ಸಿದ್ದರಾಮಯ್ಯ ಸರ್ಕಾರದಿಂದ ರೈತರಿಗೆ ಅನ್ಯಾಯ ಆಗುವುದಿಲ್ಲ: ಸಚಿವ ಮಹದೇವಪ್ಪ

By Kannadaprabha News  |  First Published Dec 6, 2023, 10:23 PM IST

ನಮ್ಮ ನಾಯಕ ಸಿದ್ದರಾಮಯ್ಯನವರು ರೈತಪರ ಸಂಘಟನೆಗಳಲ್ಲಿ ಕೆಲಸ ಮಾಡಿ ಇವತ್ತು ಮುಖ್ಯಮಂತ್ರಿ ಆಗಿದ್ದಾರೆ. ಸಿದ್ದರಾಮಯ್ಯನವರಿಂದ ಮತ್ತು ಅವರ ಸರ್ಕಾರದಿಂದ ರೈತರಿಗೆ ಯಾವತ್ತೂ ಅನ್ಯಾಯ ಆಗುವುದಿಲ್ಲ ಎಂದು ಸಚಿವ ಎಚ್‌.ಸಿ.ಮಹದೇವಪ್ಪ ಹೇಳಿದರು. 
 


ಬೆಳಗಾವಿ (ಡಿ.06): ನಮ್ಮ ನಾಯಕ ಸಿದ್ದರಾಮಯ್ಯನವರು ರೈತಪರ ಸಂಘಟನೆಗಳಲ್ಲಿ ಕೆಲಸ ಮಾಡಿ ಇವತ್ತು ಮುಖ್ಯಮಂತ್ರಿ ಆಗಿದ್ದಾರೆ. ಸಿದ್ದರಾಮಯ್ಯನವರಿಂದ ಮತ್ತು ಅವರ ಸರ್ಕಾರದಿಂದ ರೈತರಿಗೆ ಯಾವತ್ತೂ ಅನ್ಯಾಯ ಆಗುವುದಿಲ್ಲ ಎಂದು ಸಚಿವ ಎಚ್‌.ಸಿ.ಮಹದೇವಪ್ಪ ಹೇಳಿದರು. ಇಲ್ಲಿನ ಸುವರ್ಣಸೌಧ ಎದುರು ಸೋಮವಾರ ನಡೆಯುತ್ತಿರುವ ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ ಮಾತನಾಡಿದ ಅವರು, ಭಾರತದ ಅರ್ಥಿಕತೆಯ ಬೆನ್ನಲಬೆ ಕೃಷಿ. ಹಾಗಾಗಿ ನಮ್ಮ ಸರ್ಕಾರ ಯಾವತ್ತು ರೈತರ ಪರ ಇರುತ್ತೆ. 

ರೈತರಿಗೆ ಸಮಸ್ಯೆ ಉದ್ಭವ ಆದಾಗ ಸರ್ಕಾರ ರೈತರ ನೆರವಿಗೆ ಬರುವುದು ಆದ್ಯ ಕರ್ತವ್ಯವಾಗಿರುತ್ತದೆ ಮತ್ತು ನಮ್ಮ ಜವಾಬ್ದಾರಿಯಾಗಿದೆ ಎಂದರು. ನಿಮ್ಮ ಬೇಡಿಕೆಗಳನ್ನ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಲುಪಿಸುತ್ತೇನೆ. ಹಾಲಿನ ದರ ಮತ್ತು ವಿದ್ಯುತ್ ಬಗ್ಗೆ ನಾವು ಚರ್ಚೆ ಮಾಡಿ ಪರಿಹಾರ ನೀಡುವ ಕೆಲಸ ಮಾಡುತ್ತೇವೆ. ನಾವು ರೈತರ ಜೊತೆ ಇದ್ದೇವೆ. ರೈತರಿಗೆ ಮಾರಕವಾಗುವ ಕಾಯ್ದೆಗಳನ್ನು ನಾವು ಖಂಡಿಸುತ್ತೇವೆ. ಕೊಬ್ಬರಿ ಮತ್ತು ಅರಿಶಿನ ಬೆಲೆ ಕುರಿತಾಗಿ ರೈತರ ಜೊತೆ ಚರ್ಚೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

