ಕನಕಪುರದಲ್ಲಿ ನಕಲಿ ಮತದಾನದ ಹಾವಳಿ ಹೆಚ್ಚು: ಡಿಕೆಶಿ ವಿರುದ್ಧ ಆರ್. ಅಶೋಕ್‌ ಆರೋಪ

By Sathish Kumar KH  |  First Published Apr 23, 2023, 2:10 PM IST

ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಮತದಾನದ (Proxy Voting) ಹಾವಳಿ ಹೆಚ್ಚಾಗಿದೆ. ದೌರ್ಜನ್ಯ ಮಾಡಿ ಮತಗಳನ್ನು ಪಡೆಯಲಾಗುತ್ತಿದೆ ಎಂದು ಸಚಿವ ಆರ್. ಅಶೋಕ್‌ ಆರೋಪಿಸಿದ್ದಾರೆ. 


ರಾಮನಗರ (ಏ.23): ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಸಂದರ್ಭದಲ್ಲಿ ರಾತ್ರೋ ರಾತ್ರಿ ಕರೆಂಟ್ ತೆಗೆಸಲಾಗುತ್ತದೆ. ಜೊತೆಗೆ, ಮತದಾನದ ವೇಳೆ ಪ್ರಾಕ್ಸಿ ವೋಟಿಂಗ್ (ಮತದಾರರ ಬದಲಗಾಗಿ ಬೇರೊಬ್ಬ ವ್ಯಕ್ತಿಯಿಂದ ಮತ ಚಲಾವಣೆ) ಹಾವಳಿ ಹೆಚ್ಚಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಸಚಿವ ಆರ್. ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ಕನಕಪುರ ವಿಧಾನಸಭಾ ಕ್ಷೇತ್ರದ ಟಿ.ಬೇಕುಪ್ಪೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯವನ್ನು ಕೈಗೊಂಡಿರುವ ಕಂದಾಯ ಸಚಿವ ಆರ್. ಅಶೋಕ್‌ ಮಾಧ್ಯಮಗಳೊಂದಿಗೆ ಮಾತನಾಡಿದರು. ಇಲ್ಲಿ ನಾಮಪತ್ರ ಸಲ್ಲಿಸೋದಷ್ಟೇ ಜನ ಗೆಲ್ಲಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್‌ ಹೇಳುತ್ತಾರೆ. ಆದರೆ, ಗೌರವಕ್ಕಾದರೂ ಮತದಾನ ಕೊಡುವಾಗ ಕೇಳಬೇಕಲ್ವಾ.? ನೇತ್ರದಾನ, ಆನ್ನದಾನ, ವಿದ್ಯಾದಾನದ ರೀತಿಯಲ್ಲಿಯೇ ಪ್ರಜಾಪ್ರಭುತ್ವ ದೇಶದಲ್ಲಿ ಮತದಾನವೂ ಒಂದು ಮಹತ್ವದ ದಾನವಾಗಿದೆ. ಅದು ಮತದಾರರು ಕೊಡುವ ಭಿಕ್ಷೆಯಾಗಿದೆ. ಅದನ್ನ ಬೇಡಿ ಪಡೆಯಬೇಕು. ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಪ್ರಚಾರ ಮಾಡೋದು, ಮಾಡದೇ ಇರೋದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

Tap to resize

Latest Videos

ಚುನಾವಣೆಗೂ ಮುನ್ನವೇ ಜೆಡಿಎಸ್‌ನ ಒಂದು ವಿಕೆಟ್ ಪತನ: ಕುಮಾರಸ್ವಾಮಿಗೆ ಶಾಕ್!

ನಕಲಿ ವೋಟಿಂಗ್‌ ಸಂಖ್ಯೆ ಅಧಿಕ: ಕನಕಪುರದಲ್ಲಿ ನಕಲಿ ಮತದಾನದ (Proxy voting) ಫ್ರಾಕ್ಸಿ ಓಟಿಂಗ್‌ನ ಆತಂಕ ಇದೆ. ಚುನಾವಣಾ ಸಮಯದಲ್ಲಿ ಯಾವಾಗ ಬೇಕೆಂದರೆ ಆಗ ಕರೆಂಟ್ ತೆಗೆಸ್ತಾರೆ. ಇಲ್ಲಿ ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ ಎಂದು ಈಗಾಗಲೇ ಜೆಡಿಎಎಸ್ ಮುಖಂಡರು ಮಾಹಿತಿ ನೀಡಿದ್ದಾರೆ. ನಾವು ಪ್ರಬಲ ಪೈಪೋಟಿ ಕೊಟ್ಟಾಗ ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಎಂತಲೂ ಹೇಳುತ್ತಿದ್ದಾರೆ. ಆದರೆ ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ. ಇಲ್ಲಿನ ಭಯಮುಕ್ತವಾಗಿ ಜನರು ಮತದಾನ ಮಾಡಬಹುದು ಎಂದು ಮನವಿ ಮಾಡಿದರು.

