ಬಸವನಗೌಡ ಪಾಟೀಲ್ ಯತ್ನಾಳ್ ಒಂದು ಹುಚ್ಚುನಾಯಿ ಇದ್ದಂತೆ, ಯತ್ನಾಳ್ ಬಗ್ಗೆ ಮಾತನಾಡುವುದಕ್ಕೂ ನನಗೆ ಅಸಹ್ಯವೆನಿಸುತ್ತದೆ. ನಾಯಿಗೆ ಇರುವ ನಿಯತ್ತೂ ಯತ್ನಾಳ್‌ಗೆ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.
ದಾವಣಗೆರೆ (ಡಿ.21): ಬಸವನಗೌಡ ಪಾಟೀಲ್ ಯತ್ನಾಳ್ ಒಂದು ಹುಚ್ಚುನಾಯಿ ಇದ್ದಂತೆ, ಯತ್ನಾಳ್ ಬಗ್ಗೆ ಮಾತನಾಡುವುದಕ್ಕೂ ನನಗೆ ಅಸಹ್ಯವೆನಿಸುತ್ತದೆ. ನಾಯಿಗೆ ಇರುವ ನಿಯತ್ತೂ ಯತ್ನಾಳ್‌ಗೆ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ಆನೆ ಬೀದಿಗಿಳಿದಾಗ ಹುಚ್ಚು ನಾಯಿ ಬೊಗಳುತ್ತಿರುತ್ತದೆ. ಹಾಗೆ ನಾಯಿ ಬೊಗಳಿದರೆ ಆನೆಗೆ ಇರುವ ಆನೆ ತೂಕ ಕಡಿಮೆ ಆಗುತ್ತದಾ ಎಂದು ಸರ್ವಜ್ಞನ ವಚನ ಹೇಳುತ್ತಲೇ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.
ವಿಜಯೇಂದ್ರ, ಯಡಿಯೂರಪ್ಪಗೆ ಟೀಕೆ ಮಾಡಿದರೆ ಅದು ನರೇಂದ್ರ ಮೋದಿ ಸೇರಿ ಕೇಂದ್ರ ವರಿಷ್ಠರ ಟೀಕಿಸಿದಂತೆ. ಯಡಿಯೂರಪ್ಪ ಆನೆ ಇದ್ದಂತೆ. ಬಿಎಸ್‌ವೈ ಬಗ್ಗೆ ಮಾತನಾಡೋರು ಹುಚ್ಚುನಾಯಿ ಇದ್ದಂತೆ. ಹುಚ್ಚುನಾಯಿ ಬಗ್ಗೆ ಮಾತನಾಡುವುದೂ ವ್ಯರ್ಥ. ಇನ್ನು ಆ ಹುಚ್ಚು ನಾಯಿ ಬಗ್ಗೆ ಮಾತನಾಡಬಾರದೆಂದುಕೊಂಡಿದ್ದೇನೆ ಎಂದರು.
undefined
ನಾನು ಸೈಲೆಂಟ್ ಆಗಿಲ್ಲ, ಶತ್ರುಗಳಿದ್ದರೆ ನಮಗೂ ಒಳ್ಳೆಯದೇ: ಬಿ.ಕೆ.ಹರಿಪ್ರಸಾದ್
ಶಿಕಾರಿಪುರದಲ್ಲಿ ವಿಜಯೇಂದ್ರಗೆ ಸೋಲಿಸಲು ಕುತಂತ್ರ ಮಾಡಿದವರು ಇಂತಹವರೆ. ಗೆದ್ದರೆ ದೊಡ್ಡ ನಾಯಕನಾಗುತ್ತಾನೆಂದು ಸೋಲಿಸಲು ಕುತಂತ್ರ ಮಾಡಿದ್ದರು. 2018ರಲ್ಲಿ ಸಚಿವ ಸ್ಥಾನ ನೀಡಲಿಲ್ಲವೆಂದು ಯತ್ನಾಳ್ ಹೀಗೆಲ್ಲ ಅಪಪ್ರಚಾರ ಮಾಡುತ್ತಿದ್ದಾರೆ. ಯಾವ ಹಿರಿತನ ಯತ್ನಾಳ್ ಗೆ ಇದೆ? ಇದೇ ರೀತಿ ಬೊಗಳುವುದೇ ಸೀನಿಯಾರಿಟಿನಾ? ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಯತ್ನಾಳ್‌ಗೆ ಯಾರು ಹೀಗೆಲ್ಲಾ ಬೊಗಳಲು ಹೇಳಿಕೊಟ್ಟಿದ್ದಾರೆಂದು ಹೇಳಲಿ ಎಂದು ರೇಣುಕಾಚಾರ್ಯ ಹರಿಹಾಯ್ದರು.
