Karnataka Politics: ಕರ್ನಾಟಕದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರದಿದ್ದರೆ ಪಕ್ಷ ವಿಸರ್ಜನೆ: ಎಚ್‌ಡಿಕೆ

By Girish Goudar  |  First Published May 1, 2022, 5:56 AM IST

*   ಮೈತ್ರಿ ಸರ್ಕಾರದಲ್ಲಿ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇನೆ
*  ಪಂಚರತ್ನ ಯೋಜನೆಗಳನ್ನು ಮನೆಮನೆಗೂ ತಲುಪಿಸುತ್ತೇನೆ
*  ಒಂದು ಪೈಸೆ ಖರ್ಚು ಇಲ್ಲದೆ ಉಚಿತ ಶಿಕ್ಷಣ ನೀಡುತ್ತೇನೆ
 


ಹಗರಿಬೊಮ್ಮನಹಳ್ಳಿ(ಮೇ.01):  2023ರಲ್ಲಿ ರಾಜ್ಯದಲ್ಲಿ ಜಾತ್ಯತೀತ ಜನತಾದಳ (JDS) ಅಧಿಕಾರಕ್ಕೆ ಬಂದು ರೈತರ ಸಮಸ್ಯೆ ಇತ್ಯರ್ಥ ಮಾಡದಿದ್ದಲ್ಲಿ ಪಕ್ಷವನ್ನು ವಿಸರ್ಜಿಸುತ್ತೇನೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಹೇಳಿದರು.

ಶನಿವಾರ ಪಟ್ಟಣದಲ್ಲಿ ನಡೆದ ‘ಜನತಾ ಜಲಧಾರೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ-ಕಾಂಗ್ರೆಸ್‌(BJP-Congress) ಪಕ್ಷದವರು ರೈತರ(Farmers), ಜನತೆಯ ಬಗ್ಗೆ ನಿರ್ಲಕ್ಷ್ಯ ಮನೋಭಾವ ಹೊಂದಿದ್ದಾರೆ. ನಮ್ಮ ರಾಜ್ಯಕ್ಕೆ ಸಿಗಬೇಕಾದ ನೀರನ್ನು ಸರಕಾರ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ತುಂಗಭದ್ರಾ ಡ್ಯಾಂನಲ್ಲಿ ಹೂಳು ತುಂಬಿರುವುದರಿಂದ ಪಕ್ಕದ ಆಂಧ್ರದವರು 30 ಟಿಎಂಸಿ ನಮ್ಮ ನೀರು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

Latest Videos

undefined

Bengaluru acid attack ನಮ್ಮ ತಾಯಿ ಮೇಲೂ ಆ್ಯಸಿಡ್ ದಾಳಿ ಆಗಿತ್ತು, ಭಾವನಾತ್ಮಕ ಹೇಳಿಕೆ ನೀಡಿದ ಕುಮಾರಸ್ವಾಮಿ!

ರಾಜ್ಯದಲ್ಲಿ(Karnataka) ಆಡಳಿತ ಮಾಡಿರುವ ಸರಕಾರಗಳ ನಡವಳಿಕೆ ನೋಡಿದರೆ ಇನ್ನೂ 100 ವರ್ಷ ಕಳೆದರೂ ನೀರಾವರಿ(Irrigation) ಸಮಸ್ಯೆ ಬಗೆಹರಿಸುವುದಿಲ್ಲ. ಜೆಡಿಎಸ್‌ ಪಕ್ಷಕ್ಕೆ 5 ವರ್ಷ ಅಧಿಕಾರ ಕೊಟ್ಟು ನೋಡಿ, ಆಡಳಿತದಲ್ಲಿ ಭಾರೀ ಬದಲಾವಣೆ ತರುತ್ತೇವೆ. ಮೈತ್ರಿ ಸರಕಾರದ ಸಂದರ್ಭದಲ್ಲಿ . 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇನೆ. ನಮಗೆ ಸಂಪೂರ್ಣ ಆಡಳಿತ ಸಿಕ್ಕರೆ ರೈತಪರವಾದ ಸಾಕಷ್ಟುಯೋಜನೆಗಳನ್ನು ಜಾರಿಗೊಳಿಸುವುದರ ಜೊತೆಗೆ, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.

