ಮುಂದಿನ ಚುನಾವಣೆಯೇ ನನ್ನ ಕೊನೆಯ ಹೋರಾಟ : ಎಚ್‌ಡಿಕೆ

By Suvarna NewsFirst Published Oct 12, 2021, 3:30 PM IST
Highlights
  • ನಾನಾಗಲಿ ದೇವೇಗೌಡರಾಗಲಿ ಯಾರು ಅನ್ಯಾಯ ಮಾಡಿಲ್ಲ - ಎಚ್‌ಡಿಕೆ
  • ನಮ್ಮ ಪಕ್ಷದಲ್ಲಿ ಬೆಳೆದು ಈಗ ಪಕ್ಷ ಸರ್ವನಾಶ ಆಗುತ್ತದೆ ಎನ್ನುತ್ತಾರೆ.  ಎಲ್ಲವನ್ನೂ ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ

ಬೆಂಗಳೂರು (ಅ.12):  ನಾನಾಗಲಿ ದೇವೇಗೌಡರಾಗಲಿ (HD Devegowda) ಯಾರು ಅನ್ಯಾಯ ಮಾಡಿಲ್ಲ. ದೇವೇಗೌಡರು ಎಂದರೆ ಚಿಕ್ಕ ದೇವೇಗೌಡರು ಅಲ್ಲ, ದೊಡ್ಡದೇವೇಗೌಡರು ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ (HD kumaraswamy) ಹೇಳಿದರು.

ಮೈಸೂರಿನಲ್ಲಿಂದು ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಜಿ.ಟಿ.ದೇವೇಗೌಡರ (GT Devegowda) ಕಾಲು ಎಳೆದಿದ್ದು, ನಮ್ಮ ಪಕ್ಷದಲ್ಲಿ ಬೆಳೆದು ಈಗ ಪಕ್ಷ ಸರ್ವನಾಶ ಆಗುತ್ತದೆ ಎನ್ನುತ್ತಾರೆ.  ಎಲ್ಲವನ್ನೂ ತಾಯಿ ಚಾಮುಂಡೇಶ್ವರಿ (Chamundeswari) ನೋಡಿಕೊಳ್ಳುತ್ತಾಳೆ ಎಂದರು.

ನಾನು ಮುಂದಿನ ಚುನಾವಣೆಯಲ್ಲಿ (Election) ಹೋರಾಟ ಮಾಡುತ್ತೇನೆ.  ಅದೇ ನನ್ನ ಕೊನೆಯ ಹೋರಾಟ. ನಾನು ಅಧಿಕಾರ ಅನುಭವಿಸಲು ಮುಖ್ಯಮಂತ್ರಿ ಆಗಿಲ್ಲ.  ಜನರ ಕಷ್ಟಗಳನ್ನು ಬಗೆಹರಿಸಲು ಹೋರಾಟ ಮಾಡುತ್ತೇನೆ. ನನ್ನ ಐದು ಯೋಜನೆ ಮೂಲಕ ಜನರ ಕಷ್ಟಗಳನ್ನು ಬಗೆಹರಿಸುತ್ತೇನೆ ಎಂದರು. 

Kashmir| ಕಾಶ್ಮೀರ ಹಾಳು ಮಾಡ್ತಿದೆ ಆರೆಸ್ಸೆಸ್‌, ಬಿಜೆಪಿ: ಕುಮಾರಸ್ವಾಮಿ

ನನಗೆ ಮುಂದಿನ ಬಾರಿ ಸ್ವಂತ್ರವಾಗಿ ಅಧಿಕಾರಕ್ಕೆ ಬರಲು ಶಕ್ತಿ ಕೊಡಿ. ಚಾಮುಂಡೇಶ್ವರಿ ಕ್ಷೇತ್ರದಿಂದ ನಾನು ಬೇಡಿಕೊಳ್ಳುತ್ತಿದ್ದೇನೆ. ಜನವರಿಯಿಂದ‌ ರಾಜ್ಯದ ಎಲ್ಲಾ ಹಳ್ಳಿಗಳಿಗೂ‌ ಹೋಗುತ್ತೇನೆ. ನನ್ನ ಪಂಚರತ್ನ ಯೋಜನೆಗಳ ಬಗ್ಗೆ ಜನರಲ್ಲಿ ಹೇಳುತ್ತೇನೆ. ಮನೆಗೆ ಒಬ್ಬರಿಗೆ ಉದ್ಯೋಗ ನೀಡುವುದು. ಎಲ್ಲರಿಗೂ ಸೂರು ನೀಡುತ್ತೇನೆ. ಉಚಿತವಾಗಿ ಉತ್ತಮ ಶಿಕ್ಷಣ (Education). ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಲಾಗುತ್ತದೆ. ರೈತರು ಸುಸ್ಥಿರವಾಗಿ ಜೀವನ ಕಟ್ಟಿಕೊಳ್ಳುವ ಯೋಜನೆ ಇದೆ ಎಂದರು. 

