ದೊಡ್ಡ ರಾಜ್ಯಗಳಲ್ಲೇ ಕಾಂಗ್ರೆಸ್‌ಗೆ ಅಡ್ರೆಸ್ ಇಲ್ಲ, ಅವರಿಗೆ ನಾಚಿಕೆ ಆಗಬೇಕು: ಬಿ.ಎಸ್.ಯಡಿಯೂರಪ್ಪ

By Govindaraj SFirst Published Mar 20, 2023, 11:01 PM IST
Highlights

ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ‌ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿರುಸಿನ ಭಾಷಣ ಮಾಡಿದರು.

ವರದಿ: ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಮಾ.20): ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ‌ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿರುಸಿನ ಭಾಷಣ ಮಾಡಿದರು. ಬಿಎಸ್‌ವೈ ಭಾಷಣ ಕೇಳಿ ಅಲ್ಲಿ ನೆರೆದಿದ್ದ ಸಾವಿರಾರು ಸಂಖ್ಯೆ ಬಿಜೆಪಿ ಕಾರ್ಯಕರ್ತರು ಹರ್ಷೋದ್ಗಾರ ಕೂಗಿದರು. ಕಳೆದ ಚುನಾವಣೆಯಲ್ಲಿ ತಿಪ್ಪಾರೆಡ್ಡಿ ಅವರನ್ನು 35 ಸಾವಿರ ಅಂತರದಲ್ಲಿ ಗೆಲ್ಲಿಸಲು ನಾನು ಹೇಳಿದ್ದೆನು. ಆದ್ರೆ ನೀವು 25 ಸಾವಿರ ಅಂತರದಲ್ಲಿ ಗೆಲ್ಲಿಸಿದ್ರಿ. ಆದ್ರೆ ಈ ಸಲ 45 ಸಾವಿರ ಅಂತರದಲ್ಲಿ ಗೆಲ್ಲಿಸಬೇಕೆಂದು ಬಿಎಸ್‌ವೈ ಜನರಲ್ಲಿ ಮನವಿ ಮಾಡಿದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಒಂದು ಮಾತು ಹೇಳಿದ್ದರು. 

ನಾಲ್ಕು ತಲೆಮಾರಿಗೆ ಆಗುವಷ್ಟು ಕಾಂಗ್ರೆಸ್‌ನವರು ಗಳಿಕೆ ಮಾಡಿದ್ದೇವೆ ಅಂದಿದ್ದರು. ಹಗಲು ದರೋಡೆ ಮಾಡಿ ಖಜಾನೆ ತುಂಬಿಸಿಕೊಂಡಿದ್ದರು. ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಬೇಕು ಎಂದು ಯಡಿಯೂರಪ್ಪ ವಾಗ್ದಳಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್ ಸಮನಾಗಲು ಸಾಧ್ಯವೇ? ಜಗ ಮೆಚ್ಚಿದ ಮೋದಿ ಪ್ರಧಾನಿ ಆಗಿದ್ದು ನಮ್ಮ ಸೌಭಾಗ್ಯ.  ಪ್ರಧಾನಿ ನರೇಂದ್ರ ಮೋದಿ ಒಂದು ದಿನವೂ ವಿಶ್ರಾಂತಿ ಪಡೆದಿಲ್ಲ. ಬಿಜೆಪಿ ಕಾರ್ಯಕರ್ತರಾದ‌ ನಾವು ಹೇಗೆ ಕೆಲಸ ಮಾಡಬೇಕು ಮೋದಿ, ನಾನು, ಬೊಮ್ಮಾಯಿ ನೀಡಿದ ಕಾರ್ಯಕ್ರಮ ಜನರಿಗೆ ತಿಳಿಸಬೇಕು. ಹಣ, ಹೆಂಡ, ಜಾತಿ ಬಲದಿಂದ ಅಧಿಕಾರಕ್ಕೆ ಬರುವ ಕನಸು ಕಾಂಗ್ರೆಸ್ ಕಾಣ್ತಿದೆ. 

