ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಇದ್ದು ಪಕ್ಷಾಂತರ ಪರ್ವ ಶುರುವಾಗಿದೆ. ಕೇವಲ ಟಿಕೇಟ್ ಆಕಾಂಕ್ಷಿಗಳು ಮಾತ್ರವಲ್ಲದೆ, ಕಾರ್ಯಕರ್ತರೂ ಹಾಗೂ ಜಿಲ್ಲೆಯ ಪ್ರಮುಖ ಸಹ ವಿವಿಧ ಪಕ್ಷ ಸೇರ್ಪಡೆ ಆಗ್ತಿದ್ದಾರೆ.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಕೋಲಾರ (ಏ.10): ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಇದ್ದು ಪಕ್ಷಾಂತರ ಪರ್ವ ಶುರುವಾಗಿದೆ. ಕೇವಲ ಟಿಕೇಟ್ ಆಕಾಂಕ್ಷಿಗಳು ಮಾತ್ರವಲ್ಲದೆ, ಕಾರ್ಯಕರ್ತರೂ ಹಾಗೂ ಜಿಲ್ಲೆಯ ಪ್ರಮುಖ ಸಹ ವಿವಿಧ ಪಕ್ಷ ಸೇರ್ಪಡೆ ಆಗ್ತಿದ್ದಾರೆ. ಇದಕ್ಕೆ ಪೂರಕವಾಗಿ ಇಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸಿರಿಗೆನಹಳ್ಳಿಯಲ್ಲಿ ಬೃಹತ್ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ ಆಗ್ತಿದ್ದು ಸಾವಿರಾರು ಸಂಖ್ಯೆಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಆನಂದ್ ರೆಡ್ಡಿ ಸೇರಿದಂತೆ ಹಲವರು ಕಾಂಗ್ರೆಸ್ ಹಾಗೂ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ ಆಗ್ತಿದ್ದಾರೆ.
ಬೆಳಿಗ್ಗೆ 10.30 ಕ್ಕೆ ಹೆಲಿಕಾಪ್ಟರ್ ಮೂಲಕ ಹೆಚ್.ಡಿ ಕುಮಾರಸ್ವಾಮಿ ಅವರು ಆಗಮಿಸಲಿದ್ದು ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳ್ಳಾರಿಗೆ ತೆರಳಲಿದ್ದಾರೆ ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ತಿಳಿಸಿದರು. ಇನ್ನು ಕಳೆದ 2018ರ ಚುನಾವಣೆಯಲ್ಲಿ ಜೆಡಿಎಸ್ ನ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಕೇವಲ 6700 ಮತಗಳ ಅಂತರದಿಂದ ಸೋತಿದ್ದು ಈ ಬಾರಿ ಗೆಲ್ಲುವ ವಿಶ್ವಾಸಾದಲ್ಲಿದ್ದಾರೆ. ಇದರ ನಡುವೆ ಪಂಚರತ್ನ ಕಾರ್ಯಕ್ರಮಕ್ಕೆ ಇಲ್ಲಿಂದಲೇ ಚಾಲನೆ ಕೊಟ್ಟಿದ್ದು ಸಹ ವಿಶೇಷವಾಗಿದ್ದು ಮುಳಬಾಗಿಲು ಕ್ಷೇತ್ರದಲ್ಲಿ ಈ ಬಾರಿ ಸಮೃದ್ಧಿ ಮಂಜುನಾಥ್ ಗೆಲ್ಲಲೇ ಬೇಕು ಎಂದು ಪಣತೊಟ್ಟು ಪ್ರಯತ್ನ ಮಾಡ್ತಿದ್ದಾರೆ.
