* ಯೋಜನೆಗೆ ಅನುಮತಿ ಸಿಗುತ್ತೆಂದು ಕಾಂಗ್ರೆಸ್ ಖಚಿತಪಡಿಸಲಿ
* ಎಲ್ಲರಿಗಿಂತ ಮೊದಲೇ ನಾನು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವೆ
* ಷಡ್ಯಂತ್ರ ಮಾಡುವ ನೀಚ ಕೆಲಸ ಮಾಡಲ್ಲ
ಬೆಂಗಳೂರು(ಜ.08): ಮೇಕೆದಾಟು ಯೋಜನೆ(Mekedatun Project) ವಿಚಾರದಲ್ಲಿ ಪಾದಯಾತ್ರೆ(Padayatra) ಕೈಗೊಂಡರೆ ಕೇಂದ್ರ ಸರ್ಕಾರ(Central Government) ಒಪ್ಪಿಗೆ ನೀಡುತ್ತದೆ ಎಂದು ಕಾಂಗ್ರೆಸ್ಸಿಗರು ಖಚಿತಪಡಿಸಿದರೆ ನಾನು ಸಹ ಎಲ್ಲರಿಗಿಂತ ಮೊದಲೇ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್(Congress) ಪಕ್ಷದ್ದು ಪಾದಯಾತ್ರೆಯಲ್ಲ, ಅದು ಮತಯಾತ್ರೆ ಮಾತ್ರ. ಮುಂದಿನ ಚುನಾವಣೆಯಲ್ಲಿ(Election) ಮತ ಪಡೆಯುವ ಏಕೈಕ ಉದ್ದೇಶದಿಂದ ಜನರಿಗೆ ಪಾದಯಾತ್ರೆ ಹೆಸರಲ್ಲಿ ಕಾಂಗ್ರೆಸ್ ಮಂಕುಬೂದಿ ಎರಚುತ್ತಿದೆ. ಪ್ರತಿಪಕ್ಷ ನಾಯಕರು ಯೋಜನೆ ಬಗ್ಗೆ ದಿನಕ್ಕೊಂದೊಂದು ಹಸಿ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರು ಪ್ರಾಣ ಹೋದರೂ ಪಾದಯಾತ್ರೆ ನಿಲ್ಲಿಸುವುದಿಲ್ಲ ಎನ್ನುತ್ತಾರೆ. ಅವರ ಪ್ರಾಣ ಯಾಕೆ ವ್ಯರ್ಥ ಮಾಡಬೇಕು? ಕಾವೇರಿ(Kaveri) ಕೊಳ್ಳದ ಜನರ ಭಾವನೆಗಳ ಜತೆ ಚೆಲ್ಲಾಟವಾಡಿಕೊಂಡು ಅವರ ಜೀವ ತೆಗೆಯಲು ಹೊರಟಿದ್ದಾರಾ? ಅಂತಹ ಕೆಲಸ ಬೇಡ ಎಂದು ಟೀಕಾಪ್ರಹಾರ ನಡೆಸಿದರು.
undefined
Padayatra Politics: ತಮಿಳ್ನಾಡಲ್ಲಿ ಮಿತ್ರಪಕ್ಷಕ್ಕೆ ಬುದ್ಧಿ ಹೇಳಿ: ಕಾಂಗ್ರೆಸ್‌ಗೆ ಕಾರಜೋಳ ತಿರುಗೇಟು
ರಾಜ್ಯದಲ್ಲಿ(Karnataka) ಕಾಂಗ್ರೆಸ್ ಮೇಕೆದಾಟು ವಿಚಾರವಾಗಿ ಪಾದಯಾತ್ರೆ ಮಾಡುತ್ತಿದೆ. ಆದರೆ, ನೆರೆ ರಾಜ್ಯ ತಮಿಳುನಾಡಿನಲ್ಲಿ ಮೇಕೆದಾಟು ಯೋಜನೆಯನ್ನು ವಿರೋಧ ಮಾಡುತ್ತಿರುವ ಡಿಎಂಕೆ ಪಕ್ಷದ ಜತೆ ಮೈತ್ರಿ ಹೊಂದಿದೆ. ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಮಾಡಲು ಬಿಡುವುದಿಲ್ಲ ಎಂದು ರಾಜ್ಯಪಾಲರಿಂದ ಭಾಷಣ ಮಾಡಿಸಿರುವ ಮುಖ್ಯಮಂತ್ರಿ ಸ್ಟಾಲಿನ್ ಸರ್ಕಾರದ ಜತೆ ಕಾಂಗ್ರೆಸ್ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಬಹುದಲ್ಲ. ಅದನ್ನು ಬಿಟ್ಟು ಪಾದಯಾತ್ರೆ ಮೂಲಕ ನಾಟಕವಾಡುವುದು ಯಾಕೆ? ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಾಡಿದ ಪ್ರಯತ್ನ ಫಲವಾಗಿ ಬೆಂಗಳೂರು ಜನರಿಗೆ ಕಾವೇರಿ ನಾಲ್ಕನೇ ಹಂತದಲ್ಲಿ 9 ಟಿಎಂಸಿ ನೀರು ಸಿಕ್ಕಿದೆ. ದೇವೇಗೌಡರು ಪ್ರಧಾನಿಗಳ ಜತೆ ವಿಶ್ವಾಸ ಇಟ್ಟುಕೊಂಡಿದ್ದಾರೆಂದು ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ. ಅಷ್ಟುನಂಬಿಕೆ ಇದ್ದ ಮೇಲೆ ದೇವೇಗೌಡ ಅವರನ್ನೇ ಪ್ರಧಾನಿ ಜತೆ ಮಾತನಾಡಿ ಎಂದು ಕಾಂಗ್ರೆಸ್ ನಾಯಕರು ಹೇಳಬಹುದಲ್ಲವೇ? ಹಾಗಿದ್ದ ಮೇಲೆ ಪಾದಯಾತ್ರೆ ಯಾಕೆ ಎಂದು ಪ್ರಶ್ನಿಸಿದರು.
