Ramanagara; ಕಾಂಗ್ರೆಸ್‌ನಲ್ಲಿ ಬಣ ರಾಜ​ಕೀಯ ಮತ್ತೊಮ್ಮೆ ಸ್ಫೋಟ!

By Suvarna News  |  First Published Aug 26, 2022, 5:45 PM IST

ಹರೀ​ಸಂದ್ರ ಗ್ರಾಪಂ ಅಧ್ಯ​ಕ್ಷರ ಚುನಾ​ವಣೆಯಲ್ಲಿ ಸದ​ಸ್ಯರ ಪಕ್ಷ ದ್ರೋಹ. ನಾಯ​ಕರೇ ಬೆನ್ನಿಗೆ ನಿಂತ ಅನು​ಮಾನ. ಕಾಂಗ್ರೆಸ್‌ ಮುಖಂಡ ಇಕ್ಬಾಲ್‌ ಶಕ್ತಿ ಕುಂದಿ​ಸುವ ತಂತ್ರ.


-ಎಂ.ಅ​ಫ್ರೆಜ್ ಖಾನ್‌

ರಾಮ​ನ​ಗರ (ಆ.26): ವಿಧಾ​ನ​ಸಭಾ ಚುನಾ​ವಣೆ ಸಮೀಪಿ​ಸು​ತ್ತಿ​ದ್ದರು ರಾಮ​ನ​ಗರ ವಿಧಾ​ನ​ಸಭಾ ಕ್ಷೇತ್ರ ಕಾಂಗ್ರೆಸ್‌ ನಾಯ​ಕರ ನಡು​ವಿನ ಭಿನ್ನ​ಮತ ಇನ್ನೂ ತಣ್ಣ​ಗಾ​ಗಿಲ್ಲ. ಇಷ್ಟುದಿನ ತೆರೆ​ಮೆ​ರೆ​ಯಲ್ಲಿ ನಡೆ​ಯು​ತ್ತಿದ್ದ ಭಿನ್ನ​ಮ​ತೀಯ ಚಟು​ವ​ಟಿಕೆ ಇದೀಗ ಹರೀ​ಸಂದ್ರ ಗ್ರಾಮ ಪಂಚಾ​ಯಿತಿ ಅಧ್ಯ​ಕ್ಷರ ಚುನಾ​ವಣೆ ಮೂಲಕ ಬಹಿ​ರಂಗ​ವಾ​ಗಿಯೇ ನಡೆದು ಮತ್ತೊಮ್ಮೆ ಬಣ ರಾಜ​ಕೀಯ ಸ್ಫೋಟ​ಗೊಂಡಿದೆ. ಕಳೆದ ಸೆಪ್ಟೆಂಬರ್‌ ತಿಂಗ​ಳಲ್ಲಿ ರಾಮ​ನ​ಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿಚಾ​ರ​ವಾಗಿ ಬಣ ರಾಜ​ಕೀಯ ತಾರ​ಕ​ಕ್ಕೇ​ರಿ​ದ ಸಂದ​ರ್ಭ​ದಲ್ಲಿ ಖುದ್ದಾಗಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವರೇ ಎರಡು ಬಣ​ಗಳ ನಾಯ​ಕರನ್ನು ಕರೆದು ಸುಧೀ​ರ್ಘ​ವಾಗಿ ಚರ್ಚೆ ನಡೆ​ಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಯಾರೆಂಬು​ದನ್ನು ಬದಿ​ಗಿಟ್ಟು ಸಾಮೂ​ಹಿಕ ನಾಯ​ಕ​ತ್ವ​ದಲ್ಲಿ ಪಕ್ಷ ಸಂಘ​ಟನೆ ಮಾಡು​ವಂತೆ ತಾಕೀ​ತು ಮಾಡಿ ಕಳು​ಹಿ​ಸಿ​ದ್ದರು. ಆದ​ರೀಗ ಹರೀ​ಸಂದ್ರ ಗ್ರಾಪಂ ಅಧಿ​ಕಾರ ಹಿಡಿ​ಯಲು ಸಾಕಷ್ಟುಅವ​ಕಾ​ಶ​ಗ​ಳಿ​ದ್ದರು ಬಣ ರಾಜ​ಕೀ​ಯದಿಂದಾಗಿ ಕಾಂಗ್ರೆಸ್‌ ಕೈ ತಪ್ಪಿದೆ. ಎಲ್ಲ​ಕ್ಕಿಂತ ಮುಖ್ಯ​ವಾಗಿ ಗ್ರಾಪಂನ ನೂತನ ಅಧ್ಯಕ್ಷರಾದ ಬಿಜೆಪಿ ಬೆಂಬ​ಲಿತ ಸದಸ್ಯ ಸಿ.ಶಿ​ವ​ಕು​ಮಾರ್‌, ಚುನಾ​ವ​ಣೆ​ಗೆ ಗೈರಾದ ಕಾಂಗ್ರೆಸ್‌ ಬೆಂಬ​ಲಿತ ಸದ​ಸ್ಯ​ರು ಹಾಗೂ ದಿ ಗ್ರೇಟರ್‌ ಬಿಡದಿ ಬೆಂಗ​ಳೂರು ಸ್ಮಾರ್ಚ್‌ ಸಿಟಿ ಯೋಜನಾ ಪ್ರಾಧಿ​ಕಾರ ಅಧ್ಯಕ್ಷ ವರ​ದ​ರಾಜು ತಮ್ಮ ಬೆಂಬ​ಲಿ​ಗ​ರೊಂದಿಗೆ ಕಾಂಗ್ರೆಸ್‌ ಹಿರಿಯ ನಾಯಕರಾದ ವಿಧಾನ ಪರಿ​ಷತ್‌ ಸದಸ್ಯ ಸಿ.ಎಂ.​ಲಿಂಗಪ್ಪ ಅವ​ರನ್ನು ಭೇಟಿ​ಯಾಗಿ ಅಭಿ​ನಂದನೆ ಸಲ್ಲಿ​ಸಿ​ದ್ದಾರೆ. ಈ ಫೋಟೋ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗಿದೆ. ಇದು ಕಾಂಗ್ರೆಸ್‌ನಲ್ಲಿ ಬಣ ರಾಜ​ಕೀ​ಯ ಜೀವಂತ​ವಾ​ಗಿ​ರು​ವು​ದಕ್ಕೆ ಇಂಬು ನೀಡಿ​ದಂತಿದೆ.

