ಪರಮೇಶ್ವರ್ ಬಿಟ್ಟು ಉಳಿದ ಎಲ್ಲರೂ ಡಿಕೆಶಿ ಡಿನ್ನರ್ ಪಾರ್ಟಿಗೆ ಹೋಗಿದ್ವಿ: ಎಂ.ಬಿ.ಪಾಟೀಲ್‌

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಡಿನ್ನರ್ ಪಾರ್ಟಿಗೆ ನಾನು ಅಟೆಂಡ್ (ಹಾಜರು) ಆಗಿದ್ದೆ. ಫೋಟೋ ನೋಡಿದ್ದೀರಿ. ಸಚಿವರಾದ ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ, ರಾಜಣ್ಣ ಅಟೆಂಡ್ ಕೂಡ ಆಗಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು. 
 


ವಿಜಯಪುರ (ಮಾ.16): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಡಿನ್ನರ್ ಪಾರ್ಟಿಗೆ ನಾನು ಅಟೆಂಡ್ (ಹಾಜರು) ಆಗಿದ್ದೆ. ಫೋಟೋ ನೋಡಿದ್ದೀರಿ. ಸಚಿವರಾದ ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ, ರಾಜಣ್ಣ ಅಟೆಂಡ್ ಕೂಡ ಆಗಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು. ಡಿಕೆಶಿ ಡಿನ್ನರ್ ಪಾರ್ಟಿಗೆ ಸಿದ್ದು ಬಣದ ಕೆಲ ಸಚಿವರು ಗೈರಾಗಿದ್ದಾರೆ ಎಂಬ ವಿಚಾರಕ್ಕೆ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೆಲ್ಲ ಮಾಧ್ಯಮಗಳ ಸೃಷ್ಟಿ. ಗೃಹ ಸಚಿವ ಜಿ.ಪರಮೇಶ್ವರ ಅವರ ಕ್ಷೇತ್ರದಲ್ಲಿ ಯಾರೋ ಮರಣ ಹೊಂದಿದ್ದರಂತೆ. ಹಾಗಾಗಿ ಅವರು ಅಲ್ಲಿಗೆ ಹೋಗಿದ್ದರು. 

ನಮ್ಮ ಆಪ್ತರು ಯಾರಾದರೂ ತೀರಿಕೊಂಡಿದ್ದರೆ ನಾನೂ ಹೋಗುತ್ತಿರಲಿಲ್ಲ. ಹಾಗಾಗಿ ನೀವು ಸುಮ್ಮ ಸುಮ್ಮನೆ ಇಲ್ಲದ್ದನ್ನೆಲ್ಲ ಸೃಷ್ಟಿ ಮಾಡ್ತೀರಿ ಎಂದು ಬೇಸರ ವ್ಯಕ್ತಪಡಿಸಿದರು. ಸತೀಶ ಜಾರಕಿಹೊಳಿ ಅವರು ಬಂದಿದ್ದರು. ಸತೀಶ ಜಾರಕಿಹೊಳಿ, ರಾಜಣ್ಣ ಇಲ್ಲ ಅಂತ ಸೃಷ್ಟಿ ಮಾಡುತ್ತಿರಿ. ಪರಮೇಶ್ವರ ಅವರಿಗೆ ತುಂಬಾ ಹತ್ತಿರ ಇದ್ದವರು ತೀರಿಕೊಂಡಿದ್ದರು. ತೀರಿಕೊಂಡಾಗ ಇದು (ಡಿನ್ನರ್‌ ಪಾರ್ಟಿ) ಇಂಪಾರ್ಟೆಂಟ್ ಆಗುತ್ತಾ? ಡಿನ್ನರ್ ಪಾರ್ಟಿಗೆ ಸಿದ್ದರಾಮಯ್ಯ ಅವರೂ ಬಂದಿದ್ದರು. ಇನ್ನೇನು ಬೇಕು ನಿಮಗೆ? ಪರಮೇಶ್ವರ ಒಬ್ಬರನ್ನು ಬಿಟ್ಟು ಎಲ್ಲರೂ ಬಂದಿದ್ದರು ಎಂದರು.

Latest Videos

ತೊಗರಿ ಬೇಳೆ ಸೇವಿಸುವ ಮುನ್ನ ಹುಷಾರ್‌: ಗಂಭೀರ ನರರೋಗ, ಕ್ಯಾನ್ಸರ್‌ ಉಂಟಾಗುವ ಸಾಧ್ಯತೆ!

ಕಾಂಗ್ರೆಸ್‌ನಲ್ಲಿ ಆಂತರಿಕ ಬೇಗುದಿ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು, ಯಾವುದೇ ಆಂತರಿಕ ಬೇಗುದಿ ಇಲ್ಲ. ಇದರ ಮೇಲೆ ತಿಳಿದುಕೊಂಡು ಬಿಡಿ ಎಂದರು. ಡಿ.ಕೆ.ಶಿವಕುಮಾರ ಅವರು ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಐದು ವರ್ಷ ಪೂರೈಸಿದ್ದಕ್ಕೆ ಅಧಿವೇಶನ ನಡೆದಾಗ ಸಿಎಂ, ಡಿಸಿಎಂ ಸಹಜವಾಗಿ ಊಟ ಕೊಡ್ತಾರೆ. ಅಧ್ಯಕ್ಷ ಸ್ಥಾನ ಐದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಧಿವೇಶನ ನಡೆದಾಗ ಊಟ ಕೊಟ್ಟರೆ ತಪ್ಪೇನಿದೆ? ನಾನು ಕೂಡ ಅಧಿವೇಶನ ನಡೆದಾಗ ಊಟ ಕೊಟ್ಟಿದ್ದೇನೆ. ಮಾಧ್ಯಮದವರಿಗೂ ಊಟ ಕೊಟ್ಟಿದ್ದಾರೆ ಎಂದು ತಿಳಿಸಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಡಿನ್ನರ್ ಪಾರ್ಟಿಯಲ್ಲಿ ಚರ್ಚೆ ಆಯ್ತಾ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಇದೆ. ಇಂತಹ ನಿರ್ಧಾರಗಳು ಡಿನ್ನರ್ ಪಾರ್ಟಿಯಲ್ಲಿ ಆಗಲ್ಲ ಎಂದು ಹೇಳಿದರು.

click me!