'ಕುಮಾರಸ್ವಾಮಿ ಯಾಕೆ ಮೈತ್ರಿ ಸರ್ಕಾರದ ಬಗ್ಗೆ ರಿಕಾಲ್ ಮಾಡಿಕೊಳ್ತಿದ್ದಾರೋ ಗೊತ್ತಿಲ್ಲ'

Suvarna News   | Asianet News
Published : Jul 22, 2020, 12:36 PM IST
'ಕುಮಾರಸ್ವಾಮಿ ಯಾಕೆ ಮೈತ್ರಿ ಸರ್ಕಾರದ ಬಗ್ಗೆ ರಿಕಾಲ್ ಮಾಡಿಕೊಳ್ತಿದ್ದಾರೋ ಗೊತ್ತಿಲ್ಲ'

ಸಾರಾಂಶ

ಹೆಚ್.ಡಿ. ಕುಮಾರಸ್ವಾಮಿ ತಾತ್ಪರ್ಯವೆಲ್ಲ ನಂಗೆ ಅರ್ಥವಾಗಲ್ಲ| ಇವರು ಬರೆದಿರುವ ಕನ್ನಡವೆಲ್ಲ ಅರ್ಥವಾಗಲ್ಲ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ| ದುಡ್ಡು  ಹೊಡೆಯುವುದರಲ್ಲಿ ವಿಪಕ್ಷಗಳ ಸಹಕಾರ ಇಲ್ಲ| ಜನರ ಜೀವ ಉಳಿಸಲು ಸಹಕಾರ ನೀಡುತ್ತೇವೆ|

ಬೆಂಗಳೂರು(ಜು.22):  ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಬೀಳುವುದಕ್ಕೆ ಸಿದ್ದೌಷಧ ಕಾರಣ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅದೆಲ್ಲ ಮುಗಿದು ಹೋದ ಕಥೆಯಾಗಿದೆ. ಯಾಕೆ ಈಗ ಅವರು ರಿಕಾಲ್ ಮಾಡಿಕೊಳ್ತಿದ್ದಾರೋ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರ ಹೋಯ್ತು, ಈಗ ಬಿಜೆಪಿ ಸರ್ಕಾರ ಇದೆ. ಇವರ ಬಗ್ಗೆ ಮಾತಾಡೋದು ಬಿಟ್ಟು ಕುಮಾರಸ್ವಾಮಿ ಬಗ್ಗೆ ನಾನ್ಯಾಕೆ ಮಾತಾಡಲಿ? ಎಂದು ಪ್ರಶ್ನಿಸಿದ್ದಾರೆ. 

ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹೆಚ್.ಡಿ. ಕುಮಾರಸ್ವಾಮಿ  ಅವರ ತಾತ್ಪರ್ಯವೆಲ್ಲ ನಂಗೆ ಅರ್ಥವಾಗಲ್ಲ, ಇವರು ಬರೆದಿರುವ ಕನ್ನಡವೆಲ್ಲ ಅರ್ಥವಾಗಲ್ಲ ಎಂದು ತಿಳಿಸಿದ್ದಾರೆ. 

ಕುಮಾರಸ್ವಾಮಿ ಸರ್ಕಾರ ಪತನವಾಗಿ ಒಂದು ವರ್ಷ: ನಾಳೆ ಎಚ್‌ಡಿಕೆ ವಿಡಿಯೋ ಕಾನ್ಫರೆನ್ಸ್

ಲೆಕ್ಕ ಕೇಳುವ ಕಾಂಗ್ರೆಸ್‌ನವರಿಗೆ ಕೆಲಸ ಇಲ್ಲ ಎಂಬ ವೈದ್ಯಕಿಯ ಶಿಕ್ಷಣ ಸಚಿವ ಕೆ. ಸುಧಾಕರ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಲೆಕ್ಕ ಯಾರಿಗೆ ಕೊಡಬೇಕು? ಜನಪ್ರತಿನಿಧಿಗಳಿಗೆ, ಜನರಿಗೆ ಉತ್ತರ ಕೊಡಬೇಕು. ಸರ್ಕಾರ ಉತ್ತರ ಕೊಡಬೇಕು. ನಾನು ವಿಪಕ್ಷ ನಾಯಕನಾಗಿ ಸರ್ಕಾರಕ್ಕೆ ಲೆಕ್ಕ ಕೊಡಿ ಅಂತ ಕೇಳಿದ್ದೇನೆ. ನಾನು ಮೂರು ಸರಿ ಪತ್ರ ಬರೆದಿದ್ದೇನೆ, ಉತ್ತರ ಕೊಟ್ಟಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ನಿನ್ನೆ ಸಿಎಂ ಯಡಿಯೂರಪ್ಪ ಅವರು ಸುಳ್ಳು ಹೇಳಿದ್ದಾರೆ. ದುಡ್ಡು  ಹೊಡೆಯುವುದರಲ್ಲಿ ವಿಪಕ್ಷಗಳ ಸಹಕಾರ ಇಲ್ಲ. ಜನರ ಜೀವ ಉಳಿಸಲು ಸಹಕಾರ ನೀಡುತ್ತೇವೆ ಎಂದು ಹೇಳಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಹೈಕಮಾಂಡ್‌ ನಿರ್ಧಾರವೇ ಅಂತಿಮ: ಸಿಎಂ ಬದಲು ವಿಚಾರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