Tap to resize

Latest Videos

ಕಾಂಗ್ರೆಸ್‌ ಬೆಂಬಲಿತರು ಗೈರು: ಮೊದಲ ಅವ​ಧಿ ಚುನಾ​ವ​ಣೆ​ಯಲ್ಲಿ ಜೆಡಿ​ಎಸ್‌ - ಬಿಜೆಪಿ ಬೆಂಬ​ಲಿತ ಮೈತ್ರಿ ಅಭ್ಯರ್ಥಿ ಹಾಗೂ ಕಾಂಗ್ರೆಸ್‌ ಬೆಂಬ​ಲಿತ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ನಡೆದು ಸಮ​ಬಲ ಸಾಧಿ​ಸಿ​ದ್ದರು. ಅಂತಿ​ಮ​ವಾಗಿ ಲಾಟರಿ ಪ್ರಕ್ರಿ​ಯೆ​ಯಲ್ಲಿ ಮೈತ್ರಿ ಅಭ್ಯರ್ಥಿ ಆಶಾ ಮಂಚೇ​ಗೌಡ ಅವ​ರಿಗೆ ಅದೃಷ್ಟಲಕ್ಷ್ಮಿ ಒಲಿ​ದಿ​ದ್ದಳು.

ಎರ​ಡನೇ ಅವ​ಧಿಗೆ ನಡೆದ ಅಧ್ಯಕ್ಷ ಚುನಾ​ವ​ಣೆ​ಯಲ್ಲಿ ಜೆಡಿ​ಎಸ್‌ - ಬಿಜೆಪಿ ಬೆಂಬ​ಲಿ​ತ ಮೈತ್ರಿ ಅಭ್ಯ​ರ್ಥಿ​ಯಾಗಿ ಶಿವ​ಕು​ಮಾರ್‌ ಮತ್ತು ಕಾಂಗ್ರೆಸ್‌ ಬೆಂಬ​ಲದಿಂದ ವೀರ​ಭ​ದ್ರ​ಸ್ವಾಮಿ ಕಣ​ಕ್ಕಿ​ಳಿದಿದ್ದರು. ದಳ - ಕಮಲ ಪತಿ​ಗಳು ಕಾಂಗ್ರೆಸ್‌ ಬೆಂಬ​ಲಿತ ನಾಲ್ವರು ಸದ​ಸ್ಯ​ರನ್ನೂ ತಮ್ಮತ್ತ ಸೆಳೆ​ದು​ಕೊಂಡು ರಣ​ತಂತ್ರ ರೂಪಿ​ಸು​ವ​ಲ್ಲಿ ಯಶ​ಸ್ವಿ​ಯಾಗಿದ್ದಾರೆ. ಅಧ್ಯ​ಕ್ಷೀ​ಯ​ ಚುನಾ​ವ​ಣೆಗೂ ಮುನ್ನ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್‌ ಪ್ರಭಾವಿ ನಾಯ​ಕ​ರೊ​ಬ್ಬ​ರನ್ನು ಭೇಟಿ​ಯಾಗಿ ನಿಮ್ಮ ಆಶೀ​ರ್ವಾದ ಇದ್ದರೆ ಮುಂದು​ವ​ರೆ​ಯು​ವು​ದಾಗಿ ಹೇಳಿ ಆಯ್ಕೆಗೆ ಸಹ​ಕ​ರಿ​ಸು​ವಂತೆ ಮನವಿ ಮಾಡಿ​ದ್ದರು. ಇದಕ್ಕೆ ಪೂರ​ಕ​ವಾಗಿ ಕಾಂಗ್ರೆಸ್‌ ಬೆಂಬ​ಲಿತ ನಾಲ್ವರು ಸದ​ಸ್ಯರು ಚುನಾ​ವ​ಣೆಗೆ ಗೈರಾ​ಗಿ​ದ್ದು ಒಂದ​ಕ್ಕೊಂದು ತಾಳೆ​ಯಾ​ಗು​ತ್ತಿ​ದೆ.

ಗೆಲುವಿನ ಹಾದಿ ಸುಗಮ: ಚುನಾ​ವ​ಣೆ​ಯಲ್ಲಿ ಗೈರಾದ ಕೈ ಬೆಂಬ​ಲಿತ ಉಪಾ​ಧ್ಯಕ್ಷೆ ಜಯ​ಲ​ಕ್ಷ್ಮಮ್ಮ, ಸದ​ಸ್ಯ​ರಾದ ರಮ್ಯಾ, ಸ್ವಾಮಿ ಹಾಗೂ ​ರಂಜಿತಾ ಅವರು ವಿಧಾನ ಪರಿ​ಷತ್‌ ಸದಸ್ಯ ಸಿ.ಎಂ.​ಲಿಂಗಪ್ಪರವರ ಬಣ​ದಲ್ಲಿ ಗುರು​ತಿ​ಸಿ​ಕೊಂಡಿ​ದ್ದ​ವರು. ಇವ​ರೆ​ಲ್ಲರ ಗೈರು ಮೈತ್ರಿ ಅಭ್ಯರ್ಥಿ ಗೆಲು​ವಿನ ಹಾದಿ​ಯನ್ನು ಸುಗು​ಮ​ಗೊ​ಳಿ​ಸಿತು. ಇಷ್ಟೇ ಅಲ್ಲದೆ, ನೂತನ ಅಧ್ಯ​ಕ್ಷರು ಗೈರಾದ ಸದ​ಸ್ಯರು ಮತ್ತು ಸದ​ಸ್ಯೆ​ಯರ ಪತಿ​ಯ​ರು ಹಾಗೂ ಬಿಜೆಪಿ ಮುಖಂಡ ವರ​ದ​ರಾಜು ಜತೆ​ಗೂಡಿ ಸಿ.ಎಂ.ಲಿಂಗಪ್ಪ ಅವ​ರನ್ನು ಭೇಟಿ​ಯಾಗಿ ಅಭಿ​ನಂದನೆ ಮೂಲಕ ಕೃತ​ಜ್ಞತೆ ಸಲ್ಲಿ​ಸಿ​ದ್ದಾರೆ. ಇದರಿಂದ ಕಾಂಗ್ರೆಸ್‌ ಪಕ್ಷ​ದೊ​ಳ​ಗಿನ ಒಳ​ಜ​ಗ​ಳ ಮತ್ತೊಮ್ಮೆ ತೀವ್ರ ಸ್ವರೂಪ ಪಡೆ​ಯುವ ಸಾಧ್ಯ​ತೆ​ಗಳನ್ನು ತಳ್ಳಿ ಹಾಕು​ವಂತಿಲ್ಲ.

