ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಬ್ಬರಿಂದಲೇ ಹಣ ಲೂಟಿ ಅಗುತ್ತದೆ. ಅವರ ಪಕ್ಷದ ಶಾಸಕರೇ ಅಸಮಾಧಾನ ಹೊರ ಹಾಕಿದ್ದಾರೆ. ಈ ಸರ್ಕಾರ ಬಂದಿರೋದೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಬ್ಬರಿಗೆ ಮಾತ್ರ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಶಿವಮೊಗ್ಗ (ಅ.15): ಶಿವಮೊಗ್ಗ ನಗರದಲ್ಲಿ ಮುಸ್ಲಿಂ ಗೂಂಡಾಗಳು ನಡೆಸಿದ ಈದ್ ಮೆರವಣಿಗೆ ಸಂಪೂರ್ಣ ಪೂರ್ವ ನಿಯೋಜಿತವಾಗಿದೆ. ಇದರಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ 7 ಜನ ಭಾಗಿಯಾಗಿದ್ದು, ಇದರಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಕೂಡಲೇ ಎನ್‌ಐಎ ತನಿಖೆಗೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಗಿಗುಡ್ಡ ಗಲಾಟೆಯಲ್ಲಿ ಭಾಗಿಯಾಗಿದ್ದ ನಿಷೇಧಿತ ಪಿಎಫ್‌ಐ ಸಂಘಟನೆಯ 7 ಜನರ ಪೈಕಿ ಅನ್ವರ್, ಇದಾಯತ್, ಮುಬಾರಕ್ ಎಂಬ ಮೂರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಇಮ್ರಾನ್, ಇರ್ಫಾನ್, ನಬಿ, ಅಬ್ದುಲ್ಲಾ ತಪ್ಪಿಸಿಕೊಂಡಿದ್ದಾರೆ. ಈ ವರದಿ ಗುಪ್ತಚರ ಇಲಾಖೆ ಮೂಲಕ ಕೇಂದ್ರಕ್ಕೆ ಹೋಗಿದೆ. ಎಸ್‌ಪಿ ಅವರು ಚಾರ್ಜ್ ಶೀಟ್ ಹಾಕಿ ಉಳಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಎಎಪಿ ರಾಜ್ಯದಲ್ಲಿ ಪರ್ಯಾಯ ಶಕ್ತಿಯಾಗಿ ಉದಯವಾಗಲಿದೆ: ಮುಖ್ಯಮಂತ್ರಿ ಚಂದ್ರು
ಪರಮೇಶ್ವರ್ ರಾಜಿನಾಮೆ ನೀಡಲಿ: ರಕ್ಷಣೆ ಕೊಡಬೇಕಾದ ಪೊಲೀಸರೇ ಗೂಂಡಾಗಳಿಂದ ತಪ್ಪಿಸಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಪರಮೇಶ್ವರ್ ಅವರು ರಾಗಿಗುಡ್ಡ ಗಲಭೆ ಸಣ್ಣ ಘಟನೆ ಎಂದಿದ್ದರು, ಈ ಕೂಡಲೇ ಪರಮೇಶ್ವರ್ ಅವರು ರಾಜೀನಾಮೆ ಕೊಡಬೇಕು. ಈ ಘಟನೆಯಲ್ಲಿ ಅಮಾಯಕ ಹಿಂದೂ ಯುವಕರ ಬಂಧನ ಆಗಿದೆ. ಅಮಾಯಕ ಹಿಂದು ಯುವಕರನ್ನು ಬೇಕು ಅಂತಾನೆ ರಾಷ್ಟ್ರದ್ರೋಹಿಗಳು ಸಿಕ್ಕಿಸಿದ್ದಾರೆ. ಮುಸ್ಲಿಂ ಗೂಂಡಾಗಳು ನಡೆದುಕೊಳ್ಳುತ್ತಿರುವುದು ನೋಡಿದರೆ ಈ ಘಟನೆಗೆ ರಾಜ್ಯ ಸರ್ಕಾರ ಕುಮ್ಮಕ್ಕು ಇದೆಯೇನೋ ಎಂಬ ಅನುಮಾನ ಕಾಡುತ್ತಿದೆ ಎಂದು ಹರಿಹಾಯ್ದರು.
ರಾಗಿ ಗುಡ್ಡದಲ್ಲಿ ಅಖಂಡ ಭಾರತವನ್ನು ರಚಿಸಿ ಅದರಲ್ಲಿ ಹರಿಸಿ ಬಣ್ಣ ತುಂಬಿ, ಸಾಬ್ರು ಸಾಮ್ರಾಜ್ಯ ಎಂದು ಹಾಕಿ, ದೇಶದ್ರೋಹಿ ಔರಂಗಜನ್ನ ಪೋಟೋ ಹಾಕಿದ್ದಾರೆ. ಶಿವಮೊಗ್ಗ ಭಯೋತ್ಪಾದಕರ ತಾಣದಂತೆ ಕಾಣುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ನಕ್ಸಲಿಜಂ ಜಾಸ್ತಿ ಆಗುತ್ತಿದೆ. ರಾಜ್ಯದ ಜನರ ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಭಯೋತ್ಪಾದಕ ಚಟುವಟಿಕೆಯಲ್ಲಿ ಇರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಸತ್ಯನಾರಾಯಣ ಮತ್ತಿತರರು ಇದ್ದರು.
