ಕನಕ ಜಯಂತಿ ಕಾರ್ಯಕ್ರಮಕ್ಕೆ ತೆರಳಿದ ಮಾಜಿ ಶಾಸಕ ಶ್ರೀನಿವಾಸ್ ಗೆ ಘೇರಾವ್

By Ravi Janekal  |  First Published Nov 11, 2022, 9:13 PM IST
  • ಕನಕ ಜಯಂತಿ ಕಾರ್ಯಕ್ರಮಕ್ಕೆ ತೆರಳಿದ ಮಾಜಿ ಶಾಸಕ ಶ್ರೀನಿವಾಸ್ ಗೆ ಘೇರಾವ್
  • ಶ್ರೀ ಗುರು ರೇವಣಸಿದ್ದೇಶ್ವರ ದೇವಸ್ಥಾನ ಕಮಿಟಿಯ ಹಣ ದುರುಪಯೋಗ ಆರೋಪ
  • ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತರೀಕೆರೆ ಮಾಜಿ ಶಾಸಕನಿಗೆ ಜನರಿಂದ ಧಿಕ್ಕಾರ
  • ರೇವಣಸಿದ್ದೇಶ್ವರ ಕುರುಬ ಸಮಾಜದ ಮುಖಂಡರಿಂದ ವಿರೋಧ

ಚಿಕ್ಕಮಗಳೂರು (ನ.11) : ಗುರು ರೇವಣಸಿದ್ದೇಶ್ವರ ದೇವಸ್ಥಾನ ಕಮಿಟಿಯ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಆರೋಪಿಸಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು  ಕುರುಬಸಂಘ ಇಂದು  ತರೀಕೆರೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕನಕ ಜಯಂತಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಜಿ.ಶ್ರೀನಿವಾಸ್ ಅವರಿಗೆ ಸಮುದಾಯ ಮುಖಂಡರು, ಕಾರ್ಯಕರ್ತರು ಘೆರಾವ್ ಹಾಕಿರುವ ಘಟನೆ ನಡೆದಿದೆ.

ಮೆರವಣಿಗೆಯ ಟ್ರ್ಯಾಕ್ಟರ್ ಏರದಂತೆ, ಧ್ವಜಾರೋಹಣ ಮಾಡದಂತೆ ಆಕ್ರೋಶ

Latest Videos

undefined

 ತರೀಕೆರೆ ತಾಲೂಕು ಕುರುಬ ಸಂಘದಿಂದ ಕನಕಜಯಂತಿ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಅಂಗವಾಗಿ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾಜಿ ಶಾಸಕ ಜಿ.ಶ್ರೀನಿವಾಸ್ ಆಗಮಿಸಿದ್ದು, ಇದನ್ನು ಕಂಡ ಸಂಘದ ಮುಖಂಡರು, ಕಾರ್ಯಕರ್ತರು ಶ್ರೀನಿವಾಸ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Chikkamagaluru: ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿ ಘೋಷಣೆ ಕೂಗಿದ ಕಿಡಿಗೇಡಿಗಳು!

ಗುರುರೇವಣ ಸಿದ್ದೇಶ್ವರ ದೇವಾಲಯ ಕಮಿಟಿಯ ಹಣ ದುರುಪಯೋಗ ಮಾಡಿರುವ ಆರೋಪ ಶ್ರೀನಿವಾಸ್ ಅವರ ಮೇಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಕುರುಬ ಜಯಂತ್ರಿ ಕಾರ್ಯಕ್ರಮದ ಮೆರವಣಿಗೆ ಸಂದರ್ಭದಲ್ಲಿ ಸಂಘದ ಮುಖಂಡರು ಶ್ರೀನಿವಾಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಮೆರವಣಿಗೆಯಲ್ಲಿ ಭಾಗವಹಿಸಲು ಅಡ್ಡಪಡಿಸಿದ್ದಲ್ಲದೇ ಮೆರವಣಿಗೆಯ ಟ್ರ್ಯಾಕ್ಟರ್ ಏರದಂತೆ, ಧ್ವಜಾರೋಹಣ ಮಾಡದಂತೆ ತಡೆದರು. ತದನಂತರ ಪ್ರತಿರೋಧದ ನಡುವೆಯೂ ಮಾಜಿ ಶಾಸಕ ಶ್ರೀನಿವಾಸ್  ಕಾರ್ಯಕ್ರಮದಲ್ಲಿ ಕೆಲ ಕಾಲ ಭಾಗಿಯಾಗಿದ್ದರು. ಮಾಜಿ ಶಾಸಕ ಶ್ರೀನಿವಾಸ್ ವಿರುದ್ಧ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿರುವ, ಮಾತಿನ ಚಕಮಕಿ ನಡೆಸುತ್ತಿರುವ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ..

click me!