ವಿಧಾನಸಭಾ ಚುನಾವಣೆ ಕೇವಲ ಐದಾರು ತಿಂಗಳು ಮಾತ್ರ ಇದೆ. ಬರುವಂತಹ ಚುನಾವಣೆಯಲ್ಲಿ ನಾವು 140 ಸ್ಥಾನ ಪಡೆದು ಅಧಿಕಾರಕ್ಕೆ ಬಂದ್ರೆ ಕಾಂಗ್ರೆಸ್ ಧೂಳೀಪಟ ಆಗಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಶಿವಮೊಗ್ಗ (ನ.25): ವಿಧಾನಸಭಾ ಚುನಾವಣೆ ಕೇವಲ ಐದಾರು ತಿಂಗಳು ಮಾತ್ರ ಇದೆ. ಬರುವಂತಹ ಚುನಾವಣೆಯಲ್ಲಿ ನಾವು 140 ಸ್ಥಾನ ಪಡೆದು ಅಧಿಕಾರಕ್ಕೆ ಬಂದ್ರೆ ಕಾಂಗ್ರೆಸ್ ಧೂಳೀಪಟ ಆಗಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಬಿಜೆಪಿ ಪ್ರಶಿಕ್ಷಣ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಮುಂದಿನ ಚುನಾವಣೆಗೆ ಬೇಕಾದ ಪರಿಶ್ರಮ ಹಾಕಬೇಕು. ಎಲ್ಲಾ ಕಡೆ ಗಮನ ಕೊಟ್ಟಾಗ ಮಾತ್ರ ಗುರಿ ಮುಟ್ಟಲು ಸಾಧ್ಯ. ಚುನಾವಣಾ ದೃಷ್ಟಿಯಿಂದ ಹಾಗೂ ಸಂಘಟನೆ ದೃಷ್ಟಿಯಿಂದ ತಯಾರಿ ಮಾಡಿಕೊಳ್ಳಬೇಕು ಎಂದರು. ವಾಸ್ತವಿಕವಾಗಿ ನಮ್ಮ ಸ್ಥಿತಿ ಏನಿದೆ. ಬೇರೆ ಪಕ್ಷಗಳ ಸ್ಥಿತಿ ಏನಿದೆ ಎಂಬ ಬಗ್ಗೆ ಗಮನ ಹರಿಸಬೇಕು.
ಪ್ರಧಾನಮಂತ್ರಿಗಳು, ಗೃಹ ಸಚಿವರು, ರಾಷ್ಟ್ರೀಯ ಅಧ್ಯಕ್ಷರು ಹೆಚ್ಚು ಬಾರಿ ರಾಜ್ಯಕ್ಕೆ ಬರಲಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಸರಕಾರ ಉಳಿಸಿಕೊಳ್ಳಬೇಕಿದ ವಿಶೇಷ ಗಮನ ಕೊಟ್ಟಾಗ ಮಾತ್ರ ಗುರಿ ತಲುಪಲು ಸಾಧ್ಯ. ಕೇಂದ್ರ ಸರಕಾರದ ಕಾರ್ಯಕ್ರಮಗಳು ಬೆನ್ನೆಲುಬು ಆಗಿವೆ. ಕೃಷಿ ಯಂತ್ರದಲ್ಲಿ ಸಬ್ಸಿಡಿ ನೀಡಲಾಗುತ್ತಿದೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಅವರಲ್ಲಿ ನಾಯಕತ್ವ ಇಲ್ಲದೇ ಗೊಂದಲದಲ್ಲಿದ್ದಾರೆ. ಈಗಾಗಲೇ ತಾನು ಮುಖ್ಯಮಂತ್ರಿ, ತಾನು ಮುಖ್ಯಮಂತ್ರಿ ಅಂತಾ ಹಲವರು ತಿರುಕನ ಕನಸು ಕಾಣ್ತಿದ್ದಾರೆ. ಸಿದ್ದರಾಮಯ್ಯ ಅಡ್ರೆಸ್ ಇಲ್ಲದಂತಾಗುತ್ತಾರೆ. 140-150 ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ ತರುವ ದಿಕ್ಕಿನಲ್ಲಿ ಸಂಕಲ್ಪ ಮಾಡೋಣ ಎಂದು ಬಿಎಸ್‌ವೈ ಹೇಳಿದರು.
