* ಹಾನಗಲ್ಲದಲ್ಲಿ ಎಚ್.ಡಿ. ಕುಮಾರಸ್ವಾಮಿ ಪ್ರಚಾರ
* ಬಿಜೆಪಿ ಸರ್ಕಾರ ಬರಲು ಸಿದ್ದರಾಮಯ್ಯ ಕಾರಣ
* ರೈತರ ಸಾಲ ಮನ್ನಾ ಮಾಡುವಾಗ ಕಾಂಗ್ರೆಸ್ ಅಡ್ಡಗಾಲು
ಹಾನಗಲ್ಲ(ಅ.24): ಹಾನಗಲ್ಲ ಚುನಾವಣೆಯಲ್ಲಿ ನಾನು ರೈತರ ಸಾಲಮನ್ನಾ ಮಾಡಿದ್ದು ಎಂದು ಸಿದ್ದರಾಮಯ್ಯ ಅವರು ಹೇಳುತ್ತಿದ್ದಾರೆ. ಕಳೆದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ನ ಮೂವರು ಮತ್ತು ಜೆಡಿಎಸ್ ಇಬ್ಬರು ಶಾಸಕರು ಸೇರಿ ಸಮಿತಿ ರಚಿಸಲಾಗಿತ್ತು. ನಾವು ರೈತರ ಸಾಲ ಮನ್ನಾ ಮಾಡೋಣ ಎಂದರೆ ಕಾಂಗ್ರೆಸ್‌ನವರು ಬೇಡ ಎಂದು ಅಡ್ಡಗಾಲು ಹಾಕಿದ್ದರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ(HD Kumaraswamy) ಆರೋಪಿಸಿದ್ದಾರೆ.
ಶನಿವಾರ ಪಕ್ಷದ ಹಾನಗಲ್ಲ(Hanagal) ಉಪಚುನಾವಣೆ(Byelection) ಪ್ರಚಾರ ವೇದಿಕೆಯಲ್ಲಿ ಮಾತನಾಡಿ, ಕೇವಲ ತಮ್ಮ ಭಾಗ್ಯ ಯೋಜನೆ ಮುಂದುವರಿಸಿ ಎಂದು ಹಠ ಹಿಡಿದಿದ್ದರು. ಆದರೆ, ನಾನು ಪಟ್ಟು ಹಿಡಿದು ರೈತರ ಸಾಲ ಮನ್ನಾ(Loan waiver) ಮಾಡಿಸಿದ್ದೆ. 2017ರಲ್ಲಿ ಸಿದ್ದರಾಮಯ್ಯ(Siddaramaiah) ಮುಖ್ಯಮಂತ್ರಿ ಇದ್ದಾಗ, ಹಾವೇರಿ ಜಿಲ್ಲೆಯಲ್ಲಿ 120 ರೈತರು(Farmers) ಆತ್ಮಹತ್ಯೆ ಮಾಡಿಕೊಂಡಿದ್ದರು. ಅಧಿಕಾರ ಇಲ್ಲದೆ ಇದ್ದರೂ ನಾನು ಆಗಮಿಸಿ, ಪ್ರತಿ ಕುಟುಂಬಕ್ಕೂ ತಲಾ 50 ಸಾವಿರ ಸಹಾಯ ಮಾಡಿದ್ದೆ. ಮುಂದಿನ ದಿನಗಳಲ್ಲಿ ನಾನು ಸಾರ್ವಜನಿಕವಾಗಿ ಕಣ್ಣೀರು ಹಾಕುವಂತೆ ಮಾಡಿದರು. ಅವರು ಕೊಟ್ಟ ನೋವಿಗೆ ನಾನು ಸಂಕಟ ಪಟ್ಟೆ ಎಂದರು.
