ದೇಶಕ್ಕಿಂತ ಕಾಂಗ್ರೆಸ್ಸಿಗರು ಅಭಿವೃದ್ಧಿಯಾಗಿದ್ದೆ ಹೆಚ್ಚು: ಮಾಜಿ ಸಚಿವ ಹಾಲಪ್ಪ ಆಚಾರ್‌

By Kannadaprabha News  |  First Published Apr 12, 2024, 4:02 PM IST

ಈ ದೇಶವನ್ನು ಕಾಂಗ್ರೆಸ್ 60 ವರ್ಷಗಳ ಕಾಲ ಆಳಿದರೂ ದೇಶವನ್ನು ಅಭಿವೃದ್ಧಿ ಮಾಡಲಿಲ್ಲ. ಆದರೆ ಕಾಂಗ್ರೆಸ್ಸಿಗರು ಮಾತ್ರ ಸಾಕಷ್ಟು ಅಭಿವೃದ್ಧಿ ಹೊಂದಿದ್ದಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್‌ ಆರೋಪಿಸಿದರು


ಯಲಬುರ್ಗಾ (ಏ.12): ಈ ದೇಶವನ್ನು ಕಾಂಗ್ರೆಸ್ ೬೦ ವರ್ಷಗಳ ಕಾಲ ಆಳಿದರೂ ದೇಶವನ್ನು ಅಭಿವೃದ್ಧಿ ಮಾಡಲಿಲ್ಲ. ಆದರೆ ಕಾಂಗ್ರೆಸ್ಸಿಗರು ಮಾತ್ರ ಸಾಕಷ್ಟು ಅಭಿವೃದ್ಧಿ ಹೊಂದಿದ್ದಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್‌ ಆರೋಪಿಸಿದರು. ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ತಾಲೂಕಾ ಬಿಜೆಪಿ ವತಿಯಿಂದ ಕೊಪ್ಪಳ ಲೋಕಸಭಾ ಚುನಾವಣೆ ಪ್ರಚಾರ ನಿಮಿತ್ತ ಆಯೋಜಿಸಿದ್ದ ಮಹಾಶಕ್ತಿ ಕೇಂದ್ರದ ಬಹಿರಂಗ ಸಭೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಂಗ್ರೆಸ್‌ನವರು ಸ್ವಾರ್ಥಕ್ಕಾಗಿ ದಿನ ದಲಿತ, ಹಿಂದುಳಿದ ವರ್ಗಗಳ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಬಂದಿದ್ದಾರೆ. ವಿನಃ ಯಾವ ವರ್ಗದವರನ್ನು ಇದುವರೆಗೊ ಅಭಿವೃದ್ಧಿಪಡಿಸಿಲ್ಲ ಎಂದರು. ಹಿಂದೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಸಾಲು ಸಾಲು ಹಗರಣ ಮಾಡಿ ದೇಶದ ಬೊಕ್ಕಸವನ್ನೇ ಹಾಳು ಮಾಡಿದ್ದಾರೆ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ೧೦ ವರ್ಷಗಳ ಅಧಿಕಾರವಧಿಯಲ್ಲಿ ಯಾವ ಭ್ರಷ್ಟಾಚಾರವಿಲ್ಲದೆ ಸುಭದ್ರ ಆಡಳಿತ ನೀಡಿದ್ದಾರೆ .

Latest Videos

undefined

ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟೂರ್ ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಸರಳ, ಸಜ್ಜನ ವ್ಯಕ್ತಿತ್ವವುಳ್ಳರಾಗಿದ್ದಾರೆ. ಇಂತಹ ಅಭಿವೃದ್ಧಿ ಚಿಂತನೆವುಳ್ಳ ಅಭ್ಯರ್ಥಿಗೆ ತಾವೆಲ್ಲರೂ ಹೆಚ್ಚಿನ ಮತ ನೀಡಿ ಬಹುಮತದಿಂದ ಗೆಲ್ಲಿಸಬೇಕು ಎಂದು ಜನರಲ್ಲಿ ಮತಯಾಚನೆ ಮಾಡಿದರು. ಕೊಪ್ಪಳ ಲೋಕಸಭಾ ಬಿಜೆಪಿ ಕ್ಷೇತ್ರದ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟೂರ್ ಮಾತನಾಡಿ, ಈ ಕ್ಷೇತ್ರದ ಜನರ ಸೇವೆ ಮಾಡಲು ನನಗೊಂದು ಅವಕಾಶ ಮಾಡಿಕೊಡಿ ನಿಮ್ಮಲ್ಲರ ಋಣ ತೀರಿಸುವ ಕಾರ್ಯ ಮಾಡುತ್ತೇನೆ ಎಂದು ಮನವಿ ಮಾಡಿದರು.

ಮುನಿರತ್ನ ತರ ನಾನು ಹೇಡಿಯೂ ಅಲ್ಲ, ಕೇಡಿಯೂ ಅಲ್ಲ: ಡಿ.ಕೆ.ಸುರೇಶ್ ವಾಗ್ದಾಳಿ

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ್, ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ, ಜಿಪಂ ಮಾಜಿ ಉಪಾಧ್ಯಕ್ಷ ಶಿವಶಂಕರರಾವ್ ದೇಸಾಯಿ, ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ, ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ, ಬಿಜೆಪಿ ತಾಲೂಕಾಧ್ಯಕ್ಷ ಮಾರುತಿ ಗಾವರಾಳ, ಜೆಡಿಎಸ್ ತಾಲೂಕಾಧ್ಯಕ್ಷ ಬಸವರಾಜ ಗುಳಗುಳಿ, ಬಸವರಾಜ ಗೌರಾ, ಕಳಕಪ್ಪ ಕಂಬಳಿ, ಮಲ್ಲಿಕಾರ್ಜುನ ಹರ್ಲಾಪೂರ, ಸಿ.ಎಚ್. ಪಾಟೀಲ, ಅಯ್ಯನಗೌಡ ಕೆಂಚಮ್ಮನವರ್, ಶರಣಪ್ಪ ರಾಂಪೂರ,ಅಮರೇಶ ಹುಬ್ಬಳ್ಳಿ, ಶಂಕ್ರಪ್ಪ ಸುರಪೂರ, ಶಿವಣ್ಣ ವಾದಿ, ಶರಣಪ್ಪ ಇಳಗೇರ, ಗಾಳೆಪ್ಪ ಓಜನಹಳ್ಳಿ, ಅಯ್ಯಪ್ಪ ಗುಳೆ, ಶ್ರೀನಿವಾಸ ತಿಮ್ಮಾಪೂರ, ವೆಂಕಟೇಶ ವಾಲ್ಮೀಕಿ, ಎಸ್.ಎನ್. ಶ್ಯಾಗೋಟಿ, ಪ್ರಭುರಾಜ ಕಲಬುರ್ಗಿ ಮತ್ತಿತರರು ಇದ್ದರು.

click me!