
ಬೆಂಗಳೂರು (ಮೇ 23): ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿದ್ದರೂ ಮುಖ್ಯಮಂತ್ರಿ ಹುದ್ದೆಗಾಗಿ ಭಾರಿ ಪೈಪೋಟಿ ನಡೆದಿದ್ದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೆ 30:30 ಸೂತ್ರವನ್ನು ಅನ್ವಯಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಮುಂದಿನ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಭವಿಷ್ಯ ನುಡಿಯಲಾಗಿದೆ.
ಈ ರೀತಿ ಭವಿಷ್ಯ ನಡುದಿವರು ಬೇರ್ಯಾರೂ ಅಲ್ಲ. ಸ್ವತಃ ಬಿಜೆಪಿ ಹೈಮಾಂಡ್. ಕಾಂಗ್ರೆಸ್ ಸರ್ಕಾರದ ಕ್ಯಾಬಿನೆಟ್ ಸಚಿವ ಎಂ.ಬಿ. ಪಾಟೀಲ್ ಅವರು ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಎಂಬರ್ಥದಲ್ಲಿ ಯಾರಿಗೂ ಪವರ್ ಶೇರಿಂಗ್ ಇಲ್ಲವೆಂದು ಹೇಳಿದ್ದರು. ಹೀಗಾಗಿ, ಮಾಧ್ಯಮಗಳಲ್ಲಿಯೂ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಗುವುದಿಲ್ಲವೆಂದು ಸುದ್ದು ಪ್ರಸಾರ ಮಾಡಲಾಗುತ್ತಿತ್ತು. ಆದರೆ, ಇಮದು ಉಲ್ಟಾ ಹೊಡೆದಿರುವ ಎಂ.ಬಿ. ಪಾಟೀಲ್‌ಗ ಅವರು ನಾನು ಈ ಅರ್ಥದಲ್ಲಿ ಹೇಳಿಲ್ಲ. ವೇಣುಗೋಪಾಲ್ ಅವರು ಹೇಳಿದ ಅರ್ಥದಲ್ಲಿ ಪವರ್ ಶೇರಿಂಗ್ ಇಲ್ಲವೆಂದು ತಿಳಿಸಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ.
ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ, ಅಧಿಕಾರ ಹಂಚಿಕೆ ಮಾತುಕತೆ ನಡೆದೇ ಇಲ್ಲ
ಡಿ.ಕೆ. ಶಿವಕುಮಾರ್‌ಗೆ ಎಚ್ಚೆರಿಕೆ ರವಾನೆ: ಈ ಕುರಿತು ಟ್ವೀಟ್ ಮೂಲಕ ಟಾಂಗ್ ನೀಡಿರುವ ಬಿಜೆಪಿ "ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುವುದು ಇಲ್ಲ, ಅವರನ್ನು ಆಗಲು ಸಿದ್ದರಾಮ್ಯ ಅವರು ಬಿಡುವುದು ಇಲ್ಲ. ಎಂ.ಬಿ. ಪಾಟೀಲ್ ಅವರು ಈ ಹೇಳಿಕೆಯ ಮೂಲಕ ಡಿ.ಕೆ. ಶಿವಕುಮಾರ ಅವರಿಗೆ ನೇರವಾದ ಎಚ್ಚರಿಕೆಯನ್ನು ರವಾನಿಸಿದ್ದಾರಷ್ಟೇ! ಅದೇನೆ ಇದ್ದರೂ ಬಹುಮತ ದೊರಕಿದ ನಂತರದ ಈವರೆಗಿನ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ, ಈ ಸರ್ಕಾರ ಸುಸ್ತಿರವಾಗಿರಲಿದೆ ಎಂಬ ಯಾವ ಲಕ್ಷಣವೂ ಕಾಣುತ್ತಿಲ್ಲ, ಗ್ಯಾರಂಟಿಯೂ ಇಲ್ಲ" ಎಂದು ಟ್ವೀಟ್ ಮಾಡಲಾಗಿದೆ.
