ದರ್ಶನ್ ಇರೋ ಸೆಂಟ್ರಲ್ ಜೈಲಿನಲ್ಲಿ ಪಂಚತಾರ ಹೋಟೆಲ್ ವ್ಯವಸ್ಥೆ ಇದೆ: ಹೆಚ್.ಡಿ. ಕುಮಾರಸ್ವಾಮಿ

By Sathish Kumar KH  |  First Published Aug 26, 2024, 1:45 PM IST

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಖೈದಿಗಳಿಗೆ ಪಂಚತಾರ ಹೋಟೆಲ್‌ನಂತಹ ವ್ಯವಸ್ಥೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. 


ಮಂಡ್ಯ (ಆ.26): ಬೆಂಗಳೂರಿನ ಸೆಂಟ್ರಲ್ ಪರಪ್ಪನ ಅಗ್ರಹಾರದಲ್ಲಿರುವ ಖೈದಿಗಳಿಗೆ ಪಂಚತಾರ ಹೋಟೆಲ್‌ನ ವ್ಯವಸ್ಥೆ ಇದೆ. ದುಡ್ಡು ಕೊಟ್ಟರೆ ಏನು ಬೇಕಾದರೂ ಕೊಂಡುಕೊಳ್ಳಬಹುದು ಎಂಬುದು ಈಗ ದರ್ಶನ್ ವಿಚಾರದಲ್ಲಿ ಅದು ಪ್ರಚಾರಕ್ಕೆ ಬಂದಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮಂಡ್ಯದಲ್ಲಿ ಸೋಮವಾರ ಮಾಧ್ಯಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜೈಲಿನಲ್ಲಿನ ಅವ್ಯವಸ್ಥೆ ಹೊಸದಾಗಿ ಆಗಿಲ್ಲ, ಹಿಂದಿನಿಂದಲೂ ನಡೆಯುತ್ತಾ ಇದೆ. ಹಿಂದೆ ಡಿಜಿ ಮತ್ತು ಡಿಸಿಪಿ ನಡುವೆ ದೊಡ್ಡ ಗಲಾಟೆ ಆಗಿತ್ತು. ತನಿಖೆ ನಡೆಯಬೇಕು ಎಂದು ಗಲಾಟೆ ಆಗಿತ್ತು. ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ಪಂಚತಾರ ವ್ಯವಸ್ಥೆ ಇದೆ. ಈಗ ದರ್ಶನ್ ವಿಚಾರದಲ್ಲಿ ಅದು ಪ್ರಚಾರಕ್ಕೆ ಬಂದಿದೆ. ಸರ್ಕಾರದಿಂದ ಆ ಕೈದಿಗಳನ್ನು‌ ಬೇರೆ ಕಡೆಗೆ ವರ್ಗಾಯಿಸಬೇಕು ಎಂದು‌ ತೀರ್ಮಾನ ಮಾಡುತ್ತಿದ್ದಾರಂತೆ. ಈ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಬರಲು ಸಾಧ್ಯ ಇಲ್ಲ. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ರಾಜ್ಯದಲ್ಲಿ ಆಡಳಿತ ಎನ್ನುವ ನಡವಳಿಕೆ‌ ಇಲ್ಲ. ಭ್ರಷ್ಟಾಚಾರದ ಬಗ್ಗೆ ಬೀದಿ ಬೀದಿಯಲ್ಲಿ ಮಾತಾಡಿಕೊಂಡು ಇರುವ ಕೆಲಸ ಮಾಡ್ತಾ ಇದ್ದಾರೆ ಎಂದು ಹೇಳಿದರು.

Tap to resize

Latest Videos

ನಟ ದರ್ಶನ್‌ನ ಐಷಾರಾಮಿ ಜೀವನ ದರ್ಶನಕ್ಕೆ ಜೈಲಿಗೆ ಹೊರಟ ಗೃಹ ಸಚಿವ ಡಾ.ಜಿ. ಪರಮೇಶ್ವರ!

