
ದೇವರಹಿಪ್ಪರಗಿ (ಮೇ.23: ದೇವರಿಗೆ ಹರಕೆ ಹೊರುವುದು ಸಾಮಾನ್ಯ. ಆದರೆ, ಇಲ್ಲಿ ಇಬ್ಬರು ಅಭಿಮಾನಿಗಳು, ರಾಜುಗೌಡ ಪಾಟೀಲ ಅವರ ಶಾಸಕರಾಗಲಿ ಎಂದು ಬರೋಬ್ಬರಿ ನಾಲ್ಕು ವರ್ಷ ಬರಿಗಾಲಲ್ಲಿ ತಿರುಗಿ ಹುಲುಜಂತಿಗೆ ಪಾದಯಾತ್ರೆ ಕೈಗೊಂಡು ವಿಶೇಷವಾದ ಹರಕೆ ತೀರಿಸಿ ಅಭಿಮಾನ ಮೆರೆದಿದ್ದಾರೆ.
ತಾಲೂಕಿನ ಯಲಗೋಡ ಗ್ರಾಮದ ಅಲ್ಲಿಸಾಬ… ಬಂಟನೂರ ಹಾಗೂ ಸೋಹೇಲ… ಬಾಗವಾನ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ(Rajugowda patil MLA) ಅವರ ಅಪ್ಪಟ ಅಭಿಮಾನಿಗಳಾಗಿದ್ದು, ನಾಲ್ಕು ವರ್ಷ ಬರಿಗಾಲಲ್ಲಿಯೇ ತಮ್ಮ ನಿತ್ಯ ಕಾಯಕ ನೆರವೇರಿಸುತ್ತಾ ರಾಜುಗೌಡರು ಶಾಸಕರಾಗಲಿ ಎಂದು ಹರಕೆ ಹೊತ್ತಿದ್ದರು. ಅವರ ಹರಕೆಯಂತೆ ಈ ಬಾರಿ ರಾಜುಗೌಡರು ಶಾಸಕರಾಗಿ ಆಯ್ಕೆಯಾದ ಕಾರಣ ಅವರು ಪಾತಯಾತ್ರೆಯ ಮೂಲಕ ಮಾಳಿಂಗರಾಯನ ದರ್ಶನ ಪಡೆದು ಹರಕೆ ತೀರಿಸಿದ್ದಾರೆ.
ಕಾಂಗ್ರೆಸ್‌ಗೆ 136 ಸೀಟು: ಉರುಳು ಸೇವೆ ನಡೆಸಿ ಹರಕೆ ಪೂರೈಸಿದ 'ಕೈ' ನಾಯಕ ಕೃಷ್ಣ ಮೂರ್ತಿ
ಶಾಸಕರು ವಿಶೇಷ ಅಧಿವೇಶನದಲ್ಲಿ ಭಾಗವಹಿಸಿದ ಕಾರಣ ಅವರ ಪರವಾಗಿ ಜೆಡಿಎಸ್ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ವೀರೇಶ ಕುದುರಿ ಅವರು ಅಭಿಮಾನಿಗಳನ್ನು ಸನ್ಮಾನಿಸಿ, ಗೌರವಿಸಿದರು. ನಂತರ ಮಾತನಾಡಿದ ಅವರು, ಈ ಬಾರಿ ಪಕ್ಷಾತೀತವಾಗಿ, ಜಾತ್ಯತೀತವಾಗಿ ರಾಜುಗೌಡರನ್ನು ಬೆಂಬಲಿಸಿದ ಎಲ್ಲ ಮತದಾರರಿಗೆ ಧನ್ಯವಾದಗಳು ತಿಳಿಸಿದರು.
ಮುಂಬರುವ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ತಮ್ಮದೇ ಆದ ಕನಸುಗಳನ್ನು ಕಂಡಿದ್ದಾರೆ. ನಾವೆಲ್ಲರೂ ಅವರಿಗೆ ಸಹಕರಿಸಿ ಮಾದರಿ ಕ್ಷೇತ್ರ ನಿರ್ಮಾಣಕ್ಕೆ ಎಲ್ಲರ ಬೆಂಬಲ ಬೇಕು ಎಂದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಸಿದ್ದರಾಮಯ್ಯ ಸಿಎಂ ಆಗಲೆಂದು ವಿಶೇಷ ಪೂಜೆ: 1,100 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ ಅಭಿಮಾನಿಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.