
ಮೈಸೂರು (ಜ.17): ಸಿದ್ದರಾಮಯ್ಯ ಅವರನ್ನು ಬಲವಂತದಿಂದ ಅಧಿಕಾರದಿಂದ ಕೆಳಗೆ ಇಳಿಸಿದರೆ ಸಿದ್ದರಾಮಯ್ಯ ಕಾಂಗ್ರೆಸ್ ಇಬ್ಭಾಗ ಮಾಡುತ್ತಾರೆ. ಆಗ ಹಸುವಿನ ಕೆಚ್ಚಲು ಕೊಯ್ಯುವ ಸಾಬಿಯ ಚಿತ್ರವನ್ನೇ ಪಕ್ಷದ ಚಿಹ್ನೆ ಮಾಡಿಕೊಳ್ಳುತ್ತಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಗೇಲಿ ಮಾಡಿದರು. ನಗರದ ಜಲದರ್ಶಿನಿ ಆವರಣದಲ್ಲಿ ಗುರುವಾರ ಗೋಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಜಿ.ಪರಮೇಶ್ವರ್ ಅವರು ಈ ರಾಜ್ಯದ ಅಸಹಾಯಕ ಗೃಹ ಸಚಿವ. ಹಸುವಿನ ಕೆಚ್ಚಲು ಕೊಯ್ದವನು ಮಾನಸಿಕ ಅಸ್ವಸ್ಥ ಅಲ್ಲ. ಅವನ ರಕ್ಷಣೆಗೆ ನಿಂತವರ ಮೆದುಳಿನಲ್ಲಿ ಮಾನಸಿಕ ಅಸ್ವಸ್ಥೆ ಇದೆ ಎಂದು ಕಿಡಿಕಾರಿದರು.
ಹಿಂದೂಗಳ ಭಾವನೆ ಕೆರಳಿಸಲು ಮಾಡಿರುವ ಕೃತ್ಯ ಇದು. ತಾಲಿಬಾನ್ ಆಡಳಿತದ ಲಕ್ಷಣ ಇದು. ದರಿದ್ರ ಕಾಂಗ್ರೆಸ್ ಮೊದಲು ತೊಲಗಬೇಕು. ಹಸುವಿನ ಕೆಚ್ಚಲು ಕೊಯ್ದ ಸಾಬಣ್ಣ ಮಾನಸಿಕ ಅಸ್ವಸ್ತ ಅಲ್ಲ. ಒಬ್ಬ ಹಲಾಲ್ ಕೋರ್ ಸಾಬಿ ಎಂದು ಅವರು ಕಟುವಾಗಿ ಟೀಕಿಸಿದರು. ಜಮೀರ್ ಅವರೇ ಮೂರು ಹಸು ಖರೀದಿ ಮಾಡಿ ಕೊಟ್ಟ ಕೂಡಲೇ ಎಲ್ಲಾ ಮುಗಿದು ಹೋಯ್ತಾ? ಇವರು ಮನೆಯವರನ್ನು ಕೊಚ್ಚಿ ಅಮೇಲೆ ಪರಿಹಾರ ಕೊಟ್ಟರೆ ಸುಮ್ಮನೆ ಇರುತ್ತಾರಾ ಎಂದು ಪ್ರಶ್ನಿಸಿದ ಅವರು, ನಂಜನಗೂಡಿನಲ್ಲಿ ಗೋಮಾಂಸ ಭಕ್ಷಕರು ಹಸು ಕದಿಯಲು ಬಂದು ಗೋವಿನ ಬಾಲ ಕಟ್ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.
