ಕಾಂಗ್ರೆಸ್‌ನವರ ಡಿಎನ್‌ಎಯಲ್ಲಿಯೇ ಹಿಂದು ವಿರೋಧಿ ಮನೋಭಾವವಿದೆ: ಸಿ.ಟಿ.ರವಿ

By Govindaraj S  |  First Published Jan 5, 2024, 3:02 PM IST

ಕಾಂಗ್ರೆಸ್‌ನವರ ಡಿಎನ್‌ಎಯಲ್ಲಿಯೇ ಹಿಂದು ವಿರೋಧಿ ಮನೋಭಾವವಿದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು. ಅವರು ಕೊಪ್ಪಳದ ಗವಿಮಠದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
 


ಕೊಪ್ಪಳ (ಜ.05): ಕಾಂಗ್ರೆಸ್‌ನವರ ಡಿಎನ್‌ಎಯಲ್ಲಿಯೇ ಹಿಂದು ವಿರೋಧಿ ಮನೋಭಾವವಿದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು. ಅವರು ಕೊಪ್ಪಳದ ಗವಿಮಠದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಕರಸೇವಕ ಶ್ರೀಕಾಂತ ಪೂಜಾರಿ ಬಂಧಿಸಿದ್ದು ಅತ್ಯಾಚಾರ, ಕಳ್ಳತನದ ಪ್ರಕರಣದಲ್ಲಿ ಅಲ್ಲ. ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಹಿಂದು ಕಾರ್ಯಕರ್ತರಲ್ಲಿ ಭಯ ಹುಟ್ಟಿಸುವಂತೆ ಮಾಡುತ್ತಿದ್ದಾರೆ. ನಿಮ್ಮ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ ಎಂದರು. ಸಿ.ಟಿ.ರವಿ ಕಾರು ಅಪಘಾತದ ಹಿನ್ನಲೆಯಲ್ಲಿ ಕಾಂಗ್ರೆಸ್ ಟ್ವಿಟ್ ವಿಚಾರವಾಗಿ ಮಾತನಾಡಿಈ ಪ್ರಕರಣವನ್ನು ಸಿಸಿ ಕ್ಯಾಮರಾ ಪರಿಶೀಲಿಸಬೇಕು. 

ಸರಕಾರ ಸುಳ್ಳುಗಳನ್ನು ಪತ್ತೆ ಮಾಡುವ ಫ್ಯಾಕ್ಟ್ ಚೆಕ್ ತಂಡಕ್ಕೆ ವಹಿಸಬೇಕು. ಸರಕಾರದ 14 ಕೋಟಿ ರೂಪಾಯಿ ಸರಕಾರದ ಹಣ ಖರ್ಚು ಮಾಡುತ್ತಿದ್ದಿರಿ. ನನ್ನ ಕಾರ್ ಅಪಘಾತದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪೋಸ್ಟ್ ಚೆಕ್ ಮಾಡಬೇಕು ಇದು ಸುಳ್ಳು ಎಂದಾದರೆ ನಿಮ್ಮ ಮೇಲೆ ಕೇಸ್ ದಾಖಲಿಸುತ್ತೇನೆ ಎಂದರು. ಶ್ರೀಕಾಂತ ಪೂಜಾರಿ ವಿರುದ್ದ ಜಗದೀಶ ಶೆಟ್ಟರ್ ಮಾತನಾಡುತ್ತಿದ್ದಾರೆ. ರಾಮಸೇವೆಯ ಹೋರಾಟದಲ್ಲಿದ್ದವರು ಈಗ ಪಕ್ಷ ಬದಲಾಯಿಸಿದ ತಕ್ಷಣ ಹೇಳಿಕೆ ಬದಲಾಯಿಸಬಾರದು ಎಂದರು. ದೇಶದ ಕಾನೂನು ಎಲ್ಲರಿಗೂ ಒಂದೇ ಎನ್ನುವ ಪರಮೇಶ್ವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಹಾಗಾದರೆ ಈಗ ಜ್ಞಾನೋದಯವಾಯಿತೆ. 

Tap to resize

Latest Videos

undefined

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ಮೋಸ: ಸಿ.ಟಿ.ರವಿ

ಡಿ.ಕೆ.ಶಿವಕುಮಾರ್‌ ಪ್ರಕರಣ ದಾಖಲಿಸಿದ್ದಾಗ ರಾಜ್ಯದಾದ್ಯಂತ ಯಾಕೆ ಹೋರಾಟ ಮಾಡಿದರು ಎಂದರು. ಗೋಧ್ರಾ ಹತ್ಯೆ ಅಂತ ಪ್ರಕರಣ ನಡೆಯಬಹುದು ಎಂದು ಹೇಳುತ್ತಿದ್ದಾರೆ. ಹರಿಪ್ರಸಾದ ಹಿರಿಯರಿದ್ದಾರೆ. ಈ ರೀತಿ ಘಟನೆ ನಡೆಯುತ್ತಿದ್ದರೆ ಮೊದಲು ಪೊಲೀಸರಿಗೆ ತಿಳಿಸಬೇಕಿತ್ತು. ಹರಿಪ್ರಸಾದ ಹೇಳಿಕೆ ನಂತರ ರಾಮಭಕ್ತರನ್ನು ರಕ್ಷಿಸಬೇಕಾಗಿದೆ ಎಂದರು. ರಾಮಮಂದಿರಕ್ಕಾಗಿ ಹಿಂದು ಪರ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ಕರಸೇವೆ ಮಾಡಿದ್ದು ಹಿಂದು ಕಾರ್ಯಕರ್ತರು ಕಾಂಗ್ರೆಸ್ ನವರು ಕರಸೇವೆಯಲ್ಲಿದ್ದರಾ?ರಾಮಮಂದಿರ ಉದ್ಘಾಟನೆಯನ್ನು ರಾಜಕಾರಣಕ್ಕೆ ಬಳಸಬಾರದು. 