35 ವರ್ಷವಾದರೂ ಮೆಡಿಕಲ್‌ ಕಾಲೇಜು ತಂದಿರಲಿಲ್ಲ: ರಾಜ್ಯದಲ್ಲಿ ಯಾವುದೇ ಭಯ ಮತ್ತು ಆತಂಕ ಇಲ್ಲದೇ ಮತದಾನ ಮಾಡಲು ಅವಕಾಶ ಮಾಡಿಕೊಡುತ್ತಿದ್ದೀವಿ. ಕನಕಪುರಕ್ಕೆ ಕಳೆದ 4 ವರ್ಷದಿಂದ ಸರ್ಕಾರ ಸಾಕಷ್ಟು ಅನುದಾನವನ್ನು ನೀಡಿದೆ. ಇಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಕೂಡ ನಡೆದಿವೆ. ಹಾಗಾಗಿ ಈ ಬಾರಿ ಬಿಜೆಪಿ ಗೆಲ್ಲಿಸಿ ಅಂತ ಮನವಿ ಮಾಡುತ್ತಿದ್ದೇನೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಳೆದ 35ವರ್ಷದಿಂದ ಆಡಳಿತ ಮಾಡಿದ್ದಾರೆ. ಆದರೆ, ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ತರಲು ಇಷ್ಟು ವರ್ಷ ಬೇಕಾ.? ಇವರು ಇಂಧನ ಸಚಿವರಾಗಿದ್ದಾಗಲೇ ಮೆಡಿಕಲ್‌ ಕಾಲೇಜನ್ನು ತರಬಹುದಿತ್ತು, ಆದರೆ ತರಲಿಲ್ಲ. ಇದು ಕ್ಷೇತ್ರದ ಜನರ ಅಭಿವೃದ್ಧಿ ಮಾಡಲು ಇರುವ ನಿರ್ಲಕ್ಷ್ಯ ಎಂದು ದೂರಿದರು.

ವರುಣಾದಲ್ಲಿ ಸೋಮಣ್ಣ ಪ್ರಚಾರಕ್ಕೆ ಯುವಕರಿಂದ ಅಡ್ಡಿ: ಸಿದ್ದರಾಮಯ್ಯ ಪರ ಘೋಷಣೆ

ಈ ಬಾರಿ ಕನಕಪುರದಲ್ಲಿ ಬಿಜೆಪಿಗೆ ಅಧಿಕಾರ ಕೊಡಿ. ಆಮೇಲೆ ನಮ್ಮ ಅಭಿವೃದ್ಧಿ ಕೆಲಸವನ್ನು ನೋಡಿ. ನಾವು ಕನಕಪುರ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ದೌರ್ಜನ್ಯ ‌ಮಾಡಲ್ಲ. ಮತದಾರ ಪ್ರಭುಗಳಲ್ಲಿ ಮತ ನೀಡುವಂತೆ ವಿನಂತಿಯನ್ನು ಮಾಡುತ್ತೇವೆ. ಒಮದು ಅವಕಾಶ  ನೀಡಿ ಅಭಿವೃದ್ಧಿಗೆ ವೇದಿಕೆ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದೇನೆ ಎಂದು ಕಂದಾಯ ಸಚಿವ ಆರ್. ಅಶೋಕ್‌ ಮನವಿ ಮಾಡಿದರು.

ಏಪ್ರಿಲ್‌ 13 ರಿಂದ ಆರಂಭವಾಗಿದ್ದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್‌ 21ರವರೆಗೆ ಪೂರ್ಣಗೊಂಡಿದೆ. ನಾಮಪತ್ರ ಹಿಂಪಡೆಯಲು ನಾಳೆ ಏಪ್ರಿಲ್‌ 24 ಕೊನೆಯ ದಿನವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!