ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಮುಸ್ಲಿಮರ ತುಷ್ಟೀಕರಣ, ಹಾಲು, ವಿದ್ಯುತ್, ಪ್ರಯಾಣ, ಮುದ್ರಾಂಕ ದರ ಏರಿಕೆ, ಪರಿಶಿಷ್ಟರ ಹಣ ದುರ್ಬಳಕೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ಕೋಲಾರ (ಏ.02): ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಮುಸ್ಲಿಮರ ತುಷ್ಟೀಕರಣ, ಹಾಲು, ವಿದ್ಯುತ್, ಪ್ರಯಾಣ, ಮುದ್ರಾಂಕ ದರ ಏರಿಕೆ, ಪರಿಶಿಷ್ಟರ ಹಣ ದುರ್ಬಳಕೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಭಟನೆ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಮತ್ತಿತರ ಹಿರಿಯರ ನೇತೃತ್ವದಲ್ಲಿ ಈ ಹೋರಾಟ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ದಲಿತರಿಗೆ ಸಿದ್ದರಾಮಯ್ಯ ವಂಚನೆ: ಅಹಿಂದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ದಲಿತರ ಅಭಿವೃದ್ಧಿಗೆ ಮೀಸಲಾಗಿದ್ದ ಎಸ್ಸಿಪಿ, ಟಿಎಸ್‌ಪಿಯ ೩೮ ಸಾವಿರ ಕೋಟಿ ರೂ ಅನುದಾನ ಗ್ಯಾರಂಟಿಗಳು ಹಾಗೂ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ದುರ್ಬಳಕೆ ಮಾಡಿಕೊಂಡು ಹಿಂದುಳಿದವರು, ದಲಿತರನ್ನು ವಂಚಿಸಿದ್ದಾರೆ ಅಧಿಕಾರದಲ್ಲಿರಲು ನೈತಿಕತೆ ಕಳೆದುಕೊಂಡಿರುವ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ದೇವಾಲಯದ ಹುಂಡಿ ಬಿಡದಂತೆ ಇಡೀ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ಅರ್ಚಕರಿಗೆ ಗೌರವ ಧನ ಏರಿಕೆ ಮಾಡದೆ ಮಸೀದಿ, ಮದರಸಗಳ ಮೌಲ್ವಿಗಳಿಗೆ ಗೌರವ ಧನ ಏರಿಕೆ ಮಾಡಿದ್ದಾರೆ. ದೇವಾಲಯಗಳು ರೈತರ ಜಮೀನುಗಳನ್ನು ಸೂಪರ್ ಸಿಎಂ ಸಚಿವ ಜಮೀರ್ ಅಹಮದ್, ಮುಖ್ಯ ಮಂತ್ರಿ ರಾಜಕೀಯ ಸಲಹೆಗಾರ ನಸೀರ್ ಆಹಮದ್, ಮೈಸೂರಿನ ತನ್ವಿರ್ ಸೇಠ್ ಅವರುಗಳು ಸೇರಿಕೊಂಡು ಸಿಎಂ ಸಿದ್ದರಾಮಯ್ಯರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕ ಯತ್ನಾಳ್ ಕಾಂಗ್ರೆಸ್‌ಗೆ ಸೂಟ್ ಆಗಲ್ಲ: ಸಚಿವ ಸತೀಶ್ ಜಾರಕಿಹೊಳಿ
ಸ್ಪೀಕರ್ ಪಾಕ್ ಏಜೆಂಟರೇ?: ರಾಜ್ಯ ಸರ್ಕಾರದ ಜನವಿರೋಧಿ ಸಂವಿಧಾನ ವಿರೋಧಿ ನೀತಿ ಖಂಡಿಸಿ, ಮುಸ್ಲಿಂ ತುಷ್ಟೀಕರಣದ ಆದೇಶದ ಪ್ರತಿ ಹರಿದಿದ್ದಕ್ಕೆ ೧೮ ಶಾಸಕರನ್ನು ಸಭಾಧ್ಯಕ್ಷ ಖಾದರ್ ಅಮಾನತ್ ಮಾಡಿದ್ದಾರೆ, ಇವರೇನು ಪಾಕಿಸ್ತಾನ್ ಏಜೆಂಟರೇ ಎಂದು ಪ್ರಶ್ನಿಸಿದ ಅವರು ಹಿಂದೆ ಬಿಜೆಪಿ ಆಡಳಿತದಲ್ಲಿ ಸಭಾಪತಿಗಳನ್ನು ಇವರು ಹೇಗೆ ನಡೆಸಿಕೊಂಡಿದ್ದಾರೆ ಎಂದು ಇತಿಹಾಸ ನೋಡಲಿ ಎಂದರು.
