ಅವರಿಬ್ಬರ ಪಾಪದ ಕೊಡ ತುಂಬಿದೆ: ಸೋಮಣ್ಣ, ಯತ್ನಾಳ್ ವಿರುದ್ಧ ರೇಣುಕಾಚಾರ್ಯ ಏಕವಚನದಲ್ಲಿ ವಾಗ್ದಾಳಿ

By Govindaraj SFirst Published Dec 14, 2023, 5:11 PM IST
Highlights

ಅವರಿಬ್ಬರ ಪಾಪದ ಕೊಡ ತುಂಬಿದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಮತ್ತು ಹಾಗೂ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. 

ದಾವಣಗೆರೆ (ಡಿ.14): ಅವರಿಬ್ಬರ ಪಾಪದ ಕೊಡ ತುಂಬಿದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಮತ್ತು ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಬಿಎಸ್ವೈ ಮತ್ತು ಬಿವೈವಿಯನ್ನು ಜನರ ಮುಂದೆ ವಿಲ್ಹನ್ ಮಾಡಲು ಹೊರಟಿದ್ದಾರೆ. ಯತ್ನಾಳ್, ಸೋಮಣ್ಣ ಬ್ಲಾಕ್ ಮೇಲ್ ರಾಜಕಾರಣ ಬಿಡಬೇಕು. ಯತ್ನಾಳ್, ಸೋಮಣ್ಣ ಹಿರಿಯರು, ಮಾದ್ಯಮದ ಹೇಳಿಕೆ ಜನ ಗಮಣಿಸುತ್ತಾರೆ. ಬಿಎಸ್ವೈ ಮತ್ತು ಬಿವೈವಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ರಾಜಕಾರಣಿಗಳು ಸಭ್ಯ ರಾಜಕಾರಣಿಗಳಿಗಿಂತ ಬೇಕು, ಹೋಗಿ ಬಂದಲ್ಲಿ ಅಧ್ಯಕ್ಷ ಇಲ್ಲ ರಾಜ್ಯಾಧ್ಯಕ್ಷ ಆಗ್ತೀದ್ದೆ ಅಂತಾ ಹೇಳ್ತರಿ ಎಂದರು.

ಕಾಂಗ್ರೆಸ್ ನಲ್ಲಿ ಏನು ಸ್ಥಾನಮಾನ ಇತ್ತು ನಿಮಗೆ ಸೋಮಣ್ಣ ಸುಳ್ಳನ್ನು ಸತ್ಯದಂತೆ ಬಿಂಬಿಸಲು ಎಕ್ಸ್ಪರ್ಟ್. ಬಿಎಸ್ವೈ ನಿಮ್ಮ ಮನೆಗೆ ಬಂದು ಸಮಾಧಾನ ಮಾಡಿದ್ದರು. ನಮಗಿಂತ ನಿಮಗೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟಿದ್ದಾರೆ. ನಾವು ಭಾಯಿ ಮುಚ್ಚಿಕೊಂಡು ಸುಮ್ನಿದ್ದಿವಿ ಅಲ್ವಾ. ಸುಖಾ ಸುಮ್ಮನೆ ಮಾತನಾಡುವುದು ಸರಿಯಿಲ್ಲ. ನೀವು ಮಾತನಾಡುತ್ತಿರುವದು ಪಕ್ಷ ವಿರೋಧಿ ಅಲ್ವಾ. ಯತ್ನಾಳದು ಯಾವ ಸಮಾಜಕ್ಕೂ ಕೊಡುಗೆ ಇಲ್ಲ, ಬಿಎಸ್ವೈ ಎಲ್ಲರಿಗೂ ಬೇಕಾದ ವ್ಯಕ್ತಿ. ಕೆಲವೆಡೆ ಬಿಎಸ್ವೈ ಕಾಲಿನ ಧೂಳನ್ನು ಜನ ಹಣೆಗೆ ಹಚ್ಚಿಕೊಂಡಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ನೀವಿಬ್ಬರೂ ಮಾತನಾಡಿದರೆ ಯಡಿಯೂರಪ್ಪ ತೂಕ ಕಡಿಮೆ ಆಗಲ್ಲ ಎಂದು ಹೇಳಿದರು.

