'ಚನ್ನಪಟ್ಟಣ ನಮ್ಮದೇ, ನನ್ನ ದೇಹ ಅಂತಿಮವಾಗಿ ಭೂಮಿಗೆ ಹೋಗೋದು ರಾಮನಗರದಲ್ಲಿಯೇ'

By Suvarna News  |  First Published Jan 20, 2021, 5:20 PM IST

ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ/ ಪ್ರಜಾಪ್ರಭುತ್ವದಲ್ಲಿ ರೈತರ ಪರ ಹೋರಾಟ ಮಾಡಲು ಅವಕಾಶವಿದೆ . ಎಲ್ಲರಿಗೂ ಪ್ರತಿಭಟಿಸುವ ಅವಕಾಶವಿದೆ/ ಬಿಸಿ ಪಾಟೀಲರ ಹೇಳಿಕೆ ಬಗ್ಗೆ ಏನೂ ಹೇಳುವುದಿಲ್ಲ


ಚನ್ನಪಟ್ಟಣ(ಜ.  20)  ಪ್ರಜಾಪ್ರಭುತ್ವದಲ್ಲಿ ರೈತರ ಪರ ಹೋರಾಟ ಮಾಡಲು ಅವಕಾಶವಿದೆ . ಎಲ್ಲರಿಗೂ ಪ್ರತಿಭಟಿಸುವ ಅವಕಾಶವಿದೆ. ಸರ್ಕಾರ ಸಹ ಎಲ್ಲರ ಹೋರಾಟಕ್ಕೆ ಬೆಲೆಕೊಡಬೇಕು ಸರ್ಕಾರ ಸಮಸ್ಯೆ ಸರಿಪಡಿಸುವ ಕ್ರಮವಹಿಸಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಬಿಸಿ ಪಾಟೀಲ್ ಬಗ್ಗೆ ನಾನು ಮಾತನಾಡಲ್ಲ. ಬೂಟಾಟಿಕೆಗಾಗಿ ರೈತರ ಮನೆಯಲ್ಲಿದ್ದು ಬಂದಿದ್ದಾರೆ. ಹಾಗಾಗಿ ಆ ವೀಕ್ ಮೈಂಡ್ ಬಗ್ಗೆ ಮಾತನಾಡಿದ್ದಾರೆ. ಇಲಾಖೆಯ ಉಪನಿರ್ದೇಶಕರ ವರ್ಗಾವಣೆಗೂ ಹಣ ಕೇಳ್ತಿದ್ದಾರೆ. ಪಾಪ ಅವನು ಎಲ್ಲಿಂದ ಹಣ ತಂದು ಕೊಡ್ತಾನೆ? ಕೊನೆಗೆ ರೈತರಿಂದಲೇ ಹಣ ಪಡೆಯಬೇಕಿದೆ ಹಾಗಾಗಿ ರೈತರ ಬಗ್ಗೆ ಲಘುವಾಗಿ ಮಾತನಾಡಬಾರದು ಎಂದು ಪಾಟೀಲ್ ಗೆ ಟಾಂಗ್  ಕೊಟ್ಟರು.

Tap to resize

Latest Videos

ಮಗನಿಗಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡ್ರಾ ಸುಮಲತಾ?

ನನ್ನ ದೇಹ ಅಂತಿಮವಾಗಿ ಭೂಮಿಗೆ ಹೋಗೋದು ರಾಮನಗರದಲ್ಲಿಯೇ. ರಾಮನಗರ ಜಿಲ್ಲೆ ಬಿಟ್ಟು ನಾನು ಹೊರಗೆ ಹೋಗಲ್ಲ. ನಾನು ಎಂದಿಗೂ ಚನ್ನಪಟ್ಟಣ ಕ್ಷೇತ್ರ ಬಿಡಲ್ಲ. ಕೆಲವರು ಸುಖಾಸುಮ್ಮನೆ ಅಪಪ್ರಚಾರ ಮಾಡ್ತಿದ್ದಾರೆ. ಕ್ಷೇತ್ರ ಬಿಡೋದಿದ್ದರೆ ನಾನು ಚನ್ನಪಟ್ಟಣದಲ್ಲಿ ಯಾಕೆ ಓಡಾಡುತ್ತಿದ್ದೆ? ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಯತ್ನ ಪಡುತ್ತಿದ್ದೇನೆ. ರಾಮನಗರ-ಚನ್ನಪಟ್ಟಣ ನನ್ನ ಎರಡು ಕಣ್ಣು ನಾನು ಸಾಯುವುದರೊಳಗೆ ರಾಮನಗರ-ಚನ್ನಪಟ್ಟಣವನ್ನ ಅವಳಿ ನಗರ ಮಾಡ್ತಿನಿ ಎಂರು.

ಹುಬ್ಬಳ್ಳಿ-ಧಾರವಾಡದ ರೀತಿ ನಗರಪಾಲಿಕೆಯಾಗಿ ಮಾಡ್ತೇನೆ. ಈ ಎರಡೂ ಕ್ಷೇತ್ರ ನನ್ನ ಕಣ್ಣುಗಳು, ಕಳೆದುಕೊಂಡರೆ ನಾನು ಕುರುಡಾಗುತ್ತೇನೆ. ಹಾಗಾಗಿ ಚನ್ನಪಟ್ಟಣ ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

click me!