ಬಿಎಸ್‌ವೈ ವಿರುದ್ಧವೇ ಅಸಮಾಧಾನ ಹೊರ ಹಾಕಿದ ಮಾಜಿ ಶಾಸಕ ಯು‌.ಬಿ ಬಣಕಾರ್

By Ravi Janekal  |  First Published Nov 11, 2022, 8:01 PM IST

ಮೊನ್ನೆ ತಾನೆ ಬಿಜೆಪಿ ತೊರೆದ ಮಾಜಿ ಶಾಸಕ‌ ಯು.ಬಿ ಬಣಕಾರ್ , ಹಿರೇಕೆರೂರು ಕ್ಷೇತ್ರದಲ್ಲಿ ಚುನಾವಣೆ ಅಖಾಡಕ್ಕಿಳಿದಿದ್ದಾರೆ. ಏಕಾಏಕಿ ಬಿಜೆಪಿಗೆ ರಾಜೀನಾಮೆ ನೀಡಿದ ಮಾಜಿ ಶಾಸಕ‌ ಯು.ಬಿ‌ ಬಣಕಾರ್ ನಡೆ ಕುತೂಹಲಕ್ಕೆ ಕಾರಣವಾಗಿದೆ. 


ವರದಿ- ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ

ಹಾವೇರಿ (ನ.11) : ಮೊನ್ನೆ ತಾನೆ ಬಿಜೆಪಿ ತೊರೆದ ಮಾಜಿ ಶಾಸಕ‌ ಯು.ಬಿ ಬಣಕಾರ್ , ಹಿರೇಕೆರೂರು ಕ್ಷೇತ್ರದಲ್ಲಿ ಚುನಾವಣೆ ಅಖಾಡಕ್ಕಿಳಿದಿದ್ದಾರೆ. ಏಕಾಏಕಿ ಬಿಜೆಪಿಗೆ ರಾಜೀನಾಮೆ ನೀಡಿದ ಮಾಜಿ ಶಾಸಕ‌ ಯು.ಬಿ‌ ಬಣಕಾರ್ ನಡೆ ಕುತೂಹಲಕ್ಕೆ ಕಾರಣವಾಗಿದೆ. 

Tap to resize

Latest Videos

undefined

ರಾಜೀನಾಮೆ ನೀಡಿ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದ ಬಣಕಾರ್ ಇಂದು ಸ್ವಕ್ಷೇತ್ರ ಹಿರೇಕೆರೂರಿಗೆ ಆಗಮಿಸಿದರು. ಈ ವೇಳೆ ಕಾರ್ಯಕರ್ತರು, ಬೆಂಬಲಿಗರು ಬಣಕಾರ್ ಅವರಿಗೆ ಅದ್ದೂರಿ ಸ್ವಾಗತ ಕೋರಿ, ಪಟಾಕಿ ಸಿಡಿಸಿದರು. ಬಣಕಾರ ಅವರನ್ನ ಹೆಗಲ ಮೇಲೆ‌ ಕೂರಿಸಿಕೊಂಡು‌ ಬೆಂಬಲಿಗರು ಸಂಭ್ರಮಾಚರಣೆ ಮಾಡಿದರು.

 ಹಿರೇಕೆರೂರು ತಾಲೂಕು ಬತ್ತಿಕೊಪ್ಪ ಗ್ರಾಮದ ಬಳಿ ಬಣಕಾರ್ ಅವರನ್ನು ಸ್ವಾಗತಿಸಿ ಅಪಾರ ಬೆಂಬಲಿಗರು ಘೋಷಣೆ ಕೂಗಿದರು. 

