* ಅಭ್ಯರ್ಥಿ ಯಾರಾಗಬೇಕು ಎನ್ನಲು ಅವರು ಯಾರು?
* ಕಾಂಗ್ರೆಸ್ ಬಣ್ಣ ಬಯಲು ಮಾಡಲು ಮುಸ್ಲಿಂ ಅಭ್ಯರ್ಥಿ ಸ್ಪರ್ಧೆ
* ಇವರಿಂದ ಅರ್ಜಿ ತೆಗೆದುಕೊಂಡು ನಾನು ಅಭ್ಯರ್ಥಿ ಫೈನಲ್ ಮಾಡಬೇಕಾ?
ಕಲಬುರಗಿ(ಅ.08): ಸಿದ್ದರಾಮಯ್ಯ(Siddaramaiah) ನಮ್ಮ ಪಕ್ಷದ ಮುಖಂಡರಾ? ನಮ್ಮ ಪಕ್ಷದ ವಿಚಾರವಾಗಿ ಮಾತನಾಡೋಕೆ ಸಿದ್ದರಾಮಯ್ಯ ಯಾರು? ಅವರಿಗೆ ಬೇರೆ ಕೆಲಸವೇ ಇದ್ದಂತೆ ಕಾಣುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾರನ್ನು ಅಭ್ಯರ್ಥಿಯಾಗಿ ನಿಲ್ಲಿಸಬೇಕು ಅನ್ನೋದು ನನಗೆ ಗೊತ್ತು. ಅದನ್ನು ಹೇಳೋಕೆ ಸಿದ್ದರಾಮಯ್ಯ ಯಾವ ದೊಣ್ಣೆ ನಾಯಕ ಎಂದು ಕಿಡಿಕಾರಿದರು. ಸಿಂದಗಿಯಲ್ಲಿ(Sindagi) ಮಾತನಾಡಿ, ಕಾಂಗ್ರೆಸ್(Congress) ಬಣ್ಣ ಬಯಲು ಮಾಡಲು ಮುಸ್ಲಿಂ(Muslim) ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇವೆ. ಬಿಜೆಪಿಯಂತಹ ಕೆಟ್ಟಸರ್ಕಾರ ಬರಲು ಕಾಂಗ್ರೆಸ್ ನಾಯಕರೇ ಕಾರಣ. 2018ರಲ್ಲಿ ರಾಹುಲ್ ಗಾಂಧಿ(Rahul Gandhi) ಮೂಲಕ ಜೆಡಿಎಸ್ ಬಿಜೆಪಿಯ ಬೀ ಟೀಂ ಎಂದು ಅಪಪ್ರಚಾರ ಮಾಡಿಸಿದವರು ಕಾಂಗ್ರೆಸ್ಸಿಗರು ಎಂದರು.
ಸೇವೆ, ಸಂಸ್ಕಾರ RSS ಗುತ್ತಿಗೆಯಲ್ಲ... ದೇಶಕ್ಕಾಗಿ ನಿಮ್ಮ ಕೊಡುಗೆ, ತ್ಯಾಗ ಏನು?
ಇವರಿಂದ ಅರ್ಜಿ ತೆಗೆದುಕೊಂಡು ನಾನು ಅಭ್ಯರ್ಥಿ ಫೈನಲ್ ಮಾಡಬೇಕಾ? ಸಿದ್ದರಾಮಯ್ಯ ನಮ್ಮ ಪಕ್ಷದ ಮುಖಂಡರಾ? ನಮ್ಮ ಪಕ್ಷದ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡೋಕೆ? ಜೆಡಿಎಸ್(JDS) ಬಗ್ಗೆ ಚರ್ಚೆ ಮಾಡೋಕೆ ಅವ್ರಿಗೆ ಒಂದೇ ಒಂದು ವಿಚಾರ ಇದೆ. ಮುಸ್ಲಿಂ ಬಾಂಧವರನ್ನು ನಮ್ಮಿಂದ ದೂರ ಮಾಡಬೇಕು ಅಂತ ಅಂದುಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.