undefined
ರಾಜ್ಯದಲ್ಲಿ ಪ್ರಸ್ತುತ ಬಿಜೆಪಿ(BJP) ಆಡಳಿತದಲ್ಲಿರಲು ಸಿದ್ದರಾಮಯ್ಯ ಕಾರಣ. 2018ರಲ್ಲಿ ಅಲ್ಪಸಂಖ್ಯಾತರು ಜೆಡಿಎಸ್‌ಗೆ(JDS) ಮತ ಹಾಕಬೇಡಿ ಎಂದರು. ಅದೇ ಕಾರಣಕ್ಕೆ ಪಕ್ಷ ಹಿನ್ನಡೆ ಸಾಧಿಸಿತು. ಇದರಿಂದ ಜೆಡಿಎಸ್ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
BSY ಬೆದರಿಸಿ ಪ್ರಚಾರಕ್ಕೆ ಕರೆತಂದ ಬಿಜೆಪಿ: ಸಿದ್ದರಾಮಯ್ಯ
ಸಿದ್ದರಾಮಯ್ಯ ಇದು ದರಿದ್ರ ಸರ್ಕಾರ ಎಂದು ಬಯ್ಯುತ್ತಿದ್ದಾರೆ. ಈ ದರಿದ್ರ ಸರ್ಕಾರ ಬರಲು ಸಿದ್ದರಾಮಯ್ಯ ಅವರೇ ಕಾರಣ. ಜೆಡಿಎಸ್ ಬಿಜೆಪಿಯ ಬಿ ಟೀಂ. ಅದಕ್ಕೆ ಮುಸಲ್ಮಾನರು(Muslims) ಜೆಡಿಎಸ್‌ಗೆ ಮತ ನೀಡಬೇಡಿ ಎಂದರು. ಅಪ್ಪನ ಆಣೆ ಎಚ್‌ಡಿಕೆ ಸಿಎಂ ಆಗಲ್ಲ ಎಂದರು. ಮುಸ್ಲಿಮರು ನಮ್ಮ ಕೈ ಹಿಡಿದಿದ್ದರೆ 65-70 ಸೀಟುಗಳಲ್ಲಿ ಗೆಲ್ಲುತ್ತಿದ್ದೆವು. ಆಗ ಚಿತ್ರಣ ಬೇರೆ ಇರುತ್ತಿತ್ತು ಎಂದು ಕುಮಾರಸ್ವಾಮಿ ಹೇಳಿದರು.
ಈಗಿನ ಉಪಚುನಾವಣೆಯಲ್ಲೂ ಮುಸ್ಲಿಮರು ಜೆಡಿಎಸ್‌ಗೆ ಮತ ನೀಡಬೇಡಿ ಎಂದು ಕಾಂಗ್ರೆಸ್‌ವರು(Congress)ಪ್ರಚಾರ ಮಾಡುತ್ತಿದ್ದಾರೆ. ಆದರೆ ಇವರು ಅಲ್ಪಸಂಖ್ಯಾತರಿಗೆ(Minorities) ಯಾವುದೆ ರಾಜಕೀಯ(Politics) ಸ್ಥಾನಮಾನ ನೀಡದೆ, ಅಲ್ಪಸಂಖ್ಯಾತರನ್ನು ಕೇವಲ ತಮ್ಮ ವೋಟ್ ಬ್ಯಾಂಕ್(Vote Bank) ಮಾಡಿಕೊಂಡಿದ್ದಾರೆ. ನಾವು ಹಾನಗಲ್ಲ ಕ್ಷೇತ್ರದಲ್ಲಿ ಎಂಟೆಕ್ ಪದವೀಧರ, ಸುಸಂಸ್ಕೃತ ವ್ಯಕ್ತಿಯನ್ನು ಅಭ್ಯರ್ಥಿ ಮಾಡಿದ್ದೇವೆ. ಆದರೆ, ಕಾಂಗ್ರೆಸ್ ಮತ ಕಬಳಿಸಲು ಜೆಡಿಎಸ್ ಅಲ್ಪಸಂಖ್ಯಾತರನ್ನು ನಿಲ್ಲಿಸಿದೆ ಎಂದು ಸಿದ್ದರಾಮಯ್ಯ ದೂರುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. 2018ರಲ್ಲಿ 138 ಸ್ಥಾನವಿದ್ದ ಕಾಂಗ್ರೆಸ್ ಸ್ಥಾನಗಳು ಈಗ 68ಕ್ಕೆ ಒಂದಿದೆ. ಮುಂದೆ ಇನ್ನೂ ದುಸ್ಥಿತಿಗೆ ಹೋಗಲಿದೆ ಎಂದರು.
