Vidhan Parishat Election: ಯುವಕರಲ್ಲಿ ವಿಷ ಬೀಜ ಬಿತ್ತುತ್ತಿರುವ ಪ್ರಧಾನಿ ಮೋದಿ: ರಾಮಲಿಂಗಾರೆಡ್ಡಿ

By Kannadaprabha News  |  First Published Dec 6, 2021, 7:14 AM IST

*  ಕಾಂಗ್ರೆಸ್‌ನಿಂದ ದೇಶ ಕಟ್ಟುವ ಕೆಲಸ
*  ದೇಶವನ್ನು ಮಾರುತ್ತಿರುವ ಬಿಜೆಪಿ
*  ಮೋದಿ ಏಳೂವರೆ ವರ್ಷದಲ್ಲಿ ಕಪ್ಪು ಹಣ ತಂದು ಎಷ್ಟು ಜನರ ಖಾತೆಗೆ ಜಮೆ ಮಾಡಿದ್ದಾರೆ? 
 


ಆನೇಕಲ್‌(ಡಿ.06):  ಬಿಜೆಪಿ(BJP) ನೇತಾರರು ಹಂತ ಹಂತವಾಗಿ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿ ದೇಶವಾಸಿಗಳಿಗೆ ಮೋಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ(Ramalinga Reddy) ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು. ತಾಲೂಕಿನ ಮಾಯಸಂದ್ರದಲ್ಲಿ ವಿಧಾನ ಪರಿಷತ್‌(Vidhan Parishat) ಕಾಂಗ್ರೆಸ್‌ ಅಭ್ಯರ್ಥಿ ಯೂಸೂಫ್‌ ಷರೀಫ್‌(ಯೂಸೂಫ್‌ ಷರೀಫ್‌) (KGF Babu) ಪರವಾಗಿ ಮತಯಾಚನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಘಲರು, ನಂತರ ಬ್ರಿಟಿಷರು ನೂರಾರು ವರ್ಷಗಳ ಕಾಲ ದೇಶವನ್ನು ಲೂಟಿ ಮಾಡಿದರು. ಕೇವಲ 7.5 ವರ್ಷಗಳಲ್ಲಿ ಅದರ ಹತ್ತು ಪಟ್ಟು ದೇಶದ ಆಸ್ತಿಗಳನ್ನು ಬಿಜೆಪಿ ಲೂಟಿ(Loot) ಮಾಡುವ ಸಂಚು ರೂಪಿಸಿದೆ ಎಂದು ಆರೋಪಿಸಿದರು.

70 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್‌ ಬ್ಯಾಂಕುಗಳ ರಾಷ್ಟ್ರೀಕರಣ, ಸಾರ್ವಜನಿಕ ಉದ್ದಿಮೆಗಳ ಸ್ಥಾಪನೆ ಹಾಗೂ ನವೀಕರಣ, ನೂತನ ತಂತ್ರಜ್ಞಾನ ಅಳವಡಿಕೆ, ಬಾಹ್ಯಾಕಾಶ ಸಂಶೋಧನೆಗೆ ಒತ್ತು, ಆಹಾರ ಸ್ವಾವಲಂಬನೆ, ಕೈಗಾರಿಕೆಗಳ ಸ್ಥಾಪನೆ, ನೀರಾವರಿ ಯೋಜನೆಗಳ ಜಾರಿ ಮೂಲಕ ಎಲ್ಲ ದೇಶವಾಸಿಗಳನ್ನು ಒಗ್ಗೂಡಿಸಿಕೊಂಡು ಬಲಿಷ್ಠ ಭಾರತ ನಿರ್ಮಿಸಿತು. ಜಾತಿ, ವರ್ಣ ಧರ್ಮಗಳ ಬೇಧ ನೋಡದೇ ಭಾವೈಕ್ಯತೆಯ ರಾಷ್ಟ್ರ ನಿರ್ಮಾಣ ಮಾಡಿ ವಿಶ್ವಮಟ್ಟದಲ್ಲಿ ದೇಶಕ್ಕೆ ಗೌರವ ತಂದುಕೊಟ್ಟಿತು ಎಂದರು.

