ಬಿಜೆಪಿಗರು ಸತ್ಯಹರಿಶ್ಚಂದ್ರನ ಮನೆಯಲ್ಲಿ ಬಾಡಿಗೆ ಇದ್ದೋರು ತರ ಆಡ್ತಾರೆ: ಲಕ್ಷ್ಮಣ್ ಸವದಿ

By Ravi Janekal  |  First Published Nov 20, 2023, 1:37 PM IST

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕದಿಂದ ಲಿಂಗಾಯತ ಮತಗಳ ಮೇಲೆ ಯಾವುದೇ ಎಫೆಕ್ಟ್  ಆಗಲ್ಲ. ಜೋಡೆತ್ತುಗಳಲ್ಲಿ ಶಕ್ತಿ ಉಳಿದಿಲ್ಲ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ವ್ಯಂಗ್ಯ ಮಾಡಿದರು.


ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ 

ಬಾಗಲಕೋಟೆ (ನ.20): ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕದಿಂದ ಲಿಂಗಾಯತ ಮತಗಳ ಮೇಲೆ ಯಾವುದೇ ಎಫೆಕ್ಟ್  ಆಗಲ್ಲ. ಜೋಡೆತ್ತುಗಳಲ್ಲಿ ಶಕ್ತಿ ಉಳಿದಿಲ್ಲ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ವ್ಯಂಗ್ಯ ಮಾಡಿದರು.

Tap to resize

Latest Videos

undefined

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಈ ಬಗ್ಗೆ ನಮ್ಮ ಮುಂದೆಯೂ ಸಹ ಬಹಳಷ್ಟು ಚರ್ಚೆ ಮಾಡೋದಿದೆ, ಲಿಂಗಾಯತರು ಇರೋದೆ ಅತಿ ಹೆಚ್ಚು ಉತ್ತರ ಕರ್ನಾಟಕದಲ್ಲಿ. ಇನ್ನು ಕಿತ್ತೂರ ಕರ್ನಾಟಕ, ಹೈದ್ರಾಬಾದ್​ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಹೆಚ್ಚಿದ್ದಾರೆ. ಇದು ಬೆಂಗಳೂರು, ಶಿವಮೊಗ್ಗ, ಮೈಸೂರಿಗೆ ಸೀಮಿತವಾಗಿದ್ದು. ಈ ಆಯ್ಕೆ ಬಿಜೆಪಿಯಲ್ಲಿ ಬಹಳಷ್ಟು ಮಂದಿಗೆ ಸಹಮತ ಇಲ್ಲ. ಅನೇಕ ಸೀನಿಯರ್ಸ ಲೀಡರ್ಸ್​ ಇವರ ಕೆಳಗೆ ಹೇಗೆ ಕೆಲ್ಸ ಮಾಡೋದು ಅಂತಿದ್ದಾರೆ. ಬೇರೆ ಬೇರೆಯವರು ಅಸಮಾಧಾನ ಆಗಿದ್ದಾರೆ, ಅವರ ಹೆಸರು ಹೇಳೋದು ಬೇಡ. ನಾವು ಒಮ್ಮೆ ಆ ಪಕ್ಷ ಬಿಟ್ಟು ಬಂದ ಮೇಲೆ ಮಾತನಾಡೋದು ಅಸಂಬದ್ಧ ಅನಿಸುತ್ತೆ. ಹೀಗಾಗಿ ವಿಜಯೇಂದ್ರ ಸೇರಿ ಯಾರೇ ಇದ್ದರೂ ಬಿಜೆಪಿ ಈಗಿನ ಪರಿಸ್ಥಿತಿಯಲ್ಲಿ ಚೇತರಿಸಿಕೊಳ್ಳೋ ಸ್ಥಿತಿಯಲ್ಲಿಲ್ಲ ಎಂದು ಸವದಿ ಹೇಳಿದರು.

