ರಾಜ ವ್ಯಾಪಾರಿಯಾದರೇ ಪ್ರಜೆಗಳು ಭಿಕ್ಷುಕರು: ಬಿಜೆಪಿ ವಿರುದ್ಧ ಹರಿಹಾಯ್ದ ಲಕ್ಷ್ಮಣ ಸವದಿ

Published : May 07, 2023, 08:28 PM IST
ರಾಜ ವ್ಯಾಪಾರಿಯಾದರೇ ಪ್ರಜೆಗಳು ಭಿಕ್ಷುಕರು: ಬಿಜೆಪಿ ವಿರುದ್ಧ ಹರಿಹಾಯ್ದ ಲಕ್ಷ್ಮಣ ಸವದಿ

ಸಾರಾಂಶ

ಅಟಲ್‌ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾನಿಯವರ ಬಿಜೆಪಿ ಈಗಿಲ್ಲ. ಇತ್ತೀಚಿನ ದಿನಮಾನಗಳಲ್ಲಿ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ವ್ಯಾಪಾರೀಕರಣ ಪ್ರಾರಂಭಿಸಿದ್ದಾರೆ. ರಾಜ ವ್ಯಾಪಾರಿಯಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ ಲಕ್ಷ್ಮಣ ಸವದಿ 

ಕಾಗವಾಡ(ಮೇ.07): ರಾಜ ವ್ಯಾಪಾರಿಯಾದರೇ ಪ್ರಜೆ ಭಿಕ್ಷುಕನಾಗುತ್ತಾನೆ ಎಂಬ ಗಾದೆ ಇದೆ. ಅಂಥ ಪರಿಸ್ಥಿತಿ ಈಗ ಬಿಜೆಪಿಯಲ್ಲಿ ನಡೆದಿದೆ. ಹೀಗಾಗಿ, ಈ ಬಾರಿಯ ಚುನಾವಣೆಯಲ್ಲಿ ಮತದಾರರು ಯೋಚಿಸಿ ಮತ ನೀಡಬೇಕು ಎಂದು ಮಾಜಿ ಡಿಸಿಎಂ, ಲಕ್ಷ್ಮಣ ಸವದಿ ಕೋರಿದರು. ಐನಾಪುರ ಪಟ್ಟಣದಲ್ಲಿ ಕಾಗವಾಡ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜು ಕಾಗೆ ಪರ ಶನಿವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಟಲ್‌ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾನಿಯವರ ಬಿಜೆಪಿ ಈಗಿಲ್ಲ. ಇತ್ತೀಚಿನ ದಿನಮಾನಗಳಲ್ಲಿ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ವ್ಯಾಪಾರೀಕರಣ ಪ್ರಾರಂಭಿಸಿದ್ದಾರೆ. ರಾಜ ವ್ಯಾಪಾರಿಯಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಯಾರು ಪಕ್ಷಕ್ಕೆ ದ್ರೋಹ ಬಗೆದು ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುತ್ತಾರೋ, ಅಂಥವರಿಗೆ ಹೆಚ್ಚು ಬಿಜೆಪಿಯಲ್ಲಿ ಮಣೆ ಹಾಕಲಾಗುತ್ತಿದೆ. ನಾನು ಜಗದೀಶ ಶೆಟ್ಟರ, ಸೊಗಡು ಶಿವಣ್ಣ, ಆಯನೂರ ಮಂಜುನಾಥ, ರಾಮದಾಸ್‌ ಸೇರಿದಂತೆ ಸುಮರು 37 ಪ್ರಾಮಾಣಿಕರನ್ನು ಬಿಜೆಪಿ ಹೊರಹಾಕಿ ಕಳ್ಳರಿಗೆ, ಸುಳ್ಳರಿಗೆ, ಅನಾಚಾರಿಗಳಿಗೆ ಮಣೆ ಹಾಕಲಾಗಿದೆ. ಇದು ವಿನಾಶ ಕಾಲೇನ್‌ ವಿಪರೀತ ಬುದ್ಧಿ ಎನ್ನುವಂತಾಗಿದೆ ಎಂದು ಲೇವಡಿ ಮಾಡಿದರು.

