತಂತ್ರ: ಮಾಜಿ ಸಚಿವ ಎ.ಮಂಜು ಅವರು ವಿಧಾನಪರಿಷತ್ ಚುನಾಚಣೆಯ ಬಳಿಕ‌ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು. ಕಾಂಗ್ರೆಸ್ ಟಿಕೆಟ್ ಗೆ ಪ್ರಯತ್ನ‌‌ ಮಾಡುತ್ತಿದ್ದರು. ಅಚ್ಚರಿಯೆಂಬಂತೆ ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಂಡು ಬಂದಿದ್ದಾರೆ. ಅರಕಲಗೂಡಲ್ಲಿ ಎ.ಮಂಜುಗೆ ಕ್ಲಿಯರ್ ಮಾಡುತ್ತೇವೆ ಅಂತಾ 15 ದಿನಗಳ ಹಿಂದೆಯೇ‌ ಹೇಳಿದ್ದ ಕುಮಾರಸ್ವಾಮಿ ಹೇಳಿದ್ದರು. ಅಂತಿಮವಾಗಿ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಇನ್ನು ಹಾಲಿ ಶಾಸಕ ಎ.ಟಿ. ರಾಮಸ್ವಾಮಿಗೆ ಸೆಡ್ಡು ಹೊಡೆಯಲು  ಜೆಡಿಎಸ್ ನಾಯಕರು  ಎ.ಮಂಜುಗೆ ಗಾಳ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಎ.ಟಿ.ರಾಮಸ್ವಾಮಿ ಕಳೆದೊಂದು ವರ್ಷದಿಂದ ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದರು. ಈಗ ದಳಪತಿಗಳು ಎ.ಮಂಜು ಜೊತೆ ಮಾತುಕತೆ‌‌ ಮಾಡಿ ಪಕ್ಷಕ್ಕೆ ಕರೆತಂದಿದ್ದಾರೆ.

ಶ್ರೀರಂಗಪಟ್ಟಣ, ಪಾಂಡವಪುರದಲ್ಲಿ ನನ್ನ ಮೇಲೆ ಹಲ್ಲೆಯಾಗಿತ್ತು, ಜೆಡಿಎಸ್‌ ವಿರುದ್ಧ ಹರಿಹಾಯ್ದ ಸುಮಲತಾ!

ಕಾರ್ಯಕರ್ತರ ಸಭೆ ನಡೆಸಿದ ಎ. ಮಂಜು: ಮಾಜಿ ಸಚಿವ ಎ. ಮಂಜು ಅವರು ಅಧಿಕೃತವಾಗಿ ತಾವು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆ ಆಗುವುದಾಗಿ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ಈಗಾಗಲೇ ಜೆಡಿಎಸ್‌ ಪಕ್ಷದಿಂದ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಅರಕಲಗೂಡು ಕ್ಷೇತ್ರದಿಂದ ಎ.ಮಂಜು ಹೆಸರು ಘೋಷಣೆ ಮಾಡಲಾಗಿತ್ತು. ಇತ್ತೀಚೆಗೆ ವಿಧಾನಸಭಾ ಚುನಾವಣೆಗೆ ಕೇವಲ 2 ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಇಂದು ಸ್ವಗ್ರಾಮ ಅರಕಲಗೂಡು ತಾಲ್ಲೂಕಿನ, ಹನ್ಯಾಳು ಗ್ರಾಮದಲ್ಲಿ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಬಿಜೆಪಿಯನ್ನು ತೊರೆದು ಅಧಿಕೃತವಾಗಿ ಜೆಡಿಎಸ್‌ ಸೇರುವ ಬಗ್ಗೆ ಘೋಷಣೆ ಮಾಡಿಕೊಂಡಿದ್ದರು. 

click me!