ಮುರುಘಾಶ್ರೀ ವಿರುದ್ಧ ಬಂಧನ ವಾರಂಟ್; ಕಳೆದ ವಾರ ಬಿಡುಗಡೆಯಾಗಿರುವ ಶ್ರೀಗಳಿಗೆ ಮತ್ತೆ ಬಂಧನ ಭೀತಿ!

ಜೋಡೆತ್ತಲ್ಲ, ನಾಲ್ಕೆತ್ತು ಹೂಡಿದ್ರೂ ಸಹ ಬಿಜೆಪಿ ಬಂಡಿ ಎಳೆಯೋಕೆ ಸಾಧ್ಯವಿಲ್ಲ,

ವಿಜಯೇಂದ್ರ & ಆರ್​.ಅಶೋಕ್​ ಜೋಡೆತ್ತುಗಳಾಗಿ ಲೋಕಸಭೆ ಗೆಲ್ಲುವ ವಿಚಾರ ಪ್ರಸ್ತಾಪಿಸಿ ಬರೀ ಜೋಡೆತ್ತಲ್ಲ, ಉತ್ತರ ಕರ್ನಾಟಕದಲ್ಲಿ ನಾಲ್ಕು ಎತ್ತು ಹೊಡೆಯುವ ಪದ್ಧತಿ ಇದೆ. ಅದನ್ನು ಮಾಡಿದ್ರೂ ಸಹ ಏನು ಮಾಡೋದಕ್ಕೆ ಆಗೋದಿಲ್ಲ. ಜೋಡೆತ್ತಲ್ಲ, ನಾಲ್ಕೆತ್ತು ಹೂಡಿದ್ರೂ ಸಹ ಅದನ್ನ ಎಳೆಯೋಕೆ ಆಗೋದಿಲ್ಲ. ಜೋಡೆತ್ತುಗಳಲ್ಲಿ ಆ ಶಕ್ತಿ ಉಳಿದಿಲ್ಲ. ನೆಲ ಗಟ್ಟಿಯಾಗಿದೆ, ಬಿರುಸಾಗಿದೆ, ಆದ್ರೆ ಎರಡೆತ್ತು ಎಳೆದ್ರೆ ಎಳೆಯುವಂತಹ ಶಕ್ತಿ ಅಲ್ಲಿ ಉಳಿದಿಲ್ಲ. ಆ ನೇಗಿಲು ನೋಡಿದ್ರೆ ಎಂಟತ್ತು ಎತ್ತು ಹೂಡಿದ್ರೆ ಜಗ್ಗು ಪರಿಸ್ಥಿತಿ ಇಲ್ಲ ಎಂದು ಸವದಿ ಹೇಳಿದರು.

ಬಿಜೆಪಿಗರೆಲ್ಲಾ ಸತ್ಯ ಹರಿಶ್ಚಂದ್ರನ ಮನೆಯಲ್ಲಿ ಬಾಡಿಗೆ ಇದ್ದೋರ ತರಹ ಮಾತನಾಡ್ತಾರೆ:

ಸಿಎಂ ಸಿದ್ದರಾಮಯ್ಯ & ಪುತ್ರ ಯತೀಂದ್ರ ಸಂಭಾಷಣೆ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ಈ ವಿಷಯ ಬಿಜೆಪಿಗರು ಮಾತನಾಡಿದ್ದನ್ನ ನೋಡಿ ನನಗೆ ನಗು ಬರುತ್ತೇ. ಬಿಜೆಪಿಗರೆಲ್ಲಾ ಸತ್ಯ ಹರಿಶ್ಚಂದ್ರನ ಮನೆಯಲ್ಲಿ ಬಾಡಿಗೆ ಇದ್ದೋರ ತರಹ ಮಾತನಾಡ್ತಾರೆ. 20 ವರ್ಷ ಇವರ ಕಥೆ ಏನು ಅನ್ನೋದನ್ನ ನಾನು ನೋಡಿಲ್ವಾ. ಬೇರೆಯವರಿಗೆ ಬೇರೆ ತರಹ ಅರ್ಥ ಆಗಬಹುದು, ಆದರೆ ನನಗೇ ಬೇರೆ. ಯಾರಾರೋ ಏನೇನೋ ಮಾತನಾಡ್ತಾರೆ ಮಾತನಾಡಲಿ. ಒಂದು ಬೆರಳು ಮುಂದೆ ಮಾಡಿದ್ರೆ, ನಾಲ್ಕು ಬೆರಳು ನಮ್ಮ ಕಡೆಗೆ ಇರ್ತಾವೆ ಅನ್ನೋ ಅರಿವು ಇರಬೇಕು ಎಂದು ಸವದಿ ತಿರುಗೇಟು ನೀಡಿದರು.