ಕಾಂಗ್ರೆಸ್‌ನಿಂದ ಆದಿವಾಸಿಗಳಿಗಾಗಿಯೇ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ: ವಿರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ

ಜಾತಿ ವಿಷ ಬೀಜ ಬಿತ್ತಿ‌ ಅಧಿಕಾರ ಹಿಡಿಯುವ ಕನಸಲ್ಲಿದ್ದ ಕಾಂಗ್ರೆಸ್ ಈಗ ಯಾವ ಸ್ಥಿತಿಯಲ್ಲಿದೆ ಗೊತ್ತಿದೆ. ಹೊರ ದೇಶಕ್ಕೆ ಹೋಗಿ ರಾಹುಲ್ ದೇಶದ ಮಾನ ಹರಾಜು ಹಾಕುತ್ತಾರೆ. ಕ್ಷಮೆ ಕೇಳಲು ರಾಹುಲ್ ಗಾಂಧಿ ಸಿದ್ಧರಿಲ್ಲ. ನಾಲ್ಕಾರು ದಿನದಿಂದ ಲೋಕಸಭೆ ಕಲಾಪ ನಡೆಯುತ್ತಿಲ್ಲ. ಇಂಥ ಒರ್ವ ರಾಹುಲ್ ಗಾಂಧಿ  ಕಾಂಗ್ರೆಸ್ ಮುಖಂಡ ಎಂದು ವ್ಯಂಗ್ಯ ಮಾಡಿದರು. ಕಾಂಗ್ರೆಸ್ ಎಲ್ಲಾ ರಾಜ್ಯದಲ್ಲಿ ಸೋತು ಅಸ್ತಿತ್ವ ಕಳಕೊಂಡಿದೆ. ಮೋದಿಗೆ ಟೀಕಿಸುವ ನೈತಿಕ ಹಕ್ಕು ಕಾಂಗ್ರೆಸ್‌ಗೆ‌ ಇದೆಯೇ ಎಂದು ಪ್ರಶ್ನಿಸಿದರು. ಈಗ ಕಾಂಗ್ರೆಸ್ ಪಕ್ಷ ಹೊಸ ವರಸೆ ಶುರು ಮಾಡಿದೆ. ಕಾಂಗ್ರೆಸ್ ಪಕ್ಷದವರು ಗ್ಯಾರಂಟಿ ಕಾರ್ಡ್ ಕೊಡುತ್ತಾರಂತೆ. 

ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು, ಕಾಂಗ್ರೆಸ್ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಗೆದ್ದು ಬಂದು ಸರ್ಕಾರ ರಚಿಸುತ್ತದೆ. ಕಾಂಗ್ರೆಸ್ ಈ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿತ್ತು. ಶಾಪದ ಫಲವಾಗಿ ಕಾಂಗ್ರೆಸ್ ನಾಶ ಆಗುತ್ತಿದೆ. ಕಾಂಗ್ರೆಸ್ ಮುಕ್ತ ಭಾರತ ಆಗುವ ಕಾಲ ಬಂದಿದೆ. ಇಡೀ ವಿಶ್ವ ಅಚ್ಚರಿಯಿಂದ ಪ್ರಧಾನಿ ಮೋದಿ ಕಡೆ ನೋಡುತ್ತಿದೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಸರ್ವ ನಾಶ ಆಗಿದೆ. ದೊಡ್ಡ ರಾಜ್ಯಗಳಲ್ಲೇ ಕಾಂಗ್ರೆಸ್‌ಗೆ ಅಡ್ರೆಸ್ ಇಲ್ಲ. ಇಲ್ಲಿ ಕರ್ನಾಟಕಕ್ಕೆ ಬಂದು ಆಟ ಆಡುತ್ತಿದ್ದಾರೆ. ನಾನು ಸಿಎಂ ನಾನು ಸಿಎಂ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. 