ಷಡ್ಯಂತ್ರ ಮಾಡುವ ನೀಚ ಕೆಲಸ ಮಾಡಲ್ಲ:
ತಮ್ಮ ವಿರುದ್ಧ ದೆಹಲಿಯಲ್ಲಿ ಕುಮಾರಸ್ವಾಮಿ ಮತ್ತು ದೇವೇಗೌಡ ಅವರು ಷಡ್ಯಂತ್ರ ಮಾಡಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಆರೋಪಕ್ಕೆ ತಿರುಗೇಟು ನೀಡಿದ ಅವರು, ಮತ್ತೊಬ್ಬರ ವಿರುದ್ಧ ಷಡ್ಯಂತ್ರ ಮಾಡುವಂತಹ ನೀಚ ಕೆಲಸವನ್ನು ನಮ್ಮ ಕುಟುಂಬ ಎಂದಿಗೂ ಮಾಡಿಲ್ಲ, ಮಾಡುವುದೂ ಇಲ್ಲ. ದೇವೇಗೌಡರ ಪುಸ್ತಕ ಬಿಡುಗಡೆಗೆಂದು ದೆಹಲಿಗೆ ಹೋಗಿದ್ದೆ. ಮರುದಿನವೇ ಹುಟ್ಟುಹಬ್ಬ ಇದ್ದು, ಬೆಂಗಳೂರಲ್ಲಿ ಜನ ಬರುತ್ತಾರೆ, ಕೋವಿಡ್ ಕಾರಣಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಆಚರಣೆ ಬೇಡ ಎಂದು ದೆಹಲಿಯಲ್ಲಿ 4-5 ದಿನ ಇದ್ದೆ. ಅಷ್ಟಕ್ಕೇ ದೆಹಲಿಯಲ್ಲಿ ಕುಳಿತು ಷಡ್ಯಂತ್ರ ಮಾಡಲಾಗುತ್ತಿದೆ ಎನ್ನುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಸುಮ್ಮನೇ ಜೈಲಿಗೆ ಕಳುಹಿಸಲು ಆಗುತ್ತದೆಯೇ, ತಪ್ಪು ಮಾಡಿದರೆ ತಾನೇ ಜೈಲಿಗೆ ಕಳುಹಿಸಲು ಆಗುತ್ತದೆ. ಇಂತಹ ಇಲ್ಲದ ಆರೋಪಗಳನ್ನು ಮಾಡಿ ಜನರ ಗಮನ ಬೇರೆಡೆಗೆ ತಿರುಗಿಸುವುದು ಸರಿಯಲ್ಲ. ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಯಾರಿಗೂ ಇಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲದಲ್ಲಿ ಭ್ರಷ್ಟಾಚಾರ ಆಗಿಲ್ಲವೆ? ಎಂದು ಕಿಡಿಕಾರಿದರು.
Mekedatu 'ಕೊಟ್ಟ ಕುದುರೆಯನ್ನೇರಿ ಕೆಲಸ ಮಾಡದವನು ಕಾಂಗ್ರೆಸ್ ನಾಯಕ ಉರುಫ್ ಸುಳ್ಳು ಸಿದ್ದಯ್ಯ'
ಕಾಂಗ್ರೆಸ್ ಪಾದಯಾತ್ರೆಗೆ ಸಡ್ಡು: ಜೆಡಿಎಸ್‌ನಿಂದ ಜಲಯಾತ್ರೆ
ಮೇಕೆದಾಟು(Mekedatu) ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್(Congress) ಪಕ್ಷ ಪಾದಯಾತ್ರೆ(Padayatra) ಹಮ್ಮಿಕೊಂಡ ಬೆನ್ನಲ್ಲೇ ಅದಕ್ಕೆ ಪ್ರತಿಯಾಗಿ ಜೆಡಿಎಸ್(JDS) ಇದೇ ತಿಂಗಳ 26ರಿಂದ ‘ಜನತಾ ಜಲಧಾರೆ’(Janata Jalayatra) ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದೆ.
ರಾಜ್ಯದ(Karnataka) ಎಲ್ಲಾ ಭಾಗಗಳಿಗೂ ನೀರು ಒದಗಿಸುವ, ಲಭ್ಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮತ್ತು ನೆನೆಗುದಿಗೆ ಬಿದ್ದಿರುವ ಎಲ್ಲಾ ನೀರಾವರಿ ಯೋಜನೆಗಳನ್ನು(Irrigation Projects) ಜಾರಿ ಮಾಡುವ ಮಹಾಸಂಕಲ್ಪದೊಂದಿಗೆ ಜೆಡಿಎಸ್ ಪಕ್ಷವು ಈ ಕಾರ್ಯಕ್ರಮ ಆಯೋಜಿಸಿದೆ.