ಕೇಂದ್ರದ ದುರ್ಬಲ ಆರ್ಥಿಕ ನೀತಿಯಿಂದ ಬೆಲೆ ಹೆಚ್ಚಳ: ಸಿದ್ದರಾಮಯ್ಯ

By Govindaraj S  |  First Published Oct 31, 2022, 11:58 PM IST

ಕೇಂದ್ರ ಸರ್ಕಾರದ ದುರ್ಬಲ ಆರ್ಥಿಕ ನೀತಿಯಿಂದ ಎಲ್ಲಾ ಬೆಲೆಗಳು ಹೆಚ್ಚಾಗಿ ಜನಸಾಮಾನ್ಯರ ಬದುಕು ಕಷ್ಟಕರವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಟೀಕಿಸಿದರು. 


ಮೈಸೂರು (ಅ.31): ಕೇಂದ್ರ ಸರ್ಕಾರದ ದುರ್ಬಲ ಆರ್ಥಿಕ ನೀತಿಯಿಂದ ಎಲ್ಲಾ ಬೆಲೆಗಳು ಹೆಚ್ಚಾಗಿ ಜನಸಾಮಾನ್ಯರ ಬದುಕು ಕಷ್ಟಕರವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಟೀಕಿಸಿದರು. ಚಾಮುಂಡೇಶ್ವರಿ ಕ್ಷೇತ್ರದ ಡಿ. ಸಾಲುಂಡಿಯ ಶ್ರೀಬಸವೇಶ್ವರ ಸ್ಟೀಲ್‌ ಮತ್ತು ಟ್ರೇಡ​ರ್‍ಸ್ನ ಉದ್ಘಾಟನೆ ಹಾಗೂ ಶ್ರೀಬಸವೇಶ್ವರ ನವಚೇತನ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಇಂದು ಒಬ್ಬ ಸಾಮಾನ್ಯ ಮಧ್ಯಮವರ್ಗದ ಕುಟುಂಬದವರು ಮನೆಕಟ್ಟಲು ಆಗುತ್ತಿಲ್ಲ. ಸೀಮೆಂಟ್‌, ಕಬ್ಬಿಣ, ಎಂ. ಸ್ಯಾಂಡ್‌ ಎಲ್ಲದರ ಬೆಲೆಗಳು ಹೆಚ್ಚಾಗಿವೆ. 

ದಿನನಿತ್ಯ ಬಳಕೆಯ ಡೀಸೆಲ್‌, ಪೆಟ್ರೋಲ್‌, ಗ್ಯಾಸ್‌, ಬೆಲೆಗಳು ಹೆಚ್ಚಾಗಿವೆ. ಇದೇನಾ ಅಚ್ಛೇದಿನ ಎಂದು ಪ್ರಶ್ನಿಸಿದರು. ಎಲ್ಲಾ ಕಾಮಗಾರಿಗಳಲ್ಲೂ ಲಂಚ, ಸರ್ಕಾರದ ಎಲ್ಲಾ ನೇಮಕಾತಿಗಳಲ್ಲೂ ಲಂಚ, ಹಗರಣಗಳ ಮೇಲೆ ಹಗರಣಗಳು ಕೇಳಿದರೆ ನಿಮ್ಮ ಸರ್ಕಾರ ಇದ್ದಾಗ ಎಲ್ಲಾ ಸರಿಯಾಗಿತ್ತ ಎಂಬ ಬೇಜವಬ್ದಾರಿ ಉತ್ತರ ಕೊಡುತ್ತಾರೆ. ಇಂತಹವರಿಗೆ ತಕ್ಕ ಪಾಠ ಕಲಿಸಬೇಕಾದರೆ ಮುಂದಿನ ಚುನಾವಣೆಯಲ್ಲಿ ಈ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಕರೆ ನೀಡಿದರು.

