Assembly Election: ಯಾದಗಿರಿ ಕಾಂಗ್ರೆಸ್ ಟಿಕೆಟ್‌ಗೆ 17 ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ..!

By Ravi JanekalFirst Published Nov 25, 2022, 1:47 PM IST
Highlights
  • ಯಾದಗಿರಿ ಕಾಂಗ್ರೆಸ್ ಟಿಕೆಟ್‌ಗೆ 17 ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ..!

  • ಮಾಜಿ ಸಚಿವ ಎ.ಬಿ‌.ಮಾಲಕರೆಡ್ಡಿ ಪುತ್ರಿ ಅನುರಾಗ ಸಹ ಟಿಕೆಟ್ ಗಾಗಿ ಅಪ್ಲಿಕೇಶನ್

  • ಯಾರ ಪಾಲಾಗುತ್ತೆ 'ಕೈ' ಟಿಕೆಟ್.?

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ನ.25): ವಿಧಾನಸಭಾ ಚುನಾವಣೆ ಇನ್ನು 5 ತಿಂಗಳು ಇರುವಾಗಲೇ ಯಾದಗಿರಿ ಮತಕ್ಷೇತ್ರದ ಆಕಾಂಕ್ಷಿಗಳ ಹುರುಪು, ಉತ್ಸಾಹ ಜೋರಾಗಿಯೇ ಕಂಡುಬರುತ್ತಿದೆ. ಯಾದಗಿರಿ ಮತಕ್ಷೇತ್ರದಲ್ಲಿ 'ಕೈ' ಟಿಕೆಟ್ ಬಯಸಿ ಬರೊಬ್ಬರಿ 17 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆದ್ರೆ ಈ 17 ಜನ ಆಕಾಂಕ್ಷಿಗಳ ಪೈಕಿ ಮಾಜಿ ಸಚಿವ, ಬಿಜೆಪಿ ಮುಖಂಡ ಡಾ.ಎ.ಬಿ.ಮಾಲಕರೆಡ್ಡಿ ಅವರ ಪುತ್ರಿ ಡಾ.ಅನುರಾಗ ಅವರೂ ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿರುವುದು ಕ್ಷೇತ್ರದಲ್ಲಿ ಸಂಚಲನ ಸೃಷ್ಟಿ ಮಾಡಿದೆ.

 ಕೈ ಟಿಕೆಟ್‌ಗೆ ಅರ್ಜಿ ಸಲ್ಲಿಸಿರುವವರು ಯಾರು?

ಯಾದಗಿರಿ ಮತಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಬಯಸಿ 17 ಜ‌ನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಇದರಿಂದಾಗಿ ಆಕಾಂಕ್ಷಿಗಳ ದಂಡು ಹನುಮನ ಬಾಲದಂತೆ ಬೆಳೆದಿದೆ. ಕಾಂಗ್ರೆಸ್ ಆಕಾಂಕ್ಷಿಗಳ ದಂಡು ಈ ರೀತಿಯಾಗಿದೆ. ಡಾ.ಅನುರಾಗ ಮಾಲಕರೆಡ್ಡಿ, ಮರಿಗೌಡ ಹುಲಕಲ್, ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಶರಣಪ್ಪ ಸಲಾದಪುರ, ಡಾ.ಶರಣಬಸವಪ್ಪ ಕಾಮರೆಡ್ಡಿ ಬೆಂಡೆಬೆಂಬಳಿ, ಡಾ.ಭೀಮಣ್ಣ ಮೇಟಿ, ಬಸರೆಡ್ಡಿ ಅನಪುರ, ಶ್ರೀನಿವಾಸರೆಡ್ಡಿ ಕಂದಕೂರು, ಸತೀಶ ಕಂದಕೂರ, ಎ.ಸಿ.ಕಾಡ್ಲೂರ್, ನಿಖಿಲ್.ವಿ.ಶಂಕರ್, ವಿನೋದ ಪಾಟೀಲ್, ಗುಲಾಮುಸ್ ಸಕ್ಲೇನ್, ಜಹೀರುದ್ದೀನ್, ಬಸ್ಸುಗೌಡ ಬಿಳ್ಹಾರ, ರಾಯಪ್ಪಗೌಡ ದರ್ಶನಾಪುರ, ಇಬ್ರಾಹಿಂ ಶಿರವಾರ ಈ 17 ಜನ ಕೂಡ ಅರ್ಜಿ ಸಲ್ಲಿಸಿದ್ದಾರೆ. 

Assembly Election:'ಕೈ' ಹಿಡಿಯಲಿದ್ದಾರಾ ಮಾಜಿ ಸಚಿವ ಮಾಲಕರೆಡ್ಡಿ? ಕುತೂಹಲ ಮೂಡಿಸಿದ ಡಿ.ಕೆ.ಶಿವಕುಮಾರ್ ಭೇಟಿ

ಯಾರಿಗೆ ಒಲಿಯದಿದೆ 'ಕೈ' ಟಿಕೆಟ್..?