Tap to resize

Latest Videos

undefined

MLC Election: ಕಾಂಗ್ರೆಸ್‌ ವಯಸ್ಸಾದ ಪಕ್ಷ, ಅದನ್ನು ವಿಸರ್ಜಿಸಿ: ಸಿಎಂ ಬೊಮ್ಮಾಯಿ

ಸುಳ್ಳುಗಳನ್ನು ಸೃಷ್ಟಿಸಿ ಪದೇ ಪದೇ ಹೇಳುವ ಮೂಲಕ ಅಮಾಯಕ ಯುವಕರಲ್ಲಿ ದ್ವೇಷದ ಬೀಜ ಬಿತ್ತುತ್ತಿದ್ದಾರೆ. ಮೋದಿ ಅವರು ಏಳೂವರೆ ವರ್ಷದಲ್ಲಿ ಕಪ್ಪು ಹಣ ತಂದು ಎಷ್ಟು ಜನರ ಖಾತೆಗೆ ಜಮಾ ಮಾಡಿದ್ದಾರೆ? ಎಷ್ಟು ಜನರಿಗೆ ಉದ್ಯೋಗ(Job) ಕೊಡಿಸಿದ್ದಾರೆ? ಬುಲ್ಲೆಟ್‌ ಟ್ರೈನ್‌ಗಳನ್ನು(Bullet Train) ಎಲ್ಲೆಲ್ಲಿ ಓಡಿಸಿದ್ದಾರೆ, ಎಷ್ಟು ಸ್ಮಾರ್ಟ್‌ ಸಿಟಿಗಳ ನಿರ್ಮಾಣವಾಗಿ ಜನತೆಯ ತಲಾದಾಯ ಹೆಚ್ಚಿದೆ, ಬೆಲೆ ಏರಿಕೆಯ ನಿಯಂತ್ರಣದ ಮೇಲೆ ಎಷ್ಟು ಹಿಡಿತ ಸಾಧಿಸಿದೆ, ಇಂಧನ ಬೆಲೆ ಎಷ್ಟು ಏರಿಸಿದೆ ಎಂಬುದನ್ನು ಜನಸಾಮಾನ್ಯರು ಅರ್ಥ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಬಿ.ಶಿವಣ್ಣ, ಡಿಸಿಸಿ ಅಧ್ಯಕ್ಷ ಕೃಷ್ಣಪ್ಪ, ಮುಖಂಡರಾದ ಆರ್‌.ಕೆ.ರಮೇಶ್‌, ಹರೀಶ್‌, ಇಂಡ್ಲವಾಡಿ ನಾಗರಾಜ್‌, ಲಿಂಗಣ್ಣ, ಪುರುಶೋತ್ತಮ್‌, ಆರ್‌.ಕೇಶವ್‌, ಛಲವಾದಿ ನಾಗರಾಜ್‌ ಇತರರಿದ್ದರು.