ಹುಬ್ಬಳ್ಳಿ ಬಿಜೆಪಿಯ ಭದ್ರಕೋಟೆ, ಲಕ್ಷ್ಮಣ ಸವದಿ ಸೋಲು ನಿಶ್ಚಿತ: ಅಮಿತ್ ಶಾ

ಬಿಎಸ್‌ವೈ ಹೋದಲ್ಲಿ ಜನರೇ ಇಲ್ಲ:

ಮೊನ್ನೆ ಯಡಿಯೂರಪ್ಪನವರು ಅಥಣಿಗೆ ಬರುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಹೇಳಿಕೆ ನೀಡಿ, ಜಗದೀಶ ಶೆಟ್ಟರ ಮತ್ತು ಲಕ್ಷ್ಮಣ ಸವದಿಯವರನ್ನು ಸೋಲಿಸಿಯೇ ತೀರುತ್ತೇನೆ. ನಾನು ರಕ್ತದಲ್ಲಿ ಪತ್ರ ಬರೆದುಕೊಡುತ್ತೇನೆ ಎಂದಿದ್ದರು. ಆದರೆ, ಯಡಿಯೂರಪ್ಪ ಹೆಲಿಕ್ಯಾಪ್ಟರ್‌ನಿಂದ ಇಳಿದ ನಂತರ ಅಥಣಿಯಲ್ಲಿ ಜನರನ್ನು ನೋಡಿ ನಾನು ಜಗದೀಶ ಶೆಟ್ಟರನ್‌ ಸೋಲಿಸುತ್ತೇನಿ. ನೀವು ಲಕ್ಷ್ಮಣ ಸವದಿಯವರನ್ನು ಸೋಲಿಸಿ ಎಂದು ಏಕೆ ಹೇಳಿದರು. ಬಿಎಸ್‌ವೈ ಹೋದಲ್ಲಿ ಜನ ಸೇರುತ್ತಿಲ್ಲ. ಆ ಭಯದಿಂದ ಹೀಗೆ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನನ್ನನ್ನು ಸೋಲಿಸುತ್ತೇನೆ, ರಾಜು ಕಾಗೆಯವರನ್ನು ಸೋಲಿಸುತ್ತೇನೆ ಎಂದು ಮಹಾನ್‌ ನಾಯರೊಬ್ಬರು ಹೇಳುತ್ತ ತಿರುಗುತ್ತಿದ್ದಾರೆ. ಇವರಾರ‍ಯರು ಸೋಲಿಸುವವರು? ಗೆಲ್ಲಿಸುವವರು ಮತದಾರರು. ಮತದಾರರು ನಮ್ಮ ಕಿಸೆಯಲ್ಲಿದ್ದಾರೆನ್ನುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಬರೆದ ಸಂವಿಧಾನದಲ್ಲಿ ರಾಷ್ಟ್ರಪತಿಗೂ ಅಷ್ಟೇ ಹಕ್ಕು, ಒಬ್ಬ ಕೂಲಿ ಕಾರ್ಮಿಕನಿಗೂ ಅಷ್ಟೇ ಹಕ್ಕು. ಆದರೆ, ಇವತ್ತು ದರ್ಪದಿಂದ, ಸೊಕ್ಕಿನಿಂದ, ಅಹಂನಿಂದ ನಾನು ಗೆದ್ದೇ ಗೆಲ್ಲುತ್ತೇನೆ ಎನ್ನುವ ದುಡ್ಡಿನ ದರ್ಪ ಇದೆಯಲ್ಲ ಆ ದುಡ್ಡಿನ ದರ್ಪ ಈ ಕ್ಷೇತ್ರದಲ್ಲಿ ನಡೆಯುವುದಿಲ್ಲ. ಈ ರಾಜ್ಯದಲ್ಲಿ ನಡೆಯುವುದಿಲ್ಲ. ಈ ತಾಲೂಕಿನಲ್ಲಿ ನಡೆಯುವುದಿಲ್ಲ. ಇಲ್ಲಿ ಅನೇಕ ಜನ ಆಗಿ ಹೋಗಿದ್ದಾರೆ. ರಾಜ್ಯ ಮಹಾರಾಜರು ಆಗಿ ಹೋಗಿದ್ದಾರೆ. ಎಂಥಿಂತಹವರು ಈ ಭೂಮಿ ಮೇಲೆ ಶಾಶ್ವತವಾಗಿಲ್ಲ. ಹೀಗಾಗಿ, ಐನಾಪುರದ ಜನರಲ್ಲಿ ನಾನು ಕಳಕಳಿಯಿಂದ ಮನವಿ ಮಾಡುತ್ತೇನೆ. ಈ ಕ್ಷೇತ್ರದಲ್ಲಿ ರಾಜು ಕಾಗೆಯವರಂತಹ ನೇರ ನುಡಿಯ ವ್ಯಕ್ತಿ ಇದ್ದಾರೆ. ಅಂತಹ ಪ್ರಾಮಾಣಿಕವಾಗಿರುವ ಅವರನ್ನು ಪ್ರಚಂಡ ಮತಗಳಿಂದ ಆಯ್ಕೆ ಮಾಡಿ ಎಂದು ಕೋರಿದರು.