ಕಾಂಗ್ರೆಸ್ ಪಕ್ಷ ವಿಷಯಗಳನ್ನು ತಿರುಚಿ ಜನರ ದಿಕ್ಕು ತಪ್ಪಿಸುತ್ತಿದೆ: ಬಿ.ಎಸ್.ಯಡಿಯೂರಪ್ಪ
ತಂದೆ ಹೇಳಿದ್ದ ಭವಿಷ್ಯದಂತೆ 4 ಬಾರಿ ಸಿಎಂ ಆಗುವ ಸೌಭಾಗ್ಯ ಸಿಕ್ಕಿದೆ: ನನ್ನ ತಂದೆ ಹೇಳಿದ್ದ ಭವಿಷ್ಯ ನಿಜವಾಗಿದೆ. 4 ಬಾರಿ ಸಿಎಂ ಆಗುವ ಸೌಭಾಗ್ಯ ಸಿಕ್ಕಿದೆ. ಜೀವನದಲ್ಲಿ ತೃಪ್ತಿ ಇದೆ. ಇನ್ಯಾವುದೇ ಯಾವುದೇ ಅಪೇಕ್ಷೆಗಳಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ಹುಟ್ಟೂರು ತಾಲೂಕಿನ ಬೂಕನಕೆರೆಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ವರ್ಷಕ್ಕೊಮ್ಮೆ ಗ್ರಾಮದಲ್ಲಿ ವಿಶೇಷ ಪೂಜಾ ಕೈಂಕರ್ಯ ಇರುತ್ತದೆ. ನಾನು ಕೂಡ ಕುಟುಂಬಸ್ಥರೊಂದಿಗೆ ಬಂದು ಪೂಜೆ ಸಲ್ಲಿಸುತ್ತೇನೆ. ಇದು ಅನೇಕ ವರ್ಷಗಳ ಪದ್ದತಿ, ಅದರಂತೆ ಇಂದು ಕೂಡ ಬಂದಿದ್ದೇನೆ. ಹುಟ್ಟೂರಿಗೆ ಬಂದಾಗಲೆಲ್ಲಾ ನನಗೆ ಸಂತೋಷ, ತೃಪ್ತಿ, ನೆಮ್ಮದಿ ಸಿಕ್ಕಿದೆ.
ನಾನು ಹುಟ್ಟಿಬೆಳೆದದ್ದು ಬೂಕನಕೆರೆಯಲ್ಲಿ. ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡೆ. ತಂದೆ ನಮ್ಮನ್ನೆಲ್ಲ ಸಾಕಿದರು. ನನ್ನ ಇಡೀ ಜೀವನದಲ್ಲಿ ಬೂಕನಕೆರೆಯನ್ನು ಎಂದಿಗೂ ಮರೆಯಲಾಗಲ್ಲ. ಈ ಮಣ್ಣಿನ ಗುಣದಿಂದ ಈ ದೊಡ್ಡ ಮಟ್ಟದ ಸ್ಥಾನಕ್ಕೆ ತಲುಪಿದ್ದೇನೆ. ನಮ್ಮ ತಂದೆಯವರು ಸಣ್ಣಪುಟ್ಟಕ್ಕೆ ಬಡಿದಾಡಬೇಡ. ಮುಂದೆ ಒಳ್ಳೆಯ ಅವಕಾಶಗಳು ಸಿಗಲಿದೆ ಎಂದು ಭವಿಷ್ಯ ಹೇಳಿದ್ದರು. ಅದರಂತೆ ತಂದೆ ಭವಿಷ್ಯ ನಿಜವಾಗಿದೆ. ನಾಲ್ಕು ಬಾರಿ ಈ ರಾಜ್ಯದ ಸಿಎಂ ಆಗುವ ಸೌಭಾಗ್ಯ ಸಿಕ್ಕಿದೆ ಎಂದು ಹೇಳಿದರು. ಜೀವನದಲ್ಲಿ ತೃಪ್ತಿ ಇದೆ. ಯಾವುದೇ ಅಪೇಕ್ಷೆಗಳಿಲ್ಲ. ಅವತ್ತಿನ ಕಾಲದ ಹಬ್ಬದ ದಿನಗಳು ಈಗ ಇಲ್ಲ.
Karnataka Politics: ಬಿಜೆಪಿಗೆ ಮತ್ತೆ ಅಧಿಕಾರ ನಿಶ್ಚಿತ: ಬಿ.ಎಸ್.ಯಡಿಯೂರಪ್ಪ
ಆಗ ಜಾತ್ರೆಗೆ ಮನೆ ಮಂದಿಯೆಲ್ಲಾ ಹೋಗುತ್ತಿದ್ದೇವು. ನಾನು, ನಮ್ಮಣ್ಣ ತೆಂಡೆಕೆರೆ ಸಂತೆಗೆ ಹೋಗಿ ವ್ಯಾಪಾರ ಮಾಡುತ್ತಿದ್ದೇವು. ಅದ್ಯಾವುದನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವುದೆ. ನನ್ನ ಮುಂದಿನ ಗುರಿಯಾಗಿದೆ. ಆ ಗುರಿ ಮುಟ್ಟುವ ದಿಕ್ಕಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲ ನಾಯಕರು ಸಿಎಂ ಆಗುವ ಹಗಲುಗನಸು ಕಾಣುತ್ತಿದ್ದಾರೆ. ಆದರೆ, ವಿಧಾನಸಭಾ ಚುನಾವಣೆ ನಂತರ ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ ನಿಶ್ಚಿತ ಎಂದು ಭವಿಷ್ಯ ನುಡಿದರು.