ಪಂಚರತ್ನ ಪಂಚರ್‌ ಆಗಿದೆ: ಸದಾನಂದಗೌಡ ವ್ಯಂಗ್ಯ

Published : Feb 07, 2023, 05:00 AM IST
ಪಂಚರತ್ನ ಪಂಚರ್‌ ಆಗಿದೆ: ಸದಾನಂದಗೌಡ ವ್ಯಂಗ್ಯ

ಸಾರಾಂಶ

ಮನೆ ಮಕ್ಕಳಿಗೆಲ್ಲಾ ಟಿಕೆಟ್‌ ಬೇಕು ಅಂದ್ರೆ ಜೆಡಿಎಸ್‌ ಏನು ತಾತನ ಆಸ್ತಿನಾ: ಡಿವಿಎಸ್‌ ವಾಗ್ದಾಳಿ

ಪೀಣ್ಯ ದಾಸರಹಳ್ಳಿ(ಫೆ.07):  ದೇವೆಗೌಡರ ಮನೆ ಮಕ್ಕಳಿಗೆಲ್ಲ ಟಿಕೆಟ್‌ ಕೊಡಬೇಕಾ? ಜನತಾದಳ ಅಂದರೆ ಅವರ ಮುತ್ತಾತನ ಸ್ವತ್ತ ?ಎಂದು ಜೆಡಿಎಸ್‌ ವರಿಷ್ಠರ ವಿರುದ್ಧ ಸಂಸದ, ಮಾಜಿ ಮುಖ್ಯಮಂತ್ರಿ ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ. ದಾಸರಹಳ್ಳಿಯಲ್ಲಿ ಜೆಡಿಎಸ್‌ ಪಂಚರತ್ನ ರಥಯಾತ್ರೆ ನಡೆದ ಬೆನ್ನಲ್ಲೇ ಸುಮಾರು 500ಕ್ಕೂ ಹೆಚ್ಚು ಜೆಡಿಎಸ್‌ ಕಾರ್ಯಕರ್ತರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪಕ್ಷದಲ್ಲಿ ಯಾರೂ ಅವರ ಕುಟುಂಬವನ್ನು ಪ್ರಶ್ನಿಸುವಂತಿಲ್ಲ, ಪ್ರಶ್ನಿಸಿದರೆ ಅವರನ್ನು ಮಟ್ಟಹಾಕುತ್ತಾರೆ ಎಂದರು.

ದೇವೆಗೌಡ, ಕುಮಾರಸ್ವಾಮಿ, ಮಂಜುನಾಥ್‌ ಯಾರು ಬೇಕಾದರೂ ಬರಲಿ ಸಾರ್ವಜನಿಕರ ಸಮ್ಮುಖದಲ್ಲಿ ಕಳೆದ ನಾಲ್ಕೂ ಮಕ್ಕಾಲು ವರ್ಷದಲ್ಲಿ ದಾಸರಹಳ್ಳಿ ಕ್ಷೇತ್ರಕ್ಕೆ ನಾವು ತಂದಿರುವ ಅನುದಾನ ಎಷ್ಟು,ಅವರು ತಂದಿರುವ ಅನುದಾನ ಎಷ್ಟು ಅನ್ನೋದನ್ನ ಹೇಳ್ತೇವೆ ಎಂದು ಸದಾನಂದಗೌಡ ಸವಾಲು ಹಾಕಿದರು. ಜೆಡಿಎಸ್‌ ನವರು ಕುಕ್ಕರ್‌ಗಳನ್ನು ನೀಡಿ ನಿಮ್ಮ ಮನೆ ಒಡೆಯುವ ಕೆಲಸ ಮಾಡುತ್ತಾರೆ ಎಚ್ಚರವಾಗಿರಿ, ಯಾಕಂದ್ರೆ ಕಳೆದ ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಕುಕ್ಕರ್‌ ಬ್ಲಾಸ್ಟ್‌ ಆಗಿತ್ತು ಎಂದ ಅವರು, ಪಂಚರತ್ನ ಪಂಚರ್‌ ಆಗಿದೆ ಎಂದು ವ್ಯಂಗ್ಯವಾಡಿದರು.

