ನವರಾತ್ರಿಗೆ ಮೋದಿ ಕೀರ್ತನೆ: ಮಹಿಳಾ ಮತ ಸೆಳೆಯಲು ಬಿಜೆಪಿ 3 ತಂತ್ರ

Published : Jul 24, 2023, 08:46 AM IST
ನವರಾತ್ರಿಗೆ ಮೋದಿ ಕೀರ್ತನೆ: ಮಹಿಳಾ ಮತ ಸೆಳೆಯಲು ಬಿಜೆಪಿ 3 ತಂತ್ರ

ಸಾರಾಂಶ

ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹಿಳೆಯರನ್ನು ಪಕ್ಷದತ್ತ ಸೆಳೆಯಲು ಬಿಜೆಪಿಯು ನವ ಮತದಾರರ ಸಮ್ಮೇಳನ, ಮೋದಿ ಕೀರ್ತನೆ ಹಾಗೂ ರಕ್ಷಾ ಬಂಧನ ಎಂಬ ಮೂರು ವಿಶಿಷ್ಟಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ.

ನವದೆಹಲಿ: ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹಿಳೆಯರನ್ನು ಪಕ್ಷದತ್ತ ಸೆಳೆಯಲು ಬಿಜೆಪಿಯು ನವಮತದಾರರ ಸಮ್ಮೇಳನ, ಮೋದಿ ಕೀರ್ತನೆ ಹಾಗೂ ರಕ್ಷಾ ಬಂಧನ ಎಂಬ ಮೂರು ವಿಶಿಷ್ಟಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ.

ಇದೇ ಮೊದಲ ಬಾರಿಗೆ ಮತದಾನ ಮಾಡಲಿರುವ ಮಹಿಳೆಯರನ್ನು ಬೂತ್‌ ಮಟ್ಟದಲ್ಲಿ (Booth level) ಗುರುತಿಸಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 9 ವರ್ಷಗಳ ಸಾಧನೆಯನ್ನು ಅವರಿಗೆ ತಿಳಿಸಲು ಯೋಜಿಸಿದೆ. ಇದೇ ವೇಳೆ, ನವರಾತ್ರಿಯ ಸಂದರ್ಭದಲ್ಲಿ ಮೋದಿ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ‘ಮೋದಿ ಕೀರ್ತನೆ’ಯನ್ನು ಮಾಡಿ ಮಹಿಳೆಯರನ್ನು ಪಕ್ಷದತ್ತ ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ. ಮತ್ತೊಂದೆಡೆ, ರಕ್ಷಾ ಬಂಧನದ ವೇಳೆ ರಿಕ್ಷಾ ಚಾಲಕರು (Auto drivers), ಡೆಲಿವರಿ ಬಾಯ್‌ಗಳಿಗೆ (delivery Boy) ರಾಖಿ ಕಟ್ಟಿಮೋದಿ ಸಾಧನೆಗಳನ್ನು ವಿವರಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಸ್ನೇಹಯಾತ್ರ ಎಂದು ಹೆಸರಿಡಲಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ (BJP Mahila Morcha) ಅಧ್ಯಕ್ಷೆ ವನತಿ ಶ್ರೀನಿವಾಸನ್‌ ಅವರು ತಿಳಿಸಿದ್ದಾರೆ.

ವಿಪಕ್ಷ ನಾಯಕರ ಸ್ವಾಗತಕ್ಕೆ ಐಎಎಸ್‌ ಬಳಕೆ ಬಗ್ಗೆ ವರದಿ ಕೇಳಿದ ಗವರ್ನರ್‌

ಪಕ್ಷದ ರಾಜ್ಯ ಘಟಕಗಳ ಅಧ್ಯಕ್ಷರ ಜತೆಗೂಡಿ 15 ಮಹಿಳಾ ನಾಯಕಿಯರು ಪಂಚರಾಜ್ಯಗಳಲ್ಲಿ ಮಹಿಳಾ ಮತದಾರರಿಗೆ ಒತ್ತು ನೀಡಿ ಈ ಅಭಿಯಾನವನ್ನು ನಡೆಸಲಿದ್ದಾರೆ ಎಂದು ವಿವರಿಸಿದ್ದಾರೆ. ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ (Madhya Pradesh), ತೆಲಂಗಾಣ ಹಾಗೂ ಮೀಜೋರಂ ರಾಜ್ಯಗಳಲ್ಲಿ ವರ್ಷಾಂತ್ಯಕ್ಕೆ ಚುನಾವಣೆ ನಡೆಯಬೇಕಿದೆ. ಈ ಪೈಕಿ ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌, ಮಧ್ಯಪ್ರದೇಶದಲ್ಲಿ ಬಿಜೆಪಿ, ಮೀಜೋರಂನಲ್ಲಿ ಎನ್‌ಡಿಎ, ತೆಲಂಗಾಣದಲ್ಲಿ ಬಿಆರ್‌ಎಸ್‌ ಅಧಿಕಾರದಲ್ಲಿವೆ.

ಲೋಕಸಭೆಗೆ ಸಿದ್ಧತೆ: ಕಾಂಗ್ರೆಸ್‌ ಪಾಳೆಯದಲ್ಲಿ ನಡೆಯುತ್ತಿರುವ ರಣತಂತ್ರ ಏನು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಜನರೊಂದಿಗೆ ಸಂಪರ್ಕ ಸಾಧಿಸಿ, ಸೋಶಿಯಲ್ ಮೀಡಿಯಾ ಬಳಸಿ: ಸಂಸದರಿಗೆ ಮೋದಿ ಕರೆ