ಸಿದ್ದರಾಮೋತ್ಸವ ನಾನಲ್ಲ ಮಾಡ್ತಿರೋದು: ಸಿದ್ದು

Published : Jul 01, 2022, 05:30 AM IST
ಸಿದ್ದರಾಮೋತ್ಸವ ನಾನಲ್ಲ ಮಾಡ್ತಿರೋದು: ಸಿದ್ದು

ಸಾರಾಂಶ

*  ನಾನು ಯಾವತ್ತಿದ್ದರೂ ಸಾಮಾಜಿಕ ನ್ಯಾಯ, ಅಹಿಂದ ಮತ್ತು ಬಡವರ ಪರವಾಗಿ ಇರುವವನು *  ಎಲ್ಲರಿಗೂ ನ್ಯಾಯ ಸಿಗಬೇಕು, ಅವಕಾಶ ವಂಚಿತ ಜನರಿಗೆ ನ್ಯಾಯ ಸಿಗಬೇಕು *  ನಾನು 75 ವರ್ಷ ಪೂರೈಸಿರುವುದು ಸತ್ಯ ಅಲ್ವಾ? 

ನವದೆಹಲಿ(ಜು.01):  ತಮಗೆ 75 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮದ ಕುರಿತ ಬಿಜೆಪಿಗರು ಮಾಡುತ್ತಿರುವ ಟೀಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ನಾನು 75 ವರ್ಷ ಪೂರೈಸಿರುವುದು ಸತ್ಯ ಅಲ್ವಾ? ಆ ಕಾರ್ಯಕ್ರಮವನ್ನು ನನ್ನ ಅಭಿಮಾನಿಗಳು ಮಾಡುತ್ತಿದ್ದಾರೆ, ನಾನಲ್ಲ ಎಂದು ಹೇಳಿದ್ದಾರೆ. ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ನನ್ನ ಹುಟ್ಟುಹಬ್ಬವನ್ನು ನಾನು ಆಚರಿಸುತ್ತಿಲ್ಲ. ಸ್ನೇಹಿತರು ಮತ್ತು ಅಭಿಮಾನಿಗಳು ಕೂಡಿ ಮಾಡುತ್ತಿದ್ದಾರೆ. ನನ್ನ ಜನ್ಮದಿನ ಕಾರ್ಯಕ್ರಮಕ್ಕೆ ರಾಹುಲ್‌ ಗಾಂಧಿ ಅವರು ಬರುತ್ತೇನೆ ಎಂದು ಹೇಳಿದ್ದಾರೆ. ಇದೊಂದು ವಿಶೇಷ ಸಂದರ್ಭ ಹಾಗಾಗಿ ಬರಲು ಒಪ್ಪಿದ್ದೇನೆ ಎಂದು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಸಿದ್ದರಾಮೋತ್ಸವ ಅಲ್ಲ, ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲಕ್ಕೆತ್ತುವ ಉತ್ಸವ: ಬಿಜೆಪಿ ವ್ಯಂಗ್ಯ

ಇದೇ ವೇಳೆ ನಾನು ಯಾವತ್ತಿದ್ದರೂ ಸಾಮಾಜಿಕ ನ್ಯಾಯ, ಅಹಿಂದ ಮತ್ತು ಬಡವರ ಪರವಾಗಿ ಇರುವವನು. ಎಲ್ಲರಿಗೂ ನ್ಯಾಯ ಸಿಗಬೇಕು, ಅವಕಾಶ ವಂಚಿತ ಜನರಿಗೆ ನ್ಯಾಯ ಸಿಗಬೇಕು, ಅವರು ಕೂಡ ಮುಖ್ಯ ವಾಹಿನಿಗೆ ಬರಬೇಕು ಎಂಬ ನಂಬಿಕೆ ಇಟ್ಟುಕೊಂಡು ಹಿಂದಿನಿಂದಲೂ ಅದಕ್ಕೆ ಸರಿಯಾಗಿ ನಡೆದುಕೊಂಡು ಬಂದವನು. ಆ ವಿಚಾರದಲ್ಲಿ ರಾಜಿಯಾಗದೆ ಹೀಗೆಯೇ ಮುನ್ನಡೆಯುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