ಸಿಲಿಂಡರ್ ಇಷ್ಟೊಂದು ರೇಟ್ ಮಾಡಿರಾ? ಎಲ್ಲಿಂದ ರೊಕ್ಕ ತರೋಣಾ?: ಕಟೀಲ್‌ ವಿರುದ್ಧ ಕಾರ್ಯಕರ್ತೆ ಆಕ್ರೋಶ

By Sathish Kumar KH  |  First Published Mar 11, 2023, 6:55 PM IST

ಸಿಲಿಂಡರ್ ಇಷ್ಟೊಂದು ರೆಟ್ ಮಾಡಿರಾ? ಮತ್ತೆ ಕುಕ್ಕರಲ್ಲೆ ಅಡುಗೆ ಮಾಡಿಕೊಂಡು ತಿನ್ನಿ ಅಂತಾರೆ? ನಿಮಗೆ ದುಡ್ಡಿದೆ ನಿಮ್ಮ ಮನೆಯ ಹೆಣ್ಮಕ್ಕಳು- ಹೆಂಡ್ರು ಮಾಡಿ ಹಾಕ್ತಾರೆ. ನಾವು ಎಲ್ಲೆಂದ ರೊಕ್ಕ ತರೋಣಾ?


ಹಾವೇರಿ (ಮಾ.11): ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ವಿರುದ್ಧ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆ ಖಂಡಿಸಿ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಲಿಂಡರ್ ಇಷ್ಟೊಂದು ರೆಟ್ ಮಾಡಿರಾ? ಮತ್ತೆ ಕುಕ್ಕರಲ್ಲೆ ಅಡುಗೆ ಮಾಡಿಕೊಂಡು ತಿನ್ನಿ ಅಂತಾರೆ? ನಿಮಗೆ ದುಡ್ಡಿದೆ ನಿಮ್ಮ ಮನೆಯ ಹೆಣ್ಮಕ್ಕಳು- ಹೆಂಡ್ರು ಮಾಡಿ ಹಾಕ್ತಾರೆ. ನಾವು ಎಲ್ಲೆಂದ ರೊಕ್ಕ ತರೋಣಾ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

 ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಬಿಜೆಪಿಯಿಂದ ಆಯೋಜನೆ ಮಾಡಲಾಗಿದ್ದ ಪರಿಶಿಷ್ಟ ಪಂಗಡ (ಎಸ್‌ಟಿ) ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಭಾಷಣದ ವೇಳೆ ಸಿಟ್ಟಿಗೆದ್ದ ಮಹಿಳಾ ಕಾರ್ಯಕರ್ತೆಯೊಬ್ಬರು ಗ್ಯಾಸ್‌ ಸಿಲಿಂಡರ್‌ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನಬಳಕೆಯ ಗ್ಯಾಸ್ ಸಿಲಿಂಡರ್ ದುಬಾರಿಯಾದ ಹಿನ್ನಲೆಯಲ್ಲಿ ರಾಜ್ಯಾಧ್ಯಕ್ಷರ ಭಾಷಣದ ನಡುವೆಯೇ ಕೂಗಾಡಿ ಆಕ್ರೋಶ ಹಿರಹಾಕಿದ್ದು, ಇದಕ್ಕೆ ಕೆಲವರು ಬೆಂಬಲಿಸಿದರೆ, ಮತ್ತೆ ಕೆಲವರು ನಕ್ಕು ಸುಮ್ಮನಾಗಿದ್ದಾರೆ. ಭಾಷಣದ ಮಧ್ಯೆಯೇ ಕುರ್ಚಿಯಿಂದ ಮೇಲೆದ್ದ ಮಹಿಳೆ ಒಂದು ಸಿಲಿಂಡರ್ ಗೆ 1,300 ರೂಪಾಯಿ ರೊಕ್ಕ ಮಾಡಿರಿ, ಬಡವರು ಎಲ್ಲಿ ಹೋಗಬೇಕು? ಯಾಕೆ 1,500 ರುಪಾಯಿ ಮಾಡಿಬಿಡ್ರಿ ಎಲ್ಲಾ ಸರಿ ಆಗುತ್ತದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. 