‘ಪ್ರಧಾನಿ ಮೋದಿ ಜತೆ ನಾನು ತಪ್ಪಾಗಿ ನಡೆದುಕೊಂಡೆ’: ಗುಲಾಂ ನಬಿ ಆಜಾದ್
ಕಾಕತಾಳೀಯ ಎಂಬಂತೆ ಮುಳಬಾಗಿಲು ಕ್ಷೇತ್ರದಲ್ಲಿ ಯಾರು ಶಾಸಕರಾಗಿ ಆಯ್ಕೆ ಆಗ್ತಾರೋ ಅವರೇ ರಾಜ್ಯದಲ್ಲಿ ಆಡಳಿತದಲ್ಲಿ ಇರ್ತಾರೆ ಅನ್ನೋ ನಂಬಿಕೆ ಸಹ ಇರೋದ್ರಿಂದ ಕುಮಾರಸ್ವಾಮಿ ಅವರು ಸಹ ಹೆಚ್ಚಿನ ಆಸಕ್ತಿ ತೋರಿಸುತ್ತಾ ಬರ್ತಿದ್ದಾರೆ. ಇನ್ನು ಕಳೆದ ಬಾರಿ ಅಲ್ಪ ಮತಗಳಲ್ಲಿ ಸಮೃದ್ಧಿ ಮಂಜುನಾಥ್ ಅವರು ಸೋತ ಬಳಿಕವೂ ನಿರಾತಂಕವಾಗಿ ಕ್ಷೇತ್ರದಲ್ಲಿ ಸುತ್ತಾಡುತ್ತಿರೋದು ಈ ಬಾರಿ ಜೆಡಿಎಸ್ ಗೆ ಅನುಕೂಲವಾಗಲಿದೆ ಅಂತ ರಾಜಕೀಯವಾಗಿ ಚರ್ಚೆ ಆಗ್ತಿದೆ. ಈಗಾಗಿಯೇ ಸಮೃದ್ಧಿ ಮಂಜುನಾಥ್ ಸಹ ಅದ್ದೂರಿಯಾಗಿ ಪ್ರಚಾರ ಸಹ ಆರಂಭ ಮಾಡಿದ್ದು,ಪ್ರತಿ ಹಳ್ಳಿಗೂ ಭೇಟಿ ನೀಡಿ ಮತಯಾಚನೆ ಮಾಡ್ತಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್,ಕೆಲವರು ಈಗ ಬಂದು ಮನೆ ಮಾಡಿ ಪ್ರಚಾರ ಮಾಡ್ತಿದ್ದಾರೆ ಅಂತಹವರು ಡಾಬಾ ಇದಂಗೆ ತಿಂದು ಹೊರಟು ಹೋಗ್ತಾರೆ,ನಾನು ಹೋಟೆಲ್ ರೀತಿ ಸರಿಯಾಗಿ ಸರ್ವಿಸ್ ಕೊಡಬೇಕು. ಈ ಬಾರಿ ಚುನಾವಣೆ ಸಾಕಷ್ಟು ರಂಗೇರುತ್ತಿದೆ,ಬೇರೆ ಪಕ್ಷದವರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.26 ನೇ ತಾರೀಖಿನ ಒಳಗೆ ಗ್ರಾಮಾಂತರ ಭಾಗದಲ್ಲಿ ಪ್ರಚಾರ ಮುಗಿಸಿ ನಗರದಲ್ಲಿ ಪ್ರಚಾರ ಆರಂಭ ಮಾಡ್ತೇನೆ. ಜನರೇ ನನಗೆ ಚುನಾವಣಾ ಖರ್ಚಿಗೆ ಹಣ ನೀಡಿ ಸಹಕಾರ ಮಾಡ್ತಿದ್ದಾರೆ, ಇದರಿಂದ ನನಗೆ ಬೆಟ್ಟದಷ್ಟು ಬಲಬಂದಿದೆ.
ಅವ ಹೇಳಿದ್ದು ತಿಳೀಲಿಲ್ಲ! ಇವ ಹೇಳಿದ್ದು ನಂಬಂಗಿಲ್ಲ: ಆಸೆಪಟ್ಟವರ ಮೇಲೆ ಹೂ ಬಾಣ
ಕಳೆದ ಚುನಾವಣೆಯಲ್ಲಿ ಕೇವಲ 8 ದಿನಗಳಲ್ಲಿ ಬಂದು ಗೆದ್ದು ಇದೀಗ ಕ್ಷೇತ್ರ ಬಿಟ್ಟು ಹೋಗಿರೋದು ನನಗೆ ದೊಡ್ಡ ಅಸ್ತ್ರವಾಗಿದೆ. ಸೋತಿರುವ ವ್ಯಕ್ತಿ ಜೊತೆಯಲಿದ್ದಾನೆ ಎಂದು ಜನರೇ ಬೇಸರಗೊಂಡು ಈ ಬಾರಿ ನನ್ನ ಪರವಾಗಿ ನಿಂತಿದ್ದಾರೆ. ಕುಮಾರಸ್ವಾಮಿ ಖಂಡಿತಾ ಈ ಬಾರಿ ಮುಖ್ಯಮಂತ್ರಿ ಆಗ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.