ಹಿಂದು ಕಾರ್ಯಕರ್ತರನ್ನು ಟಾರ್ಗೆಟ್ ಮಾಡೋದು ಕಾಂಗ್ರೆಸ್ ನೀತಿನಾ. ಈ ಕೆಟ್ಟ ನೀತಿಯಿಂದ ದೇಶದಲ್ಲಿ 40 ಸೀಟು ಬಂದಿದ್ದಾರೆ.ರಾಜ್ಯದಲ್ಲಿ ಈಗ ಒಂದೇ ಲೋಕಸಭಾ ಸ್ಥಾನ ಗೆದ್ದಿದೆ.ನಮ್ಮ ತಪ್ಪಿನಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈಗಿನ ನೀತಿ ಮುಂದುವರಿಸಿದರೆ ಲೋಕಸಭೆಯಲ್ಲಿ ಒಂದೂ ಸ್ಥಾನ ಗೆಲ್ಲೋದಿಲ್ಲ ಎಂದರು. ಬೆಳಗಾವಿಯಲ್ಲಿ ಮಹಿಳೆಯರ ಮೇಲಿನ ಪ್ರಕರಣಗಳ ನಡೆಯುತ್ತಿರುವುದು ನಾಗರಿಕ ಸಮಾಜದ ತಲೆ ತಗ್ಗಿಸುವಂತಾಗಿದೆ.  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಜಿಲ್ಲೆಯಲ್ಲಿ ಪದೇ ಮಹಿಳೆಯರ ಮೇಲೆ ಪ್ರಕರಣಗಳಾಗುತ್ತಿದೆ. ಇದು ಅದೃಷ್ಠವೂ ದುರಾದೃಷ್ಠವೊ ಗೊತ್ತಿಲ್ಲ. ಕಾನೂನು ಹಿಡಿತವಿಲ್ಲದೆ ಇರೋದ್ರಿಂದ ಇಂಥ ಪ್ರಕರಣಗಳು ನಡೆಯುತ್ತಿವೆ ಎಂದು ಟೀಕಿಸಿದರು. 

ರಾಮ ಮಂದಿರ ಉದ್ಘಾಟನೆ ಕಾಂಗ್ರೆಸ್‌ಗೆ ಸಹಿಸಲು ಆಗುತ್ತಿಲ್ಲ: ಸಂಸದ ಬಿ.ವೈ.ರಾಘವೇಂದ್ರ

ಲೋಕಸಭೆಗೆ ಸ್ಪರ್ಧಿಸುವ ವಿಚಾರವಾಗಿ ಎಲ್ಲವನ್ನೂ ಪಾರ್ಟಿ ನಿರ್ಧರಿಸುತ್ತೇನೆ. ನಾನು ಏನನ್ನು ಬಯಿಸಿಲ್ಲ ಪಕ್ಷ ಸೂಚಿಸಿದಂತೆ ಕೆಲಸ ಮಾಡುತ್ತೇನೆ ಎಂದರು. ಬಿನ್ ಲಾಡೆನ್ ಟಿಪ್ಪು ಸುಲ್ತಾನ ಮಾದರಿಯ ಆಡಳಿತದಿಂದ ದೇಶ ಉಳಿಸಿಕೊಳ್ಳಲಾಗುವುದು. ಪರೋಕ್ಷವಾಗಿ ರಾಜ್ಯದಲ್ಲಿ ಲಾಡೇನ್ ಮಾದರಿಯ ಆಡಳಿತವಿದೆ ಎಂದರು. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಗವಿಸಿದ್ದೇಶ್ವರ ಸ್ವಾಮಿಗಳಲ್ಲಿ ಆಶೀರ್ವಾದ ಪಡೆದಿದ್ದೇನೆ ಎಂದು ಸಿ.ಟಿ.ರವಿ ಹೇಳಿದರು. ಅಯೋಧ್ಯೆ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ದಿಯಾಗಲಿದೆ. ಹಿಂದಿನ ಸರಕಾರದಲ್ಲಿ 121 ಕೋಟಿ ರೂಪಾಯಿ ಮಂಜೂರು ಮಾಡಿದೆ. ಈಗಿನ ಸರಕಾರ ಸ್ಥಳೀಯ ಪಾಲುದಾರಿಕೆಯಲ್ಲಿ ಅಭಿವೃದ್ದಿ ಪಡಿಸಬೇಕು ಎಂದು ಆಗ್ರಹಿಸಿದರು.

click me!