ಲಕ್ಷ್ಮಣ ಸವದಿ ಹೋದರೂ, ಜಗದೀಶ ಶೆಟ್ಟರ್‌ ಹೋದರೂ ಏನೂ ಆಗುವುದಿಲ್ಲ ಎಂದಿದ್ದಾರೆ. ಅಷ್ಟೆಏಕೆ ಮೇ.13ರಂದು ಲಕ್ಷ್ಮಣ ಸವದಿ ಹೆಣಾ ಬೀಳುತ್ತದೆ ಎಂದಿದ್ದಾರೆ. ಆದರೆ, ಹುಟ್ಟಿಸಿದವನೂ ಮೇಲಿದ್ದಾನೆ. ಕರೆದುಕೊಳ್ಳುವವನೂ ಮೇಲಿದ್ದಾನೆ. ಜನನ, ಮರಣ ಅನ್ನುವಂತಹದ್ದನ್ನು ಬರೆಯುವನು ಭಗವಂತ. ಮೇ.13ರಂದು ಲಕ್ಷ್ಮಣ ಸವದಿ ಹೆಣಾ ಬೀಳುತ್ತದೆ. ಮೇ.13ರಂದು ರಾಜು ಕಾಗೆ ಹೆಣಾ ಬೀಳುತ್ತದೆ. ಯಾರು ನೀವು ಹೇಳುವವರು ಎಂದು ಆಕ್ರೋಶ ಹೊರ ಹಾಕಿದರು.

ಮೊನ್ನೆ ಬಂದು ಹೇಳುತ್ತಾರೆ, ರಾಜು ಕಾಗೆಯವರನ್ನೂ ಸೋಲಿಸುತ್ತೇನೆ, ಲಕ್ಷ್ಮಣ ಸವದಿಯವರನ್ನೂ ಸೋಲಿಸುತ್ತೇನೆ. ಸೋಲಿಸೋಕೆ ನೀನ್ಯಾರೋ ತಮ್ಮಾ. ಸೋಲಿಸುವವರು, ಗೆಲ್ಲಿಸುವವರು ಇಲ್ಲಿ ಕುಳಿತ್ತಿದ್ದಾರಲ್ಲ ಇವರು ನಮ್ಮ ಪಾಲಿನ ದೇವರು. ಇವರು ಆರಿಸಿದರೇ ವಿಧಾನಸೌಧಕ್ಕೆ ಹೋಗುತ್ತೇವೆ. ಆರಿಸಲಿಲ್ಲ ಎಂದರೇ ನಮ್ಮ ಕೆಲಸಕ್ಕೆ ಬರುತ್ತೇವೆ. ನಮ್ಮ ಮಾಲೀಕರು ಯಾರೆಂದರೇ ರಾಜಕಾರಣದಲ್ಲಿ ಮತದಾರನೇ ಮಾಲೀಕರು ಎಂದು ಮಾರ್ಮಿಕವಾಗಿ ನುಡಿದರು.
ಮಾಜಿ ಶಾಸಕ ಹಾಗೂ ಕಾಂಗ್ರೆಸ ಪಕ್ಷದ ಅಭ್ಯರ್ಥಿ ರಾಜು ಕಾಗೆ ಮಾತನಾಡಿ, ಬರುವ ಮೇ.10 ರಂದು ನಡೆಯಲಿರುವ ಸಾರ್ವತ್ರಿಕ ಚುನಾಚವಣೆ ನಡೆಯಲಿದ್ದು ತಾವೆಲ್ಲರು ನಾನು ಕಳೆದ ನಾಲ್ಕುಬಾರಿ ಆಶೀರ್ವಾದ ಮಾಡಿದ್ದೀರಿ, ನಾನು ಶಾಸಕರಾಗಿದ್ದಾಗ ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಮತವನ್ನು ನೀಡಿ ಮತ್ತೊಮ್ಮೆ ತಮ್ಮೆಲ್ಲರ ಸೇವೆ ಮಾಡಲು ಅನುವು ಮಾಡಿ ಕೊಡುÊಂತೆ ಮನವಿ ಮಾಡಿದರು.

