ಜೆಡಿಎಸ್ ಪಂಚರತ್ನ ಯೋಜನೆಗಳು ಜಾತಿಗಳನ್ನು ಮೀರಿದ ಭ್ರಾತೃತ್ವದ, ಸೌಹಾರ್ದತೆಯ ಶಾಶ್ವತ ಕಾರ್ಯಕ್ರಮಗಳು. ಜಾತಿ, ಮತ, ಪಕ್ಷ ಭೇದ ಮೀರಿ ನನಗೊಂದು ಅವಕಾಶ ಕೊಟ್ಟು, ಐದು ವರ್ಷಗಳ ಪರಿಪೂರ್ಣ ಸರ್ಕಾರ ನೀಡಿ.
ಬೆಂಗಳೂರು (ಮಾ.24): ‘ಜೆಡಿಎಸ್ ಪಂಚರತ್ನ ಯೋಜನೆಗಳು ಜಾತಿಗಳನ್ನು ಮೀರಿದ ಭ್ರಾತೃತ್ವದ, ಸೌಹಾರ್ದತೆಯ ಶಾಶ್ವತ ಕಾರ್ಯಕ್ರಮಗಳು. ಜಾತಿ, ಮತ, ಪಕ್ಷ ಭೇದ ಮೀರಿ ನನಗೊಂದು ಅವಕಾಶ ಕೊಟ್ಟು, ಐದು ವರ್ಷಗಳ ಪರಿಪೂರ್ಣ ಸರ್ಕಾರ ನೀಡಿ. ನಿಮ್ಮ ಬದುಕನ್ನು ಕಟ್ಟುವುದರ ಜತೆಗೆ ಭಾರತ ಹೆಮ್ಮೆಯಿಂದ ನೋಡಬಲ್ಲ ಕರ್ನಾಟಕವನ್ನು ಕಟ್ಟುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
‘ಅನ್ನದಾತರಿಗೆ ಕುಮಾರಣ್ಣ ಅವರ ಪತ್ರ’ ಎಂಬ ಹೆಸರಲ್ಲಿ ರೈತರಿಗೆ ಬರೆದ ಬಹಿರಂಗ ಪತ್ರದಲ್ಲಿ ಜೆಡಿಎಸ್ ಬೆಂಬಲಿಸುವಂತೆ ಕೋರಿದ್ದಾರೆ. ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಉಚಿತ. ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಕನ್ನಡ, ಇಂಗ್ಲೀಷ್ ಮಾಧ್ಯಮದಲ್ಲಿ ಉಚಿತ ಶಿಕ್ಷಣ. ಈ ಯೋಜನೆಯಿಂದ ರೈತರು ಮಕ್ಕಳ ಶಿಕ್ಷಣಕ್ಕಾಗಿ ಸಾಲಕ್ಕೆ ಸಿಲುಕುವುದು ತಪ್ಪುತ್ತದೆ. ಹಾಗೆಯೇ, ಆರೋಗ್ಯಕ್ಕಾಗಿ ಜನರು ಸಾಲದ ಸುಳಿಗೆ ಬೀಳದಂತೆ ನೋಡಿಕೊಳ್ಳಲಾಗುವುದು. ಕ್ಯಾನ್ಸರ್, ಹೃದ್ರೋಗ, ಬೋನ್ ಮ್ಯಾರೋ ಸೇರಿ ಯಾವುದೇ ಮಾರಣಾಂತಿಕ ಕಾಯಿಲೆ ಬಂದರೂ ಸರ್ಕಾರವೇ ವೆಚ್ಚ ಭರಿಸುವ ಯೋಜನೆಯೇ ಆರೋಗ್ಯ ಸಂಪತ್ತು.