ಕಾರ‍್ಯಕರ್ತರಲ್ಲಿ ಬೇಸರ: ಈ ಹಿಂದೆ ದಿ.ಮ​ರಿ​ದೇ​ವರು ಕಾಂಗ್ರೆಸ್‌ ಸಾರಥ್ಯ ವಹಿ​ಸಿದಾಗ ಗ್ರಾಪಂನಲ್ಲಿ ಜೆಡಿ​ಎಸ್‌ ಬೆಂಬ​ಲಿ​ತರು ಹೆಚ್ಚು ಸ್ಥಾನ ಗಳಿ​ಸಿ​ದ್ದರೂ ಕಾಂಗ್ರೆಸ್‌ ಬೆಂಬ​ಲಿ​ತರೇ ಅಧಿ​ಕಾರ ಹಿಡಿ​ಯು​ವಂತೆ ನೋಡಿ​ಕೊ​ಳ್ಳು​ತ್ತಿ​ದ್ದರು. ಆದ​ರೀಗ ಬಹು​ಮ​ತಕ್ಕೆ ಅವ​ಶ್ಯ​ಕತೆ ಇದ್ದ 2 ಸದ​ಸ್ಯರನ್ನು ಕೈ ನಾಯ​ಕ​ರಾದ ಲಿಂಗಪ್ಪ ಮತ್ತು ಇಕ್ಬಾಲ್‌ ಜತೆ​ಗೂಡಿ ಚರ್ಚಿ​ಸಿ ಸೆಳೆ​ಯು​ವಲ್ಲಿ ವಿಫ​ಲ​ರಾ​ಗಿದ್ದು ಕಾರ್ಯ​ಕ​ರ್ತ​ರಲ್ಲಿ ಬೇಸ​ರಕ್ಕೆ ಕಾರ​ಣ​ವಾ​ಗಿದೆ.

ಚುನಾ​ವ​ಣೆಗೆ ಗೈರಾಗಿ ಪಕ್ಷಕ್ಕೆ ದ್ರೋಹ ಬಗೆ​ದಿ​ರುವ ಸ್ವ ಪಕ್ಷೀಯ ಸದ​ಸ್ಯರು ಕಾಂಗ್ರೆಸ್‌ ಬೆಂಬ​ಲಿತ ಅಭ್ಯರ್ಥಿ ವೀರ​ಭದ್ರ ಸ್ವಾಮಿ ಆಯ್ಕೆ ಇಷ್ಟ​ವಿರಲಿಲ್ಲ ಎಂದು ಕಾರಣ ನೀಡು​ತ್ತಿ​ದ್ದಾರೆ. ಅಲ್ಲದೆ, ಇವ​ರಿಗೆ ಕಾಂಗ್ರೆಸ್‌ ನಾಯ​ಕರೇ ಬೆನ್ನಿಗೆ ನಿಂತ ಮಾತು​ಗಳು ಬಲ​ವಾಗಿ ಕೇಳಿ ಬರು​ತ್ತಿವೆ.