ಶಾಸಕ ಬಂಡೆಪ್ಪಾ ಕಾಶಂಪುರ ಮಾತನಾಡಿ, ರಾಜ್ಯದಲ್ಲಿನ ಬಿಜೆಪಿ ಸಂಸದರು, ಮೋದಿ(Narendra Modi) ಮೇಲಿನ ಅಭಿಮಾನಕ್ಕೆ ರಾಜ್ಯದ(Karnataka) ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಉಪ ಚುನಾವಣೆಯಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡಿ, ರಾಜಕೀಯ ಮಾಡುತ್ತಿದೆ. ಕುಮಾರಸ್ವಾಮಿ ಅವರ ಕೃಪೆಯಿಂದ ಅಧಿಕಾರ ಹಿಡಿದವರು ರಾಜ್ಯದಲ್ಲಿ ಏನನ್ನು ಮಾಡಿದ್ದಾರೆ ಎಂದು ರಾಜ್ಯದ ಜನತೆಗೆ ತಿಳಿದಿದೆ. ಕುಮಾರಸ್ವಾಮಿ ಅವರ ಜನಪರ ಆಡಳಿತ ಉತ್ತರ ಕರ್ನಾಟಕದ(North Karnataka) ಜನತೆಗೆ ಸಿಗಲು ಕಾಂಗ್ರೆಸ್, ಬಿಜೆಪಿ ಬಿಡುತ್ತಿಲ್ಲ. ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರು ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ಹೇಳಿದರು.
ಜೆಡಿಎಸ್ ಮುಖಂಡ ಎನ್.ಎಚ್. ಕೋನರಡ್ಡಿ, ಜೆಡಿಎಸ್‌ಅಭ್ಯರ್ಥಿ ನಿಯಾಜ್‌ಶೇಖ್ ಮತಯಾಚನೆ ಮಾಡಿದರು. ಹಾನಗಲ್ಲ ಹಳೆಯ ಬಸ್ ನಿಲ್ದಾಣದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಕುಮಾರಸ್ವಾಮಿ ಮತ್ತು ಬಂಡೆಪ್ಪ ಕಾಶಂಪುರ ಅವರಿಗೆ ಕಂಬಳಿ ತೊಡಿಸಿ ಜೆಡಿಎಸ್ ಕಾರ್ಯಕರ್ತರು ಸನ್ಮಾನಿಸಿದರು.
ಚರ್ಚೆಗೆ ಬರಲು ಸಿಎಂಗೆ ಧೈರ್ಯ ಇಲ್ಲ: ಸಿದ್ದರಾಮಯ್ಯ
ರೈತನ ಭಾಷಣ
ಎಚ್.ಡಿ. ಕುಮಾರಸ್ವಾಮಿ ಭಾಷಣ ಮಾಡಲು ಇನ್ನೇನು ವೇದಿಕೆ ಬಳಿ ಬರಬೇಕು ಎಂದಾಗ ರೈತನೊಬ್ಬ ಪೋಡಿಯಂ ಬಳಿ ಬಂದು ನಾನು ಮಾತನಾಡುತ್ತೇನೆ ಎಂದ. ಈ ವೇಳೆ ಕಾರ್ಯಕರ್ತರು, ಮುಖಂಡರು ಆತನನ್ನು ಹೋಗುವಂತೆ ಹೇಳಿದರು. ಆದರೆ ಕುಮಾರಸ್ವಾಮಿ ಆತನನ್ನು ಕರೆದು ಮಾತನಾಡಪ್ಪಾ ಎಂದು ಮೈಕನ್ನು ನೀಡಿದರು. ಬಿಜೆಪಿ, ಕಾಂಗ್ರೆಸ್‌ಏನು ಮಾಡಿವೆ? ನಮ್ಮ ಕುಮಾರಣ್ಣ ಎರಡು ಬಾರಿ ನಮ್ಮ ಸಾಲ ಮನ್ನಾ ಮಾಡಿದ್ದಾರೆ ಎಂದು ರೈತ ಹೇಳಿದ.