ಡಿಕೆಶಿ, ಸಿದ್ದರಾಮಯ್ಯ ರಾಜ್ಯದ ಹಣ ಲೂಟಿ ಮಾಡ್ತಿದ್ದಾರೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಬ್ಬರಿಂದಲೇ ಹಣ ಲೂಟಿ ಅಗುತ್ತದೆ. ಅವರ ಪಕ್ಷದ ಶಾಸಕರೇ ಅಸಮಾಧಾನ ಹೊರ ಹಾಕಿದ್ದಾರೆ. ಈ ಸರ್ಕಾರ ಬಂದಿರೋದೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಬ್ಬರಿಗೆ ಮಾತ್ರ ಎಂಬ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಗಡಿ ಭಾಗಗಳಲ್ಲಿ ನಕ್ಸಲ್ ಚಟುವಟಿಕೆ ಇದೆಈ ಬಗ್ಗೆ ಗೃಹ ಸಚಿವರು ಇಲ್ಲ ಅಂತಾ ಹೇಳಿ ಬಿಡಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಹಿಂದೂ ಹಬ್ಬ, ಸಾಂಸ್ಕೃತಿಕ ಹಬ್ಬವಾಗಿದೆ. ಚಾಮುಂಡೇಶ್ವರಿ ಪೂಜೆ ಮಾಡ್ತಾರೆ.
ಯಾವನೋ ತಲೆಹರಟೆ ಮಹಿಷಾಸುರ ಹಬ್ಬ ಮಾಡುತ್ತೀವಿ ಅಂದಾಗ, ಒದ್ದು ಒಳಗೆ ಹಾಕೋ ಬದಲು, ಚಾಮುಂಡಿ ಬೆಟ್ಟಕ್ಕೆ ನಿರ್ಬಂಧ ಹಾಕುವ ಬದಲು, ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಅರಸರ ಕಾಲದಿಂದ ವಿಜಯದಶಮಿ ನಡೆದುಕೊಂಡು ಬಂದಿದೆ. ಮಹಿಷ ದಸರಾ ನಡೆಸಲು ಹೊರಟವರನ್ನು ಆರಂಭದಲ್ಲೇ ಅರೆಸ್ಟ್ ಮಾಡಬೇಕಿತ್ತು. ಅವರು ಹೋರಾಟಗಾರರು ಅಲ್ಲ. ಇನ್ನು ದಸರಾ ಕಾರ್ಯಕ್ರಮಕ್ಕೆ ಕಲಾವಿದರ ಕರೆಕೊಂಡು ಬರಲು ಪರ್ಸಂಟೇಜ್ ಕೇಳ್ತಾರೆ ಅಂದ್ರೆ ನಂಬಲು ಆಗ್ತಿಲ್ಲ. ಕಲಾವಿದರು ಇಡೀ ಜೀವನವನ್ನು ಕಲೆಗೆ ಮುಡಿಪಾಗಿಟ್ಟವರು. ಅವರ ಹತ್ತಿರನೂ ಬಳಿ ಇವರು ಲಂಚ ಕೇಳ್ತಾರೆ ಅಂದರೆ ಲಕ್ವಾ ಹೊಡೆಯುತ್ತದೆ ಎಂದು ಶಾಪ ಹಾಕಿದರು.
ಸಣ್ಣ ನೀರಾವರಿ ಇಲಾಖೆಯಲ್ಲಿ 17 ಕೋಟಿ ಭ್ರಷ್ಟಾಚಾರ: ಜನಾರ್ದನ ರೆಡ್ಡಿ ಹೇಳಿದ್ದೇನು?
₹42 ಕೋಟಿ ಹಣದ ಬಗ್ಗೆ ಸಿಬಿಐ ತನಿಖೆಯಾಗಲಿ: ಇತಿಹಾಸದಲ್ಲಿ ದೊಡ್ಡಮಟ್ಟದ ಹಣ ಮಾಜಿ ಕಾರ್ಪೊರೇಟರ್ ಮನೆಯಲ್ಲಿ ಸಿಕ್ಕಿದೆ. ಕಾಂಗ್ರೆಸ್ ಇರೋ ಕಡೆ ಏಕೆ ಐಟಿ ರೇಡ್ ಮಾಡ್ತಾರೆ ಅಂತಾರೆ. ₹42 ಕೋಟಿ ಹೇಗೆ ಸಿಕ್ತು? ಈ ದುಡ್ಡು ಮುಖ್ಯಮಂತ್ರಿ ಮೂಲಕ ಹೋಗೋದಾ, ಇಲ್ಲ ಡಿ.ಕೆ.ಶಿವಕುಮಾರ್ ಅವರಿಗೆ ಸಂಬಂಧಿಸಿದ್ದಾ ಎಂದು ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು. ಈ ದುಡ್ಡಿನ ಬಗ್ಗೆ ಕಾಂಗ್ರೆಸ್ ಏಜೆಂಟ್ ಕೆಂಪಣ್ಣ ಬಾಯಿ ಬಿಡ್ತಾ ಇಲ್ಲ. ಅಂಬಿಕಾಪತಿ ಕಂಟ್ರಾಕ್ಟ್ ಮಾಡ್ತಿಲ್ಲ ಅಂತಾರೆ. ಅಂಬಿಕಾಪತಿ ಕಂಟ್ರಾಕ್ಟ್ ಮಾಡ್ತಿಲ್ಲ ಎನ್ನುವುದಾದರೆ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನನ್ನಾಗಿ ಏಕೆ ಮಾಡಿಕೊಂಡ್ರಿ? ಈ ಹಣ ಯಾರದ್ದು, ಇನ್ನು ಯಾವ ಯಾವ ಇಲಾಖೆಗೆ ವಸೂಲಿ ಮಾಡಲು ಹೊರಟ್ಟಿದ್ದರು? ಎಲ್ಲಾ ಹೊರಗೆ ಬರಬೇಕು ಅಂದ್ರೆ ಸಿಬಿಐ ತನಿಖೆ ಆಗಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.