ಈ ವೇಳೆ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಯು.ಬಿ ಬಣಕಾರ್, ಹಿರೇಕೆರೂರು ಕ್ಷೇತ್ರದ ಜನರ ಒತ್ತಾಯದ ಮೇರೆಗೆ ಬಿಜೆಪಿಗೆ ರಾಜೀನಾಮೆ ನೀಡಿರುವೆ.ಕಳೆದ 6 ತಿಂಗಳಿಂದ ಕ್ಷೇತ್ರದ ಜನರು ರಾಜೀನಾಮೆ ನೀಡುವಂತೆ ಒತ್ತಾಯ ಮಾಡ್ತಾ ಇದ್ರು. ಆ ಸಮಯದಲ್ಲಿ ಪಕ್ಷದ ಹಿರಿಯರು, ವರಿಷ್ಠರು ನನ್ನ ಪರವಾಗಿದ್ದಾರೆಂದು ತಡೆದುಕೊಂಡು ಬಂದಿದ್ದೆ.
ಈಗ ಅವರ್ಯಾರು ನನ್ನ ಬಗ್ಗೆ ಗಮನ ಹರಿಸಲಿಲ್ಲ. ಏನನ್ನೂ  ಕೇಳಲಿಲ್ಲ.ಅದಕ್ಕಾಗಿ ರಾಜೀನಾಮೆ ನೀಡಿ ಬಂದ್ದಿದ್ದೇನೆ. ನಾನು ರಾಜೀನಾಮೆ ನೀಡಿದ ಬಳಿಕ ನಿನ್ನೆಯೇ ಬರುವವನಿದ್ದೆ.
ಕ್ಷೇತ್ರದ ಜನರು ನಾವು ಅದ್ದೂರಿಯಾಗಿ ಸ್ವಾಗತ ಮಾಡಬೇಕು ಅಂದ್ರು. ಹೀಗಾಗಿ ನಾನು ಇಂದು ನನ್ನ ಮತ ಕ್ಷೇತ್ರಕ್ಕೆ ಬಂದಿದ್ದೇನೆ. ನನ್ನ ಜನರು ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ಈ ರೀತಿಯಾಗಿ ಅದ್ದೂರಿಯಾಗಿ ನನ್ನ ಸ್ವಾಗತ ಮಾಡಿದ ಅಭಿಮಾನಿಗಳನ್ನು ಹೊಂದಿರುವ ನಾನೇ ಧನ್ಯ ಎಂದರು.

ಬಿಜೆಪಿಗೆ ಹಿರೇಕೆರೂರು ಮಾಜಿ ಶಾಸಕ ಯು.ಬಿ.ಬಣಕಾರ ಗುಡ್‌ಬೈ : ಕಾಂಗ್ರೆಸ್‌ನತ್ತ ಹೆಜ್ಜೆ..?

ನನ್ನ ರಾಜೀನಾಮೆ ಹಿಂದೆ ಯಾರ ಒತ್ತಡವೂ ಇಲ್ಲ

ಯಡಿಯೂರಪ್ಪನವರು ನೀವಿಬ್ಬರೂ ನನ್ನ ಎರಡು ಕಣ್ಣುಗಳಿದ್ದ ಹಾಗೆ.ನಿಮ್ಮನ್ನ ಜೋಡೆತ್ತು ರೀತಿಯಲ್ಲಿ ನೋಡಿಕೊಳ್ತಿನಿ ಅಂತಾ ಹೇಳಿದ್ರು. ಆದರೆ ಅದ್ಯಾವುದು ಆಗಲಿಲ್ಲ. ಸುಮಾರು ಒಂದು ವರ್ಷದಿಂದ ಈ ಆಡಳಿತದಲ್ಲಿ ನಮ್ಮ ಕಾರ್ಯಕರ್ತರಿಗೆ ನ್ಯಾಯ ಒದಗಿಸಲಿಲ್ಲ. ಆ ನೋವು ಇಂದು ಈ ರೀತಿ ವ್ಯಕ್ತವಾಗಿದೆ. ಇಬ್ಬರು ನಾಯಕರನ್ನು ಜೋಡಿಸುವ ಸಂದರ್ಭ ಬಂದರೆ ಅವರನ್ನ ಕಾಳಜಿಯಿಂದ ನೋಡಿಕೊಳ್ಳಬೇಕು. ಆ ನಾಯಕರಿಗೆ ಸ್ಥಾನಮಾನಗಳನ್ನು ನೀಡಿ ನೋಡಿಕೊಳ್ಳಬೇಕಿತ್ತು ಆದರೆ ಅದು ಆಗಲಿಲ್ಲ ಎಂದು‌ ಕಿಡಿ ಕಾರಿದರು. ಮೊದಲ‌ ಬಾರಿ  ತಮ್ಮ ರಾಜಕೀಯ ಗುರು ಯಡಿಯೂರಪ್ಪ ವಿರುದ್ದವೇ ಬಣಕಾರ್ ಅಸಮಾಧಾನ ಹೊರ  ಹಾಕಿದ್ದು ಅಚ್ಚರಿಗೆ ಕಾರಣ ಆಯ್ತು.