ಸಿ.ಎಂ. ಉದಾಸಿ ಅವರು ಮೊದಲು ಚುನಾವಣೆ ಸ್ಪರ್ಧಿಸಿ ಗೆದ್ದಿದ್ದು ಜನತಾದಳ ಪರಿವಾರದಿಂದ. ಅವರು ಆಗ ಉತ್ತಮ ಕಾರ್ಯಗಳನ್ನು ಮಾಡಿದ್ದರು. ಜೆಡಿಎಸ್‌ಗೆ ಹಾವೇರಿಯಲ್ಲಿ ಬಲ ಇಲ್ಲದಿದ್ದರೂ ಇಲ್ಲಿನ ಜನತೆ ಕಷ್ಟಕ್ಕೆ ಸದಾ ಸ್ಪಂದಿಸಿದ್ದೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿರುವ ಅಭ್ಯರ್ಥಿಗಳು:
ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು: ನಿಯಾಜ್ ಶೇಖ್ (ಜೆಡಿಎಶ್), ಶಿವರಾಜ ಸಜ್ಜನರ (ಬಿಜೆಪಿ), ಶ್ರೀನಿವಾಸ ಮಾನೆ (ಕಾಂಗ್ರೆಸ್), ಉಡಚಪ್ಪ ಉದ್ದನಕಾಲ (ಕರ್ನಾಟಕ ರಾಷ್ಟ್ರ ಸಮಿತಿ), ಫಕ್ಕೀರಗೌಡ ಶಂಕರಗೌಡ ಗಾಜಿಗೌಡ್ರ (ರೈತ ಭಾರತ ಪಕ್ಷ), ತಳವಾರ ಶಿವಕುಮಾರ (ಲೋಕಶಕ್ತಿ ಪಕ್ಷ), ಉಮೇಶ ಕೃಷ್ಣಪ್ಪ ದೈವಜ್ಞ (ಪಕ್ಷೇತರ), ಸಿದ್ದಪ್ಪ ಕಲ್ಲಪ್ಪ ಪೂಜಾರ (ಪಕ್ಷೇತರ), ಎಸ್ಎಸ್.ದೊಡ್ಡ ಲಿಂಗಣ್ಣನವರ (ಪಕ್ಷೇತರ), ಸೋಮಶೇಖರ ಮಹದೇವಪ್ಪ ಕೋತಂಬರಿ (ಪಕ್ಷೇತರ), ಹೊನ್ನಪ್ಪ ಹನುಮಂತಪ್ಪ ಅಕ್ಕಿವಳ್ಳಿ (ಪಕ್ಷೇತರ)
ಸಿಂದಗಿಯಲ್ಲಿ ಕ್ಷೇತ್ರದಲ್ಲಿರುವ ಅಭ್ಯರ್ಥಿಗಳು:
ಇನ್ನು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಆರು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಅಶೋಕ ಮನಗೊಳಿ(ಕಾಂಗ್ರೆಸ್), ರಮೇಶ್ ಬೂಸನೂರ್(ಬಿಜೆಪಿ), ನಜಿಯಾ ಅಂಗಡಿ(ಜೆಡಿಎಸ್), ಡಾ. ಸುನಿಲ್‌ಕುಮಾರ್‌ಹೆಬ್ಬಿ(ಕರ್ನಾಟಕ ರಾಷ್ಟ್ರ ಸಮಿತಿ) ಹಾಗೂ ಜಿಲಾನಿ ಗುಡುಸಾಬ್‌ಮುಲ್ಲಾ, ದೀಪಿಕಾ ಎಸ್. ಪಡಸಲಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಹಾನಗಲ್‌ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಅ. 30ರಂದು ಮತದಾನ ನಡೆಯಲಿದ್ದು ನ.2ರಂದು ಫಲಿತಾಂಶ ಹೊರಬೀಳಲಿದೆ.