ಜಾರಕಿಹೊಳಿ ಸಾಹೇಬ್ರು ಜನರ ಕೈಗೆ ಸಿಗುವುದು ವಿರಳ : ಅಮಿತ್ ಶಾ ಲೇವಡಿ

ಈ ವೇಳೆ ವೇದಿಕೆಯ ಮೇಲೆ ಮುಖಂಡರಾದ ಅರುಣಕುಮಾರ ಯಲಗುದ್ರಿ, ಚಂದ್ರಕಾಂತ ಇಮ್ಮಡಿ, ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಭಿರಡಿ, ಸಂಜಯ ಕುಚನೂರೆ, ಪ್ರಶಾಂತ ಅಪರಾಜ, ಶಿದ್ದಗೌಡ ಕಾಗೆ, ಮಹೇಶ ಸೊಲ್ಲಾಪುರೆ,ಪ್ರಕಾಶ ಕೋರ್ಬು, ವಿಜಯಕುಮಾರ ಅಕಿವಾಟೆ, ಓಂಪ್ರಕಾಶ ಪಾಟೀಲ,ಸುನೀಲ ಪಾಟೀಲ, ರೇಖಾ ಪುಂಜಪ್ಪಗೋಳ, ಸುರೇಶ ಗಾಣಿಗೇರ, ವಿಶ್ವನಾಥ ಪಾಟೀಲ, ರಾಜು ಮದನೆ, ಗುರುರಾಜ ಮಡಿವಾಳರ, ಸಂಜಯ ಕುಸನಾಳೆ,ಮಹಿಬೂಬ್‌ ಜಮಾಮಾರ, ಮಹಿಬೂಬ ನನದಿ,ರಾಯಪ್ಪ ಹಾಲಾರೊಟ್ಟಿ,ಬರಮು ನಿರ್ವಾಣಿ, ರಾಜು ಅವಟಿ, ಪ್ರಕಾಶ ಗಾಣಿಗೇರ, ಕುಮಾರ ಜಯಕರ, ನೇತಾಜಿ ನಡೋಣಿ, ರಾಮಾ ಮಾನೆ, ನವೀಣ ಗಾಣೀಗೇರ, ರಾವಸಾಹೇಬ ಪಾಟೀಲ, ಸೇರಿದಂತೆ ನೂರಾರು ಕಾರ್ಯಕರ್ತರು, ಮುಖಂಡರು, ಉಪಸ್ಥಿತರಿದ್ದರು.

ರಾಜು ಕಾಗೆ ಸೋಲಿಸಿ ತಪ್ಪು ಮಾಡಿದೆ:

ನಾನು ರಾಜು ಕಾಗೆ ಕಳೆದ 20 ವರ್ಷಗಳಿಂದ ಜೋಡೆತ್ತುಗಳ ಹಾಗೆ ಒಟ್ಟಿಗೆ ಇದ್ದು ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸಿದ್ದೇವು. ಆದರೆ, 2019ರಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಬೇರೆ ಬೇರೆಯಾಗಿ ರಾಜು ಕಾಗೆಯವರನ್ನು ಸೋಲಿಸಬೇಕಾಯಿತು. ಅವರನ್ನು ಸೋಲಿಸಿ ನಾನು ತಪ್ಪು ಮಾಡಿದ್ದೇನೆ ಎಂದು ಅನಿಸುತ್ತದೆ. ಈಗ ಮತ್ತೆ ನಾವಿಬ್ಬರು ಒಟ್ಟಿಗಿದ್ದೇವೆ. ಕಾಗವಾಡದಿಂದ ರಾಜು ಕಾಗೆಯವರನ್ನು ನಿಮ್ಮೆಲ್ಲರ ಭರವಸೆ ಮೇರೆಗೆ ಗೆಲ್ಲಿಸಿ ಹೆಗಲ ಮೇಲೆ ಕೂಡ್ರಿಸಿಕೊಂಡು ವಿಧಾನಸೌಧಕ್ಕೆ ಹೋಗುತ್ತೇನೆ ಅಂತ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೇಂದ್ರದ ಒಪ್ಪಿಗೆ ಸಿಕ್ರೆ ಕೃಷ್ಣ ಮೇಲ್ದಂಡೆ 3ನೇ ಹಂತದ ಪೂರ್ಣಕ್ಕೆ ಬದ್ಧ: ಡಿ.ಕೆ.ಶಿವಕುಮಾರ್‌
ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