ಮತ್ತೆ ಬಾವುಕರಾದ ಬಾಬು

ಅಭ್ಯರ್ಥಿ ಬಾಬು ಮಾತನಾಡಿ ನನ್ನ ಕುಟುಂಬದ ಬಗ್ಗೆ ಕೇವಲವಾಗಿ ಮಾತನಾಡಿ ನನ್ನ ಕಣ್ಣಿನಲ್ಲಿ ನೀರನ್ನು ತರಿಸಿದ್ದಾರೆ. ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ. ನನ್ನ ಮಡದಿ ಮಕ್ಕಳ ಶಾಪ ಅವರಿಗೆ ಖಂಡಿತ ತಟ್ಟುತ್ತದೆ. ನಾನು ನನ್ನ ಆಸ್ತಿಗೆ ತೆರಿಗೆ ಕಟ್ಟಿಜನ ಸೇವೆಗೆ ಬಂದಿದ್ದೇನೆ. ಬೇನಾಮಿ ಆಸ್ತಿ, ಹಣ ಇದ್ದಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ತನಿಖೆಯಾಗಲಿ ಎಂದು ಭಾವುಕರಾಗಿ ನುಡಿದರು. ಸರ್ಕಾರದ ಅನುದಾನದ ಜೊತೆಗೆ ನನ್ನ ದುಡಿಮೆಯ ಒಂದಂಶವನ್ನು ಸೇರಿಸಿ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತೇನೆ. ಜನಪ್ರತಿನಿಧಿ ಮತದಾರ ಬಂಧುಗಳು ತಮ್ಮ ಅಮೂಲ್ಯ ಮತ ನೀಡಿ ಆಶೀರ್ವದಿಸಿ ಎಂದು ಮನವಿ ಮಾಡಿದರು.

ನಕಲಿ ದೇಶಭಕ್ತಿಯ ಪ್ರಮಾಣ ಪತ್ರ ನೀಡುತ್ತಿರುವ ಬಿಜೆಪಿ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡದ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನಕಲಿ ದೇಶಭಕ್ತಿಯ ಪ್ರಮಾಣ ಪತ್ರ ನೀಡುತ್ತಿವೆ ಎಂದು ಅಖಿಲ ಭಾರತ ಯುವ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌(BV Shrinivas) ಟೀಕಿಸಿದ್ದಾರೆ. 

Karnataka MLC Poll: ಮಂಡ್ಯದಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ, ಬಿಎಸ್ ವೈ ಸ್ಪಷ್ಟನೆ

ಅಖಿಲ ಭಾರತ ಯುವ ಕಾಂಗ್ರೆಸ್‌ ಸಮಿತಿಯು ರೇಸ್‌ ಕೋರ್ಸ್‌ ರಸ್ತೆಯ ಕಾಂಗ್ರೆಸ್‌ ಭವನದಲ್ಲಿ ಏರ್ಪಡಿಸಿರುವ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ(Indira Gandhi) ಅವರ ಜೀವನ ಆಧಾರಿತ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡೆಗೆ ನೀಡದ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ದೇಶಭಕ್ತಿ ಬಗ್ಗೆ ಹೇಳಿಕೆ ನೀಡುತ್ತಿವೆ. ಇದನ್ನು ಜನರಿಗೆ ತಿಳಿಸಿಕೊಡುವ ದೃಷ್ಟಿಯಿಂದ ನಮ್ಮ ಇತಿಹಾಸವನ್ನು ಯುವ ಪೀಳಿಗೆಗೆ ಮನವರಿಕೆ ಮಾಡಿಕೊಡಲು ನಾವು ಸಿದ್ಧವಾಗಿದ್ದೇವೆ ಎಂದು ತಿರುಗೇಟು ನೀಡಿದರು.

ಸ್ವಾತಂತ್ರ್ಯದ ಸಂದರ್ಭದಲ್ಲಿ ದೇಶದಲ್ಲಿ ಸೂಜಿಯೂ ಸಹ ಉತ್ಪಾದನೆ ಆಗುತ್ತಿರಲಿಲ್ಲ. ಏನೂ ಇಲ್ಲದ ಕಾಲದಲ್ಲಿ ದೇಶವನ್ನು ಕಟ್ಟಿ ಬೆಳೆಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲೂ ಕಾಂಗ್ರೆಸ್‌ ಪಾತ್ರ ಮಹತ್ತರವಾಗಿತ್ತು. ಆದರೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಬಿಜೆಪಿಯು ದೇಶಭಕ್ತಿಯ ನಕಲಿ ಪ್ರಮಾಣ ಪತ್ರ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
 

click me!