Tap to resize

Latest Videos

undefined

ರಾಹುಲ್‌ ಗಾಂಧಿ ಬಗ್ಗೆ ಟೀಕೆ: ನಳಿನ್‌ ಕಟೀಲ್‌ಗೆ ಕಾಂಗ್ರೆಸ್‌ ನೋಟಿಸ್‌

ಕುಕ್ಕರ್‌ಲ್ಲೇ ಅಡುಗೆ ಮಾಡ್ಕೊಂಡು ಹೇಗೆ ತಿನ್ನೋದು?: ಇನ್ನು ರಾಜ್ಯಾಧ್ಯಕ್ಷರ ವೇಳೆಯೇ ಬಸಮ್ಮ ಕಮ್ಥರ್ ಎಂಬ ಮಹಿಳೆ ಆಕ್ರೋಶ ಹೊರ ಹಾಕಿದ್ದು, ಬ್ಯಾಡಗಿ ತಾಲೂಕಿನ ಬನ್ನಿಹಟ್ಟಿ ಗ್ರಾಮದವರಾಗಿದ್ದಾರೆ. ಸಿಲಿಂಡರ್ ಇಷ್ಟೊಂದು ರೆಟ್ ಮಾಡಿರಾ? ಮತ್ತೆ ಕುಕ್ಕರಲ್ಲೆ ಅಡುಗೆ ಮಾಡಿಕೊಂಡು ತಿನ್ನಿ ಅಂತಾರೆ? ನಿಮಗೆ ದುಡ್ಡಿದೆ ನಿಮ್ಮ ಮನೆಯ ಹೆಣ್ಮಕ್ಕಳು- ಹೆಂಡ್ರು ಮಾಡಿ ಹಾಕ್ತಾರೆ. ನಾವು ಎಲ್ಲೆಂದ ರೊಕ್ಕ ತರೋಣಾ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಮಹಿಳೆಯ ಆಕ್ರೋಶಭರಿತ ಮಾತುಗಳು ಸಮಾವೇಶಕ್ಕೆ ಹಾಜರಾಗಿದ್ದ ಎಲ್ಲ ಜನರ ಗಮನವನ್ನು ಸೆಳೆದಿತ್ತು. ಇನ್ನು ಕಾರ್ಯಕ್ರಮ ಮುಗಿದ ಬಳಿಯೂ ಆಕ್ರೋಶ ವ್ಯಕ್ತಪಡಿಸಿದ ಅವರು ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಬೊಮ್ಮಾಯಿ ಬರಲಿ ಅವರ ಬಳಿಯೇ ಕೇಳುತ್ತೇನೆ ಎಂದು ಹೇಳಿದರು. 

ವಾಲ್ಮೀಕಿಗೆ ಗೌರವ ಬೇಕೆಂದರೆ ಬಿಜೆಪಿಗೆ ಮತ ಹಾಕಿ: ಇನ್ನು ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು, ರಾಮ ಮಂದಿರ ಕಟ್ಟೋಕೆ ಕಾಂಗ್ರೆಸ್ ವಿರೋಧ ಮಾಡಿತ್ತು. ಅದಕ್ಕೆ ನರೇಂದ್ರ ಮೋದಿ ಅವರು ಶಿಲಾನ್ಯಾಸ ಮಾಡಿದರು. ರಾಮನಿಗೆ ಶಕ್ತಿ ಕೊಟ್ಟು ಮಂದಿರ ನಿರ್ಮಾಣ ಮಾಡ್ತಾ ಇದೆ. ದ್ರೌಪತಿ ಮರ್ಮು ಅವರನ್ನು ರಾಷ್ಟ್ರಪತಿ ಮಾಡಿದ್ದೇವೆ. ಮಹಾಲಿಂಗ ನಾಯಕ ಅವರಿಗೆ ಪದ್ಮ ಭೂಷಣ ಕೊಟ್ಟಿದ್ದು ಮೋದಿ ಸರ್ಕಾರ, ಎಸ್ಸಿ ಎಸ್ಟಿ ಸಮುದಾಯಕ್ಕೆ ಶಕ್ತಿ ಕೊಟ್ಟ ಪಕ್ಷವಾಗಿದೆ. ವಾಲ್ಮೀಕಿಗೆ ಗೌರವ ದೊರೆಯಬೇಕೋ ಬೇಡವೋ? ಹಾಗಾದರೆ ಬಿಜೆಪಿ ಅಧಿಕಾರಕ್ಕೆ ತನ್ನಿ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಮುಂದಿನ ಚುನಾವಣೆಯಲ್ಲಿ 150 ಸೀಟು ಗೆದ್ದೇ ಗೆಲ್ತೇವೆ. ಹಾವೇರಿ ಜಿಲ್ಲೆಯಲ್ಲಿ 6 ಕ್ಕೆ 6 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು. 