ನನಗೆ 80 ವರ್ಷ ಮುಗಿದಿದೆ, ಮನೆಯಲ್ಲಿ ಕುಳಿತಿಲ್ಲ. ರಾಜ್ಯದೆಲ್ಲೆಡೆ ಸುತ್ತಿ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ. ವೀರಶೈವ ಬಂಧುಗಳಲ್ಲಿ ಕೈಮುಗಿದು ಕೇಳುತ್ತೇನೆ. ಯಡಿಯೂರಪ್ಪಗೆ ಅಪಮಾನ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ನಾನೇ ಸ್ವಂತ ನಿರ್ಧಾರದಿಂದ ಸಿಎಂ ಸ್ಥಾನ ಬಿಟ್ಟಿದ್ದೇನೆ ಎಂದು ಸಮಾಜದ ಬಂಧುಗಳಿಗೆ ಸ್ಪಷ್ಟನೆ ‌ನೀಡಿದರು. ಈ ಸಲ ನಾವು ಗೆದ್ದರೆ ಮುಂದಿನ ಸಲ ಕಾಂಗ್ರೆಸ್ ಅಡ್ರೆಸ್ ಇರಲ್ಲ. ಸಿಎಂ ಬೊಮ್ಮಾಯಿ ಎಸ್ಸಿ-ಎಸ್ಟಿ‌ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಈ ಬಗ್ಗೆಯೂ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಹಿಂದೂ ಮುಸ್ಲಿಂ ಒಂದೇ ತಾಯಿಯ ಮಕ್ಕಳಂತೆ ಬಾಳಬೇಕೆಂದು ಹೇಳುವ ಪಕ್ಷ ಬಿಜೆಪಿ ಎಂದರು. ನರೇಂದ್ರ ಮೋದಿ ಅವರ ಬಿಜೆಪಿ ಪಕ್ಷ, ಕಾಂಗ್ರೆಸ್ ಪಕ್ಷದಂತೆ ಜಾತಿಯ ವಿಷಬೀಜ ಬಿತ್ತುವ ಕೆಲಸ ಮಾಡಲ್ಲ. ಎಲ್ಲಾ ಸಮುದಾಯದ ಜನರ ಏಳ್ಗೆಗೆ ಯೋಜನೆ ರೂಪಿಸಿದ್ದೇವೆ. 

ಕೆಆರ್‌ಪಿಪಿ ಅಧಿಕಾರಕ್ಕೆ ಬಂದರೆ ಉಚಿತ ಶಿಕ್ಷಣ: ಜನಾರ್ದನ ರೆಡ್ಡಿ

ಚಿತ್ರದುರ್ಗದ ಬರದ ಭೂಮಿಗೆ ಭದ್ರಾ ಯೋಜನೆ ತಂದಿದ್ದೇವೆ. ನೀರಾವರಿ ಯೋಜನೆಗೆ ಆದ್ಯತೆ ನೀಡಿ ಜನರ ನೆಮ್ಮದಿಗೆ ಕ್ರಮ. ಮಹಿಳೆಯರ ಸಬಲೀಕರಣಕ್ಕೆ ಅನೇಕ ಯೋಜನೆ. ನಿಮ್ಮ ನಿರೀಕ್ಷೆಯ ಕೆಲಸ ಮಾಡಿಕೊಡಲು ನಮ್ಮ ಸರ್ಕಾರ‌ ಸಿದ್ಧವಿದೆ. ನಮ್ಮ ಯೋಜನೆ ಮನೆ ಮನೆಗೆ ಹೋಗಿ ತಿಳಿಸಿ‌ ಎಂದರು. ಕಾಂಗ್ರೆಸ್‌ನವರನ್ನು ಮನೆಗೆ ಸೇರಿಸಿಕೊಳ್ಳಬೇಡಿ, ತುಘಲಕ್‌ ದರ್ಬಾರ್ ಮಾಡಿ ದೇಶ ಹಾಳು ಮಾಡಿದ್ದವರು ಕಾಂಗ್ರೆಸ್,‌45-50ಸಾವಿರ ಅಂತರದಲ್ಲಿ ಜಿ.ಹೆಚ್.ತಿಪ್ಪಾರೆಡ್ಡಿ ಗೆಲ್ಲುತ್ತಾರೆ. ಇಡೀ ಜಿಲ್ಲೆಯ 6ಕ್ಷೇತ್ರ ಗೆಲ್ಲಿಸುವ ಜವಬ್ದಾರಿ ತಿಪ್ಪಾರೆಡ್ಡಿ ವಹಿಸಬೇಕು. 80 ವರ್ಷ ಆಗಿದೆ ನನಗೆ, ಇನ್ನೂ 5ವರ್ಷ ಮನೆ ಸೇರುವ ಪ್ರಶ್ನೆ ಇಲ್ಲ. ಈ ಚುನಾವಣೆ ಮತ್ತು ಮುಂದಿನ ಚುನಾವಣೆಯಲ್ಲಿ ಪ್ರಚಾರ ಮಾಡುತ್ತೇನೆ. ರಾಜ್ಯದಲ್ಲಿ ಈ ಚುನಾವಣೆ, ಮುಂದಿನ ಚುನಾವಣೆಯಲ್ಲೂ ಬಿಜೆಪಿ ಗೆಲ್ಲಿಸುತ್ತೇವೆ ಎಂದು ಯಡಿಯೂರಪ್ಪ ವಾಗ್ದಾನ ಮಾಡಿದರು.

click me!