ಕಳೆದ ಬಾರಿ ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿ ಮಾತಿನಂತೆ ನಡೆದುಕೊಂಡಿದ್ದೇನೆ. ಪ್ರತಿ ಕುಟುಂಬದ ರೈತರ ಜಮೀನುಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುತ್ತೇನೆ. ರೈತರ ಬಾಳು ಹಸನಾಗಲು ಸಾಲಮನ್ನಾ ಅಷ್ಟೇ ಅಲ್ಲ, ರೈತಪರವಾದ ಯೋಜನೆಗಳನ್ನು ರೂಪಿಸಿ ರೈತರನ್ನು ಸದೃಢಗೊಳಿಸುತ್ತೇನೆ. ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್‌ ಸರ್ಕಾರ, ಹಗರಣದ ಸರ್ಕಾರ ಎನ್ನುತ್ತಾರೆ. ಇಂತಹ ಸರಕಾರವನ್ನು ತೊಲಗಿಸಿ ಎಂದರು.

ಪಂಚರತ್ನ ಯೋಜನೆಗಳನ್ನು ಮನೆಮನೆಗೂ ತಲುಪಿಸುತ್ತೇನೆ. ಒಂದು ಪೈಸೆ ಖರ್ಚು ಇಲ್ಲದೆ ಉಚಿತ ಶಿಕ್ಷಣ(Free Education) ನೀಡುತ್ತೇನೆ. ಪ್ರತಿ ಪಂಚಾಯ್ತಿ ಮಟ್ಟದಲ್ಲಿ 30 ಹಾಸಿಗೆ ಆಸ್ಪತ್ರೆ ಸ್ಥಾಪಿಸುತ್ತೇನೆ. ನನ್ನ ಮೇಲೆ ವಿಶ್ವಾಸವಿದ್ರೆ ಜೆಡಿಎಸ್‌ ಗೆಲ್ಲಿಸಿ. ಮೋದಿ ನೋಡಿ ಓಟು ಹಾಕ್ತೀರಿ, ಬೇರೆಯವರನ್ನು ನೋಡಿ ಓಟು ಹಾಕ್ತೀರಿ ನನ್ನ ಮೇಲೆ ಭರವಸೆ ಇಡಿ. ಬಿಜೆಪಿಯವರು(BJP) ಹಿಂದೂ- ಮುಸಲ್ಮಾನ(Hindu-Muslim) ಬಂಧುಗಳ ನಡುವೆ ಜಗಳವಿಟ್ಟು, ಯಾವರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿದೆ. ಹಗರಿಬೊಮ್ಮನಹಳ್ಳಿಯಲ್ಲಿ ಮುಂದಿನ ದಿನದಲ್ಲಿ ದೊಡ್ಡ ಕಾರ್ಯಕ್ರಮದ ಮೂಲಕ ಪಕ್ಷವನ್ನು ಸಂಘಟಿಸಲಾಗುವುದು ಎಂದು ಪ್ರಕಟಿಸಿದರು.