ಶಿಡ್ಲಘಟ್ಟ: ರಾಮಚಂದ್ರೇಗೌಡ ಬಿಜೆಪಿ ಸೇರ್ಪಡೆ

ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ: ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ, ಯಡಿಯೂರಪ್ಪನವರು ಹಾಗೂ ಬ್ಯಾಡಗಿಗೂ ಅವಿನಾಭಾವ ಸಂಬಂಧ ಇದೆ. ಬಿಜೆಪಿ ಭದ್ರಕೋಟೆ ಬ್ಯಾಡಗಿಯಲ್ಲಿ ಸಮಾವೇಶ ನಡೆದಿದೆ. ನರೇಂದ್ರ ಮೋದಿಜಿಯವರ ಸರ್ಕಾರ, ಬಿ.ಎಸ್ ಯಡಿಯೂರಪ್ಪ ಜನಪರ ಕಾರ್ಯಕ್ರಮಗಳು ಅವುಗಳನ್ನು ಸಿಎಂ ಬೊಮ್ಮಾಯಿ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಪ್ರತಿ ಮನೆ ಮನಗಳಿಗೆ ಕಾರ್ಯಕ್ರಮಗಳು ಮುಟ್ಟಬೇಕು. 224 ಕ್ಷೇತ್ರಗಳಲ್ಲಿ ಮೋರ್ಚಾಗಳ ಸಮಾವೇಶ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇವೆ. ಕಾಂಗ್ರೆಸ್ ನವರು ಕುಂತಲ್ಲಿ ನಿಂತಲ್ಲಿ ಟೀಕೆ ಮಾಡ್ತಾರೆ. ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡು ಧಾರುಣ ಪರಿಸ್ಥಿತಿಯಲ್ಲಿದೆ.

ಭಾರತ್‌ ಜೋಡೋ ಮೂಲಕ ದೇಶ ಒಡೆದ ರಾಹುಲ್‌ ಗಾಂಧಿ: ಭಾರತ್ ಜೋಡೋ ಮಾಡಿ ರಾಹುಲ್ ಗಾಂಧಿ ಹೊರದೇಶಲ್ಲಿ ಕುಳಿತು ದೇಶ ಒಡೆದರು. ಕಾಂಗ್ರೆಸ್ ನವರು ಹಗಲು ಗನಸು ಕಾಣ್ತಿದ್ದಾರೆ. ಆರುವ ದೀಪ ಜೋರಾಗಿ ಉಳಿಯುತ್ತದೆ. ಆ ಪರಿಸ್ಥಿತಿ ಕಾಂಗ್ರೆಸ್ ಗೆ ಬಂದಿದೆ. ಜಾತಿ ಜಾತಿ ನಡುವೆ ವಿಷಬೀಜ ಬಿತ್ತಿ ಸರ್ಕಾರ ತರೋ ಪ್ರಯತ್ನ ಕಾಂಗ್ರೆಸ್ ಮಾಡಿತು. ಕೇಂದ್ರ ಕೊಟ್ಟ ಅಕ್ಕಿಯ ಗೋಣಿಜೀಲಕ್ಕೆ ಇವರ ಫೋಟೊ ಹಾಕಿಸಿ ತಾವು ಅಕ್ಕಿ ಕೊಟ್ಟೆವು ಅಂತ ಪ್ರಚಾರ ಮಾಡಿಕೊಂಡರು. ಇವರ ಕಾಲದಲ್ಲಿ ಹಿಂದೂ ಕಾರ್ಯಕರ್ತರ ಕಗ್ಗೊಲೆ ಯಾರೂ ಮರೆಯಲು ಸಾದ್ಯವಿಲ್ಲ. ಉಚಿತ ಅಕ್ಕಿ, ವಿದ್ಯುತ್ ಕೊಡ್ತೇವೆ ಅಂತಿದ್ದಾರೆ. ಇಷ್ಟು ದಿನ ಸ್ವಾತಂತ್ರ್ಯ ಬಂದ ಬಳಿಕ ಆಡಳಿತ ಮಾಡಿದ್ರಲ್ಲವಾ? ಬಡವರು ಬಡವರಾಗೇ ಉಳಿದರು.ಕಾಂಗ್ರೆಸ್ - ಜೆಡಿಎಸ್ ನವರು ಏನೇ ಬೊಬ್ಬೆ ಹೊಡೆದರೂ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರೋದನ್ನ ತಡೆಯೋ ಶಕ್ತಿ ಯಾರಿಗೂ ಇಲ್ಲ ಎಂದು ಬಿ.ವೈ ವಿಜಯೇಂದ್ರ ಹೇಳಿದರು.

click me!