ವರುಣ ಕ್ಷೇತ್ರದಲ್ಲಿ ಗೆಲ್ಲುವ ಬಗ್ಗೆ ನನಗೆ ಯಾವುದೇ ಆತಂಕವಿಲ್ಲ: ಸಿದ್ದರಾಮಯ್ಯ

By Kannadaprabha News  |  First Published Apr 23, 2023, 1:30 PM IST

ಯಾರು ಎಷ್ಟೇ ದ್ವೇಷ ರಾಜಕಾರಣ ಮಾಡಿದರೂ, ವರುಣ ಕ್ಷೇತ್ರದ ಜನ ನನ್ನ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 
 


ಸುತ್ತೂರು/ನಂಜನಗೂಡು (ಏ.23): ವರುಣ ಬಗ್ಗೆ ನನಗೆ ಆತಂಕ ಇದೆ ಎಂಬುದು ಸುಳ್ಳು. ಆದರೆ, ಬಿಜೆಪಿಯವರು ದ್ವೇಷದ ರಾಜಕಾರಣ ಮಾಡಿ, ನನ್ನನ್ನು ಸೋಲಿಸಬೇಕು ಎಂದುಕೊಂಡಿದ್ದಾರೆ. ಯಾರು ಎಷ್ಟೇ ದ್ವೇಷ ರಾಜಕಾರಣ ಮಾಡಿದರೂ, ವರುಣ ಕ್ಷೇತ್ರದ ಜನ ನನ್ನ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವರುಣ ಕ್ಷೇತ್ರದ ಹಲವೆಡೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. 2008ರಲ್ಲಿ 28,000 ಮತದಿಂದ ಗೆದ್ದು ಪ್ರತಿಪಕ್ಷದ ನಾಯಕನಾಗಿದ್ದೆ. 2013ರಲ್ಲಿ 35,000 ಮತಗಳಿಂದ ಗೆದ್ದು ಮುಖ್ಯಮಂತ್ರಿಯಾಗಿದ್ದೆ. ಈ ಬಾರಿ ಒಂದು ಲಕ್ಷ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿ, ಶಕ್ತಿ ತುಂಬಿ. 

ಆಗ ನನಗೆ ಮತ್ತೆ ಅಧಿಕಾರ ಸಿಗಲಿದೆ ಎಂದು ಜನರಿಗೆ ಮನವಿ ಮಾಡಿದರು. ವಸತಿ ಸಚಿವ ವಿ.ಸೋಮಣ್ಣ ಅವರು ವರುಣ ಕ್ಷೇತ್ರದಲ್ಲಿ ಒಂದು ಮನೆಯನ್ನೂ ಕಟ್ಟಿಕೊಟ್ಟಿಲ್ಲ, ಕ್ಷೇತ್ರಕ್ಕೂ ಏನು ಮಾಡಿಲ್ಲ ಎಂದು ಆರೋಪಿಸಿದರು. ಬಿ.ಎಲ್‌.ಸಂತೋಷ್‌ ಸೇರಿದಂತೆ ಯಾರ ಬಗ್ಗೆಯೂ ನನಗೆ ವೈಯಕ್ತಿಕ ದ್ವೇಷವಿಲ್ಲ. ಆದರೆ, ಬಿಜೆಪಿ ಸರ್ಕಾರದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಅಳಿವಿನ ಅಂಚಿನಲ್ಲಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ರಾಜ್ಯದ ಆರ್ಥಿಕತೆ ದಿವಾಳಿಯಾಗಿದೆ. ಹೀಗಾಗಿ, ರಾಜ್ಯ ಉಳಿಯಬೇಕಾದರೆ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದರು.

Tap to resize

Latest Videos

ಆಪರೇಷನ್‌ ಥಿಯೇಟರ್‌ನಿಂದ ಚುನಾವಣಾ ಕಣಕ್ಕೆ ನ್ಯೂರೋಸರ್ಜನ್‌ ಡಾ.ಕ್ರಾಂತಿಕಿರಣ!

