ಸಿಎಂ ಸಿದ್ದರಾಮಯ್ಯ ಅವರಿಗೆ ಬಹಳ ಅನುಭವವಿದೆ: ಬಿ.ಕೆ. ಹರಿಪ್ರಸಾದ್‌ ವ್ಯಂಗ್ಯ

By Kannadaprabha News  |  First Published Dec 6, 2023, 9:23 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಳ ಅನುಭವವಿದೆ. ಈ ಕುರಿತು ಅವರಿಗೆ ಹೆಚ್ಚಿನ ಮಾಹಿತಿ ಇರುತ್ತೆ, ಅವರನ್ನು ಕೇಳುವುದು ಒಳ್ಳೆಯದು. ಈ ಕುರಿತು ನಾನು ಉತ್ತರಿಸುವುದಿಲ್ಲ ಎಂದು ವಿಪ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದರು.
 


ಹುಬ್ಬಳ್ಳಿ (ಡಿ.06): ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ವಕ್ತಾರನಲ್ಲ. ಹೆಚ್ಚಿನ ಮಾಹಿತಿ ಅವರಿಗೆ ಗೊತ್ತು. ಹಾಗಾಗಿ ನೀವು ಅವರನ್ನೇ ಕೇಳಿ ಎಂದು ವಿಪ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದರು. ಇಲ್ಲಿ ಮುಸ್ಲಿಂ ಸಮುದಾಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸುವ ಮೂಲಕ ಮುಖ್ಯಮಂತ್ರಿಗಳ ಮೇಲಿರುವ ಅಸಮಾಧಾನ ಹೊರಹಾಕಿದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಳ ಅನುಭವವಿದೆ. ಈ ಕುರಿತು ಅವರಿಗೆ ಹೆಚ್ಚಿನ ಮಾಹಿತಿ ಇರುತ್ತೆ, ಅವರನ್ನು ಕೇಳುವುದು ಒಳ್ಳೆಯದು. ಈ ಕುರಿತು ನಾನು ಉತ್ತರಿಸುವುದಿಲ್ಲ. ನಮ್ಮ ಸಮುದಾಯಕ್ಕೆ ಈಗಷ್ಟೇ ಅಲ್ಲ ಮೊದಲಿನಿಂದಲೂ ಅನ್ಯಾಯವಾಗುತ್ತಲೇ ಬಂದಿದೆ. ಪಕ್ಷದಲ್ಲಿ ಎಲ್ಲವೂ ಚೆನ್ನಾಗಿದೆ, ನಾನೂ ಚೆನ್ನಾಗಿದ್ದೇನೆ ಎನ್ನುತ್ತಾ ಮುಂದೆ ಸಾಗಿದರು.

Tap to resize

Latest Videos

ಬಿಜೆಪಿಯವರಿಗೆ ಏಕೆ ಇಷ್ಟೊಂದು ಗಾಬರಿಯಾಗುತ್ತಿದೆ: ಸಚಿವ ದಿನೇಶ್‌ ಗುಂಡೂರಾವ್ ಪ್ರಶ್ನೆ

ಮರಿತಿಬ್ಬೇಗೌಡ ಜಾತ್ಯಾತೀತ ಗುರು: ರಾಷ್ಟ್ರ ರಾಜಕೀಯದಲ್ಲಿ ಇದ್ದ ತಾವು ವಿಧಾನ ಪರಿಷತ್‌ ಸದಸ್ಯನಾಗಿ ಬಂದಾಗ ತಮಗೆ ಜಾತ್ಯಾತೀತ ಮನೋಭಾವದ ವ್ಯಕ್ತಿಯಾಗಿ ಕಂಡ 2-3 ವ್ಯಕ್ತಿಗಳ ಪೈಕಿ ಮರಿತಿಬ್ಬೇಗೌಡ ಅವರೂ ಒಬ್ಬರು. ನಿಜವಾಗಿಯೂ ಅವರು ನನ್ನ ‘ಜಾತ್ಯಾತೀತ ಗುರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದವರು ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌. 

ಈ ಹಿಂದೆ ಪರಿಷತ್ತಿನಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಕಾರಣಾಂತರದಿಂದ ಧನ್ಯವಾದ ಹೇಳಲು ಆಗದ ಕಾರಣ ಮಾತನಾಡಲು ಅವಕಾಶ ನೀಡಬೇಕೆಂಬ ಮನವಿಗೆ ಸಭಾಪತಿ ಬಸವರಾಜ ಹೊರಟ್ಟಿ ಅನುಮತಿ ನೀಡಿದರು, ಈ ವೇಳೆ ಮಾತನಾಡಿದ ಅವರು, ಪರಿಷತ್‌ ಸದಸ್ಯನಾಗಿ ಬಂದ ಸಂದರ್ಭದಲ್ಲಿ ಹಲವು ನಿರೀಕ್ಷೆ ಇಟ್ಟುಕೊಂಡು ಬಂದಿದ್ದೆ. ಆದರೆ ಸ್ವಲ್ಪ ನಿರಾಶೆಯಾಯಿತು. ಬಿಜೆಪಿ ತತ್ವ, ಸಿದ್ಧಾಂತಕ್ಕೆ ವಿರುದ್ಧವಾದ ತತ್ವವನ್ನು ನಾನು ಹೊಂದಿದ್ದೇನೆ. 

ಅಕ್ಕಿ ಹಗರಣದ ತನಿಖೆ ಮುಗಿಯುವವರೆಗೆ ಚುನಾವಣೆ ಬೇಡ: ಎಸ್.ಗಂಗಾಧರ್

ಹೀಗಿರುವಾಗ ಸದನದಲ್ಲಿ ಜಾತ್ಯಾತೀತ ಮನೋಭಾವದ ವ್ಯಕ್ತಿಯಾಗಿ ತಮಗೆ ಕಂಡ ಏಕೈಕ ವ್ಯಕ್ತಿ ಮರಿತಿಬ್ಬೇಗೌಡ ಅವರು ಮಾತ್ರ. ನನಗೆ ಅವರೇ ಜಾತ್ಯಾತೀತ ಗುರು ಎಂದರು. ಈ ಮಾತಿಗೆ ಸಭಾಪತಿ ಹೊರಟ್ಟಿ ಅವರು ಈ ಮಾತು ಸಹ ‘ವಂಡರ್‌’ ಆಗಿದೆ ಎಂದು ನಗುತ್ತಾ ಹೇಳಿದರು. ಮಾತು ಮುಂದುವರೆಸಿದ ಹರಿಪ್ರಸಾದ್‌ ಅವರು, ಮರಿತಿಬ್ಬೇಗೌಡ ಅವರು ಒಬ್ಬ ಮುತ್ಸದ್ದಿ, ತಮಗೆ ಅನಿಸಿದ್ದನ್ನು ಸರಿಯಾಗಿ ಸದನದಲ್ಲಿ ಹೇಳುವ ಏಕೈಕ ವ್ಯಕ್ತಿ ಅವರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

click me!