ಬಿಜೆಪಿ ಜನೋತ್ಸವದ ದಿನ ಕಾಂಗ್ರೆಸ್‌ನಿಂದ ಭ್ರಷ್ಟೋತ್ಸವ: ಡಿಕೆಶಿ

ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಸಂಭಾ​ವಿತ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಸ್ವಾತಂತ್ರ್ಯೋ​ತ್ಸವ ನಡಿಗೆ ಹೆಸ​ರಿ​ನಲ್ಲಿ ಪ್ರತಿಯೊಂದು ಹಳ್ಳಿಯಲ್ಲಿ ಮತದಾ​ರರ ಮನೆ ಬಾಗಿ​ಲಿಗೆ ಭೇಟಿ ನೀಡಿ ಪಕ್ಷ ಸಂಘ​ಟ​ನೆಯಲ್ಲಿ ತೊಡ​ಗಿ​ದ್ದಾರೆ. ಮತ್ತೊಂದೆಡೆ ಸ್ವ ಪಕ್ಷೀಯ ನಾಯ​ಕರೇ ಪಕ್ಷದ ಶಕ್ತಿ ಕುಂದಿ​ಸುವ ಕಾರ್ಯ​ದಲ್ಲಿ ತೊಡ​ಗಿ​ದ್ದಾರೆಂದು ಕಾರ್ಯ​ಕ​ರ್ತರೇ ಬೇಸರ ವ್ಯಕ್ತ​ಪ​ಡಿ​ಸು​ತ್ತಿ​ದ್ದಾ​ರೆ.

\ಬಿಎಸ್‌ವೈ ದಿಲ್ಲಿ ಭೇಟಿ: ಮತ್ತೇನೋ ಹೊಸ ರಾಜಕೀಯ ಬದಲಾವಣೆ ಆಗುವಂತಿದೆ ಎಂದ ಕಾಂಗ್ರೆಸ್

ಅಧಿ​ಕಾರ ಕೈ ತಪ್ಪಲು ಕಾರ​ಣ​ವೇನು?: ಹರೀ​ಸಂದ್ರ ಗ್ರಾಪಂನ ಒಟ್ಟು 16 ಸ್ಥಾನ​ಗಳ ಪೈಕಿ ಕಾಂಗ್ರೆಸ್‌ - 7, ಜೆಡಿ​ಎಸ್‌ - 5 ಹಾಗೂ ಬಿಜೆಪಿ - 4 ಬೆಂಬ​ಲಿತ ಸದ​ಸ್ಯ​ರನ್ನು ಹೊಂದಿದೆ. ಕಾಂಗ್ರೆಸ್‌ ನಾಯ​ಕರು ಒಗ್ಗ​ಟ್ಟಾಗಿ ಹೋರಾಟ ನಡೆ​ಸಿದ್ದರಿಂದ 7 ಸ್ಥಾನ ಪಡೆ​ದಿದ್ದ ಕಾಂಗ್ರೆಸ್‌ಗೆ ಪಂಚಾ​ಯಿ​ತಿ​ಯಲ್ಲಿ ಅಧಿ​ಕಾರ ಹಿಡಿ​ಯಲು ಕೇವಲ 2 ಸದ​ಸ್ಯರ ಬೆಂಬಲ ಬೇಕಾ​ಗಿತ್ತು. ಕಳೆದ ಅಧ್ಯಕ್ಷ - ಉಪಾ​ಧ್ಯ​ಕ್ಷರ ಚುನಾ​ವಣೆ ವೇಳೆ ಕಾಂಗ್ರೆಸ್‌ ಅನ್ನು ಅಧಿ​ಕಾ​ರ​ದಿಂದ ದೂರವಿಡುವ ಉದ್ದೇ​ಶ​ದಿಂದ ಕೆಆರ್‌ ಐಡಿ​ಎಲ್‌ ಅಧ್ಯಕ್ಷ ರುದ್ರೇಶ್‌, ದಿ ಗ್ರೇಟರ್‌ ಬಿಡದಿ ಬೆಂಗ​ಳೂರು ಸ್ಮಾರ್ಚ್‌ ಸಿಟಿ ಅಧ್ಯಕ್ಷ ವರ​ದ​ರಾಜು ಹಾಗೂ ಜೆಡಿ​ಎಸ್‌ ಮುಖಂಡ​ರಾದ ತಾಪಂ ಮಾಜಿ ಅಧ್ಯಕ್ಷ ಪ್ರಾಣೇಶ್‌ ಮಾತು​ಕತೆ ನಡೆಸಿ ಜೆಡಿ​ಎಸ್‌ - ಬಿಜೆಪಿ ಮೈತ್ರಿ ರೂಪಿ​ಸಿ​ದ್ದರು.

click me!