ನನಗೆ ಮತ್ತೆ ಅಧಿಕಾರ ಸಿಗಲಿದೆ: ಯಾರು ಎಷ್ಟೇ ದ್ವೇಷದ ರಾಜಕಾರಣ ಮಾಡಿದ್ರು ಸಹ ವರುಣ ಕ್ಷೇತ್ರದ ಜನರ ಪ್ರೀತಿ ಮುಂದೆ ನಗಣ್ಯ ಎಂದು ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶನಿವಾರ ತಾಲೂಕಿನ ಕಾರ್ಯ, ಚಿನ್ನಂಬಳ್ಳಿ, ಹಾಡ್ಯ, ತಗಡೂರು, ದಾಸನೂರು ಗ್ರಾಮಗಳಲ್ಲಿ ತೆರೆದ ವಾಹನದಲ್ಲಿ ಮತ ಪ್ರಚಾರ ನಡೆಸಿ ಅವರು ಮಾತನಾಡಿದರು. 2008 ರಲ್ಲಿ 28,000 ಮತದಿಂದ ಗೆದ್ದು ಪ್ರತಿಪಕ್ಷದ ನಾಯಕನಾಗಿದ್ದೆ. 2013 ರಲ್ಲಿ 35,000 ಮತಗಳಿಂದ ಗೆದ್ದು ಮುಖ್ಯಮಂತ್ರಿಯಾಗಿದ್ದೆ, ಈ ಬಾರಿ ಒಂದು ಲಕ್ಷ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿ ಶಕ್ತಿ ತುಂಬಿದಲ್ಲಿ ನನಗೆ ಮತ್ತೆ ಅಧಿಕಾರ ಸಿಗಲಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ನಮ್ಮ ಕ್ಷೇತ್ರಕ್ಕೆ ಏನು ಮಾಡಿಲ್ಲ, ಸೋಮಣ್ಣ ಉಸ್ತುವಾರಿ ಸಚಿವನಾಗಿದ್ದ ನಮ್ಮ ತಾಲೂಕಿಗೆ ಭೇಟಿ ನೀಡಿಲ್ಲ, ಅವರಿಗೂ ನಮ್ಮ ಕ್ಷೇತಕ್ಕೂ ಸಂಬಂಧ ಇಲ್ಲ, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತೆ, ನಾವು ಅಧಿಕಾರಕ್ಕೆ ಬಂದು ಬಡವರ ಪರವಾಗಿ ಇನ್ನೂ ಹೆಚ್ಚಿನ ಕೆಲಸ ಮಾಡುತ್ತೇವೆ, ಗೃಹಿಣಿಯರಿಗೆ ಮಾಸಿಕ 2 ಸಾವಿರ ರು, ಪ್ರತಿ ಮನೆಗೆ 200 ಯೂನಿಟ್‌ ವಿದ್ಯುತ್‌, 10 ಕೆಜಿ ಉಚಿತ ಅಕ್ಕಿ, ಪದವೀಧರ ನಿರುದ್ಯೋಗಿ ಯುವಕರಿಗೆ ಸಹಾಯ ಧನ ಸೇರಿದಂತೆ 4 ಗ್ಯಾರಂಟಿಗಳನ್ನು ಪಕ್ಷ ನೀಡಿದೆ, ನಾವು ನುಡಿದಂತೆ ನಡೆಯುತ್ತೇವೆ ಎಂದು ಹೇಳಿದರು. ನಿಮ್ಮೆಲ್ಲರ ಉತ್ಸಾಹ ನೋಡಿ, ನನಗೆ ಇನ್ನಷ್ಟುಬಲ ಬಂದಿದೆ. ನಾನು ಇವತ್ತು ಕ್ಷೇತ್ರದಲ್ಲಿ ಪ್ರವಾಸ ಹಾಕಿಕೊಂಡಿರಲಿಲ್ಲ. ಯತೀಂದ್ರ ಬಂದು ಹೋಗಿ ಅಂದ್ರು ಹೀಗಾಗಿ ತಡವಾಗಿ ಬಂದೆ. 

ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ ಗೆದ್ದರೆ ರಾಜ್ಯದಲ್ಲಿ ಸರ್ಕಾರ: ಡಿ.ಕೆ.ಶಿವಕುಮಾರ್‌

ವರುಣ ಕ್ಷೇತ್ರದ ಜನತೆಯ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾಗಿದ್ದೆ, ಕಳೆದ ಬಾರಿ ಡಾ. ಯತೀಂದ್ರನನ್ನು 59 ಸಾವಿರ ಮತಗಳ ಅಂತದಲ್ಲಿ ಗೆಲ್ಲಿಸಿದ್ದೀರಿ, ಈ ಚುನಾವಣೆ ಬಹಳ ಮಹತ್ತರವಾದ ಚುನಾವಣೆ, ನಿಮ್ಮ ಮೇಲೆ ನನಗೆ ನಂಬಿಕೆ ಇದೆ, ಈ ಬಾರಿ ಕೊನೆಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ನನ್ನನ್ನು ಒಂದು ಲಕ್ಷಕ್ಕೂ ಹೆಚ್ಚಿನ ಬಹುಮತದಿಂದ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

click me!