ಸಾಧನೆಯ ಆಧಾರದ ಮೇಲೆ ಬಿಜೆಪಿ ಮತಯಾಚನೆ: ಡಿವಿಎಸ್‌

ಬಿಜೆಪಿಯಲ್ಲಿ ಸಂಸ್ಕ ೃತಿ ಇಲ್ಲದ ಪೇಶ್ವೆ ಬ್ರಾಹ್ಮಣ ಕುಲದ ಪ್ರಹ್ಲಾದ್‌ ಜೋಶಿ ಮುಂದಿನ ಸಿಎಂ ಅನ್ನೋ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅಬಕಾರಿ ಸಚಿವ ಕೆ.ಗೋಪಾಲಯ್ಯ, ರಾಜಕೀಯ ಸಂದರ್ಭಗಳಲ್ಲಿ ಇಂತಹ ಹೇಳಿಕೆಗಳನ್ನ ಕೊಡಬಾರದು, ರಾಜ್ಯಕ್ಕೆ ಜೋಶಿಯವರು ಅನೇಕ ಕೊಡುಗೆಗಳನ್ನ ಕೊಟ್ಟಿದ್ದಾರೆ. ಕೇಂದ್ರವನ್ನು ಅತ್ಯುತ್ತಮವಾಗಿ ಪ್ರತಿನಿಧಿಸುತ್ತಿದ್ದಾರೆ. ರಾಜ್ಯದಲ್ಲಿ ಈ ಬಾರಿ 140 ಹೆಚ್ಚು ಸ್ಥಾನಗಳನ್ನ ಪಡೆದುಕೊಳ್ಳುತ್ತೇವೆ. ಮೋದಿ, ಬಿಎಸ್‌ವೈ, ಕಟೀಲ್‌, ಬೊಮ್ಮಾಯಿ ನಾಯಕತ್ವದಲ್ಲಿ ಮುಂದಿನ ಚುನಾವಣೆ ನಡೆಯುತ್ತದೆ ಎಂದರು.

ರಾಜ್ಯಸಭಾ ಹಾಗೂ ವಿಧಾನ ಪರಿಷತ್ತಿಗೆ ಸಾಮಾನ್ಯ ಕಾರ್ಯಕರ್ತರನ್ನು ಬಿಜೆಪಿ ಆಯ್ಕೆ ಮಾಡಿದ್ದು, ಮುಂದಿನ ಮುಖ್ಯಮಂತ್ರಿ ಸಾಮಾನ್ಯ ಕಾರ್ಯಕರ್ತನಾದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ತಿಳಿಸಿದರು. ನಾನು ಕ್ಷೇತ್ರದ ಅಭಿವೃದ್ಧಿಗೆ ಯಾವಾಗಲೂ ಅಡ್ಡಿಪಡಿಸಿಲ್ಲ, ಆದರೆ ನೀವು ಲೂಟಿ ಮಾಡುತ್ತಿದ್ದೀರಲ್ಲ ಅದಕ್ಕೆ ಅಡ್ಡಿಪಡಿಸುತ್ತಿದ್ದೇನೆ ಎಂದು ಮಾಜಿ ಶಾಸಕ ಎಸ್‌.ಮುನಿರಾಜು ಹಾಲಿ ಶಾಸಕ ಮಂಜುನಾಥ್‌ ವಿರುದ್ಧ ಹರಿಹಾಯ್ದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚಿಕ್ಕ ಬಾಣಾವರ ಪುರಸಭೆ ವ್ಯಾಪ್ತಿಯಲ್ಲಿ ಮುನಿರಾಜು ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೇರ್ಪಡೆಗೊಂಡರು. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರಿಗೆ ಬಿಜೆಪಿ ಶಾಲು ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.

ಸ್ವಾತಂತ್ರ್ಯ ಸಂಗ್ರಾಮ ಇತಿಹಾಸದ ಪುನರ್‌ ರಚನೆ ಅತ್ಯಗತ್ಯ: ಸದಾನಂದ ಗೌಡ

ಅಬಕಾರಿ ಸಚಿವ ಕೆ.ಗೋಪಾಲಯ್ಯ, ಎಸ್‌.ಮುನಿರಾಜು, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ದಾಸರಹಳ್ಳಿ ಮಂಡಲ ಬಿಜೆಪಿ ಅಧ್ಯಕ್ಷ ಎನ್‌.ಲೋಕೇಶ್‌ ಗೌಡ, ತಿಮ್ಮನಂಜಯ್ಯ, ಎಚ್‌.ಎನ್‌. ಗಂಗಾಧರ್‌, ಜನಾರ್ಧನ, ಟ.ಎಸ್‌.ಗಂಗರಾಜು, ಸಪ್ತಗಿರಿ ಅನಂದ್‌, ಬಿ.ಎಂ.ನಾರಾಯಣ್‌, ಸುಜಾತ ಮುನಿರಾಜು, ಭಾಗ್ಯಮ್ಮ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

ಕೇಂದ್ರ ಸಚಿವರಾಗಿ ಪ್ರಹ್ಲಾದ್‌ ಜೋಶಿ ರಾಜ್ಯಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂಬ ಚರ್ಚೆ ಸದ್ಯ ಸಲ್ಲದು. ಮೂರು ತಿಂಗಳು ಕಾದು ನೋಡಬೇಕಿದೆ ಅಂತ ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