ಹೈಕಮಾಂಡ್‌ಗೆ ಕಪ್ಪ ಕೊಡಲು ಸರ್ಕಾರ ರಚನೆ: ಇನ್ನು "ದೆಹಲಿಯ ತಮ್ಮ ಹೈಕಮಾಂಡಿಗೆ ಕಪ್ಪ ಪೂರೈಸಬೇಕಾದ ಏಕೈಕ ಮಾನದಂಡದಲ್ಲಿ ಈ ಎಟಿಎಂ ಸರ್ಕಾರ (ATMSarkara) ರಚನೆಯಾಗಿರುವುದು ಮತ್ತು ಅದಷ್ಟೇ ಇದರ ಆದ್ಯತೆಯಾಗಿರುವುದು ರಾಜ್ಯದ ದುರಂತ!" ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದೆ.
ಜಲಸಂಪನ್ಮೂಲ ಖಾತೆಗಾಗಿಯೂ ವಾರ್ ಆರಂಭ: ಈಗಾಗಲೇ ದೆಹಲಿಯಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಸಿದ್ದರಾಮಯ್ಯ ಅವರೊಂದಿಗೆ ಜಂಗೀ ಕುಸ್ತಿ ನಡೆಸಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಈಗ ಲಿಂಗಾಯತ ನಾಯಕ ಎಂ.ಬಿ. ಪಾಟೀಲ್ ಜಲಸಂಪನ್ಮೂಲ ಖಾತೆಯನ್ನೇ ನೀಡಬೇಕು ಎಂದು ಸವಾಲೊಡ್ಡುತ್ತಿದ್ದಾರೆ. ಜಲಸಂಪನ್ಮೂಲ ಖಾತೆಗಾಗಿ ಆರಂಭವಾದ ಆಂತರಿಕ ಯುದ್ಧ ಈಗ ಬಹಿರಂಗಗೊಂಡಿದ್ದು, ದೆಹಲಿಯ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಖಾತೆ ಹಂಚಿಕೆ ಫೈಟ್, ಪವರ್ ಶೇರಿಂಗ್ ಅಸ್ತ್ರದ ಮೂಲಕ ಹೊರ ಬಂತಾ ಎನ್ನುವುದು ಕೂಡ ಅನುಮಾನವಾಗಿದೆ.
ಮೇಕೆದಾಟು ಯೋಜನೆಗಾಗಿ ಡಿಕೆಶಿ ಪಟ್ಟು: ಜಲಸಂಪನ್ಮೂಲ ಖಾತೆಗಾಗಿ ಉಪಮುಖ್ಯಮಂತ್ರಿ ಡಿಕೆಶಿ ಹಾಗೂ ಸಚಿವ ಎಂಬಿ ಪಾಟೀಲ್ ನಡುವೆ ಜಟಾಪಟಿ ಶುರುವಾಗಿದೆ. ನೀರಾವರಿ ಯೋಜನೆಗಳು ಹೆಚ್ಚು ಉತ್ತರ ಕರ್ನಾಟಕ ಭಾಗದಲ್ಲಿವೆ. ಈ ಹಿಂದೆ ಖಾತೆ ನಿಭಾಯಿಸಿದ್ದ ಅನುಭವ ಇದೆ ಎಂದು ಎಂಪಿ ಪಾಟೀಲ್ ಪಟ್ಟು ಹಿಡಿದಿದ್ದಾರೆ. ಆದರೆ, ರಾಜ್ಯದಲ್ಲಿ ಮೇಕೆದಾಟು ಯೋಜನೆ ಜಾರಿ ಮಾಡಬೇಕು. ಹಾಗಾಗಿ ಜಲಸಂಪನ್ಮೂಲ ಇಲಾಖೆ ಬೇಕು ಎಂದು ಡಿಕೆಶಿವಕುಮಾರ್ ಕೂಡ ಪಟ್ಟು ಸಡಿಲಿಸದೇ ಕುಳಿತಿದ್ದಾರೆ. ಈ ಉಭಯ ನಾಯಕರ ಪಟ್ಟು, ಹೈಕಮಾಂಡ್‌ಗೆ ಇಕ್ಕಟ್ಟು ತಂದಿಟ್ಟಿದೆ.
ದೊಡ್ಡ ಡೀಲಿಂಗ್‌ಮಾಸ್ಟರ್ ಎಂದ ಟ್ರೋಲರ್ಸ್‌ಗೆ ಚಳಿ ಬಿಡಿಸಿದ ಸಂಸದೆ ಸುಮಲತಾ ಅಂಬರೀಶ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.