ಯಡಿಯೂರಪ್ಪರನ್ನು ಬಿಜೆಪಿ ಹೆದರಿಸುತ್ತಿದೆ: ಡಿ.ಕೆ.ಶಿವಕುಮಾರ್
ಐದು ಲಕ್ಷ ರು. ವೆಚ್ಚದಲ್ಲಿ ಮನೆ, ಹಳ್ಳಿಯ ಮಟ್ಟದಲ್ಲಿಯೇ ಆದಾಯಕ್ಕಾಗಿ ಮಹಿಳೆಯರು, ಯುವಕರಿಗೆ ಉದ್ಯೋಗ ಸೃಷ್ಟಿಮಾಡಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರೈತರು ಸಾಲಕ್ಕಾಗಿ ಯಾರಲ್ಲಿಯೂ ಕೈ ಚಾಚಬಾರದು. ಸ್ವಾಭಿಮಾನದಿಂದ ಬಾಳ್ವೆ ನಡೆಸಬೇಕು. ಅನ್ನ ಕೊಡುವ ರೈತ ಸಂತೋಷವಾಗಿ ಭೂಮಿ ತಾಯಿ ಸೇವೆ ಮಾಡಬೇಕು. ಅದಕ್ಕಾಗಿ ರಾಜ್ಯದ ರೈತ ಸಂಕುಲ ಶಾಶ್ವತವಾಗಿ ಸಾಲ ಮಾಡದಂತೆ ಪಂಚರತ್ನ ಯೋಜನೆಗಳಲ್ಲಿ ‘ರೈತ ಚೈತನ್ಯ’ ಎಂಬ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಡಿ-ನೋಟಿಫೈ ಕೇಸು, ವಿಚಾರಣೆಗೆ ಎಚ್‌ಡಿಕೆ ಗೈರು: ಹಲಗೇವಡೇರಹಳ್ಳಿ ಡಿ-ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಗೈರು ಹಾಜರಾದರು. ಮಂಗಳವಾರ ವಿಚಾರಣೆಗೆ ಹಾಜರಾಗಬೇಕಿದ್ದ ಕುಮಾರಸ್ವಾಮಿ ಅಧಿಕ ರಕ್ತದೊತ್ತಡ ಕಾರಣ ನೀಡಿ ವಿಚಾರಣೆಗೆ ಗೈರಾಗಿದರು. ಪ್ರಕರಣದ ಸಂಬಂಧ ಹಲವು ಬಾರಿ ಗೈರು ಹಾಜರಾಗಿದ್ದ ಕುಮಾರಸ್ವಾಮಿ ಅವರಿಗೆ ಖುದ್ದು ಹಾಜರಾಗುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಆದರೂ, ಅನಾರೋಗ್ಯ ಕಾರಣ ಹೇಳಿ ಹಾಜರಾಗಿರಲಿಲ್ಲ.
ರಸ್ತೆ ಮೇಲೆ ನಡೆದು ಹೋಗ್ತಿದ್ದವರಿಗೆ ಕಾಟ ಕೊಡ್ತಿದ್ದ ಆರೋಪಿಗಳು: ವಿಡಿಯೋ ಆಧರಿಸಿ ಇಬ್ಬರ ಬಂಧನ
ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಏ.18ಕ್ಕೆ ಮುಂದೂಡಿದೆ. ಚಾಮರಾಜನಗರ ಮೂಲದ ಮಹದೇವಸ್ವಾಮಿ ಎಂಬುವವರು ದೂರು ನೀಡಿದ್ದರು. ಬನಶಂಕರಿ ಐದನೇ ಹಂತದ ಹಲಗೇವಡೇರಹಳ್ಳಿ ಬಳಿ 2.30 ಎಕರೆ ಜಮೀನು ಡಿನೋಟಿಫಿಕೇಷನ್ ಅನ್ನು 2006ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಡಿ-ನೋಟಿಫಿಕೇಷನ್ ಮಾಡಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದರು. ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದು, ಕುಮಾರಸ್ವಾಮಿ ಹೇಳಿಕೆ ಪಡೆಯಲು ಖುದ್ದು ಹಾಜರಾಗುವಂತೆ ಸೂಚನೆ ನೀಡುತ್ತಿದೆ.