ಸರ್ಕಾರದಲ್ಲಿ‌ ಮಂತ್ರಿಗಳಿಗೆ ಕೆಲಸವಿಲ್ಲ. ಸಿಎಂಗೆ ಅವರ ಹಗರಣ ಬಗ್ಗೆ ಮಾತಾಡಲು ಸಮಯ ಸಾಕಾಗುತ್ತಿಲ್ಲ. ದುಡ್ಡು ಇದ್ರೆ ಏನು ಬೇಕಾದರೂ ಕೊಂಡುಕೊಳ್ಳಬಹುದು. ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಕುಟುಂಬಸ್ಥರು ಅವರ ನೋವು ಹೇಳಿಕೊಳ್ಳುತ್ತಾರೆ. ಪರಮೇಶ್ವರ್ ಅವರು ಪ್ರತಿ ದಿನ ಒಂದೊಂದು ಕಥೆ ಹೇಳ್ತಾರೆ. ಪಾರದರ್ಶಕವಾದ ಸರ್ಕಾರ ಮಾಡ್ತಾ ಇದೀನಿ. ನಮ್ಮದು‌ ಹೈಟೆಕ್ ಸರ್ಕಾರ ಅಂತಾರೆ. ಪರಪ್ಪನ ಅಗ್ರಹಾರದಲ್ಲಿ ಕೊಡ್ತಾ ಇರುವುದೇ ಹೈಟೆಕ್. ಅವರು ಮಾಡಿರುವ ತಪ್ಪುಗಳನ್ನು ಮುಚ್ಚಿಕೊಳ್ಳಲು ಡೈವರ್ಟ್ ಮಾಡ್ತಾ ಇದ್ದಾರೆ. ಅಧಿಕಾರಿಗಳಿಂದ‌ ನ್ಯಾಯಾ ದೊರಕಲ್ಲ. ನ್ಯಾಯಾಲಯದಿಂದ‌ ನ್ಯಾಯ ದೊರಬೇಕು. ಇದಕ್ಕೆ ಸರ್ಕಾರವೇ ಹೊಣೆ ಆಗಬೇಕು. ಆದರೆ, ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂದು ಮತ್ತೊಮ್ಮೆ ಒತ್ತಿ ಹೇಳಿದರು.

ಮಂಡ್ಯ ಲೋಕಸಭಾ ವ್ಯಾಪ್ತಿಗೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಸೋಮವಾರ ದಿಶಾ ಸಭೆಯಲ್ಲಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಅವರು, ಕೇಂದ್ರದಿಂದಲೂ ಜಿಲ್ಲೆಗೆ ಅನುದಾನ ತರಲು ಅವಕಾಶವಿದೆ. ಅಭಿವೃದ್ಧಿ ‌ವಿಚಾರದಲ್ಲಿ‌ ಮಂಡ್ಯ ‌ನಗರಕ್ಕೆ‌ ಕೊರತೆ ಇದೆ. ಅಧಿಕಾರಿಗಳು ಉತ್ತಮ ಅವಕಾಶ ಬಳಕೆ ಮಾಡಿಕೊಂಡು ಕೆಲಸ ಮಾಡಿ. ನಿವೇಶನ ಹಾಗೂ ಮನೆಗಾಗಿ ಸಾರ್ವಜನಿಕರ ಅಹವಾಲು ಬಂದಿದೆ ಎಂದರು.

ಜೈಲಲ್ಲಿರೋ ದರ್ಶನ್‌ಗೆ ರಾಜಾತಿಥ್ಯ ಕೊಡೋ ವಿಲ್ಸನ್ ಗಾರ್ಡನ್ ನಾಗ ಯಾರು? ಈತನ ಕ್ರೈಂ ಹಿಸ್ಟರಿ ಗೊತ್ತಾ.!

ಇಲ್ಲಿನ ರಾಜಕಾರಣಿಗಳು ರಾಜಕಾರಣ ಮಾಡುತ್ತಾರೆ. ಆದರೆ, ಅಧಿಕಾರಿಗಳು ಜನರಿಗೆ ತೊಂದರೆ ಆಗದಂತೆ ಕೆಲಸ ಮಾಡಿ. ರಾಜಕಾರಣಿಗಳನ್ನ ಮೆಚ್ಚಿಸಲು ಕೆಲಸ ಮಾಡಬೇಡಿ. ಒತ್ತಡಗಳಿಗೆ ಮಣಿಯಬೇಡಿ. ಫಲಾನುಭವಿಗಳಿಗೆ ಸೌಲಭ್ಯ ದೊರೆಯಬೇಕು. ಈ‌ ನಿಟ್ಟಿನಲ್ಲಿ ಅಧಿಕಾರಿಗಳು ‌ಕೆಲಸ ಮಾಡಿ. ಇದರಲ್ಲಿ ರಾಜಕಾರಣ ‌ಮಾಡಲು‌ ಹೋದರೆ ಜನ ಸಾಮಾನ್ಯರ ‌ಮೇಲೆ ಪರಿಣಾಮ ಬೀರುತ್ತದೆ ಎಂದು ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

click me!