ಪಕ್ಷಕ್ಕಾಗಿ ಎರಡು ತಿಂಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಪಕ್ಷಕ್ಕೆ ದ್ರೋಹ ಬಗೆಯುವ ಕಾರ್ಯ ಬೇಡ. ಪಕ್ಷದ ಬಗ್ಗೆ ಚರ್ಚೆ ಬೇಡ. ಎದುರಾಳಿ ಪಕ್ಷದ ಕಾರ್ಯಕರ್ತರಿಗೆ ಎದುರೇಟು ನೀಡುವ ಕಾರ್ಯ ಮಾಡಿ ಶಾಸಕರು ಮಾಡಿದ ಸಾಧನೆಗಳನ್ನು ಧೈರ್ಯದಿಂದ ಹೇಳಿ. ಎದೆಗುಂದದೆ ಬಿಜೆಪಿ ಸರ್ಕಾರ ನೂರಕ್ಕೆ ನೂರಷ್ಟುಬಹುಮತ ಬಂದೆ ಬರುತ್ತದೆ ವಿಶ್ವಾಸ ವ್ಯಕ್ತಪಡಿಸಿದ ನಾಗಪ್ಪ ಅಂಬಿ.
ಲೋಕಾಪುರ(ಮಾ.11): ಬಿಜೆಪಿ ಮುಂದಿನ ಚುನಾವಣೆಯಲ್ಲಿ ಗೆಲವು ಸಾಧಿಸಿ ಸರ್ಕಾರ ರಚಿಸುತ್ತದೆ. ಕಾರ್ಯಕರ್ತರು ಭಯಪಡದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಯನ್ನು ಮನೆ ಮನೆಗೆ ತೆರಳಿ ನಮ್ಮ ಸಚಿವರು ಮಾಡಿದ ಸಾಧನೆಗಳನ್ನು ತಿಳಿಸುವ ಕಾರ್ಯ ಮಾಡಬೇಕು ಎಂದು ಅಂಬಿಗೇರ ಚೌಡಯ್ಯ ನಿಗಮದ ಸದಸ್ಯ ನಾಗಪ್ಪ ಅಂಬಿ ಹೇಳಿದರು.
ಪಟ್ಟಣದಲ್ಲಿ ಬಿಜೆಪಿ ಕಾರ್ಯಾಲಯ ಉದ್ಘಾಟನಾ ಸಮಾರಂಭ ಹಾಗೂ ಮಾ.14ರಂದು ನಡೆಯುವ ಬಿಜೆಪಿಯ ಸಂಕಲ್ಪಯಾತ್ರೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆಯಲ್ಲಿ ಮುಧೋಳ ಮತಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದ್ದು ಮತ್ತೆ ಅಧಿಕಾರಕ್ಕೆ ಬರಲಿದೆ. ನಮ್ಮ ಶಾಸಕರಾದ ಗೋವಿಂದ ಕಾರಜೋಳ ಅವರು 25 ರಿಂದ 30 ಸಾವಿರ ಮತಗಳಿಂದ ಅಂತರದಿಂದ ಮರು ಆಯ್ಕೆಯಾಗುತ್ತಾರೆ ಎಂದು ಆಶಾವಾದ ವ್ಯಕ್ತಪಡಿಸಿದರು.
ಚಿಕ್ಕೂರ ಗ್ರಾಮದ ಬಿಜೆಪಿ ಹಿರಿಯರಾದ ವೈ.ಜಿ.ದಾಸರಡ್ಡಿ ಮಾತನಾಡಿ, ಪಕ್ಷಕ್ಕಾಗಿ ಎರಡು ತಿಂಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಪಕ್ಷಕ್ಕೆ ದ್ರೋಹ ಬಗೆಯುವ ಕಾರ್ಯ ಬೇಡ. ಪಕ್ಷದ ಬಗ್ಗೆ ಚರ್ಚೆ ಬೇಡ. ಎದುರಾಳಿ ಪಕ್ಷದ ಕಾರ್ಯಕರ್ತರಿಗೆ ಎದುರೇಟು ನೀಡುವ ಕಾರ್ಯ ಮಾಡಿ ಶಾಸಕರು ಮಾಡಿದ ಸಾಧನೆಗಳನ್ನು ಧೈರ್ಯದಿಂದ ಹೇಳಿ. ಎದೆಗುಂದದೆ ಬಿಜೆಪಿ ಸರ್ಕಾರ ನೂರಕ್ಕೆ ನೂರಷ್ಟುಬಹುಮತ ಬಂದೆ ಬರುತ್ತದೆ ವಿಶ್ವಾಸ ವ್ಯಕ್ತಪಡಿಸಿದರು.