Latest Videos

undefined

ಬಿಜೆಪಿಯವರಿಗೆ ಏಕೆ ಇಷ್ಟೊಂದು ಗಾಬರಿಯಾಗುತ್ತಿದೆ: ಸಚಿವ ದಿನೇಶ್‌ ಗುಂಡೂರಾವ್ ಪ್ರಶ್ನೆ

ವೈಜ್ಞಾನಿಕ ಶಿಕ್ಷಣದಿಂದ ದೇಶದ ಉದ್ಧಾರ: ವೈಚಾರಿಕತೆ ಮತ್ತು ವೈಜ್ಞಾನಿಕತೆಯಿಂದ ಕೂಡಿದ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ದೇಶದ ಉದ್ಧಾರ ಸಾಧ್ಯ ಎಂದು ಸಮಾಜ ಕಲ್ಯಾಣ ಸಚಿವ ಡಾ। ಎಚ್‌.ಸಿ.ಮಹದೇವಪ್ಪ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆ ಭವನದಲ್ಲಿ ಆಯೋಜಿಸಿದ್ದ ಡಾ। ಬಿ.ಆರ್‌.ಅಂಬೇಡ್ಕರ್‌ ಅವರ 132ನೇ ಜಯಂತೋತ್ಸವ ಹಾಗೂ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಯೂರೋಪಿನ ದೇಶಗಳಲ್ಲಿ ವೈಜ್ಞಾನಿಕ ಮತ್ತು ವೈಚಾರಿಕತೆಯ ಶಿಕ್ಷಣ ವ್ಯವಸ್ಥೆ ಇರುವುದರಿಂದಲೇ ಅಭಿವೃದ್ಧಿ ಸಾಧಿಸಿವೆ. 

ಬಿಜೆಪಿ ಗೆಲುವಿಗೆ ಮೋದಿ ಕೊಟ್ಟ ಹಣವೇ ಕಾರಣ: ಶಾಸಕ ಕೆ.ಎಂ.ಉದಯ್ ಆರೋಪ

ಶಿಕ್ಷಣದಿಂದ ಮಾತ್ರ ಅಸಮಾನತೆ ತೆಗೆದು ಹಾಕಿ ಸಮಸಮಾಜ ಹುಟ್ಟು ಹಾಕಲು ಸಾಧ್ಯವಾಗುತ್ತದೆ. ಅಧ್ಯಯನ ಶೀಲತೆಯೊಂದೇ ಸಮಾಜವನ್ನು ಸರಿದಾರಿಗೆ ತರುತ್ತದೆ ಎಂದರು. ಸಂವಿಧಾನದ ಆಶಯಗಳು ಜಾರಿಯಾಗಲು ಬದ್ಧತೆಯ ಜನರು ಅಧಿಕಾರಕ್ಕೆ ಬರಬೇಕು. ಆದರೆ, ಸಂವಿಧಾನದ ಆಶಯಗಳ ವಿರೋಧಿಗಳೇ ಅಧಿಕಾರದ ಕುರ್ಚಿಯಲ್ಲಿ ಕುಳಿತಿದ್ದಾರೆ. ಅಂತಹವರಿಂದ ಸಂವಿಧಾನದ ಉಳಿವು ಮತ್ತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಪ್ರತಿಯೊಬ್ಬರು ಸಂವಿಧಾನದ ಆಶಯಗಳನ್ನು ಅರಿತು ಈಡೇರಿಸುವ ಮೂಲಕ ಸಮಸಮಾಜದ ನಿರ್ಮಾಣದ ಮೂಲಕ ದೇಶಾಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.

click me!