ಸಿದ್ದರಾಮಯ್ಯ ನೇತೃತ್ವದಲ್ಲಿ ತಾಲಿಬಾನ್ ಸರ್ಕಾರ ಆಡಳಿತ: ಮಾಜಿ ಸಂಸದ ಪ್ರತಾಪ ಸಿಂಹ
ಗೋ ಪೂಜೆ: ಮೂರು ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತರು ಪಶುಸಂಗೋಪನ ಸಚಿವ ಕೆ. ವೆಂಕಟೇಶ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ತೆರಳಿದ್ದಾಗ ಗೈರು ಹಾಜರಾಗಿದ್ದ ಮಾಜಿ ಸಂಸದ ಪ್ರತಾಪ ಸಿಂಹ ಅವರು, ಗುರುವಾರ ತಮ್ಮ ಬೆಂಬಲಿಗರ ಜತೆಗೂಡಿ ಗೋಪೂಜೆ ನೆರವೇರಿಸಿದರು. ಈ ವೇಳೆ ಮುಖಂಡರಾದ ಮೈ.ವಿ. ರವಿಶಂಕರ್, ಪರಮೇಶ್ ಗೌಡ ಮೊದಲಾದವರು ಇದ್ದರು.
ಡಿಸಿ ಜಾತಿ ನೋಡಿ ಸಿದ್ದರಾಮಯ್ಯ ಗರಂ: ಸಾರ್ವಜನಿಕ ಸಮಾರಂಭದ ವೇದಿಕೆ ಮೇಲೆ ಡಿಸಿ ಕುಳಿತರೆ ಸಿಎಂಗೆ ಏನಾದರೂ ಚುಚ್ಚುತ್ತಾ? ವಿಜಯಪುರ ಡಿಸಿಯ ಜಾತಿ ನೋಡಿ ಸಿದ್ದರಾಮಯ್ಯ ಟಾರ್ಗೆಟ್ ಮಾಡುತ್ತಾ ಇದ್ದೀರಾ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದರು. ಸುದ್ದಿಗಾರರೊಡನೆ ಮಾತನಾಡಿದ ಅವರು, ಈ ಹಿಂದೆ ಮೈಸೂರು ಡಿಸಿ ಆಗಿದ್ದ ಸಿ. ಶಿಖಾ ಅವರನ್ನು ಸಿದ್ದರಾಮಯ್ಯ ಶಿಷ್ಯ ಕೆ. ಮರೀಗೌಡ ಅವಮಾನ ಮಾಡಿದ್ದರು. ಈಗ ಸಿದ್ದರಾಮಯ್ಯ ಅವರೇ ಅವಮಾನ ಮಾಡಲು ಮುಂದಾಗಿದ್ದಾರೆ. ಅವರಿಗೆ ಲಿಂಗಾಯತ, ಒಕ್ಕಲಿಗ ಅಧಿಕಾರಿಗಳನ್ನು ಕಂಡರೆ ಮೊದಲಿನಿಂದ ಆಗುವುದಿಲ್ಲ.
ಸಿಎಂ ಸಿದ್ದರಾಮಯ್ಯಗೆ ಲಜ್ಜೆ, ಅಂಜಿಕೆ ಇಲ್ಲ: ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ
ಇದೇ ಕಾರಣಕ್ಕೆ ಈ ಎರಡು ಸಮುದಾಯದ ಅಧಿಕಾರಿಗಳ ಬಡ್ತಿಯನ್ನೇ ತಪ್ಪಿಸಿದ್ದರು. ಸಿದ್ದರಾಮಯ್ಯಗೆ ಸದಾ ಜಾತಿ ಹುಳ ಕಾಡುತ್ತಿರುತ್ತದೆ. 39 ಜನ ಲಿಂಗಾಯತ ಶಾಸಕರು ಇರದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿದ್ದರಾ ಎಂದು ಅವರು ಪ್ರಶ್ನಿಸಿದರು. ಯಾಕೆ ನಿಮಗೆ ಈ ಜಾತಿ ಮೇಲೆ ಇಷ್ಟು ಸಿಟ್ಟು. ಐಎಎಸ್ ಒಕ್ಕೂಟ ಸಿಎಂ ನಡೆಯನ್ನು ಖಂಡಿಸಬೇಕು. ಮುಖ್ಯ ಕಾರ್ಯದರ್ಶಿಗಳು ಸರ್ಕಾರದ ಬಾಲ ಬಡಿಯುವ ಕೆಲಸ ಮಾಡುವುದನ್ನು ಬಿಟ್ಟು ಈ ಪ್ರಕರಣದಲ್ಲಿ ತಮ್ಮ ಸಹೋದ್ಯೋಗಿ ಪರ ನಿಲ್ಲಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.