undefined
'ಆರೆಸ್ಸೆಸ್‌ನಲ್ಲಿ ಅಭ್ಯಾಸ ಮುಗಿಸಿದವರಿಗೆ ಬಿಜೆಪಿ ಟಿಕೆಟ್ ನೀಡಿ'
ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಹಣಮಂತ ತುಳಸಿಗೇರಿ, ಕಲ್ಲಪ್ಪಣ್ಣ ಸಬರದ, ಲೋಕಣ್ಣ ಕತ್ತಿ, ಎಂ.ಎಂ.ವಿರಕ್ತಮಠ, ವ್ಹಿ.ಎಂ.ತೆಗ್ಗಿ, ಶ್ರೀಶೈಲಗೌಡ ಪಾಟೀಲ, ನಾರಾಯಣ ಯಡಹಳ್ಳಿ ಮಾತನಾಡಿದರು. ಈ ವೇಳೆ ಮುಖಂಡರಾದ ಕುಮಾರ ಹುಲಕುಂದ, ಕೆ.ಆರ್.ಮಾಚಪ್ಪನವರ, ಬಿ.ವ್ಹಿ.ಹಲಕಿ, ಕೆ.ಆರ್.ಬೋಳಿಶೆಟ್ಟಿ, ಶಿವನಗೌಡ ಪಾಟೀಲ, ರಾಜು ಯಡಹಳ್ಳಿ, ಭಂಟನೂರ ಗ್ರಾಪಂ ಅಧ್ಯಕ್ಷ ಪ್ರಕಾಶ ಚಿತ್ತರಗಿ, ಪ್ರಕಾಶ ಚುಳಕಿ, ವಿನೋಧ ಘೋರ್ಪಡೆ, ದಾದನಟ್ಟಿಗ್ರಾಪಂ ಅಧ್ಯಕ್ಷ ಮಹೇಶ ಮುಳ್ಳೂರ, ವಿರೇಶ ಪಂಚಕಟ್ಟಿಮಠ, ಪರಮಾನಂದ ಟೊಪಣ್ಣವರ, ವಸಂತಗೌಡ ಪಾಟೀಲ, ರವಿಗೌಡ ಖಜ್ಜಿಡೋಣಿ, ಸುರೇಶ ಹುಗ್ಗಿ, ಸಂತೋಷ ದೇಶಪಾಂಡೆ, ಸದಾಶಿವ ಯಡಹಳ್ಳಿ, ಮಂಜುನಾಥ ಪಾಟೀಲ, ರಾಮಣ್ಣಾ ಗಸ್ತಿ ಸಚೀನ ದೇಸಾಯಿ, ಸದಾಶಿವ ನಾವ್ಹಿ, ಬಾಬು ಶಿಂಧೆ, ಜಾಕೀರ ಅತ್ತಾರ, ವಕೀಲ ಹಣಮಂತ ಮುಳ್ಳೂರ, ಸಚೀನ ಅರಳಿಕಟ್ಟಿ, ಸದಾಶಿವ ಹಗ್ಗದ, ಗೋಪಾಲ ಲಮಾಣಿ, ಮಂಜು ಗಸ್ತಿ ವೆಂಕಟಾಪುರ, ನಾಗಣಾಪುರ, ಲಕ್ಷಾನಟ್ಟಿ, ಅರಳಿಕಟ್ಟಿ, ದಾದನಟ್ಟಿ, ಹೊಸಕೊಟಿ, ಠಾಣಿಕೇರಿ ಬಿಜೆಪಿ ಕಾರ್ಯಕರ್ತರು ಇದ್ದರು.