ಸಿದ್ದರಾಮಯ್ಯ ಯಾವ ದೊಣ್ಣೆ ನಾಯಕ: ಕುಮಾರಸ್ವಾಮಿ

 ಐದು ವರ್ಷದ ಬಿಜೆಪಿ (BJP) ಕಾಂಗ್ರೆಸ್ (Congress) ಸರ್ಕಾರವನ್ನು ನೀವು ನೋಡಿದ್ದೀರಿ. ದುಡ್ಡು ಹೊಡೆದು ಚುನಾವಣೆಯ ವೇಳೆ ದುಡ್ಡು ಕೊಟ್ಟು ಓಟು ಹಾಕಿಸಿಕೊಳ್ಳುತ್ತಾರೆ.  ಈಗ ಪೆಟ್ರೋಲ್ (Petrol) ಸೇರಿದಂತೆ ಎಲ್ಲವೂ ದುಬಾರಿಯಾಗಿದೆ. ಹೀಗಾಗಿ ನನಗೂ ಅವಕಾಶ ನೀಡಿ. ಸ್ವತಂತ್ರವಾಗಿ ಅಧಿಕಾರ ಬರಲು ಆಶೀರ್ವಾದ ಮಾಡಿ. ನಾನು ನನ್ನ ಐದು ಯೋಜನೆ ಕೊಡಲಿಲ್ಲ ಎಂದರೆ ಯಾವತ್ತು ನನಗೆ ಮತ ನೀಡಿ ಎನ್ನಲ್ಲ ಎಂದರು. 
 
ನಾನು ಆ ಭಾಗ್ಯ ಕೊಡ್ತಿನಿ ಈ ಭಾಗ್ಯ ಕೊಡ್ತಿನಿ ಅಂತ ಹೇಳಲ್ಲ. ಪುಕ್ಕಟೆ ಅಕ್ಕಿ ಕೊಟ್ಟು ನಾನೇಕೆ ನಿಮ್ಮನ್ನು ಭಿಕ್ಷುಕರನ್ನಾಗಿ ಮಾಡಲಿ. ನಾನು ನಿಮ್ಮನ್ನ ಸ್ವಾವಲಂಬಿಗಳನ್ನಾಗಿ ಮಾಡಬೇಕು. ಯಾರೋ ಹೇಳುವಂತೆ ನಾನು 7-10ಕೆಜಿ ಅಕ್ಕಿ ಕೊಡ್ತೀನಿ ಅಂತ ಹೇಳಲ್ಲ. ನನ್ನ ಪಂಚರತ್ನ ಯೋಜನೆಗಳ ಮೂಲಕ ಈ ಕಾರ್ಯ ಮಾಡುತ್ತೇನೆ. ಜನರನ್ನ ಸ್ವಾಭಿಮಾನಿಗಳನ್ನಾಗಿ ಮಾಡುತ್ತೇನೆ ಎಂದು ಈ ವೇಳೆ ಸಿದ್ದರಾಮಯ್ಯಗೆ (Siddaramaiah) ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದರು. 
 
ನಿನ್ನೇ ಐದು ಜನ ಸೈನಿಕರು (Soldier) ಉಗ್ರರದಾಳಿಗೆ ಬಲಿಯಾಗಿದ್ದಾರೆ. ಇದು ಪ್ರಧಾನಿ ಮೋದಿ (PM Modi) ಅವರು ನೀಡುತ್ತಿರುವ ಕೊಡುಗೆ. ದೇವೇಗೌಡರು ಪ್ರಧಾನಿಯಾಗಿದ್ದಾಗ  ಯಾವುದೇ ಸಾವು ನೋವು ಸಂಭವಿಸಿರಲಿಲ್ಲ. ದೇವೇಗೌಡರು ಹಳ್ಳಿಯಿಂದ ಬೆಳೆದು ಬಂದ ನಾಯಕ. ಇದು ದೇವೇಗೌಡರ ಕೊಡುಗೆ ಎಂದು ಪ್ರಧಾನಿ ಮೋದಿ ವಿರುದ್ಧವೂ ಅಸಮಾಧಾನ ಹೊರಹಾಕಿದರು. 

click me!