'ದಲ್ಲಾಳಿಗಳಿಗೆ ಅಧಿಕಾರ ಕೊಡಬೇಕು ಅನ್ನೋದು ಕಾಂಗ್ರೆಸ್ ಧೋರಣೆ'

By Suvarna NewsFirst Published Jan 20, 2021, 4:00 PM IST
Highlights

ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿಕೆ/ ಕಾಂಗ್ರೆಸ್‌, ಮೋದಿ ಮತ್ತು ಬಿಜೆಪಿಯನ್ನು ವಿರೋಧಿಸಲು ನೆಪ ಹುಡುಕುತ್ತಿದೆ/ ಅವರ ಪ್ರಣಾಳಿಕೆಯಲ್ಲಿನ ಅಂಶವನ್ನು ಕಾಂಗ್ರೆಸಿಗರೇ ವಿರೋಧಿಸುತ್ತಾರೆ/ ಕಾಂಗ್ರೆಸ್ ಭೌದ್ಧಿಕವಾಗಿ ಎಷ್ಟು ದಿವಾಳಿಯಾಗಿದೆ ಅಂತಾ ಗೊತ್ತಾಗುತ್ತದೆ/ 2019 ಪ್ರಣಾಳಿಕೆಯಲ್ಲಿ ಇರುವುದೇನು, ಕಾಂಗ್ರೆಸ್ ಮಾಡುತ್ತಿರುವುದೇನು.?

ನವದೆಹಲಿ( ಜ.  20) ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ವಿರೋಧಿಸಲು  ಕಾಂಗ್ರೆಸ್ ನೆಪ ಹುಡುಕುತ್ತಿದೆ. ಅವರ ಪ್ರಣಾಳಿಕೆಯಲ್ಲಿನ ಅಂಶವನ್ನು ಕಾಂಗ್ರೆಸಿಗರೇ ವಿರೋಧಿಸುತ್ತಾರೆ. ಕಾಂಗ್ರೆಸ್ ಭೌದ್ಧಿಕವಾಗಿ ಎಷ್ಟು ದಿವಾಳಿಯಾಗಿದೆ ಅಂತಾ  ಇದರಿಂದ ಗೊತ್ತಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.

2019 ಪ್ರಣಾಳಿಕೆಯಲ್ಲಿ ಇರುವುದೇನು, ಕಾಂಗ್ರೆಸ್ ಮಾಡುತ್ತಿರುವುದೇನು.? ರೈತರಿಗೆ ಶಕ್ತಿ ತುಂಬಲು ಕಾಂಗ್ರೆಸ್ ಗೆ ಯೋಗ್ಯತೆ ಇರಲಿಲ್ಲ. ರೈತರು ಬೆಳದ ವಸ್ತುಗಳನ್ನು ಎಲ್ಲಿ ಬೇಕಾದ್ರೂ ಮಾರಾಟ ಮಾಡಬಹುದು. ರೈತರಿಗೆ ಕೊಟ್ಟ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ದಲ್ಲಾಳಿಗಳಿಗೆ ಅಧಿಕಾರ ಕೊಡಬೇಕು
ಅನ್ಮೋದು ಕಾಂಗ್ರೆಸ್ ಧೋರಣೆ ಎಂದು ಟೀಕಾ ಪ್ರಹಾರ ಮಾಡಿದರು.

ಮಗನಿಗಾಗಿ ಅಧಿಕಾರ ದುರುಪಯೋಗ ಮಾಡಿಕೊಂಡರಾ ಸುಮಲತಾ?

ದಲ್ಲಾಳಿಗಳ ಜೊತೆಗೆ ಕಾಂಗ್ರೆಸ್ ಆಡಳಿತ ನಡೆಸಿದೆ. ದಲ್ಲಾಳಿಗಳಿಂದ ಮುಕ್ತ ಮಾಡುವುದೇ ಮೋದಿಯವರ ಗುರಿ. ದೇಶದ ರೈತರು ಬಿಜೆಪಿ ಜೊತೆ ಇದ್ದಾರೆ. ನೂತನ ಕಾಯ್ದೆ ಬಂದ ಬಳಿಕ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ಬಿಜೆಪಿಯನ್ನು ದೇಶದ ಜನ ಬೆಂಬಲಿಸಿದ್ದಾರೆ ಎಂದು ಕೃಷಿ ಕಾಯಿದೆ ವಿರೋಧ ಮಾಡುತ್ತಿರುವ ಕಾಂಗ್ರೆಸ್ ಟೀಕಿಸಿದರು.

click me!