Hassan: 'ದನ ಕಾಯೋನೇ ನೀನು' ಹೇಳಿಕೆಗೆ ಕ್ಷಮೆ ಕೋರಿದ ರೇವಣ್ಣ

ಹೋರಾಟದಲ್ಲಿ ನ್ಯಾಯವಿದೆ

ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಅಭ್ಯರ್ಥಿಗಳು ಹೋರಾಟ ಮಾಡ್ತಿರೋದ್ರಲ್ಲಿ ನ್ಯಾಯವಿದೆ. ಈ ಪ್ರಕರಣದ ಮುಖ್ಯ ಆರೋಪಿಯನ್ನು ಬಂಧಿಸಿದ್ದಾರೆ. ಯಾರು ಎಷ್ಟುಹಣಕೊಟ್ಟು ಪಾಸ್‌ ಆಗಿದ್ದಾರೋ ಆ ಮಾಹಿತಿ ಸರ್ಕಾರಕ್ಕಿದೆ. ಅವರನ್ನು ಹೊರತುಪಡಿಸಿ ಪ್ರಾಮಾಣಿಕವಾಗಿ ಆಯ್ಕೆಯಾದರನ್ನು ಬೀದಿಪಾಲು ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ? ಇದು ಸರ್ಕಾರದ ವೈಫಲ್ಯ, ಇದರಲ್ಲಿ ವಿದ್ಯಾರ್ಥಿಗಳ ತಪ್ಪಿಲ್ಲ. ಸರ್ಕಾರ ಏಕಾಏಕಿ ತನಿಖಾ ವರದಿ ಬರುವ ಮುನ್ನವೇ ನೇಮಕಾತಿ ರದ್ದು ಮಾಡಿದ್ದು ಸರಿಯಲ್ಲ. 2011ರಲ್ಲಿ ಕೆಪಿಎಸ್‌ಸಿ ನೇಮಕಾತಿ ಸಹ ಹಾಗೆ ಮಾಡಿದ್ದು, ಈಗ 8 ವರ್ಷದ ನಂತರ ವಿಧಾನಸಭೆಯಲ್ಲಿ ಮೋಕ್ಷ ನೀಡಲು ತಂದಿಟ್ಟಿದ್ದಾರೆ. ಪಿಎಸ್‌ಐ ಅಕ್ರಮದಲ್ಲಿ ಯಾರು ದಂಧೆ ಮಾಡಿದ್ದಾರೋ ಅವರನ್ನು ನಿಮ್ಮ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದೀರಿ. ಅಕ್ರಮ ಮಾಡಿದವರಿಗೆ ಮುಂದೆ ಯಾವುದೇ ಸರ್ಕಾರಿ ನೌಕರಿಗೆ ಅರ್ಹರಲ್ಲ ಎಂದು ತೀರ್ಮಾನಿಸಿ. ಪ್ರಾಮಾಣಿಕವಾಗಿ ಪರೀಕ್ಷೆಯಲ್ಲಿ ಪಾಸಾದವರ ಬದುಕಿನಲ್ಲಿ ಚೆಲ್ಲಾಟ ಆಡಬೇಡಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಕ್ಷೇತ್ರದ ಮಾಜಿ ಶಾಸಕ ಎನ್‌.ಎಂ. ನಬೀಸಾಬ್‌ ಮಾತನಾಡಿದರು. ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಡಾ. ತಿಪ್ಪೇಸ್ವಾಮಿ ವೆಂಕಟೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆಡಿಎಸ್‌ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ, ತಾಲೂಕು ಜೆಡಿಎಸ್‌ ಅಧ್ಯಕ್ಷ ವೈ. ಮಲ್ಲಿಕಾರ್ಜುನ, ಬನ್ನಿಗೋಳ ವೆಂಕಣ್ಣ, ಪಾಂಡುರಂಗನಾಯ್ಕ, ಎಸ್‌ಸಿ ಘಟಕದ ಅಧ್ಯಕ್ಷ ಪರಮೇಶ, ಸೋಮಶೇಖರ, ರಾಜಭಕ್ಷಿ, ಯುವ ಮುಖಂಡ ಇಬ್ರಾಹಿಂ, ಮೋಹಿದ್ದೀನ್‌ಸಾಬ್‌, ಖಾಜಾಹುಸೇನ್‌, ಮೆಕಾನಿಕ್‌ ಗನಿಸಾಬ್‌, ರಾಜು, ರವಿಕುಮಾರ್‌, ಶಿವರಾಜ್‌ ಇತರರಿದ್ದರು.
 

click me!