Tap to resize

Latest Videos

ಸಮಾಜದಲ್ಲಿ ವಿಷ ಬೀಜ ಬಿತ್ತುತ್ತಿರುವ ಬಿಜೆಪಿ ಸರ್ಕಾರ: ಶಾಸಕ ಯತೀಂದ್ರ ಸಿದ್ದರಾಮಯ್ಯ

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡ, ಮೈಮುಲ್‌ ಮಾಜಿ ಅಧ್ಯಕ್ಷ ಎಸ್‌. ಸಿದ್ದೇಗೌಡ, ಜಿಪಂ ಮಾಜಿ ಸದಸ್ಯ ಬೀರಿಹುಂಡಿ ಬಸವಣ್ಣ, ವಿಧಾನ ಪರಿಷತ್‌ ಸದಸ್ಯ ಡಾ. ತಿಮ್ಮಯ್ಯ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌, ರಾಕೇಶ್‌ ಪಾಪಣ್ಣ, ತಾಪಂ ಮಾಜಿ ಸದಸ್ಯರಾದ ಸಿ.ಎಂ. ಸಿದ್ದರಾಮೇಗೌಡ, ಮಾರ್ಬಳ್ಳಿ ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ. ಗುರುಸ್ವಾಮಿ, ಜೆ. ಸತೀಶ್‌ಕುಮಾರ್‌, ತಾಲೂಕು ಕಾಂಗ್ರೆಸ್‌ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಕೆರೆಹುಂಡಿ ಮಹೇಶ್‌, ಗ್ರಾಪಂ ಅಧ್ಯಕ್ಷ ಉದ್ಬೂರು ಕೃಷ್ಣ, ಮಾಜಿ ಅಧ್ಯಕ್ಷರಾದ ಮಾಕಿ ಮಹಾದೇವ, ಬಸವರಾಜು, ಸಿದ್ದರಾಮೇಗೌಡ, ಬೆಳ್ಳಿ ಖಡ್ಗ ದೇವರಾಜ್‌, ದೊಡ್ಡಹುಂಡಿ ಸೋಮಣ್ಣ, ಜೆ.ಜೆ. ಆನಂದ, ಹರೀಶ್‌ ಮೊಗಣ್ಣ, ಗಡ್ಡಬಸಪ್ಪ, ಚಂದ್ರ, ಮಾಕಿ ಮರೀಗೌಡ, ಧನಗಳ್ಳಿ ಬಸವರಾಜು, ಮಹೇಶ ಇದ್ದರು.

ಈ ಬಾರಿ ಡಿ. ರವಿಶಂಕರ್‌ ಗೆಲುವು ಖಚಿತ: ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ. ರವಿಶಂಕರ್‌ ಅವರು 2018ರ ಚುನಾವಣೆಯಲ್ಲಿ ಅಲ್ಪಮತಗಳಿಂದ ಸೋತಿದ್ದು, ಈ ಬಾರಿ ಗೆಲುವು ಸಾಧಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌ ಹೇಳಿದರು. ಭೇರ್ಯ ಸಮೀಪದ ಅರಕೆರೆ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ. ರವಿಶಂಕರ್‌ 2023ರ ಚುನಾವಣಾ ಅಂಗವಾಗಿ ಜನಾಶೀರ್ವಾದ ಯಾತ್ರೆ ಚಾಲನೆ ನೀಡಿ ಅವರು ಮಾತನಾಡಿದರು.

ಆರೇಳು ಕ್ಷೇತ್ರದಿಂದ ಸ್ಪರ್ಧೆಗೆ ಒತ್ತಡವಿದೆ: ಸಿದ್ದರಾಮಯ್ಯ

ಐದು ವರ್ಷಗಳು ಯಶಸ್ವಿಯಾಗಿ ಆಡಳಿತ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರು, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕೋಟ್ಯಾಂತರ ಅನುದಾನ ನೀಡಿದ್ದಾರೆ, ಸಿದ್ದರಾಮಯ್ಯನವರ ಆಡಳಿತದಲ್ಲಿ ರಾಜ್ಯದ ಜನತೆ ನೆಮ್ಮದಿಯಾಗಿ ಜೀವನ ನಡೆಸಿದರು, ಆದರೆ ಬಿಜೆಪಿ ಮತ್ತು ಜೆಡಿಎಸ್‌ ಸರ್ಕಾರದ ಆಡಳಿತದಲ್ಲಿ ರಾಜ್ಯದ ಜನತೆಗೆ ಯಾವುದೇ ಅನುಕೂಲವಾಗಿಲ್ಲ ಎಂದು ಟೀಕಿಸಿದರು. ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿರುವ ಕೆಪಿಸಿಸಿಯ ಡಾ. ರವೀಂದ್ರ ಮಾತನಾಡಿ, ಪ್ರತಿಯೊಂದು ಗ್ರಾಮಕ್ಕೂ ಜನಾಶೀರ್ವಾದ ಯಾತ್ರೆ ತಲುಪಲಿ, ನಮ್ಮ ಪಕ್ಷದ ಅಭ್ಯರ್ಥಿ ಡಿ. ರವಿಶಂಕರ್‌ ಮನೆ ಮನೆಗೂ ಬೇಟಿ ನೀಡುವ ಸಂದರ್ಭದಲ್ಲಿ ಕಾರ್ಯಕರ್ತರು ಆ ಗ್ರಾಮದ ಮುಖಂಡರಿಗೆ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.

click me!