ಯಡಿಯೂರಪ್ಪರನ್ನು ಇಳಿಸಿದ್ದು ಪಕ್ಷದ ಸೋಲಿಗೆ ಕಾರಣ: ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿದ್ದು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವಾಗಿದೆ. ಅಲ್ಲದೆ ಪಕ್ಷದ ಸೋಲಿಗೆ ನೀವು (ಯತ್ನಾಳ್) ನಿರಂತರವಾಗಿ ಮಾತನಾಡಿದ್ದೂ ಒಂದು ಕಾರಣ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಗ್ಗೆ ಮಾತನಾಡಲು ನಿಮಗೆ ಯಾವುದೇ ನೈತಿಕತೆ ಇಲ್ಲ. ಯಡಿಯೂರಪ್ಪ ರಾಜೀನಾಮೆ ಕೊಟ್ಟ ಮೇಲೂ. ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಹಾದಿ-ಬೀದಿಯಲ್ಲಿ ಮಾತನಾಡಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ್ ಹಿರಿಯರಿದ್ದಾರೆ. ಯತ್ನಾಳ್ ಮೇಲೆ ಗೌರವ ಇದೆ. ಆದರೆ ನೀವು ಆಡಿಯೋ ಮಾಡಿ ಲೀಕ್ ಮಾಡಿದ್ದೀರಲ್ಲ ಎಂದು ಕಿಡಿಕಾರಿದರು. ಯಡಿಯೂರಪ್ಪರನ್ನು ಇಳಿಸಿದ ಮೇಲೆ ವೀರಶೈವ ಲಿಂಗಾಯತರು ಅಷ್ಟೇ ಅಲ್ಲ. ಎಲ್ಲಾ ವರ್ಗದ ಜನರು ವಿರುದ್ಧ ಆದರು. ಹಾಗಾಗಿ ಸೋಲಬೇಕಾಗಿತ್ತು ಎಂದರು. ಶಿಕಾರಿಪುರದಲ್ಲಿ ವಿಜಯೇಂದ್ರ ಅವರನ್ನು ಸೋಲಿಸಲು ಕೆಲವರು ಷಡ್ಯಂತ್ರ ನಡೆಸಿದರು. ಸ್ವಪಕ್ಷದವರೇ ಷಡ್ಯಂತ್ರ ಮಾಡಿದರು. ಆದರೆ ಶಿಕಾರಿಪುರದ ಜನರ ಆಶೀರ್ವಾದದಿಂದ ವಿಜಯೇಂದ್ರ ಗೆದ್ದರು. ಷಡ್ಯಂತ್ರ ನಡೆಸಿದವರ ಹೆಸರನ್ನು ಮುಂದಿನ ದಿನಗಳಲ್ಲಿ ಹೇಳುವುದಾಗಿ ತಿಳಿಸಿದರು.
ಟ್ರ್ಯಾಪ್ ಮಾಡಲು ಪ್ರತಾಪ್ ಸಿಂಹ ಹುಡುಗನಲ್ಲ: ಡಿ.ಕೆ.ಶಿವಕುಮಾರ್
ಜೆಡಿಎಸ್‌ಗೆ ಹೋಗಿದ್ದ ಯತ್ನಾಳ್ ಗೆ ಮತ್ತೆ ಬಿಜೆಪಿಗೆ ಕರೆ ತಂದಿದ್ದೇ ಯಡಿಯೂರಪ್ಪ. ಮಾತೃಪಕ್ಷಕ್ಕೆ ವಾಪಸ್ ಕರೆ ತಂದ ವ್ಯಕ್ತಿಯ ಬಗ್ಗೆಯೇ ಹಾದಿ ಬೀದಿಯಲ್ಲಿ ಹಗುರವಾಗಿ ಮಾತನಾಡುವ ಯತ್ನಾಳ್ ಎನ್ನುವ ಆ ಮನುಷ್ಯನಿಗೆ ನಿಯತ್ತು ಅನ್ನೋದೇ ಇಲ್ಲ.
-ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