ಹಿಂದುತ್ವದ ನಾಯಕರಿದ್ದಾರೆ: ಬಿಜೆಪಿಯಿಂದ ಉಚ್ಚಾಟಣೆ ಆಗಿರುವ ಯತ್ನಾಳ್ ಕುರಿತು ಪ್ರತಿಕ್ರಿಯಿಸಿದ ಮುನಿಸ್ವಾಮಿ, ಯತ್ನಾಳ್ ಒಳ್ಳೆಯ ನಾಯಕ ಅಂತ ನಾವೆಲ್ಲರೂ ತಿಳಿದಿದ್ದೇವು, ಯತ್ನಾಳ್ ಅವರು ಒಬ್ಬರೇ ಅಲ್ಲ ಸಾವಿರಾರು ವರ್ಷದಿಂದ ಹಿಂದುತ್ವದ ನಾಯಕರಿದ್ದಾರೆ, ಪಕ್ಷದ ಲಿಮಿಟ್ ಮೀರಿದ್ದಾರೆ ಅಂತ ಅವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು. ಯತ್ನಾಳ್ ಅವರ ವಯಸ್ಸಿಗೆ ಬೆಲೆ ಇದೆ, ಅದನ್ನು ಯತ್ನಾಳ್ ಉಳಿಸಿಕೊಳ್ಳಲಿ, ನೂತನ ಪಕ್ಷ ಕಟ್ಟಿರೋರನ್ನು ರಾಜ್ಯದಲ್ಲಿ ಸುಮಾರು ಜನರನ್ನು ನೋಡಿದ್ದೇವೆ, ಯತ್ನಾಳ್‌ಗೆ ಗೌರವ ಕೊಡ್ತೀವಿ, ಎಲ್ಲದಕ್ಕೂ ಒಂದು ತಾಳ್ಮೆ ಇದೆ, ಯತ್ನಾಳ್ ಒಬ್ಬರೇ ಹಿಂದುತ್ವದ ನಾಯಕ ಅಲ್ಲ, ನಾವೇನು ಪಾಕಿಸ್ತಾನದಿಂದ ಬಂದಿರುವ ನಾಯಕರಾ, ಯತ್ನಾಳ್ ಮಾತನಾಡುವಾಗ ಇತಿಮಿತಿ ಇರಲಿ ಎಂದರು.
ಜನರ ರಕ್ತ ಹೀರುವ ಸರ್ಕಾರ: ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ದೇಶದಲ್ಲಿ ಕರ್ನಾಟವು ಅತ್ಯಂತ ದುಬಾರಿ ಜೀವನ ನಡೆಸುವಂತ ದುಸ್ಥಿತಿ ನಿರ್ಮಾಣ ಮಾಡಿದೆ, ಗಾಳಿ ಹೊರತುಪಡಿಸಿ ಉಳಿದೆಲ್ಲಾ ವಸ್ತುಗಳ ಬೆಲೆಗಳನ್ನು ಕಾಂಗ್ರೆಸ್ ಏರಿಕೆ ಮಾಡಿ ಜನರ ರಕ್ತ ಹೀರುತ್ತಿದ್ದು, ಈ ಸರ್ಕಾರಕ್ಕೆ ಜನರ ಶಾಪ ತಟ್ಟಲಿದೆ, ಅಸಮರ್ಥ ನಾಯಕ ಸಿದ್ದರಾಮಯ್ಯ ರಾಜ್ಯಕ್ಕೆ ಶಾಪವಾಗಿ ಕಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಬಿತ್ತನೆ ಬೀಜ ರಾಸಾಯನಿಕ ಗೊಬ್ಬರ ಬೆಲೆಗಳನ್ನು ಏರಿಸಿ ಕೃಷಿ ರೈತರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಬೆಲೆ ಏರಿಕೆಯ ಬಿಸಿಗೆ ತತ್ತರಿಸಿರುವ ರಾಜ್ಯದ ಜನತೆ ರಾಜ್ಯ ಆಡಳಿತರೂಢ ಕಾಂಗ್ರೆಸ್ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಶಾಸಕ ಯತ್ನಾಳ ವಿಚಾರದಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ: ಸಂಸದ ಜಗದೀಶ್ ಶೆಟ್ಟರ್
ಜನಪರ ಬಿಜೆಪಿ ಜನರ ಧ್ವನಿಯಾಗಿ ನಿಲ್ಲಲಿದೆ. ಹೆಚ್ಚಳ ಮಾಡಿರುವ ದರಗಳನ್ನು ಹಿಂಪಡೆಯಲು ಬಿಜೆಪಿ ಆಗ್ರಹಿಸಲಿದೆ ಎಂದರು ಜಿಲ್ಲಾ ಬಿಜೆಪಿ ವಕ್ತಾರ ಎಸ್.ಬಿ ಮುನಿವೆಂಕಟಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಬಿ.ವಿ.ಮಹೇಶ್, ಅಪ್ಪಿರಾಜು, ನಗರಾಧ್ಯಕ್ಷ ಸಾ.ಮಾ.ಅನಿಲ್ ಬಾಬು, ಒಬಿಸಿ ಮೋರ್ಚಾ ಅಧ್ಯಕ್ಷ ನಾಮಾಲ್ ಮಂಜು, ಜಿಲ್ಲಾ ಮಾಧ್ಯಮ ಪ್ರಮುಖ್ ಪ್ರವೀಣ್ ಗೌಡ, ಸಹ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಇದ್ದರು.