ರಾಜ್ಯದಲ್ಲಿ ಶತಾಯಗತಾಯ ಅಧಿಕಾರಕ್ಕೇರಲು ಕಾಂಗ್ರೆಸ್ ಶತಪ್ರಯತ್ನ ಮಾಡ್ತಾ ಇದೆ. ಹಾಗಾಗಿ ಗೆಲ್ಲುವ ಕುದುರೆಗೆ ಮಣೆ ಹಾಕುವ ಸಾಧ್ಯತೆಯಿದೆ. ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸುವುದರ ಮೂಲಕ ಹೊಸದೊಂದು ನಿಯಮವನ್ನು ಕಾಂಗ್ರೆಸ್ ಮಾಡಿದ್ದು. ಇದರಿಂದಾಗಿ ಯಾದಗಿರಿ ಮತಕ್ಷೇತ್ರದ 17 ಜನರಿಗೆ ಯಾರಿಗೆ ಕೈ ಟಿಕೆಟ್ ಒಲಿಯಲಿದೆ ಎಂಬುದು ಭಾರಿ ಸಸ್ಪೆನ್ಸ್ ಆಗಿದೆ. 

ಯಾದಗಿರಿ ಜಿಲ್ಲೆಯಲ್ಲಿ 2013 ವಿಧಾನಸಭಾ ಚುನಾವಣೆಯಲ್ಲಿಕಾಂಗ್ರೆಸ್ 4 ವಿಧಾನಸಭಾ ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಲ್ಲಿ ಗೆಲುವನ್ನು ಪಡೆದಿತ್ತು. ಇದರಿಂದಾಗಿ ರಾಜ್ಯದಲ್ಲಿ 2013 ರಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತ್ತು. ಅದೇ ರೀತಿ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಪಡೆಯಲು 17 ಜನರಲ್ಲಿ ಯಾರಿಗೆ ಕಾಂಗ್ರೆಸ್  ಮಣೆ ಹಾಕಲಿದೆ, ಟಿಕೆಟ್ ಘೋಷಣೆಯಾದಾಗ ಬುಗಿಲೇಳಲಿರುವ ಅಸಮಾಧಾನವನ್ನು ಯಾವ ರೀತಿ ಮ್ಯಾನೇಜ್ ಮಾಡಲಿದೆ ಎಂಬುದು ಕಾದು ನೋಡಬೇಕಾಗಿದೆ.  ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ  ಕಾಂಗ್ರೆಸ್  ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಸಭೆ ಕರೆದಿದ್ದಾರೆ. 

ಬಿಜೆಪಿ ಮುಖಂಡ ಡಾ.ಎ.ಬಿ.ಮಾಲಕರೆಡ್ಡಿ ಪುತ್ರಿ ಡಾ.ಅನುರಾಗ ರಿಂದ 'ಕೈ' ಗಾಗಿ ಅರ್ಜಿ!

ಬಹಳ ಸರಳ ಸಜ್ಜನಿಕೆ, ಸೌಮ್ಯ ಸ್ವಭಾವ ವ್ತಕ್ತಿತ್ವದ ಮಾಜಿ ಸಚಿವ, ಬಿಜೆಪಿ ಮುಖಂಡ ಡಾ.ಎ.ಬಿ.ಮಾಲಕರೆಡ್ಡಿ ಯಾದಗಿರಿ ಮತಕ್ಷೇತ್ರದ ನಾಡಿಮಿಡಿತ ಅರಿತ ನಾಯಕ. ಈಗ ಅವರು ಬಿಜೆಪಿ ಪಕ್ಷದಲ್ಲೇ ಇದ್ದಾರೆ. ಆದ್ರೆ ಅವರ ಪುತ್ರಿ ಕಾಂಗ್ರೆಸ್ ಟಿಕೆಟ್ ಗಾಗಿ ಅಪ್ಲಿಕೇಶನ್ ಹಾಕಿದ್ದಾರೆ. ಇದು ಯಾದಗಿರಿ ಮತಕ್ಷೇತ್ರದಾದ್ಯಂತ ಭಾರಿ ಮಚಲನ ಉಂಟು ಮಾಡಿದೆ. 

Yadgir: ಯಾದಗಿರಿಯಲ್ಲಿ ಕುಡಿಯಲು 'ಶುದ್ಧ' ನೀರಿಲ್ಲ: ಹೆಸರಿಗೆ ಸೀಮಿತ ಆರ್.ಓ ಪ್ಲಾಂಟ್ಸ್

ಈಗಾಗಲೇ ಕಳೆದ ಕೆಲವು ದಿನಗ ಹಿಂದೆಯಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಡಾ.ಎ.ಬಿ.ಮಾಲಕರೆಡ್ಡಿ ಅವರು ಭೇಟಿ ನೀಡಿ, ಮುಂದಿನ ರಾಜಕೀಯದ ನಡೆಯ ಬಗ್ಗೆ ಮಾತುಕತೆ ಕೂಡ ಮಾಡಿದ್ದರು. ಇದರಿಂದಾಗಿ ಯಾದಗಿರಿ ಮತಕೇತ್ರದಲ್ಲಿ ಭೇಟಿ ಬಗ್ಗೆ ಬಹಳಷ್ಟು ಚರ್ಚೆ ಕೂಡ ನಡೆದಿತ್ತು. ಜೊತೆಗೆ ಡಾ.ಎ.ಬಿ.ಮಾಲಕರೆಡ್ಡಿಯವರು ಈಗಾಗಲೇ ಬಿಜೆಪಿಯಿಂದ ಒಂದು ಹೆಜ್ಜೆ ಹೊರಗಿಟ್ಟಂತೆ ಕಾಣ್ತಾ ಇದ್ದು, ಅವರ ರಾಜಕೀಯ ನಡೆ ಮಾತ್ರ ಇನ್ನು ನಿಗೂಢವಾಗಿದೆ.

click me!