ರಮೇಶ್ ಕುಮಾರ್ ಹೇಳಿಕೆಯಿಂದ ಕಾಂಗ್ರೆಸ್ ಬೆತ್ತಲೆಯಾಗಿದೆ. ನಾವು ಬೇಕಾದಷ್ಟು ಹಣ ಮಾಡಿದ್ದೇವೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಭ್ರಷ್ಟಾಚಾರಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ: ಯಡಿಯೂರಪ್ಪ
ಶಿವಮೊಗ್ಗ(ಜು.23): ರಾಜ್ಯದಲ್ಲಿ ಈಗ ಯಾರೋ ಇಬ್ಬರು ನಾವೇ ಮುಖ್ಯಮಂತ್ರಿಗಳು ಎಂದು ಓಡಾಡಲು ಶುರು ಮಾಡಿದ್ದಾರೆ. ನಿಮ್ಮಪ್ಪನಾಣೆಗೂ ನೀವು ಮುಖ್ಯಮಂತ್ರಿಗಳಾಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಕಿದರು.
ಶಿಕಾರಿಪುರ ತಾಲೂಕು ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಟಾಂಗ್ ಕೊಟ್ಟರು. ನೀವು ಏನೇ ಸರ್ಕಸ್ ಮಾಡಿದರೂ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟಬಹುಮತ ಬರುತ್ತೆ. ರಾಜ್ಯದಲ್ಲಿ ಬಿಜೆಪಿಯವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಕ್ಷೇತ್ರ ತ್ಯಾಗ ಮಾಡಿ ರಾಜಕೀಯ ಭಾರ ಇಳಿಸಿಕೊಂಡ ಬಿಎಸ್‌ವೈಗೆ ಮತ್ತಷ್ಟು ರಿಲೀಫ್ ಕೊಟ್ಟ ಕೋರ್ಟ್
ರಮೇಶ್ ಕುಮಾರ್ ಹೇಳಿಕೆಯಿಂದ ಕಾಂಗ್ರೆಸ್ ಬೆತ್ತಲಾಗಿದೆ:
ರಮೇಶ್ ಕುಮಾರ್ ಹೇಳಿಕೆಯಿಂದ ಕಾಂಗ್ರೆಸ್ ಬೆತ್ತಲೆಯಾಗಿದೆ. ನಾವು ಬೇಕಾದಷ್ಟು ಹಣ ಮಾಡಿದ್ದೇವೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಭ್ರಷ್ಟಾಚಾರಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ನಾನು ಹೇಳಿದ್ದು ನಿಜ ಅಂತ ರಮೇಶ್ ಕುಮಾರ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸರ್ಕಾರದ ಖಜಾನೆ ಲೂಟಿ ಮಾಡಿದ್ದು ಸ್ಪಷ್ಟವಾಗಿದೆ. ಹಗಲು ದರೋಡೆ ಮಾಡಿರುವುದು ಸ್ಪಷ್ಟವಾಗಿದೆ. ರಾಜ್ಯದ ಉದ್ದಗಲಕ್ಕೂ ಇದೇ ವಿಷಯ ಇಟ್ಟುಕೊಂಡು ಹೋಗುತ್ತೇವೆ. ರಾಜ್ಯದ ಜನತೆ ಮುಂದೆ ಈ ವಿಷಯ ಇಡುತ್ತೇವೆ. ಹಗಲು ರಾತ್ರಿ ದರೋಡೆ ಮಾಡಲು ಮತ್ತೆ ಕಾಂಗ್ರೆಸ್ ಬೇಕಾ? ಎಂಬುದರ ಬಗ್ಗೆ ರಾಜ್ಯದ ಜನತೆ ತೀರ್ಮಾನಿಸಲಿ ಎಂದರು.