ನಮ್ಮೊಂದಿಗೆ ಬಹಳ ಜನ ಬಿಜೆಪಿಗರು ಸಂಪರ್ಕದಲ್ಲಿದ್ದಾರೆ, ಕರೆತಂದರೆ ಅವರ ಸ್ಥಾನಮಾನ ಏನು ಅಂತ ಚರ್ಚಿಸಿ ನಿರ್ಧರಿಸುತ್ತೇವೆ‌.  ಕರೆತಂದವರಿಗೆ ಯಾವ ಸ್ಥಾನಮಾನ ಕೊಡಬೇಕು, ಅವರ ಕ್ಷೇತ್ರದಲ್ಲಿ ಸಹಮತದ ಇರುವ ಬಗ್ಗೆ ಚರ್ಚೆ ಮಾಡುತ್ತೇವೆ. ಬರುವವರನ್ನ ಕರೆತಂದಾಗ ಯಾರಿಗೂ ಅನ್ಯಾಯ & ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದ ಅವರು, ಈಗ ಎಷ್ಟು ಜನ ತಮ್ಮ ಸಂಪರ್ಕದಲ್ಲಿದ್ದಾರೆ ಎನ್ನುವ ವಿಚಾರಕ್ಕೆ ಸವದಿ ಪ್ರತಿಕ್ರಿಯಿಸಿದ ಸವದಿ,  ನಾವು ಗೋಲಿ ಹೊಡೆಯುವಾಗ ಎರಡು ರೀತಿಯಿಂದ ಹೊಡೆಯುತ್ತೇವೆ. ಒಂದು ಚರ್ರಿಗೋಲಿ ಅಂತ ಇರುತ್ತೇ, ಅದು ಛಿದ್ರವಾಗಿರುತ್ತೇ. ಅದು ಎಷ್ಟು ಮಂದಿಗೆ ಬಡಿಯುತ್ತೋ ಗೊತ್ತಿಲ್ಲ. ಫೈರಿಂಗ್​ನಲ್ಲಿ ಎರಡು ರೀತಿ ಇರುತ್ತೇ, ಯಾವಾಗ ಯಾವ ಸಂದರ್ಬದಲ್ಲಿ ಯಾವ ಫೈರಿಂಗ್​ ಹೊಡೆಯುತ್ತೇವೆ ಗೊತ್ತಿಲ್ಲ ಎಂದರು. ಇದೇ ವೇಳೆ ಫೈರಿಂಗ್ ಮಾಡೋ ಫಿಕ್ಸಾ ಎಂಬ ಪ್ರಶ್ನೆಗೆ  ಪ್ರತಿಕ್ರಿಯಿಸಿದ ಸವದಿ, ಇದು ನಮ್ಮ ಕರ್ತವ್ಯ, ಯಾಕೆಂದ್ರೆ ಲೋಕಸಭೆಯಲ್ಲಿ ಗೆಲ್ಲಬೇಕಾದ್ರೆ ರಾಜಕೀಯದಲ್ಲಿ ಕೆಲವೊಂದು ಧ್ರುವೀಕರಣ ಮಾಡಬೇಕಾಗುತ್ತೇ. ಆದನ್ನ ನಾವು ಮಾಡುತ್ತಿದ್ದೇವೆ. ಇದು ಆಪರೇಷನ್​ ಹಸ್ತ ಅಂತಲ್ಲ, ಯಾರು ಬಿಜೆಪಿಯಲ್ಲಿ ನಮಗೆ ಅವಹೇಳನಕಾರಿಯಾಗಿದೆ, ಬೇಸತ್ತಿದ್ದೇವೆ ಅಂತ ಹೇಳುತ್ತಿದ್ದಾರೋ. ಅಂತವರನ್ನ ಗೌರವದಿಂದ ಪಕ್ಷಕ್ಕೆ ಕರೆತರುವ ಕೆಲ್ಸ ಮಾಡುತ್ತೇವೆ, ಏನೇ ಇದ್ದರೂ ಜನೇವರಿ 27 ರವರೆಗೆ ಕಾಯಿರಿ  ನಂತರ ನಿಮಗೆ ಗೊತ್ತಾಗುತ್ತೇ ಎಂದು ಬಾಗಲಕೋಟೆಯಲ್ಲಿ ಮಾಜಿ ಸಚಿವ ಲಕ್ಷ್ಮಣ ಸವದಿ ಹೇಳಿದರು. 

