
ಚನ್ನಪಟ್ಟಣ(ನ.10): ನನ್ನ ಅಣ್ಣ ಡಿ.ಕೆ.ಶಿವಕುಮಾರ್ 100 ರು. ಗಳಿಗೆ ಯಾರ ಹತ್ತಿರಾನೋ ಇದ್ದರು ಎಂದು ದೇವೇಗೌಡರು ಹೇಳಿದ್ದಾರೆ. ಆದರೆ, ದುಡ್ಡಿಗಾಗಿ ನಮ್ಮ ತಂದೆ-ತಾಯಿ ಯಾರ ಹತ್ತಿರವೂ ನಮ್ಮನ್ನು ಕಳಿಸಿಲ್ಲ. ನನ್ನ ಅಣ್ಣ 23ನೇ ವಯಸ್ಸಿಗೆ ನಿಮ್ಮ ವಿರುದ್ಧ ತೊಡೆ ತಟ್ಟಿ ನಿಂತಿದ್ದವರು. ತೊಡೆ ತಟ್ಟು ನಾನಿದ್ದೇನೆ ಎಂದು ನಮ್ಮ ಅಪ್ಪ ಹೇಳಿದ್ದರು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಅವರಿಗೆ ತಿರುಗೇಟು ನೀಡಿದ್ದಾರೆ.
ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಿಗಳ ಸಮಾಜದ ಕಾಂಗ್ರೆಸ್ ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿ ದರು. ದೇವೇಗೌಡರು ಹಿರಿಯರು ಎಂದು ಗೌರವ ಕೊಡುತ್ತಿದ್ದೇವೆ. ಅವರು ಯಾವ ರೀತಿ ಮಾತನಾಡುತ್ತಾರೆ ಎನ್ನುವುದನ್ನು ಜನರು ತಿಳಿದು ಕೊಳ್ಳಬೇಕು ಎಂದು ಹೇಳಿದರು.
ಹಿಂದೆ ಡಿ.ಕೆ ಸುರೇಶ್ ಅವರೂ ಕಣ್ಣೀರು ಹಾಕಿದ್ರು, ನಾವು ಕೇಳಿದ್ವಾ?: ನಿಖಿಲ್ ಕುಮಾರಸ್ವಾಮಿ
ನೀವು ಚನ್ನಪಟ್ಟಣಕ್ಕೆ ಬಂದು ಎದೆ ತಟ್ಟಿಕೊಂಡು ಮಾತಾಡಿದ್ದೀರಿ. ಗೌಡರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿ, 100 ವರ್ಷ ಚೆನ್ನಾಗಿದೆ. ಹಿರಿಯರಾಗಿ ನೀವು ದೇಶಕ್ಕೆ ಸಲಹೆ ಕೊಡುತ್ತೀರಿ ಎಂದುಕೊಂಡಿದ್ದೆವು. ಆದರೆ, ನಿಮ್ಮ ಮೊಮ್ಮಗನ ಪರ ಮತ ಕೇಳೋಕೆ ಬಂದಿದ್ದೀರಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.