ಚುನಾವಣೆ ನಾನು ಮಾಡಲ್ಲ ಅಂದ್ರೆ  ಜನ ನನ್ನ ಮನೆಯಿಂದ ಹೊರಗೆಡೆ ಬರೋಕೆ ಬಿಡುವುದಿಲ್ಲ.ಚುನಾವಣೆ ಮಾಡಿಯೇ ಮಾಡಿಸ್ತಾರೆ. ಆದ್ರೆ ಯಾವ ರೀತಿ ಚುನಾವಣೆ ಮಾಡಿಸ್ತಾರೆ ಅನ್ನೋದನ್ನ ಕಾದು ನೋಡಬೇಕು. ನಾನು ಕಾಂಗ್ರೆಸ್ ಗೆ ಸೇರ್ತಿನಿ ಅಂತ 2019 ರಲ್ಲೂ ಪ್ರಚಾರ ಮಾಡಿದ್ರು. ಅವತ್ತಿನ ಸಮಯದಲ್ಲಿ ಯಾವ ನಾಯಕರು ನನ್ನನ್ನು ಭೇಟಿಯಾಗಿರಲಿಲ್ಲ. ಕಾಂಗ್ರೆಸ್ ನ ಎಲ್ಲಾ ನಾಯಕರು, ನನಗೂ ನನ್ನ ತಂದೆ ಮೇಲೆ ಗೌರವವಿದೆ. ಅವರೇನೇ ತೀರ್ಮಾನ ತೆಗೆದುಕೊಳ್ಳೊದಿದ್ರೆ ಒತ್ತಡದ ಮೇಲೆ ತೆಗೆದುಕೊಳ್ಳುವುದಿಲ್ಲ ಅನ್ನೋದು ಕಾಂಗ್ರೆಸ್ ನವರಿಗೆ ಗೊತ್ತಿದೆ.ಈ ಒತ್ತಡ ಹಿಂದೆಯೂ ಇಲ್ಲ ಈಗಲೂ ಇಲ್ಲ ಎಂದರು. ಈ ವಿಚಾರವನ್ನ ನನ್ನ ಜನ ಯಾರು ಹೇಳಿಲ್ಲ.ವಿರೋಧಿಗಳೆ ನನ್ನ ಬಗ್ಗೆ ಕಾಂಗ್ರೆಸ್ ಸೇರ್ತಾರೆ ಅಂತ ಹಿಂದೆಯೂ  ಪ್ರಚಾರ ಮಾಡಿದ್ದಾರೆ. ಇದರಿಂದ ಅವರಿಗೇನಾಗ ಬೇಕಾಗಿದೆಯೋ ನನಗೆ ಗೊತ್ತಿಲ್ಲ

Video: ಬಿಎಸ್‌ವೈ ಆಯ್ತು ಈಗ ಬಿಜೆಪಿ ಮಾಜಿ ಶಾಸಕನ ಆಡಿಯೋ ವೈರಲ್..!

ನಾನು ನನ್ನ ಕ್ಷೇತ್ರದ ಜನರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ

ಯಡಿಯೂರಪ್ಪ ಸೇರಿದಂತೆ ನನ್ನ ಯಾರು ಸಹ ಇದುವರೆಗೂ ಸಂಪರ್ಕ ಮಾಡಿಲ್ಲ. ನಾನು ಎರಡು ದಿನಗಳಿಂದ ಪೋನ್ ಸ್ಪೀಚ್ ಆಫ್ ಮಾಡಿಕೊಂಡಿದ್ದೆ.
ಜನರ ನಿರ್ಣಯ ಆದ್ಮೇಲೆ ಯಾರಾದ್ರೂ ನನ್ನ ಸಂಪರ್ಕ ಮಾಡಬಹುದಾ ನನಗೆ ಗೊತ್ತಿಲ್ಲ. ನಾನು ಬಿಜೆಪಿಯ ಕಟ್ಟಳೆಯಲ್ಲಿದ್ದೆ. ಇದೀಗ ನಾನು ಸ್ವತಂತ್ರ. ಮುಂದೆ ಜನ ಏನ್ ತೀರ್ಮಾನ ಮಾಡ್ತಾರೋ ಅದಕ್ಕೆ ನಾನು ಸಿದ್ಧನಾಗುತ್ತೇನೆ ಎಂದರು.

click me!