ತಲೆತಲಾಂತರದಿಂದ ಮಠದ ಭಕ್ತರಾದ ನಾವು ಮುರುಘಾ ಶರಣರ ಜೊತೆ ಇರುತ್ತೇವೆ; ಶಾಸಕ ವಿರೇಂದ್ರ ಪಪ್ಪಿ 

ಬಿಜೆಪಿ ಸೇರೋದು ಊಹಾಪೋಹ ಮಾತ್ರ, ಆಲೋಚನೆ ಇಲ್ಲ:

ಬಾಗಲಕೋಟೆಯಲ್ಲಿ ಸವದಿ ಸಂಬಂಧಿಗಳ ಮನೆಯಲ್ಲಿ ಬಿಜೆಪಿಗರು ಭೇಟಿ ಮಾಡಿರೋ ವಿಚಾರವಾಗಿ ಉತ್ತರಿಸಿ, ಎಲ್ಲರೂ ಬೇರೆ ಬೇರೆ ಪಕ್ಷದಲ್ಲಿ ಇರ್ತಾರೆ, ಅವರವರ ಪಕ್ಷಕ್ಕೆ ಅವರವರ ಅನುಗುಣವಾಗಿ ಇರ್ತಾರೆ ಸಂಬಂಧ ಮತ್ತು ಸ್ನೇಹಕ್ಕೆ ಪಕ್ಷ ಅಡ್ಡ ಬರಲ್ಲ. ಬಿಜೆಪಿಯ ಮಾಜಿ ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ ಅವರು ಭೇಟಿ ಆಗಿದ್ದಾರೆ. ಇದು ರಾಜಕೀಯ ಚರ್ಚೆ ಮತ್ತು ಉದ್ದೇಶಕ್ಕೆ ಸೇರಿದ್ದಲ್ಲ ಎಂದ ಅವರು, ಮರಳಿ ಬಿಜೆಪಿ ಪಕ್ಷಕ್ಕೆ ಕರೆತರುವ ವಿಚಾರ, ಇದೆಲ್ಲಾ ಊಹಾಪೋಹ, ಒಬ್ಬ ಗ್ರಾ.ಪಂ ಸದಸ್ಯರು ಸಹ ಪಕ್ಷ ಬದಲಿಸಬೇಕಾದರೆ ಚಿಂತನೆ ಮಾಡಬೇಕಾಗುತ್ತೇ. ಅಂತಹ ಯಾವುದೇ ಸಂದರ್ಭ, ಸಮಯ ನಮ್ಮ ಮುಂದೆ ಇಲ್ಲ. ಅಂತಹ ಆಲೋಚನೆಯನ್ನೂ ಸಹ ನಾವು ಮಾಡಿಲ್ಲ ಎಂದು ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.

click me!