Karnataka Assembly Elections: ಗೆಲ್ಲುವ ವಿಶ್ವಾಸವಿಲ್ಲದ್ದಕ್ಕೆ ಸಿದ್ದು ಬೇರೆ ಕಡೆ ಸ್ಪರ್ಧೆ: ಯಡಿಯೂರಪ್ಪ

By Govindaraj SFirst Published Nov 14, 2022, 10:32 AM IST
Highlights

Karnataka Assembly Elections 2023: ಇದ್ದ ಕ್ಷೇತ್ರವನ್ನು ಬಿಟ್ಟು ಸಿದ್ದರಾಮಯ್ಯ ಅವರು ಬೇರೆ ಕಡೆ ಹೋಗುತ್ತಿರುವುದು ಗೆಲ್ಲುವ ವಿಶ್ವಾಸವಿಲ್ಲದ್ದಕ್ಕೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ. 

ಕುಣಿಗಲ್‌ (ನ.14): ಇದ್ದ ಕ್ಷೇತ್ರವನ್ನು ಬಿಟ್ಟು ಸಿದ್ದರಾಮಯ್ಯ ಅವರು ಬೇರೆ ಕಡೆ ಹೋಗುತ್ತಿರುವುದು ಗೆಲ್ಲುವ ವಿಶ್ವಾಸವಿಲ್ಲದ್ದಕ್ಕೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ. ಯಡಿಯೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಏಕೆ ಇದ್ದ ಕ್ಷೇತ್ರವನ್ನ ಬಿಟ್ಟು ಬೇರೆ ಕಡೆ ಹೋಗುತ್ತಿದ್ದಾರೆ ಅಂತಾ ನಮಗೆ ಅರ್ಥವಾಗುತ್ತಿಲ್ಲ. ಈ ಬಗ್ಗೆ ನಾನು ಟೀಕೆ ಟಿಪ್ಪಣಿ ಮಾಡುವುದಿಲ್ಲ ಎಂದರು.

ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ದೇವೇಗೌಡರಿಗೆ ಆಹ್ವಾನ ನೀಡಿಲ್ಲ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ನನಗೆ ಗೊತ್ತಿರುವ ಪ್ರಕಾರ ಆಮಂತ್ರಣ ಪತ್ರಿಕೆ ಮಾಡಿರಲಿಲ್ಲ. ವೈಯಕ್ತಿಕವಾಗಿ ಪ್ರತಿಯೊಬ್ಬರಿಗೆ ಪತ್ರ ಬರೆದು ಸಿಎಂ ಆಹ್ವಾನಿಸಿದ್ದಾರೆ. ಎಸ್‌.ಎಂ. ಕೃಷ್ಣ ಸೇರಿದಂತೆ ಉಳಿದೆಲ್ಲ ನಾಯಕರು ಬಂದಿದ್ದರು. ದೇವೇಗೌಡರಿಗೂ ಪತ್ರ ಬರೆದು ಸಿಎಂ ದೂರವಾಣಿ ಕರೆ ಮಾಡಿಯೂ ಆಹ್ವಾನಿಸಿದ್ದಾರೆ. ಈ ಬಗ್ಗೆ ಅನಗತ್ಯವಾಗಿ ಚರ್ಚೆಯಾಗುತ್ತಿದೆ. ದೇವೇಗೌಡರು ಈ ವಿಚಾರವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ ಎನ್ನುವ ವಿಶ್ವಾಸ ನನಗಿದೆ. 

ಸಿದ್ದು ಕೋಲಾರದಲ್ಲಿ ಸ್ಪರ್ಧಿಸಿದ್ರೆ ಆತಂಕವಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಯಾವುದೋ ಕಾರಣಕ್ಕೆ ಅವರಿಗೆ ಬರಲಿಕ್ಕೆ ಆಗಲಿಲ್ವ ಅನ್ನಿಸುತ್ತದೆ. ಅದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ ಎಂದರು. ಟಿಪ್ಪು ಪ್ರತಿಮೆ ನಿರ್ಮಾಣ ಅವರಿಗೆ ಬಿಟ್ಟವಿಚಾರ. ಸರ್ಕಾರ ಏನು ತೀರ್ಮಾನ ಮಾಡುತ್ತದೆ ನೋಡೋಣ ಎಂದರು. ವಿಧಾನಸೌಧದ ಮುಂದೆ ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡಲು ಕ್ಯಾಬಿನೆಚ್‌ ಒಪ್ಪಿಗೆ ದೊರೆತಿದೆ. ಮುಂದೆ ಮುಖ್ಯಮಂತ್ರಿಗಳು ಅದನ್ನು ಮಾಡುತ್ತಾರೆ ಎಂದರು. ಯಡಿಯೂರಪ್ಪ ಹಿಂದೂ ಅಲ್ಲ ಎಂಬ ಹೇಳಿಕೆಗೆಲ್ಲ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಹಿಂದೂ ಸಮಾಜ ಬಹಳ ದೊಡ್ಡ ಸಮಾಜ. ಮೊದಲು ನಾವೆಲ್ಲರೂ ಹಿಂದೂ, ಆ ಮೇಲೆ ಜಾತಿ, ಉಪಪಂಗಡಗಳು. 

ಶಾಸಕ ಬಂಡಿ ಜತೆಗಿನ ಸಂಭಾಷಣೆ ತಮಾಷೆಗಾಗಿ: ಯಡಿಯೂರಪ್ಪ

ಅನಗತ್ಯವಾಗಿ ಇದನ್ನು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಹಿಂದೂ ಅನ್ನುವಂತದ್ದು ಒಂದು ದೊಡ್ಡ ಸಮೂಹಕ್ಕೆ ಇರುವಂತಹ ಹೆಸರು ಎಂದರು. ಮುದ್ದಹನುಮೇಗೌಡರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ. ಆದರೆ ಟಿಕೆಚ್‌ ಕೊಡುವ ಭರವಸೆ ನೀಡಿಲ್ಲ. ಪಕ್ಷ ಆ ಬಗ್ಗೆ ತೀರ್ಮಾನ ಮಾಡುತ್ತದೆ ಎಂದರು. ಹಿಂದೂ ಅಶ್ಲೀಲ ಪದ ಎಂಬ ಸತೀಶ್‌ ಜಾರಕಿಹೊಳಿ ಹೇಳಿಕೆ ಬಗ್ಗೆ ನಾನು ಏನನ್ನೂ ಹೇಳಲೂ ಇಷ್ಟಪಡುವುದಿಲ್ಲ. ಆದರೆ ಕಾಂಗ್ರೆಸ್‌ನ 90% ನಾಯಕರು ಕೂಡ ನಾವು ಮೊದಲು ಹಿಂದೂಗಳು ಅನ್ನುವುದನ್ನು ಒಪ್ಪಿಕೊಳ್ಳುತ್ತಾರೆ ಎಂದರು.

click me!