ಕೇಂದ್ರ ಸರ್ಕಾರವು ಮಂಡಿಸಿರುವುದು ಬಜೆಟ್ ಹೊರತು ಚುನಾವಣೆ ಬಜೆಟ್ ಅಲ್ಲ. ಇದು ಸಪ್ತ ಋಷಿ ಪೋಕಸ್ ಬಜೆಟ್ ಮಂಡಿಸಿದ್ದು, ಇದರಿಂದ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಲಾಭವಾಗಲಿದೆ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ತಿಳಿಸಿದರು.
ಮೈಸೂರು (ಫೆ.02): ಕೇಂದ್ರ ಸರ್ಕಾರವು ಮಂಡಿಸಿರುವುದು ಬಜೆಟ್ ಹೊರತು ಚುನಾವಣೆ ಬಜೆಟ್ ಅಲ್ಲ. ಇದು ಸಪ್ತ ಋಷಿ ಪೋಕಸ್ ಬಜೆಟ್ ಮಂಡಿಸಿದ್ದು, ಇದರಿಂದ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಲಾಭವಾಗಲಿದೆ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಬಗ್ಗೆ ಇಡೀ ಭಾರತ ಮಾತ್ರವಲ್ಲದೇ, ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿತ್ತು. ಜೊತೆಗೆ ವಿಪಕ್ಷಗಳು ಕೂಡ ಕಾಲೆಳೆಯಲಿಕ್ಕೆ ಸಿದ್ದವಾಗಿದ್ದವು. ಏಪ್ರಿಲ್ ತಿಂಗಳಿನಲ್ಲಿರುವ ಚುನಾವಣೆ ನಡೆಯಲಿರುವ ಕಾರಣ, ಇದೊಂದು ಚುನಾವಣೆ ಬಜೆಟ್ ಎಂದು ಹೇಳಲು ಮುಂದಾಗುತ್ತಿದ್ದವು.
ಆದರೆ, ಕೇಂದ್ರ ಸರ್ಕಾರವು ಯಾವುದೇ ಚುನಾವಣೆ ಭರವಸೆ ನೀಡದೇ, 140 ಕೋಟಿ ಭಾರತೀಯರಿಗೆ ಉತ್ತಮ ಬಜೆಟ್ ಮಂಡಿಸಿದೆ ಎಂದು ಹೇಳಿದರು. ಬಡವರು, ಮಹಿಳೆಯರು, ಯುವಕರು ಹಾಗೂ ರೈತರನ್ನು ಒಳಗೊಂಡ ಬಜೆಟ್ ಇದಾಗಿದೆ. ಯಾವುದೇ ತೆರಿಗೆಗಳನ್ನು ಹೆಚ್ಚು ಮಾಡದೇ ಆರ್ಥಿಕ ಅಭಿವೃದ್ಧಿಗೆ ಮುಂದಾಗಿದೆ. ದೇಶದ ಆರ್ಥಿಕತೆಯು ಸರಿ ದಾರಿಯಲ್ಲಿದೆ. ಬಡವರ ಹಿತದೃಷ್ಟಿಯಿಂದ ಗರೀಬ್ ಕಲ್ಯಾಣ ರಾಷ್ಟ್ರೀಯ ಕಲ್ಯಾಣ ಎಂದು ಪ್ರತಿಪಾದಿಸಿದೆ. ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡುವ ಮೂಲಕ ವಿಕಾಸಿತ ಭಾರತ 2047ರ ಸಾಧನೆಗೆ ಮಾರ್ಗದ ಬಜೆಟ್ ಇದಾಗಿದೆ ಎಂದರು.
ನಂಬಿಕೆ ಆಧಾರಿತ, ಆಡಳಿತ ದಿಕ್ಸೂಚಿ ಆಗಿದೆ. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ತೆಗೆದುಕೊಂಡು ಪ್ರಬಲ ನಿರ್ಧಾರಗಳು ಜನಪರವಾದ ಆಡಳಿತದಿಂದ ಉದ್ಯೋಗ ಮತ್ತು ಉದ್ಯಮಶೀಲತೆ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದ ಜಾರಿಗೆ ತಂದಿರುವ ಅಭಿವೃದ್ಧಿ ಜನಸಾಮಾನ್ಯರಿಗೆ ದೊರಕಲು ಪ್ರಾರಂಭಿವಾಗಿವೆ. ಹೀಗಾಗಿ, ಕೋಟ್ಯಾಂತರ ಜನರು ಫಲಾನುಭವಿಗಳಾಗಿದ್ದಾರೆ ಎಂದು ಅವರು ತಿಳಿಸಿದರು.
ದೇವೇಗೌಡರನ್ನು ಪ್ರಧಾನಿಯಾಗಿ ಮಾಡಿದ್ದೇ ಕಾಂಗ್ರೆಸ್: ಮಾಜಿ ಸಚಿವ ಶಿವರಾಂ
2024 ಪಿಎಂ ಆವಾಸ್ ಯೋಜನೆಯಡಿ 2 ಕೋಟಿ ಮನೆಗಳನ್ನು ಗ್ರಾಮೀಣ ಪ್ರದೇಶದವರಿಗೆ ನೀಡಲು ತೀರ್ಮಾನಿಸಿದೆ. ಜೊತೆಗೆ ಮದ್ಯಮ ವರ್ಗದ ಮೊದಲ ಬಾರಿ ವಸತಿ ಯೋಜನೆ ಜಾರಿಗೆ ತಂದಿದ್ದು, ಬಾಡಿಗೆ ಮನೆಯವರಿಗೆ, ಸ್ಲಂ ವಾಸಿ, ರೆವೆನ್ಯೂ ಬಡಾವಣೆ ಅವರಿಗೆ ಮನೆಕೊಂಡುಕೊಳ್ಳುವ ಕಟ್ಟಿಕೊಳ್ಳುವ ಯೋಜನೆ ರೂಪಿಸಿ ನೆರವಾಗಿದೆ. ಹೊಸ ತೆರಿಗೆಯನ್ನು ಜನತೆಯ ಮೇಲೆ ಹೇರದೆ ಸಂಪನ್ಮೂಲಗಳನ್ನು ಕ್ರೂಡೀಕರಿಸಿಕೊಂಡು ಬಜೆಟ್ ಮಂಡಿಸಲಾಗಿದೆ ಎಂದರು. ಬಿಜೆಪಿ ಮುಖಂಡರಾದ ಪ್ರಸಾದ್ ಬಾಬು, ಎ.ಎನ್. ಸಂತೋಷ್ ಇದ್ದರು.