ರಾಜಕೀಯಕ್ಕಾಗಿ ಬಿಜೆಪಿ ಹೋರಾಟ ಮಾಡುತ್ತಿದೆ: ಸಚಿವ ಗುಂಡೂರಾವ್

ನೀವು ಇದೆ ರೀತಿ ಮುಂದುವರೆದರೆ, ನಾವು ಸಹ ತಿರುಗಿ ನಿಲ್ಲಬೇಕಾಗುತ್ತದೆ: ನಿನ್ನೆ ಲೋಕಸಭೆ ಕಲಾಪ ವೇಳೆ ನಡೆದ ಘಟನೆ ಖಂಡನೀಯ. ಭದ್ರತಾ ಸಿಬ್ಬಂದಿ ಕಣ್ಣುತಪ್ಪಿಸಿ ಸ್ಮೋಕ್ ಬಾಂಬ್ ದಾಳಿ ಖಂಡನೀಯ. ಈ ರೀತಿ ಮಾಡುವವರು ದೇಶದ್ರೋಹಿಗಳು. ಅವರ ತಂದೆಯವರೇ ತೀವ್ರವಾಗಿ ಖಂಡಿಸಿದ್ದಾರೆ.ಇದನ್ನೇ ಕಾಂಗ್ರೆಸ್ ರಾಜಕೀಯಗೊಳಿಸಬಾರದು. ಘಟನೆ ಕುರಿತು ಸಮಗ್ರ ತನಿಖೆ ಮಾಡಿಸಿ ಎಂದು ಒತ್ತಾಯ ಮಾಡಿ. ಅದನ್ನು ಬಿಟ್ಟು ಪ್ರತಾಪ್ ಸಿಂಹ ಕಚೇರಿ ಗೆ ಮುತ್ತಿಗೆ ಹಾಕುವುದು, ಮೋದಿ, ಶಾ ವಿರುದ್ಧ ಸುಖಾಸುಮ್ಮನೆ ಯಾರೊಂದಿಗೂ ಆರೋಪ ಮಾಡುವುದು ಸರಿಯಲ್ಲ. ಬಾಂಬೆಯಲ್ಲಿ ಹೊಟೇಲ್ ಮೇಲೆ ಬಾಂಬ್ ದಾಳಿ ಮಾಡಿದ್ದರು ಎಂದರು.

ಲೋಕಸಭೆಗೆ ಕಾಂಗ್ರೆಸ್‌ನಿಂದ ನಾನು ಸ್ಪರ್ಧಿಸುವುದೆಲ್ಲ ಸುಳ್ಳು: ಮಾಜಿ ಸಚಿವ ವಿ.ಸೋಮಣ್ಣ

ಬಾಂಬೆ ದಾಳಿ ವೇಳೆ ಮನಮೋಹನ್ ಸಿಂಗ್, ವಿಲಾಸ ರಾವ್ ದೇಶಮುಖ್ ರಾಜೀನಾಮೆ ಕೇಳಿದ್ವಾ ...? ಇದು ಸರಿಯಲ್ಲ, ಬಾಂಬೆ ದಾಳಿ ವೇಳೆ ಅವರು ಬೋಟ್ ನಲ್ಲಿ ಬಂದು ದಾಳಿ ಮಾಡಿದ್ದರು ಆಗಲು ವೈಪಲ್ಯ ಆಗಿತ್ತು. ಬೇಕಿದ್ರೆ ಪ್ರತಾಪ್ ಸಿಂಹ ಅವರ ವಿಚಾರಣೆ ಮಾಡಲಿ, ಎಲ್ಲದಕ್ಕೂ ಅವರೇ ಹೊಣೆ ಎನ್ನುವುದು ಸರಿಯಲ್ಲ . ಪ್ರತಾಪ್ ಸಿಂಹ ಪರ ಮಾಜಿ ಸಚಿವ ರೇಣುಕಾಚಾರ್ಯ ಬ್ಯಾಟಿಂಗ್ ನಡೆಸಿದರು. ಅಲ್ಲದೇ ಎಲ್ಲದರ ಕುರಿತು ಸಮಗ್ರ ತನಿಖೆ ಮಾಡಲಿ ಎಂದು ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದರು.

click me!