ಪಕ್ಷ ಏನೇ ಕೆಲಸ ಕೊಟ್ಟರೂ ಮಾಡುತ್ತೇನೆ. ಕಾರ್ಯಕರ್ತನಿಗೆ ಆಯ್ಕೆ ಇಲ್ಲ. ಮಂತ್ರಿ ಇದ್ದಾಗ ಪಕ್ಷ ಸೂಚನೆ ಕೊಟ್ಟ ಹಾಗೆ ರಾಜೀನಾಮೆ ಕೊಟ್ಟು ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡೆ. ನಾನು ರಾಜ್ಯಾಧ್ಯಕ್ಷ ಹುದ್ದೆಯ ರೇಸ್‌ನಲ್ಲಿ ಇಲ್ಲ ಎಂದು ಸಿ.ಟಿ.ರವಿ ಹೇಳಿದರು.
ಮೈಸೂರು (ಆ.18): ಪಕ್ಷ ಏನೇ ಕೆಲಸ ಕೊಟ್ಟರೂ ಮಾಡುತ್ತೇನೆ. ಕಾರ್ಯಕರ್ತನಿಗೆ ಆಯ್ಕೆ ಇಲ್ಲ. ಮಂತ್ರಿ ಇದ್ದಾಗ ಪಕ್ಷ ಸೂಚನೆ ಕೊಟ್ಟ ಹಾಗೆ ರಾಜೀನಾಮೆ ಕೊಟ್ಟು ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡೆ. ನಾನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ರೇಸ್‌ನಲ್ಲಿ ಇಲ್ಲ ಎಂದು ಸಿ.ಟಿ.ರವಿ ಹೇಳಿದರು. ನನ್ನ ಹೆಸರನ್ನು ಎಲ್ಲದಲಕ್ಕೂ ತೋರಿಸಲಾಗುತ್ತೆ. ಸದ್ಯ ವಿರೋಧ ಪಕ್ಷದ ರೇಸ್‌ನಲ್ಲಿ ಎನ್ನುವುದನ್ನು ತೋರಿಸಿಲ್ಲ.ಅದು ಆಗಲು ಸಾಧ್ಯವಿಲ್ಲ. ಪಕ್ಷ ಬಯಸಿದ್ರೆ ಕೆಲಸ ಮಾಡುತ್ತೇನೆ ಎಂದರು.
ಇನ್ನು ಮೂರೇ ತಿಂಗಳು ಅಷ್ಟೇ ಪಾರ್ಲಿಮೆಂಟ್ ಚುನಾವಣೆ ನಂತರ ಏನಾಗುತ್ತೆ ನೋಡ್ತೀರಿ. ಚುನಾವಣೆ ನಂತರ ಶಾಸಕರ ಅಸಹನೆ ಆಕ್ರೋಶ ಯಾವ ರೂಪಕ್ಕೆ ಹೋಗುತ್ತೆ ನೀವೇ ತೋರಿಸುತ್ತಿರಿ. 2 ತಿಂಗಳಿಗೆ ಹಿರಿಯ ಶಾಸಕರು ಪತ್ರ ಬರೀತಾರೆ ಅಂದ್ರೆ ಏನು. ಎಲ್ಲವೂ ಸರಿಯಿದ್ರೆ ಯಾಕೆ ಹೊರಗೆ ಬರತ್ತೆ. ಅವರು ಪತ್ರ ಬರೆದ ನಂತರ ಶಾಸಕರ ಸಭೆ ನಡೆಸಿದ್ರು. ಒಳಗೆ ಎಲ್ಲವೂ ಸರಿಯಿಲ್ಲ. ನನ್ನ ಅಪೇಕ್ಷೆ ಇದೇ ಈ ಸರ್ಕಾರ ಐದು ವರ್ಷ ನಡೀಬೇಕು ಎಂದು ಹೇಳಿದರು.
ಶಾಸಕ ಹೆಬ್ಬಾರ್ ನಡೆಯ ಬಗ್ಗೆ ಮೂಡಿದ ಕುತೂಹಲ: ಬಾಂಬೆ ಬಾಯ್ಸ್ ಮರಳಿ ಕಾಂಗ್ರೆಸ್‌ಗೆ?
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, 28 ಸ್ಥಾನ ಗೆಲ್ಲಲ್ಲು ಅಗತ್ಯ ಇರುವ ಎಲ್ಲಾ ಯೋಚನೆ ಮಾಡುತ್ತೇನೆ. ನಾವು 28 ಸ್ಥಾನ ಗೆಲ್ಲಬೇಕು. ಅದರ ಬಗ್ಗೆ ಯೋಚನೆ ಮಾಡುತ್ತೇವೆ. ದೇಶದ ಹಿತದೃಷ್ಟಿಯಿಂದ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು. ಮುಂದಿನ ಅವಧಿಗೆ ವಿಶ್ವದ ಮೂರನೇ ಶಕ್ತಿಯಾಗಿ ಬೆಳೆಯಬೇಕು ಎಂಬುದು ಮೋದಿಯವರ ಆಶಯ. ಈ ಕಾರಣದಿಂದ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಎಂದರು.
ಮಳೆಗಾಗಿ ಮಳೆದೇವರು ಇಗ್ಗುತ್ತಪ್ಪನ ಮೊರೆ ಹೋದ ಕೊಡಗಿನ ಜನತೆ!
ಲೋಕಸಭಾ ಚುನಾವಣೆಯಲ್ಲಿ ನಾವು ಕಾಂಗ್ರೆಸ್‌ನವರನ್ನು ನಿರ್ಲಕ್ಷ್ಯ ಮಾಡಲ್ಲ. ಅವರನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮ ಅಧಿಕಾರ ಕಳೆದುಕೊಂಡೆವು. ಅವರ ಗ್ಯಾರಂಟಿ ಚರ್ಚೆಗೆ ಕೌಂಟರ್ ಮಾಡಲಿಲ್ಲ. ಪೇ ಸಿಎಂ ಹೇಳಿದ್ದಾಗ ಕ್ರಮ ತೆಗೆದುಕೊಳ್ಳಲಿಲ್ಲ. ಇದರ ಪರಿಣಾಮ ಅನುಭವಿಸುತ್ತಿದ್ದೇವೆ. ಇದರಿಂದ ಡಿಕೆಶಿ ಆಗಲಿ ಕಾಂಗ್ರೆಸ್ ಚಿಂತನೆಯನ್ನ ನಿರ್ಲಕ್ಷ್ಯ ಮಾಡಲ್ಲ. ನಾವು ಜನರ ಮುಂದೆ ಹೋಗುತ್ತೇವೆ. ನಮ್ಮ ತಪ್ಪು ತಿದ್ದುಕೊಂಡು ಮುಂದೆ ಹೋಗುತ್ತೇವೆ ಎಂದು ತಿಳಿಸಿದರು.